ಬೈಕ್ ಎಂಜಿನ್ ಬಳಸಿ ಕೇವಲ 2 ಲಕ್ಷ ರೂ.ನಲ್ಲಿ ವಿಮಾನ ತಯಾರಿಸಿದ ಮಹಾನುಭಾವ

ಭಾರತದಲ್ಲಿ ಅವಕಾಶಗಳು ಸಿಗದೇ ವಿದೇಶಗಳಿಗೆ ತೆರಳಿ ಹೆಸರು ಮಾಡಿರುವವರ ನಡುವೆ, ಏನೇ ಮಾಡಿದ್ರೂ ಭಾರತದಲ್ಲೇ ಇರಬೇಕು ದೇಶಕ್ಕೆ ಹೆಸರು ಬರಬೇಕು ಎಂದುಕೊಳ್ಳುವವರು ಇದ್ದಾರೆ. ಅಂಥವರಲ್ಲಿ ಕೇರಳದ ಈ ವ್ಯಕ್ತಿಯೂ ಒಬ್ಬರು, ಬೈಕ್ ಎಂಜಿನ್ ಬಳಿಸಿಕೊಂಡು ಮನೆಯಲ್ಲೇ ಮೈಕ್ರೋಲೈಟ್ ವಿಮಾನ ನಿರ್ಮಿಸಿ ಸುದ್ದಿಯಾಗಿದ್ದಾರೆ.

ಈ ವಿಮಾನವನ್ನು ತಯಾರಿಸಿದವರು ವಿಮಾನ ನಿರ್ವಹಣಾ ಎಂಜಿನಿಯರ್ ಆಗಿರುವ ಆನಂದ್, ವಿಮಾನಯಾನ ಕ್ಷೇತ್ರದಲ್ಲಿ ಅನುಭವ ಹೊಂದಿದ್ದಾರೆ. ಈತನ ಕುರಿತು ಯ್ಯೂಟ್ಯೂಬ್ ಚಾನಲ್ ಒಂದು ಸಂದರ್ಶನ ಮಾಡಿದ್ದು, ವಿಮಾನ ಹಾರಾಟ ಕುರಿತು ವಿವರಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿ ಪ್ರಮುಖ ಹೈಲೆಟ್ ಎಂದರೆ ಈ ವಿಮಾನದಲ್ಲಿ ಬಜಾಜ್ ಪಲ್ಸರ್ ಎನ್ಎಸ್ 200 ಎಂಜಿನ್ ಅನ್ನು ಬಳಸಲಾಗಿದೆ.

made-plane-using-bike-engine-at-home-rs-2-lakh

ಆನಂದ್ ಅವರು ಬೈಕ್ ಎಂಜಿನ್‌ನೊಂದಿಗೆ ವಿಮಾನವನ್ನು ಹಾರಿಸಬಹುದು ಎಂದು ಹಲವು ಕಂಪನಿಗಳಿಗೆ ತೋರಿಸಿಕೊಟ್ಟಿದ್ದಾರೆ. ಈ ಹಿಂದೆ ಅನೇಕ ಪ್ರಮುಖ ವಿಮಾನಯಾನ ಕಂಪನಿಗಳೊಂದಿಗೆ ಕೆಲಸ ಮಾಡಿದ್ದ ಇವರು, ಈಗ ತಮ್ಮ ಕೆಲಸವನ್ನು ತೊರೆದು ತಮ್ಮದೇ ಆದ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿರುವುದಾಗಿ ತಿಳಿಸಿದ್ದಾರೆ.

ಅವರು ಈ ಹಿಂದೆ ಹಲವಾರು ಹಗುರವಾದ ಫ್ಲೈಯಿಂಗ್ ಕ್ರಾಪ್ಟ್‌ಗಳನ್ನು ಕೂಡ ನಿರ್ಮಿಸಿದ್ದಾರೆ. ಆದರೆ ಹೆಲಿಕಾಪ್ಟರ್ ಹೊರತುಪಡಿಸಿ ಎಲ್ಲವೂ ಯಶಸ್ವಿಯಾಗಿದೆಯಂತೆ. ಇನ್ನು ಪ್ರಸ್ತುತ ನಿರ್ಮಿಸಿರುವ ವಿಮಾನದ ಕುರಿತು ವಿವರಿಸಿ, ಇದು ಒಬ್ಬರು ಕುಳಿತು ಪ್ರಯಾಣಿಸುವ ವಿಮಾನವಾಗಿದೆ. ಆದ್ರೂ ಎಲ್ಲಾ ವಿಮಾನಗಳಂತೆ ಎಲ್ಲಾ ಕಾರ್ಯಗಳನ್ನು ನಿರ್ವಹಿಸಬಲ್ಲದು ಎಂದು ತಿಳಿಸಿದ್ದಾರೆ.

made-plane-using-bike-engine-at-home-rs-2-lakh

ಮೊದಲೇ ಹೇಳಿದಂತೆ ವಿಮಾನಕ್ಕೆ ಬಜಾಜ್ ಪಲ್ಸರ್ ಎನ್‌ಎಸ್‌ 200 ಎಂಜಿನ್‌ ಅನ್ನು ಬಳಸಿದ್ದಾರೆ. ವಿಮಾನದ ಬ್ಲೇಡ್‌ಗಳು ಎಂಜಿನ್‌ಗೆ ಸಂಪರ್ಕ ಹೊಂದಿದ್ದು, ಮುಂಭಾಗದ ಚಕ್ರಗಳನ್ನು ಪೈಲಟ್‌ನ ಪಾದಗಳ ಮೂಲಕ ಎಡಕ್ಕೆ ಅಥವಾ ಬಲಕ್ಕೆ ತಿರುಗಿಸಬಹುದು. ಟೇಕಾಫ್ ಮತ್ತು ಲ್ಯಾಂಡಿಂಗ್ ನಿಯಂತ್ರಣಗಳನ್ನು ಆಸನದ ಮುಂಭಾಗದಲ್ಲಿರುವ ಜಾಯ್‌ಸ್ಟಿಕ್ ತರಹದ ಲಿವರ್‌ನಲ್ಲಿ ನೀಡಲಾಗಿದೆ.

ಪಲ್ಸರ್ 200 NS ಎಂಜಿನ್, ಪೆಟ್ರೋಲ್‌ ಎಂಜಿನ್ ಆಗಿರುವ ಕಾರಣ ಅವರ ಲೆಕ್ಕಾಚಾರದ ಪ್ರಕಾರ, ವಿಮಾನವು ಪ್ರಯಾಣಿಸುವಾಗ 1 ಲೀ. ಪೆಟ್ರೋಲ್‌ನಲ್ಲಿ ಸುಮಾರು 8 ನಿಮಿಷಗಳ ಕಾಲ ಹಾರಬಲ್ಲದು. ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಹೆಚ್ಚಿನ ಒತ್ತಡದ ಅಗತ್ಯವಿರುವ ಕಾರಣ ಹೆಚ್ಚು ಪೆಟ್ರೋಲ್ ಕುಡಿಯುತ್ತದೆ ಎಂದು ಆನಂದ್ ತಿಳಿಸಿದ್ದಾರೆ.

made-plane-using-bike-engine-at-home-rs-2-lakh

ಈ ಯೋಜನೆಯ ಒಟ್ಟಾರೆ ವೆಚ್ಚ ಸುಮಾರು 2 ಲಕ್ಷ ರೂ. ಎಂದು ಹೇಳಿದ ಅವರು, ವಿಮಾನವನ್ನು ಹಾರಾಟ ನಡೆಸಲು ಅನುಮತಿ ಇಲ್ಲದ ಕಾರಣ ಹಾರಿಸಿಲ್ಲ. ಅಂದರೆ ಡಿಜಿಸಿಎ ಪ್ರಮಾಣೀಕರಿಸಿದ ನಂತರ ವಿಮಾನವನ್ನು ಹಾರಿಸಲು ಅನುಮತಿ ಸಿಗಲಿದೆ ಎಂದು ಆನಂದ್ ತಿಳಿಸಿದ್ದಾರೆ. ಆದ್ರೂ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಪ್ರದರ್ಶಿಸಲು ನೆಲದ ಮೇಲೆಯೇ ಅದನ್ನು ಓಡಿಸಿ ತೋರಿಸಿದ್ದಾರೆ.

ವಿಮಾನವನ್ನು ಅಲ್ಯೂಮಿನಿಯಂ ಬಳಸಿ ನಿರ್ಮಿಸಲಾಗಿದ್ದು, ಇದು ಹಗುರವಾಗಿ ಮತ್ತು ಬಲಶಾಲಿಯಾಗಿದೆ. ಇದು ರೆಕ್ಕೆಗಳು ಮತ್ತು ಬಾಲದೊಂದಿಗೆ ಮೂಲಭೂತ ವಿನ್ಯಾಸವನ್ನು ಹೊಂದಿದೆ. ಈ ವಿಮಾನದಲ್ಲಿ ಬಳಸಲಾದ ಚಕ್ರಗಳು ಎಲೆಕ್ಟ್ರಿಕ್ ದ್ವಿಚಕ್ರ ವಾಹನದಿಂದ ಪಡೆಯಲಾಗಿದೆ ಎಂದ ಅವರು, ವಿವಿಧ ಕಾರಣಗಳಿಂದಾಗಿ ವಿಮಾನದ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಡಿಜಿಸಿಎ ಪ್ರಮಾಣೀಕರಿಸದ ಕಾರಣ ಈ ವಿಮಾನವನ್ನು ಹಾರಿಸಲು ಅನುಮತಿ ಇಲ್ಲ. ಆದ್ರೂ ತಮ್ಮ ವಿಮಾನದ ಬಗ್ಗೆ ವಿಶ್ವಾಸ ಹೊಂದಿರುವ ಅವರು, ಪರೀಕ್ಷಾ ಉದ್ದೇಶಗಳಿಗಾಗಿ ವಿಮಾನವನ್ನು ತಮಿಳುನಾಡಿಗೆ ಕೊಂಡೊಯ್ಯಲು ಯೋಜಿಸುತ್ತಿದ್ದಾರೆ. ಮುಂದೊಂದು ದಿನ ಕಂಡಿತ ನನ್ನ ವಿಮಾನ ಹಾರಲಿದೆ ಎಂದು ವಿಶ್ವಾಸ ವ್ಯಕ್ತಪಡಿದ್ದಾರೆ. ಈ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Monday, July 31, 2023, 10:23 [IST]
English summary
Made plane using bike engine at home rs 2 lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+