ಬುಕ್ಕಿಂಗ್‌ನಲ್ಲಿ ಸುನಾಮಿ ಎಬ್ಬಿಸಿದ್ದ Matter ಎನರ್ಜಿ, ಏರ್‌ಟೆಲ್ ಒಪ್ಪಂದ: ಎಲ್ಲರೂ ತಿರುಗಿ ನೋಡಲೇಬೇಕು!
ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಒಂದೆರಡು ವರ್ಷಗಳಿಂದ ಸಾಕಷ್ಟು ಖ್ಯಾತಿಗಳಿಸುತ್ತಿವೆ. ಅದರಲ್ಲೂ ಈ ವಿಭಾಗದಲ್ಲಿ ಸ್ಕೂಟರ್ ಗಳೇ ಪಾರುಪತ್ಯ ಮೆರೆಯುತ್ತಿದ್ದು, ನಿಧಾನವಾಗಿ ಎಲೆಕ್ಟ್ರಿಕ್ ಬೈಕ್‌ಗಳು ಮುನ್ನೆಲೆಗೆ ಬರುತ್ತಿವೆ. ಮತ್ತಷ್ಟು ಆಕರ್ಷಕ ವೈಶಿಷ್ಟ್ಯಗಳೊಂದಿಗೆ ತನ್ನ ಇ-ಬೈಕ್‌ನತ್ತ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಮ್ಯಾಟರ್ ಎನರ್ಜಿ, ಏರ್‌ಟೆಲ್ ಜೊತೆ ಒಪ್ಪಂದ ಮಾಡಿಕೊಂಡಿದೆ.
ಇವೆರೆಡು ಕಂಪನಿಗಳು ಪಾಲುದಾರಿಕೆ ಹೊಂದಿರುವುದು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಉತ್ತಮ ಬೆಳವಣಿಗೆಯಾಗಿದೆ. ಅದರ ಭಾಗವಾಗಿ ಏರ್‌ಟೆಲ್ ಎಲ್ಲ 'ಮ್ಯಾಟರ್ ಏರಾ' ಎಲೆಕ್ಟ್ರಿಕ್ ಬೈಕ್‌ಗಳಲ್ಲಿ ಆಟೋಮೋಟಿವ್ ಗ್ರೇಡ್ ಇ-ಸಿಮ್‌ಗಳನ್ನು ಆಕ್ಟಿವ್ ಮಾಡಲಿದೆ. ಏರ್‌ಟೆಲ್ ದೇಶಾದ್ಯಂತ ಒಳ್ಳೆಯ ನೆಟ್‌ವರ್ಕ್ ಹೊಂದಿದ್ದು, ವಿವಿಧ ಇಂಟರ್ನೆಟ್ ಸೌಲಭ್ಯವನ್ನು (IoT) ಮ್ಯಾಟರ್ ಏರಾ ಇ-ಬೈಕ್‌ನಲ್ಲಿಯೇ ಪಡೆಯಬಹುದು.

ಈ ಬಗ್ಗೆ ಮಾತನಾಡಿರುವ ಮ್ಯಾಟರ್ ಎನರ್ಜಿ ಸಿಇಒ ಮೋಹಲ್ ಲಾಲ್ ಬಾಯ್, 'ಏರಾ ಭವಿಷ್ಯದ ಸ್ಮಾರ್ಟ್ ಎಲೆಕ್ಟ್ರಿಕ್ ಬೈಕ್ ಆಗಿದ್ದು, ಇದರಲ್ಲಿ ಇಂಟರ್ನೆಟ್ ಆಕ್ಟಿವ್ ಮಾಡಿರುವುದು ಬಹುತೇಕ ಯುವ ಖರೀದಿದಾರರಿಗೆ ತುಂಬಾ ಇಷ್ಟವಾಗಲಿದೆ. ಈ ಕೆಲಸಕ್ಕಾಗಿ ದೇಶದ ಇಂಟರ್ನೆಟ್ ದೈತ್ಯ ಏರ್‌ಟೆಲ್ ಜೊತೆ ಪಾಲುದಾರಿಕೆ ಹೊಂದಿರುವುದು ತುಂಬಾ ಸಂತೋಷ ತಂದಿದೆ' ಎಂದು ಹೇಳಿದ್ದಾರೆ.
ಮ್ಯಾಟರ್ ಏರಾ ಎಲೆಕ್ಟ್ರಿಕ್ ಬೈಕ್, ಈಗಾಗಲೇ ಬುಕ್ಕಿಂಗ್ ವಿಚಾರದಲ್ಲಿ ದೊಡ್ಡ ಮಟ್ಟದ ದಾಖಲೆ ಬರೆದಿದೆ. ಕಂಪನಿಯು ಕಳೆದ ಮೇ.17ರಂದು ಆರ್ಡರ್ ತೆಗೆದುಕೊಳ್ಳುವುದನ್ನು ಶುರು ಮಾಡಿತ್ತು. ಕೆಲವು ದಿನಗಳ ಹಿಂದೆ ಲಭ್ಯವಾದ ಮಾಹಿತಿ ಪ್ರಕಾರ, ಸರಿ ಸುಮಾರು 60,000 ಮಂದಿ ಬುಕ್ ಮಾಡಿದ್ದಾರೆ. ಅಲ್ಲದೆ, ಮ್ಯಾಟರ್ ಎನರ್ಜಿ ಮುಂದಿನ ಮೂರು ವರ್ಷದಲ್ಲಿ 300,000 ಎಲೆಕ್ಟ್ರಿಕ್ ಬೈಕ್ ಉತ್ಪಾದಿಸುವ ಗುರಿಯನ್ನು ಹೊಂದಿದೆ.
ಪ್ರಸ್ತುತ, ಮ್ಯಾಟರ್ ಏರಾ ಎಲೆಕ್ಟ್ರಿಕ್ ಬೈಕ್ 5000 ಮತ್ತು 5000 ಪ್ಲಸ್ ಎಂಬ ಎರಡು ವೇರಿಯೆಂಟ್ ಆಯ್ಕೆಯಲ್ಲಿ ಸಿಗಲಿದೆ. ರೂಪಾಂತರಗಳಿಗೆ ಅನುಗುಣವಾಗಿ ರೂ.1.44 ಲಕ್ಷದಿಂದ ರೂ.1.54 ಲಕ್ಷ (FAME II ಸಬ್ಸಿಡಿ ಒಳಗೊಂಡು) ಎಕ್ಸ್ ಶೋರೂಂ ದರವನ್ನು ಪಡೆದಿದೆ. ಸಂಪೂರ್ಣ ಚಾರ್ಜಿನಲ್ಲಿ ಇವೆರೆಡು ಬೈಕ್ ಗಳು 125 km ರೇಂಜ್ ನೀಡಲಿವೆ.
ಮ್ಯಾಟರ್ ಏರಾ 5000 ಹಾಗೂ 5000 ಪ್ಲಸ್ ಎಲೆಕ್ಟ್ರಿಕ್ ಬೈಕ್ ಗಳು, 5 kWh ಸಾಮರ್ಥ್ಯ ಬ್ಯಾಟರಿ ಪ್ಯಾಕ್ ಪಡೆದಿದ್ದು, 10kW (13.4bhp) ಪವರ್ ಉತ್ಪಾದಿಲಿವೆ. ವಿಶೇಷವಾಗಿ, ಮ್ಯಾಟರ್ ಏರಾ, 4 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ದೊರೆಯಲಿದೆ. ಇದಿಷ್ಟೇ ಅಲ್ಲದೆ, ರಿವರ್ಸ್ ಮೋಡ್ ಸೇರಿದಂತೆ ನಾಲ್ಕು ವಿವಿಧ ರೈಡಿಂಗ್ ಮೋಡ್ ಅನ್ನು ಹೊಂದಿದೆ.
ಮ್ಯಾಟರ್ ಏರಾ ಎಲೆಕ್ಟ್ರಿಕ್ ಬೈಕ್ ಗಳ ಬ್ರೇಕಿಂಗ್ ಸಿಸ್ಟಮ್ ಕುರಿತು ಮಾತನಾಡುವುದಾದರೆ, ಫ್ರಂಟ್, ರೇರ್ ಡಿಸ್ಕ್ ಬ್ರೇಕ್ ಹೊಂದಿದ್ದು, ಸಿಂಗಲ್ ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್)ಯನ್ನು ಪಡೆದಿದೆ. ವೈಶಿಷ್ಟ್ಯದ ವಿಚಾರದ ಬಗ್ಗೆ ಹೇಳುವುದಾದರೆ, 7 ಇಂಚಿನ ಟಚ್‌ಸ್ಕ್ರೀನ್ LCD ಡಿಸ್ಪ್ಲೇ, 9-Axis IMU, ವೈ-ಫೈ, ಬ್ಲೂಟೂತ್ 5.0 ಹಾಗೂ ಎಲ್ಇಡಿ ಲೈಟಿಂಗ್ ಸೇರಿದಂತೆ ಹಲವು ಫೀಚರ್ಸ್ ಒಳಗೊಂಡಿದೆ.
ಮ್ಯಾಟರ್ ಎನರ್ಜಿ ತನ್ನ ನೂತನ ಎಲೆಕ್ಟ್ರಿಕ್ ಬೈಕ್ ಗಳಲ್ಲಿ ಅತ್ಯಾಧುನಿಕ ವೈಶಿಷ್ಟ್ಯದ ಮೂಲಕ ಹೆಚ್ಚಿನ ಯುವ ಖರೀದಿದಾರರನ್ನು ಸೆಳೆಯಲು ಇಂಟರ್ನೆಟ್ ದೈತ್ಯ ಏರ್‌ಟೆಲ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದು ಉತ್ತಮ ಬೆಳವಣಿಗೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ. ಈಗಾಗಲೇ ಮ್ಯಾಟರ್ ಏರಾ ಪಡೆದುಕೊಂಡಿರುವ ಬುಕ್ಕಿಂಗ್ ಸಂಖ್ಯೆಯನ್ನು ಗಮನಿಸಿದಾಗ ಅದರ ಜನಪ್ರಿಯತೆ ಎಷ್ಟಿದೆ ಎಂಬುದು ಸುಲಭವಾಗಿ ಅರ್ಥವಾಗುತ್ತದೆ. ಈ ಬೈಕ್ ಬಿಡುಗಡೆಯಾದ ಮೇಲೆ ಭಾರತದ ಗ್ರಾಹಕರಿಂದ ಹೇಗೆ ಪ್ರತಿಕ್ರಿಯೆ ಸಿಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.


Click it and Unblock the Notifications