Mileage bikes: ಲೀಟರ್‌ಗೆ 70 ಕಿ.ಮೀ ಓಡುವ ಬೈಕ್‌ಗಳು! ಅಗ್ಗದ ಮೈಲೇಜ್ ರಾಜರು...

ಭಾರತದಲ್ಲಿ ಅಗ್ಗದ ಸ್ಕೂಟರ್‌ಗಳಿಂದ ಹಿಡಿದು ದುಬಾರಿ ಮೋಟಾರ್‌ಸೈಕಲ್‌ಗಳ ವರೆಗೆ ಎಲ್ಲಾ ವಿಧದ ವಾಹನಗಳಿಗೂ ಬೇಡಿಕೆಯಿದೆ. ಆದ್ರೆ ಮೈಲೇಜ್ ಕಿಂಗ್‌ (Mileage bikes) ಬೈಕ್‌ಗಳೇ ದೇಶದಲ್ಲಿ ಹೆಚ್ಚು ಮಾರಾಟವಾಗುತ್ತವೆ. ಅಂತಹ ಇಂಧನ ಸಮರ್ಥ ಬೈಕ್‌ಗಳನ್ನು ಇಲ್ಲಿ ನೋಡೋಣ.

ಬಜಾಜ್ ಪ್ಲಾಟಿನಾ 100: ಬಜಾಜ್ ಪ್ಲಾಟಿನಾ 100, ಅತ್ಯಧಿಕ ಮೈಲೇಜ್‌ಗೆ ಹೆಸರುವಾಸಿಯಾದ ಬೈಕ್ ಆಗಿ ಭಾರತದಲ್ಲಿ ಗುರ್ತಿಸಿಕೊಂಡಿದೆ. ಈ ಮೋಟಾರ್‌ಸೈಕಲ್ ಪ್ರತಿ ಹನಿ ಇಂಧನವನ್ನು ವಿಸ್ತರಿಸುವ ತನ್ನದೇ ಆದ ಪರಂಪರೆಯನ್ನು ಹೊಂದಿದೆ. ಒಂದು ಲೀಟರ್ ಪೆಟ್ರೋಲ್‌ಗೆ ಬರೋಬ್ಬರಿ 70 ಕಿ.ಮೀಗಿಂತ ಹೆಚ್ಚಿನ ಮೈಲೇಜ್ ನೀಡುತ್ತದೆ. ಇದರ ಆನ್‌ರೋಡ್ ಬೆಲೆಯು (ಬೆಂಗಳೂರು) 89,792 ರೂ. ಇದೆ.

mileage-bikes-india-under-1-lakh-splendor-platina-shine

ಬಜಾಜ್ ಪ್ಲಾಟಿನಾ 100 ಎಂಜಿನ್ ವಿಶೇಷತೆಗಳ ಬಗ್ಗೆ ಹೇಳುವುದಾದ್ರೆ, 7.79 bhp ಪವರ್ ಮತ್ತು 8.30 Nm ಗರಿಷ್ಟ ಟಾರ್ಕ್ ಅನ್ನು ಹೊರಹಾಕುತ್ತದೆ. ಇದು 102cc, ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಪ್ಲಾಟಿನಾ 4 ಸ್ಪೀಡ್ ಗೇರ್‌ಬಾಕ್ಸ್ ಅನ್ನು ಹೊಂದಿದೆ.

ಹೀರೋ ಸ್ಪ್ಲೆಂಡರ್ ಪ್ಲಸ್: ನಮಗೆ ಭಾರತದಲ್ಲಿ ಮೈಲೇಜ್ ಬೈಕ್ ಎಂದಾಕ್ಷಣ ಮೊದಲು ನೆನಪಾಗುವ ಬೈಕ್ ಎಂದರೆ ಹೀರೋ ಸ್ಪ್ಲೆಂಡರ್ ಪ್ಲಸ್, ಪ್ರಸ್ತುತ ಇದು ದೇಶದಲ್ಲಿ ಅತ್ಯಂತ ಜನಪ್ರಿಯ ಮೋಟಾರ್‌ಸೈಕಲ್. ಹಲವು ವರ್ಷಗಳಿಂದ ಮೈಲೇಜ್ ವಿಷಯದಲ್ಲಿ ಅಗ್ರಸ್ಥಾನ ದಕ್ಕಿಸಿಕೊಂಡಿದ್ದು, ಒಂದು ಲೀಟರ್‌ಗೆ ಬರೋಬ್ಬರಿ 75-80 ಕೀ.ಮೀ ಮೈಲೇಜ್ ನೀಡುತ್ತದೆ.

mileage-bikes-india-under-1-lakh-splendor-platina-shine

ಹೀರೋ ಸ್ಪ್ಲೆಂಡರ್ ಪ್ಲಸ್ 7.91 bhp ಪವರ್ ಮತ್ತು 8.05 Nm ಗರಿಷ್ಟ ಟಾರ್ಕ್‌ನೊಂದಿಗೆ 97.2cc, ಏರ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಎಂಜಿನ್ 4 ಸ್ಪೀಡ್ ಗೇರ್‌ಬಾಕ್ಸ್‌ಗೆ ಹೊಂದಿಕೆಯಾಗುತ್ತದೆ. ಇದರ ಬೆಲೆ ನೋಡುವಿದಾದ್ರೆ, ರೂ. 93,412 ಇದೆ. ಇದು ಬೆಂಗಳೂರಿನ ಆನ್‌ರೋಡ್ ಬೆಲೆಯಾಗಿದೆ.

ಹೋಂಡಾ ಶೈನ್ 100: ಹೋಂಡಾ ಶೈನ್ 100 'ಶೈನ್' ಹೆಸರಿನೊಂದಿಗೆ ಹೆಚ್ಚು ಸ್ಪರ್ಧಾತ್ಮಕ 100cc ವಿಭಾಗದಲ್ಲಿ ತನ್ನ ಹೆಸರನ್ನು ಅಗ್ರಸ್ಥಾನಕ್ಕೆ ಕೊಂಡೊಯ್ಯುವ ಗುರಿಯನ್ನು ಹೊಂದಿದೆ. ಈ ಬೈಕ್ ಒಂದು ಲೀಟರ್‌ಗೆ ಬರೋಬ್ಬರಿ 65km/l ಗಿಂತ ಹೆಚ್ಚಿನ ಮೈಲೇಜ್ ನೀಡುತ್ತದೆ. ಹೋಂಡಾದ 100 ಸಿಸಿ ಬೈಕ್ ವಿಭಾಗದಲ್ಲಿ ಸ್ಟೈಲಿಷ್ ಮಾದರಿಯಂತಲೂ ಖ್ಯಾತಿ ಗಳಿಸಿದೆ.

mileage-bikes-india-under-1-lakh-splendor-platina-shine

ಹೋಂಡಾ ಶೈನ್ 100 ಬೆಲೆಯನ್ನು ನೊಡುವುದಾದ್ರೆ, ಬೆಂಗಳೂರಿನಲ್ಲಿ 84,229 ರೂ.ಗೆ ಖರೀದಿಗೆ ಲಭ್ಯವಿದ್ದು, ಇದು ಆನ್‌ರೋಡ್ ಬೆಲೆಯಾಗಿದೆ. ಇದರ 98.98cc, ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ 7.28 bhp ಪವರ್ ಮತ್ತು 8.05 Nm ಟಾರ್ಕ್ ಹೊರಹಾಕುತ್ತದೆ. ಈ ಮೋಟಾರ್‌ಸೈಕಲ್ 4 ಸ್ಪೀಡ್ ಗೇರ್‌ಬಾಕ್ಸ್ ಅನ್ನು ಹೊಂದಿದೆ.

ಟಿವಿಎಸ್ ರೇಡಿಯನ್: ಟಿವಿಎಸ್ ರೇಡಿಯನ್ 100 ಸಿಸಿ ವಿಭಾಗದ ಹೊಸ ಬೈಕ್. ಟಿವಿಎಸ್ ರೇಡಿಯನ್ 109.7cc, ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ 7.79 bhp ಪವರ್ ಮತ್ತು 8.30Nm ಟಾರ್ಕ್ ಹೊರಹಾಕುತ್ತದೆ. 4-ಸ್ಪೀಡ್ ಗೇರ್‌ಬಾಕ್ಸ್ ಹೊದಿದ್ದು, 69 ಕಿ.ಮೀಗಿಂತ ಹೆಚ್ಚಿನ ಮೈಲೇಜ್ ನೀಡುತ್ತದೆ. ಇದರ ಆನ್‌ರೋಡ್‌ ಬೆಲೆಯು (ಬೆಂಗಳೂರು) 92,356 ರೂ. ಇದೆ.

ಹೋಂಡಾ ಶೈನ್ 125: ಇದು ಪ್ರಸ್ತುತ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ 125cc ಮೋಟಾರ್‌ಸೈಕಲ್ ಆಗಿದೆ. ಹೋಂಡಾ ಶೈನ್ 125 123.9cc, ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ 10.59 bhp ಪವರ್ ಮತ್ತು 11 Nm ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಸಹ ಹೊಂದಿದೆ. ಲೀ.ಗೆ 65km/l ಗಿಂತ ಹೆಚ್ಚಿನ ಮೈಲೇಜ್ ನೀಡುತ್ತದೆ. ಇದರ ಆನ್‌ರೋಡ್ ಬೆಲಯು ರೂ. 1,01,215 ಇದೆ.

Article Published On: Wednesday, October 18, 2023, 16:05 [IST]
English summary
Mileage bikes india under 1 lakh splendor platina shine
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+