ಭಾರತದಲ್ಲಿ ಅದ್ದೂರಿಯಾಗಿ ಆರಂಭವಾದ ಅಂತರಾಷ್ಟ್ರೀಯ MotoGP ರೇಸ್: ಇಲ್ಲಿದೆ ಫುಲ್ ಡೀಟೇಲ್ಸ್

ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಬೈಕ್ ರೇಸ್ ಆಗಿರುವ ಮೋಟೋಜಿಪಿ (MotoGP) ಭಾರತದಲ್ಲಿ ಇಂದಿನಿಂದ ಆರಂಭವಾಗಿದೆ. ನಮ್ಮ ಭಾರತವು ಈ ಅದ್ಬುತ ಕ್ಷಣಕ್ಕೆ ಕೊನೆಗು ಸಾಕ್ಷಿಯಾಗಿದೆ. ಇಂದಿನಿಂದ ಸೆಪ್ಟೆಂಬರ್‌ 24ರವರೆಗೆ ರೇಸ್ ನಡೆಯಲಿದ್ದು, ಈ ಗ್ರಾಂಡ್ ಈವೆಂಟ್ ನೋಡಲು ದಾಖಲೆಯ ಮಟ್ಟದಲ್ಲಿ ಟಿಕೆಟ್‌ಗಳು ಮಾರಾಟವಾಗಿವೆ.

ನೋಯ್ಡಾದ ಬುದ್ಧ ಅಂತರರಾಷ್ಟ್ರೀಯ ಸರ್ಕ್ಯೂಟ್ (buddh international circuit) ನಲ್ಲಿ ಅದ್ದೂರಿಯಾಗಿ ರೇಸ್ ಆರಂಭವಾಗಿದೆ. 2011 ಹಾಗೂ 2013 ರ ನಡುವೆ ಇಲ್ಲಿ ಫಾರ್ಮುಲಾ 1 ರೇಸ್‌ ನಡೆದಿತ್ತು. ಮೋಟಾರ್‌ಸೈಕಲ್ ರೇಸ್ ನಡೆಯುತ್ತಿರುವುದರಿಂದ ಅದಕ್ಕೆ ತಕ್ಕಂತೆ ಟ್ರ್ಯಾಕ್ ಅನ್ನು ಈಗ ಸಿದ್ದಪಡಿಸಿ ರೈಡರ್ ಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

motogp-bharat-2023-race-kicks-off-full-details

ದೇಶದಲ್ಲಿ ಈ ರೇಸ್ ಅನ್ನು 3 ವಿಭಾಗಗಳಲ್ಲಿ ಆಯೋಜಿಸಲಾಗಿದೆ, 'ಮೋಟೋಜಿಪಿ' ರೇಸ್‌ನಲ್ಲಿ 11 ತಂಡಗಳ 22 ರೈಡರ್‌ಗಳು ಪಾಲ್ಗೊಂಡು, ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಮೋಟೋ 2 ಮತ್ತು ಮೋಟೋ 3 ರೇಸ್‌ ಕೂಡ ನಡೆಯಲಿದ್ದು, 40ಕ್ಕೂ ಹೆಚ್ಚಿನ ತಂಡಗಳ 80ಕ್ಕೂ ಹೆಚ್ಚು ರೈಡರ್‌ಗಳು ಪಾಲ್ಗೊಳ್ಳಲಿದ್ದಾರೆ. ಡುಕಾಟಿ, ಕೆಟಿಎಂ, ಅಪ್ರಿಲಿಯಾ, ಯಮಹಾ, ಸೇರಿದಂತೆ ಪ್ರಮುಖ ಘಟಾನುಘಟಿ ತಂಡಗಳು ಸ್ವರ್ಧೆಯಲ್ಲಿ ಭಾಗವಹಿಸಲಿವೆ.

ಈ ಮೋಟೋಜಿಪಿ ಭಾರತ್ ಗ್ರ್ಯಾಂಡ್ ಪ್ರಿಕ್ಸ್ ಟಿಕೆಟ್ ದರವು 800 ರೂ.ನಿಂದ ಆರಂಭವಾಗಿ 1,80,000 ರೂ.ವರೆಗೆ ನಿಗದಿಯಾಗಿತ್ತು. ಟೆಸಾಯಮ್ ಮೇನ್ ಗ್ರ್ಯಾಂಡ್ ಸ್ಟಾನ್ ಟಿಕೆಟ್ ಬೆಲೆ ರೂ.20,000 ರಿಂದ ರೂ.30,000 ವರೆಗೆ ಇತ್ತು. ಇನ್ನು ಪ್ಲಾಟಿನಂ ಕಾರ್ಪೊರೇಟ್ ಬಾಕ್ಸ್‌ನಲ್ಲಿ 40,000 ರೂ. ಬೆಲೆಯ ಹೆಚ್ಚು ವಿಶೇಷವಾದ ವೀಕ್ಷಣೆಯ ಅನುಭವದ ಆಯ್ಕೆಯನ್ನು ವೀಕ್ಷಕರಿಗೆ ನಿಡಲಾಗಿದೆ. ಬುಕ್‌ ಮೈ ಶೋನಲ್ಲಿ ಟಿಕೆಟ್‌ಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು.

motogp-bharat-2023-race-kicks-off-full-details

ಈ ಮೂಲಕ 2023 ರ ಈ ಸೀಸನ್‌ನಲ್ಲಿ ಒಟ್ಟು 21 ಗ್ರ್ಯಾಂಡ್ ಪ್ರಿಕ್ಸ್ ಇದೆ. ನೀವು ಗ್ರ್ಯಾಂಡ್ ಪ್ರಿಕ್ಸ್‌ಗೆ ಹೋಗಲು ಸಾಧ್ಯವಾಗದಿದ್ದರೆ, ಟಿವಿಯಲ್ಲಿ MotoGP ಈವೆಂಟ್‌ಗಳನ್ನು ಲೈವ್ ಆಗಿ ವೀಕ್ಷಿಸಬಹುದು. ಜಿಯೋ ಸಿನಿಮಾ ಮತ್ತು ಸ್ಪೋರ್ಟ್ಸ್ 18 ನಲ್ಲಿ ಪ್ರತ್ಯೇಕವಾಗಿ ಲೈವ್ ಸ್ಟ್ರೀಮಿಂಗ್ ಮಾಡಲು Viacom MotoGP18 ನೊಂದಿಗೆ ಒಪ್ಪಂದ ಮಾಡಿಕೊಂಡಿವೆ.

ಇನ್ನು ಈ ಮೊದಲು ಸರ್ಕ್ಯೂಟ್ ನಲ್ಲಿ ಫಾರ್ಮುಲಾ 1 ರೇಸ್ ನಡೆದಾಗ ಟ್ರ್ಯಾಕ್ 16 ತಿರುವುಗಳನ್ನು (Turn) ಒಳಗೊಂಡಿತ್ತು. ಮೋಟೋಜಿಪಿ ಮೋಟಾರ್‌ಸೈಕಲ್ ರೇಸ್‌ ಆಗಿರುವುದರಿಂದ ಟ್ರ್ಯಾಕ್ ನ್ನು ಕೊಂಚ ಮಾರ್ಪಾಡು ಮಾಡಲಾಗಿದ್ದು, 13 ತಿರುವುಗಳನ್ನು ಹೊಂದಿದೆ. ಇಲ್ಲಿ, ರೇಸರ್‌ಗಳು 370 kmph ಟಾಪ್ ಸ್ವೀಡ್ ನಲ್ಲಿ ಬೈಕ್ ಓಡಿಸಲು ಸಾಧ್ಯವಾಗುತ್ತದೆ.

ಇನ್ನು, ಭಾರತದ ಯುವಕರು ನಿಧಾನವಾಗಿ ರೇಸ್ ಗಳತ್ತ ವಾಲುತ್ತಿದ್ದಾರೆ. ಅದಕ್ಕೆ ಮೋಟೋಜಿಪಿ ವೀಕ್ಷಿಸಲು ಮಾರಾಟವಾಗಿದ್ದ ಟಿಕೆಟ್ ಸಂಖ್ಯೆಯೇ ಸಾಕ್ಷಿ. ಈಗಾಗಲೇ, ನೋಯ್ಡಾದ ಬುದ್ಧ ಅಂತರರಾಷ್ಟ್ರೀಯ ಸರ್ಕ್ಯೂಟ್ ನಲ್ಲಿ ಎಲ್ಲ ಸಿದ್ಧತೆಗಳು ಮುಗಿದಿದ್ದು, ರೇಸ್ ಅದ್ದೂರಿಯಾಗಿ ಆರಂಭವಾಗಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಅಂತರಾಷ್ಟ್ರೀಯ ಸ್ಪರ್ಧೆಗೆ ಈ ಮಟ್ಟದ ಪ್ರತಿಕ್ರಿಯೆ ಲಭ್ಯವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, September 22, 2023, 9:16 [IST]
English summary
Motogp bharat 2023 race kicks off full details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+