MotoGP: ಅತಿದೊಡ್ಡ ಬೈಕ್ ರೇಸ್‌ಗೆ ಕ್ಷಣಗಣನೆ: ಟ್ರ್ಯಾಕ್‌ನಲ್ಲಿ ಯಮಹಾ, ಹೋಂಡಾ ಘರ್ಜಿಸಲು ಸಿದ್ಧ

ಮೊಟ್ಟಮೊದಲ ಅಂತಾರಾಷ್ಟ್ರೀಯ ಬೈಕ್ ರೇಸ್ ಆಗಿರುವ ಮೋಟೋಜಿಪಿ (MotoGP) ಭಾರತದಲ್ಲಿ ಮೊದಲ ಬಾರಿಗೆ ನಡೆಯಲಿದೆ. ಮೋಟೋಜಿಪಿ ವಿಶ್ವ ಚಾಂಪಿಯನ್‌ಶಿಪ್ (MotoGP World Championship) ಪ್ರತಿಷ್ಠಿತ ಮೋಟಾರ್‌ಸೈಕಲ್ ರೇಸ್‌ಗಳಲ್ಲಿ ಒಂದಾಗಿದೆ. ನಮ್ಮ ಭಾರತವು ಈ ಅದ್ಬುತ ಕ್ಷಣಕ್ಕೆ ಸಾಕ್ಷಿಯಾಗಲಿದ್ದು, ಸೆಪ್ಟೆಂಬರ್‌ 22 ರಿಂದ 24ರವರೆಗೆ ರೇಸ್ ನಡೆಯಲಿದೆ. ಈಗಾಗಲೇ, ಸಿದ್ಧತೆಗಳು ಮುಗಿದಿದ್ದು, ರೇಸ್ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.

ಮೋಟೋಜಿಪಿ ಭಾರತ್ (MotoGP Bharat) ಗ್ರ್ಯಾಂಡ್ ಪ್ರಿಕ್ಸ್ ಹೆಸರಿನ ಈವೆಂಟ್ ಅಭಿಮಾನಿಗಳನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಟಿಕೆಟ್ ಮಾರಾಟದ ಅಂಕಿಅಂಶಗಲೇ ಸಾಕ್ಷಿ. ಮೋಟೋಜಿಪಿ ಭಾರತ್ ಗ್ರ್ಯಾಂಡ್ ಪ್ರಿಕ್ಸ್ ಟಿಕೆಟ್ ದರ 800 ರೂ.ನಿಂದ 1,80,000 ರೂ.ವರೆಗೆ ನಿಗದಿಯಾಗಿದೆ. ಟೆಸಾಯಮ್ ಮೇನ್ ಗ್ರ್ಯಾಂಡ್ ಸ್ಟಾನ್ ಟಿಕೆಟ್ ಬೆಲೆ ರೂ.20,000 ರಿಂದ ರೂ.30,000 ವರೆಗೆ ಇರುತ್ತದೆ.

MotoGP Bharat 2023

ಇನ್ನು ಪ್ಲಾಟಿನಂ ಕಾರ್ಪೊರೇಟ್ ಬಾಕ್ಸ್‌ನಲ್ಲಿ 40,000 ರೂ ಬೆಲೆಯ ಹೆಚ್ಚು ವಿಶೇಷವಾದ ವೀಕ್ಷಣೆಯ ಅನುಭವದ ಆಯ್ಕೆಯೂ ಇದೆ. ಆಸಕ್ತರು Bookmyshow ಆ್ಯಪ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. 2023 ರ ಋತುವಿನಲ್ಲಿ ಒಟ್ಟು 21 ಗ್ರ್ಯಾಂಡ್ ಪ್ರಿಕ್ಸ್ ಇದೆ. ಒಮ್ಮೆ ಟಿಕೆಟ್ ಖರೀದಿಸಿದರೆ, ಟಿಕೆಟ್ ಮೂರು ದಿನಗಳವರೆಗೆ ಮಾನ್ಯವಾಗಿರುತ್ತದೆ. ನೀವು ವೈಯಕ್ತಿಕವಾಗಿ ಗ್ರ್ಯಾಂಡ್ ಪ್ರಿಕ್ಸ್‌ಗೆ ಹೋಗಲು ಸಾಧ್ಯವಾಗದಿದ್ದರೆ, ನೀವು ಟಿವಿಯಲ್ಲಿ MotoGP ಈವೆಂಟ್‌ಗಳನ್ನು ಲೈವ್ ಆಗಿ ವೀಕ್ಷಿಸಬಹುದು.

ಜಿಯೋ ಸಿನಿಮಾ ಮತ್ತು ಸ್ಪೋರ್ಟ್ಸ್ 18 ನಲ್ಲಿ ಪ್ರತ್ಯೇಕವಾಗಿ ಲೈವ್ ಸ್ಟ್ರೀಮಿಂಗ್ ಮಾಡಲು Viacom MotoGP18 ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಗಮನಾರ್ಹವಾಗಿ, Moto GP Bharat ಒಂದು ದಶಕದ ನಂತರ ದೇಶದಲ್ಲಿ ನಡೆದ ಮೊದಲ ಜಾಗತಿಕ ಮೋಟಾರ್‌ಸ್ಪೋರ್ಟ್ ಈವೆಂಟ್ ಆಗಿದೆ. ರೇಸಿಂಗ್ ದಿಗ್ಗಜರಾದ ಫ್ಯಾಬಿಯೊ ಕ್ವಾರ್ಟಾರೊ, ಅಲಿಕ್ಸ್ ಎಸ್ಪಾರ್ಗಾರೊ ಮತ್ತು ಫ್ರಾನ್ಸೆಸ್ಕೊ ಬಗ್ನಾಯಾ ಸ್ಪರ್ಧಿಸುವ ನಿರೀಕ್ಷೆಯಿರುವುದರಿಂದ ಸಂಘಟಕರು ಮೂರು ದಿನಗಳಲ್ಲಿ 100,000 ಪ್ರೇಕ್ಷಕರನ್ನು ನಿರೀಕ್ಷಿಸುತ್ತಿದ್ದಾರೆ.

MotoGP Bharat 2023

ನೋಯ್ಡಾದ ಬುದ್ಧ ಅಂತರರಾಷ್ಟ್ರೀಯ ಸರ್ಕ್ಯೂಟ್ (buddh international circuit) ನಲ್ಲಿ ಅದ್ದೂರಿಯಾಗಿ ರೇಸ್ ಜರುಗಲಿದೆ. 2011 ಹಾಗೂ 2013 ರ ನಡುವೆ ಇಲ್ಲಿ ಫಾರ್ಮುಲಾ 1 ರೇಸ್‌ ಆಯೋಜಿಸಲಾಗಿತ್ತು. ಮೋಟಾರ್‌ಸೈಕಲ್ ರೇಸ್ ನಡೆಯುತ್ತಿರುವುದರಿಂದ ಅದಕ್ಕೆ ತಕ್ಕಂತೆ ಟ್ರ್ಯಾಕ್ ಅನ್ನು ಸಿದ್ದಪಡಿಸಲಾಗಿದ್ದು, ರೈಡರ್ ಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದಕ್ಕೆ ಪೂರಕವಾಗಿ ಎಲ್ಲ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ.

ಇನ್ನು ಈ ಮೊದಲು ಸರ್ಕ್ಯೂಟ್ ನಲ್ಲಿ ಫಾರ್ಮುಲಾ 1 ರೇಸ್ ನಡೆದಾಗ ಟ್ರ್ಯಾಕ್ 16 ತಿರುವುಗಳನ್ನು (Turn) ಒಳಗೊಂಡಿತ್ತು. ಮೋಟೋಜಿಪಿ ಮೋಟಾರ್‌ಸೈಕಲ್ ರೇಸ್‌ ಆಗಿರುವುದರಿಂದ ಟ್ರ್ಯಾಕ್ ನ್ನು ಕೊಂಚ ಮಾರ್ಪಾಡು ಮಾಡಲಾಗಿದ್ದು, 13 ತಿರುವುಗಳನ್ನು ಹೊಂದಿದೆ. ಇಲ್ಲಿ, ರೇಸರ್‌ಗಳು 370 kmph ಟಾಪ್ ಸ್ವೀಡ್ ನಲ್ಲಿ ಬೈಕ್ ಓಡಿಸಲು ಸಾಧ್ಯವಾಗುತ್ತದೆ. ದೇಶದಲ್ಲಿ ಈ ರೇಸ್ ಅನ್ನು 3 ವಿಭಾಗಗಳಲ್ಲಿ ಆಯೋಜಿಸಲಾಗಿದೆ,

'ಮೋಟೋಜಿಪಿ' ರೇಸ್‌ನಲ್ಲಿ 11 ತಂಡಗಳ 22 ರೈಡರ್‌ಗಳು ಪಾಲ್ಗೊಂಡು, ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಮೋಟೋ 2 ಮತ್ತು ಮೋಟೋ 3 ರೇಸ್‌ ಕೂಡ ನಡೆಯಲಿದ್ದು, 40ಕ್ಕೂ ಹೆಚ್ಚಿನ ತಂಡಗಳ 80ಕ್ಕೂ ರೈಡರ್‌ ಗಳು ಪಾಲ್ಗೊಳ್ಳಲಿದ್ದಾರೆ. ಡುಕಾಟಿ, ಕೆಟಿಎಂ, ಅಪ್ರಿಲಿಯಾ, ಯಮಹಾ, ಸೇರಿದಂತೆ ಪ್ರಮುಖ ಘಟಾನುಘಟಿ ತಂಡಗಳು ಸ್ವರ್ಧೆಯಲ್ಲಿ ಭಾಗವಹಿಸಲಿವೆ.

ಇನ್ನು ಕಳೆದ ಜುಲೈ ತಿಂಗಳೇ ಮೋಟೋಜಿಪಿ ರೇಸ್‌ ಆಯೋಜಕರು, ನವದೆಹಲಿಯಲ್ಲಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ ನಿವಾಸಕ್ಕೆ ಭೇಟಿ ನೀಡಿದ್ಧರು. ಅತಿಥಿಯಾಗಿ ಆಗಮಿಸುವಂತೆ ಅವರಿಗೆ ಕೈವೈಟಿ ಹೆಲ್ಮೆಟ್ ಗಿಫ್ಟ್ ಕೊಟ್ಟು ಆಹ್ವಾನಿಸಿದ್ದರು. ಅನುರಾಗ್ ಠಾಕೂರ್ ಅವರು, ತಮ್ಮ ಮನೆಯ ಆವರಣದಲ್ಲಿ ಸುರಿಯುವ ಮಳೆಯಲ್ಲೂ ಬೈಕ್ ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿತ್ತು.

ಇನ್ನು, ಭಾರತದ ಯುವಕರು ನಿಧಾನವಾಗಿ ರೇಸ್ ಗಳತ್ತ ವಾಲುತ್ತಿದ್ದಾರೆ. ಅದಕ್ಕೆ ಮೋಟೋಜಿಪಿ ವೀಕ್ಷಿಸಲು ಮಾರಾಟವಾಗಿದ್ದ ಟಿಕೆಟ್ ಸಂಖ್ಯೆಯೇ ಸಾಕ್ಷಿ. ಈಗಾಗಲೇ, ನೋಯ್ಡಾದ ಬುದ್ಧ ಅಂತರರಾಷ್ಟ್ರೀಯ ಸರ್ಕ್ಯೂಟ್ ನಲ್ಲಿ ಎಲ್ಲ ಸಿದ್ಧತೆಗಳು ಮುಗಿದ್ದು, ಕೆಲವೇ ಗಂಟೆಯಲ್ಲಿ ರೇಸ್ ಆರಂಭವಾಗಲಿದ್ದು, ರೇಸ್ ಪ್ರಿಯರು ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ. ಅಂತಿಮವಾಗಿ ಇನ್ನೆರಡು ದಿನದಲ್ಲಿ ಎಲ್ಲ ಕುತೂಹಲಕ್ಕೂ ತೆರೆ ಬೀಳಲಿದೆ.

More from DriveSpark

Article Published On: Thursday, September 21, 2023, 17:08 [IST]
English summary
Motogp bharat 2023 starting tomorrow venue ticket and more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+