MotoGP bharat gp: 'ಮೋಟೋ ಜಿಪಿ ಇಂಡಿಯಾ' ಮೊದಲ ಟಿಕೆಟ್ ಅನಾವರಣಗೊಳಿಸಿದ ಯುಪಿ ಸಿಎಂ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಹು ನಿರೀಕ್ಷಿತ MotoGP ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್‌ನ ಮೊದಲ ಟಿಕೆಟ್ ಅನ್ನು ಅನಾವರಣಗೊಳಿಸಿದರು. ಜೂನ್ 22 ರಿಂದಸೆಪ್ಟೆಂಬರ್ 22 ಆರಂಭವಾಗಲಿರುವ 2023 ರ MotoGP bharat gp ಗ್ರ್ಯಾಂಡ್ ಪ್ರಿಕ್ಸ್ ನೋಯ್ಡಾದ ಬುದ್ಧ್ ಇಂಟರ್ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ನಡೆಯಲಿದೆ.

MotoGP ವಿಶ್ವದ ಅತಿದೊಡ್ಡ ಬೈಕ್ ರೇಸಿಂಗ್ ಸ್ಪರ್ಧೆಯಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು MotoGP ನ ಸುಗಮ ಸವಾರಿಗೆ ದೇಶಕ್ಕೆ ತನ್ನ ಮೊದಲ ಪ್ರವೇಶವನ್ನು ಮಾಡಲು ದಾರಿ ಮಾಡಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಮೂಲಕ ಭಾರತವು ಅಂತರಾಷ್ಟ್ರೀಯ ಮೋಟಾರ್‌ಸೈಕಲ್ ರೇಸಿಂಗ್‌ನಲ್ಲಿ ಜಾಗತಿಕ ವೇದಿಕೆಯಲ್ಲಿ ಗುರ್ತಿಸಿಕೊಂಡಿದೆ.

motogp-bharat-gp-first-ticket-unveiled-by-up-cm-yogi-adityanath

ಭಾರತವು ಮೊದಲ ಬಾರಿಗೆ 'MotoGP' ಅನ್ನು ಆಯೋಜಿಸುತ್ತಿರುವುದು ಹೆಮ್ಮೆ ಮತ್ತು ಸಂತೋಷದ ವಿಷಯವಾಗಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಈ ಓಟವನ್ನು ಆಯೋಜಿಸುವ ಮೂಲಕ ಉತ್ತರ ಪ್ರದೇಶದಲ್ಲಿ ಸುಮಾರು ರೂ. 1,000 ಕೋಟಿ ಆರ್ಥಿಕ ಚಟುವಟಿಕೆ ಹಾಗೂ ಐದು ಸಾವಿರ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಾಧ್ಯತೆ ಇದೆ.

ಮೊದಲ ಟಿಕೆಟ್ ಪಡೆದ ಯುಪಿ ಸಿಎಂ: ಸಿಎಂ ಯೋಗಿ ಆದಿತ್ಯನಾಥ್, ಫೇರ್‌ಸ್ಟ್ರೀಟ್ ಸ್ಪೋರ್ಟ್ಸ್‌ಗೆ ಮೊದಲ ಟಿಕೆಟ್ ಅನ್ನು ಪ್ರಸ್ತುತಪಡಿಸುವ ಫೋಟೋಗಳನ್ನು ಭಾರತ್ ಜಿಪಿಯ ಭಾರತ ಸಂಘಟಕರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಈವೆಂಟ್‌ಗಾಗಿ ಟಿಕೆಟ್‌ಗಳ ಮಾರಾಟವು ಈಗ ಬುಕ್‌ಮೈಶೋನಲ್ಲಿ ದೊರಯಲಿವೆ. MotoGP ಅಭಿಮಾನಿಗಳು ಬುಕ್‌ಮೈಶೋನಲ್ಲಿ ಬುಕ್ ಮಾಡಿಕೊಳ್ಳಬಹುದು.

motogp-bharat-gp-first-ticket-unveiled-by-up-cm-yogi-adityanath

ಸೆಪ್ಟೆಂಬರ್ 22 ರಿಂದ 24 ವರೆಗೆ ಅಧಿಕೃತ "ದಿ ಗ್ರ್ಯಾಂಡ್ ಪ್ರಿಕ್ಸ್ ಆಫ್ ಭಾರತ್" ಎಂದು ಕರೆಯಲ್ಪಡುವ ಈ ರೇಸ್ ಮೊದಲ ಬಾರಿಗೆ ಭಾರತ ನಡೆಯಲಿದೆ. ಮೋಟಾರ್‌ಸೈಕಲ್‌ಗಳ ಪ್ರತಿಯೊಂದು ಪ್ರಮುಖ ತಯಾರಕರು ಕೂಡ ಇದರಲ್ಲಿ ಭಾಗವಹಿಸಲಿದ್ದಾರೆ. ಹೋಂಡಾ, ಅಪ್ರಿಲಿಯಾ, ಕೆಟಿಎಂ, ಯಮಹಾ ಮತ್ತು ಡುಕಾಟಿದಂತಹ ಬ್ರಾಮಡ್‌ಗಳು ಇದರಲ್ಲಿ ಸೇರಿವೆ ಎಂದು ಸಂಘಟಕರು ಹೇಳಿದರು.

ಫೇರ್‌ಸ್ಟ್ರೀಟ್ ಸ್ಪೋರ್ಟ್ಸ್ ಆಟೋಮೋಟಿವ್ ಉತ್ಸಾಹಿಗಳಿಗೆ ಮರೆಯಲಾಗದ ಓಟದ ಅನುಭವವನ್ನು ಕಲ್ಪಿಸಿದೆ, ಇದು ಬುದ್ಧ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ (BIC) ಸರಿಸುಮಾರು 100,000 ಆಸನಗಳನ್ನು ಹೊಂದಿದ್ದು, ರೂ. 800 ರಿಂದ ರೂ. 40,000 ವರೆಗಿನ ಟಿಕೆಟ್ ಬೆಲೆಗಳನ್ನು ಮಾರಾಟ ಮಾಡುವುದಾಗಿ ಸಂಘಟಕರು ಪ್ರಕಟೆಣೆಯಲ್ಲಿ ತಿಳಿಸಿದ್ದಾರೆ.

ಕೈಗೆಟುಕುವ ಆರಂಭಿಕ ಬೆಲೆ ರೂ. 800 ಸೇರಿದಂತೆ, ರೂ. 20,000, ರೂ. 30,000 ವರೆಗಿನ ಮುಖ್ಯ ಗ್ರ್ಯಾಂಡ್‌ಸ್ಟ್ಯಾಂಡ್ ಟಿಕೆಟ್‌ಗಳು ಮತ್ತು ರೂ. 40,000 ಬೆಲೆಯ ಐಷಾರಾಮಿ ಪ್ಲಾಟಿನಂ ಕಾರ್ಪೊರೇಟ್ ಬಾಕ್ಸ್ ಸೀಟ್‌ಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಟಿಕೆಟ್ ಆಯ್ಕೆಗಳನ್ನು ಒದಗಿಸುವ ಮೂಲಕ ಅಭಿಮಾನಿಗಳಿಗೆ ಫೇರ್‌ಸ್ಟ್ರೀಟ್ ಸ್ಪೋರ್ಟ್ಸ್ ವೀಕ್ಷಿಸಲು ಸಂಘಟಕರು ಅನುವು ಮಾಡಿಕೊಟಿದ್ದಾರೆ.

ಡುಕಾಟಿಯ ಬಾಗ್ನಾಯಾ, ರೆಪ್ಸೊಲ್ ಹೋಂಡಾ ತಂಡದ ಮಾರ್ಕ್ ಮಾರ್ಕ್ವೆಜ್, ಮೂನಿಯ ಮಾರ್ಕೊ ಬೆಜೆಚಿ, ಬ್ರಾಡ್ ಬೈಂಡರ್ ಮತ್ತು ರೆಡ್‌ಬುಲ್ ಕೆಟಿಎಂನ ಜಾಕ್ ಮಿಲ್ಲರ್, ಪ್ರೈಮಾದ ಜಾರ್ಜ್ ಮಾರ್ಟಿನ್ ಇತರರು ತಮ್ಮ ಮೊದಲ ಭಾರತ GP, "MotoGPTM ಭಾರತ್" ನಲ್ಲಿ ರೇಸಿಂಗ್ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

Article Published On: Friday, June 23, 2023, 19:29 [IST]
English summary
Motogp bharat gp first ticket unveiled by up cm yogi adityanath
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+