MotoGP: ಅತಿಥಿಯಾಗಿ ಕೇಂದ್ರ ಸಚಿವರಿಗೆ ಆಹ್ವಾನ.. ಮಳೆಯಲ್ಲೂ ಬೈಕ್ ಓಡಿಸಿ ಗಮನ ಸೆಳೆದ್ರು!
'ಮೋಟೋಜಿಪಿ (MotoGP) ವರ್ಲ್ಡ್ ಚಾಂಪಿಯನ್‌ಶಿಪ್' ಪ್ರತಿಷ್ಠಿತ ಮೋಟಾರ್‌ಸೈಕಲ್ ರೇಸ್‌ಗಳಲ್ಲಿ ಒಂದಾಗಿದೆ. ನಮ್ಮ ಭಾರತವು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದು, ಸೆಪ್ಟೆಂಬರ್ ತಿಂಗಳ 22 ರಿಂದ 24ರವರೆಗೆ ರೇಸ್ ನಡೆಯಲಿದೆ. ಗೌರವಾನ್ವಿತ ಅತಿಥಿಯಾಗಿ ಭಾಗವಹಿಸುವಂತೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರನ್ನು ಆಯೋಜಕರು ಆಹ್ವಾನಿಸಿದ್ದಾರೆ.
ನವದೆಹಲಿಯಲ್ಲಿರುವ ಕೇಂದ್ರ ಸಚಿವರ ನಿವಾಸಕ್ಕೆ ಭೇಟಿ ನೀಡಿದ್ಧ ಮೋಟೋಜಿಪಿ ರೇಸ್ ಆಯೋಜಕರು, ಅತಿಥಿಯಾಗಿ ಆಗಮಿಸುವಂತೆ ಅನುರಾಗ್ ಠಾಕೂರ್ ಅವರಿಗೆ KYT ಹೆಲ್ಮೆಟ್ ಉಡುಗೊರೆ ಕೊಟ್ಟು ಶನಿವಾರ ಆಹ್ವಾನ ನೀಡಿದ್ದಾರೆ. ಸಚಿವರು ಅಲ್ಲಿಯೇ ಹೆಲ್ಮೆಟ್ ತೊಟ್ಟು, ತಮ್ಮ ಮನೆಯ ಆವರಣದಲ್ಲಿ ಸುರಿಯುವ ಮಳೆಯಲ್ಲೂ ಬೈಕ್ ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಮೋಟೋಜಿಪಿ ವಿಶ್ವ ಚಾಂಪಿಯನ್‌ಶಿಪ್ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು, 'ಈ ಮೋಟಾರ್‌ಸೈಕಲ್ ರೇಸ್ ಮೊದಲ ಬಾರಿಗೆ ಭಾರತದಲ್ಲಿ ನಡೆಯುತ್ತಿದೆ. ದೇಶದ ರೇಸರ್ ಗಳು ಕೂಡ ಭಾಗವಹಿಸಲಿದ್ದು, ರೇಸಿಂಗ್ ಬೈಕ್‌ಗಳಿಗೆ ಉತ್ತೇಜನ ದೊರೆಯಲಿದೆ. ಜೊತೆಗೆ ಭಾರತದ ಆಟೋಮೊಬೈಲ್ ಉದ್ಯಮವು ದೊಡ್ಡ ಮಟ್ಟದಲ್ಲಿ ಬೆಳವಣಿಗೆಯಾಗಲಿದೆ' ಎಂದು ಹೇಳಿದ್ದಾರೆ.
ಮೋಟೋಜಿಪಿ ವಿಶ್ವ ಚಾಂಪಿಯನ್‌ಶಿಪ್ ನ 14ನೇ ಸುತ್ತಿನ ಸ್ಪರ್ಧೆಗಳು, 'ಬುದ್ಧ ಅಂತರರಾಷ್ಟ್ರೀಯ ಸರ್ಕ್ಯೂಟ್'ನಲ್ಲಿ ಅದ್ದೂರಿಯಾಗಿ ನಡೆಯಲಿದೆ. ರೇಸಿಂಗ್ ಪ್ರಿಯರು, ಟಿಕೆಟ್‌ಗಳನ್ನು ಬುಕ್ ಮೈ ಶೋ (BookMyShow)ನಲ್ಲಿ ಖರೀದಿಸಬಹುದು. ಈ ರೇಸ್ ಮೇಲೆ ಯುವ ಜನರಿಗೆ ಎಷ್ಟು ಕ್ರೇಜ್ ಯಿದೆ ಅಂದರೆ, ಬುಕ್ಕಿಂಗ್ ಶುರುವಾಗಿ ಮೊದಲ ಮೂರು ದಿನದಲ್ಲಿಯೇ 30 ಸಾವಿರ ಟಿಕೆಟ್ ಮಾರಾಟವಾಗಿದ್ದವು.
ಮೋಟೋಜಿಪಿ ಟಿಕೆಟ್ ದರಗಳು ಬುದ್ಧ ಸರ್ಕ್ಯೂಟ್ ನ ಆಸನಗಳಿಗೆ ಅನುಗುಣವಾಗಿ ರೂ.800 ದಿಂದ ರೂ.40,000 ವರೆಗೆ ಇದೆ. ನಿಮಗೆ ಅಷ್ಟೋ ದೊಡ್ಡ ಮೊತ್ತ ಪಾವತಿಸಿ ಟಿಕೆಟ್ ಖರೀದಿಸಿ, ದೆಹಲಿಗೆ ತೆರಳಿ ರೇಸ್ ನೋಡಲು ಸಾಧ್ಯವಾಗದಿದ್ದರೆ, ನೀವು, ಜಿಯೋಸಿನಿಮಾ, ಸ್ಪೋರ್ಟ್ಸ್18ನಲ್ಲಿ ಮೋಟೋಜಿಪಿ ರೇಸ್ ನ ನೇರ ಪ್ರಸಾರ ವೀಕ್ಷಿಸಬಹುದು.
ದೇಶದಲ್ಲಿ ಈ ರೇಸ್ ಮೂರು ವಿಭಾಗದಲ್ಲಿ ನಡೆಯಲಿದೆ. ಅದರಲ್ಲಿ ಮುಖ್ಯವಾದ 'MotoGP' ರೇಸ್‌ನಲ್ಲಿ 11 ತಂಡಗಳ 22 ರೈಡರ್‌ಗಳು ಭಾಗವಹಿಸಲಿದ್ದು, ಪ್ರಶಸ್ತಿಗಾಗಿ ಸೆಣಸಲಿದ್ದಾರೆ. Moto2 ಹಾಗೂ Moto3 ರೇಸ್‌ಗಳು ಜರುಗಲಿದ್ದು, 40 ತಂಡಗಳ 80 ರೈಡರ್‌ಗಳು ಪಾಲ್ಗೊಳ್ಳಲಿದ್ದಾರೆ. ಡುಕಾಟಿ, ಕೆಟಿಎಂ, ಅಪ್ರಿಲಿಯಾ, ಪ್ರೈಮ ಪ್ರಮಾಕ್ ರೇಸಿಂಗ್, ಯಮಹಾ, LCR ಹೋಂಡಾ, ಸೇರಿದಂತೆ ಪ್ರಮುಖ ತಂಡಗಳು ಸ್ವರ್ಧೆಯಲ್ಲಿ ಭಾಗವಹಿಸಲಿವೆ.
ವಿಶ್ವದರ್ಜೆಯ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಭಾರಿ ವೇಗದ ಮೋಟಾರ್‌ಸೈಕಲ್‌ಗಳನ್ನು ನುರಿತ ರೈಡರ್‌ಗಳು ಈ ರೇಸ್‌ನಲ್ಲಿ ಓಡಿಸಲಿದ್ದು, ಭಾರತದಲ್ಲಿ ಕೆಲವೇ ತಿಂಗಳಲ್ಲಿ ನಡೆಯುವುದರಿಂದ ನೀರಿಕ್ಷೆಗಳು ಹೆಚ್ಚಾಗಿವೆ. ರೇಸ್ ಪ್ರಿಯರು ಖಾತರದಿಂದ ಕಾಯುತ್ತಿದ್ದಾರೆ. ಸದ್ಯ, ಗೌರವಾನ್ವಿತ ಅತಿಥಿಯಾಗಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಭಾಗವಹಿಸಿರುವುದು ಈ ಸ್ಪರ್ಧೆಗೆ ಮತ್ತಷ್ಟು ಮೆರುಗು ಬರುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications