ಸೆಪ್ಟೆಂಬರ್ ತಿಂಗಳ ಟಾಪ್ 10 ಬೈಕ್‌ಗಳು: ನಿಮ್ಮ ವಾಹನಕ್ಕೆ ಎಷ್ಟನೇ ಸ್ಥಾನ ನೋಡಿ...
ವಿಶ್ವದಲ್ಲೇ ಅತಿ ದೊಡ್ಡ ಮೋಟಾರ್‌ಸೈಕಲ್ ಮಾರುಕಟ್ಟೆ ಹೊಂದಿರುವ ದೇಶ ನಮ್ಮ ಭಾರತವಾಗಿದೆ. ಇಷ್ಟು ದೊಡ್ಡ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 2023 ರಲ್ಲಿ ಮಾರಾಟವಾದ ಟಾಪ್ 10 ಬೈಕ್‌ಗಳ ಪಟ್ಟಿಯನ್ನು ಇಲ್ಲಿ ನೋಡೊಣ.
RE ಕ್ಲಾಸಿಕ್ 350: ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್, ಕಂಪನಿಯ ಅತ್ಯುತ್ತಮ ಮಾರಾಟ ಕಾಣುತ್ತಿರುವ ಮಾದರಿಯಾಗಿ ಮುಂದುವರೆದಿದೆ. ಸೆಪ್ಟೆಂಬರ್ 2023 ರಲ್ಲಿ, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮೋಟಾರ್‌ಸೈಕಲ್‌ಗಳ 26,033 ಯೂನಿಟ್‌ಗಳನ್ನು ಕಂಪನಿ ಮಾರಾಟ ಮಾಡಿದೆ. ಆದರೆ ವಾರ್ಷಿಕ ಮಾರಾಟ ಮಾತ್ರ ಶೇ 0.44 ರಷ್ಟು ಇಳಿಕೆ ಕಂಡಿದೆ.

TVS ಅಪಾಚೆ: TVS ಮೋಟಾರ್ ಈ ಸೆಪ್ಟೆಂಬರ್ 2023 ರಲ್ಲಿ ಅಪಾಚೆ ಶ್ರೇಣಿಯ ಮೋಟಾರ್‌ಸೈಕಲ್‌ಗಳ ಮಾರಾಟ ಅಂಕಿಅಂಶಗಳನ್ನು ಶೇ 42 ರಷ್ಟು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಸಂಖ್ಯೆಗಳ ಪ್ರಕಾರ, TVS ಮೋಟಾರ್ ಭಾರತದಲ್ಲಿ ಅಪಾಚೆ ಶ್ರೇಣಿಯ ಮೋಟಾರ್‌ಸೈಕಲ್‌ಗಳ 26,774 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ.
ಹೀರೋ ಗ್ಲಾಮರ್: ಹೀರೋ ಗ್ಲಾಮರ್ ಈ ಹಿಂದೆ ದೇಶದಲ್ಲಿ ಹೆಚ್ಚು ಮಾರಾಟವಾಗುವ 125cc ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿತ್ತು. ಸೆಪ್ಟೆಂಬರ್ 2023 ರಲ್ಲಿ, Hero MotoCorp ದೇಶದಲ್ಲಿ 35,578 ಯುನಿಟ್ ಗ್ಲಾಮರ್ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ, ಇದರ ಪರಿಣಾಮವಾಗಿ ವಾರ್ಷಿಕ ಮಾರಾಟದಲ್ಲಿ ಶೇ13.35 ರಷ್ಟು ಹೆಚ್ಚಳವನ್ನು ಕಂಡಿದೆ.

ಹೀರೋ ಪ್ಯಾಶನ್: ಇತ್ತೀಚಿನ ನವೀಕರಣದ ಹೊರತಾಗಿಯೂ, ಹೀರೋ ಪ್ಯಾಶನ್ ಮೋಟಾರ್‌ಸೈಕಲ್‌ನ ವಾರ್ಷಿಕ ಮಾರಾಟವು ಶೇ 4.7 ರಷ್ಟು ಕಡಿಮೆಯಾಗಿದೆ. ಈ ಸಂಖ್ಯೆಗೆ ಸಂಬಂಧಿಸಿದಂತೆ, ಹೀರೋ ಮೋಟೋಕಾರ್ಪ್ ಸೆಪ್ಟೆಂಬರ್ 2023 ರಲ್ಲಿ ಕೇವಲ 36,230 ಯೂನಿಟ್ ಪ್ಯಾಶನ್ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಿದೆ ಎಂದು ವರದಿ ತಿಳಿಸಿದೆ.
ಬಜಾಜ್ ಪ್ಲಾಟಿನಾ: ಬಜಾಜ್ ಪ್ಲಾಟಿನಾ ಅದರ ಅತ್ಯುತ್ತಮ ಮೈಲೇಜ್‌ಗೆ ಬಹಳ ಹೆಸರುವಾಸಿಯಾಗಿದೆ. ಹಾಗಾಗಿ, ಈ ಮಾದರಿಯು ಪ್ರಯಾಣಿಕರ ವಿಭಾಗದಲ್ಲಿ ನೆಚ್ಚಿನದಾಗಿದೆ. ಸೆಪ್ಟೆಂಬರ್ 2023 ರಲ್ಲಿ, ಬಜಾಜ್ ಭಾರತದಲ್ಲಿ 48,615 ಯುನಿಟ್ ಪ್ಲಾಟಿನಾ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ, ಇದರ ಪರಿಣಾಮವಾಗಿ ವರ್ಷಕ್ಕೆ ಶೇ19.47 ರಷ್ಟು ಮಾರಾಟ ಹೆಚ್ಚಳವಾಗಿದೆ.

TVS ರೈಡರ್: TVS ರೈಡರ್ ಭಾರತೀಯ ಮೋಟಾರ್‌ಸೈಕಲ್ ವಿಭಾಗದಲ್ಲಿ ಶೀಘ್ರವಾಗಿ ಯಶಸ್ಸು ಗಳಿಸಿತು. ಈ ಮಾದರಿಯು ಶೇ15 ರಷ್ಟು ವಾರ್ಷಿಕ ಮಾರಾಟ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಸಂಖ್ಯೆಗಳ ಪ್ರಕಾರ, TVS ಮೋಟಾರ್ ಸೆಪ್ಟೆಂಬರ್ 2023 ರಲ್ಲಿ 48,615 ಯೂನಿಟ್ ರೈಡರ್ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ.
Hero HF ಡಿಲಕ್ಸ್: Hero HF ಡಿಲಕ್ಸ್ ಮೋಟಾರ್‌ಸೈಕಲ್ ಅನೇಕ ಪ್ರಯಾಣಿಕ ವಿಭಾಗದ ಮೋಟಾರ್‌ಸೈಕಲ್ ಖರೀದಿದಾರರಿಗೆ ನೆಚ್ಚಿನದಾಗಿದೆ. ಸೆಪ್ಟೆಂಬರ್ 2023 ರಲ್ಲಿ, Hero MotoCorp ಭಾರತದಲ್ಲಿ 84,188 ಯೂನಿಟ್ Hero HF ಡೀಲಕ್ಸ್ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಿದೆ. ಇದರ ಪರಿಣಾಮವಾಗಿ ವಾರ್ಷಿಕ ಮಾರಾಟವು ಶೇ 15.2 ರಷ್ಟು ಹೆಚ್ಚಾಗಿದೆ.

ಬಜಾಜ್ ಪಲ್ಸರ್: ಹೊಸ ಪಲ್ಸರ್ ಮಾದರಿಗಳ ಬಿಡುಗಡೆಯು ಸಕಾರಾತ್ಮಕವಾಗಿ ಕೆಲಸ ಮಾಡಿದೆ ಎಂದು ತೋರುತ್ತಿದೆ. ಏಕೆಂದರೆ ಪಲ್ಸರ್ ಶ್ರೇಣಿಯು ವಾರ್ಷಿಕ ಮಾರಾಟದಲ್ಲಿ ಶೇ32.47 ರಷ್ಟು ಏರಿಕೆ ಕಂಡಿದೆ. ಬಜಾಜ್ ಸೆಪ್ಟೆಂಬರ್ 2023 ರಲ್ಲಿ 1,20,126 ಯುನಿಟ್ ಪಲ್ಸರ್ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ.
ಹೋಂಡಾ ಶೈನ್: ಹೋಂಡಾ ಶೈನ್ ದೇಶದಲ್ಲಿ ಹೆಚ್ಚು ಮಾರಾಟವಾಗುವ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ. ಸೆಪ್ಟೆಂಬರ್ 2023 ರಲ್ಲಿ, ಹೋಂಡಾ ದೇಶದಲ್ಲಿ 1,61,544 ಯೂನಿಟ್ ಶೈನ್ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಿದೆ. ಇದರ ಪರಿಣಾಮವಾಗಿ ವಾರ್ಷಿಕ ಮಾರಾಟ ಅಂಕಿಅಂಶಗಳಲ್ಲಿ ಶೇ 8.63 ರಷ್ಟು ಹೆಚ್ಚಳ ಕಂಡಿದೆ.

ಹೀರೋ ಸ್ಪ್ಲೆಂಡರ್: ಹೀರೋ ಸ್ಪ್ಲೆಂಡರ್ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಹೀರೋ ಮೋಟೋಕಾರ್ಪ್ ಸೆಪ್ಟೆಂಬರ್ 2023 ರಲ್ಲಿ ಬರೋಬ್ಬರಿ 3,19,692 ಯೂನಿಟ್ ಸ್ಪ್ಲೆಂಡರ್ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಿ ಮೊದಲ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈ ಮೂಲಕ ವಾರ್ಷಿಕ ಮಾರಾಟದಲ್ಲಿ ಶೇ 10.3 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.


Click it and Unblock the Notifications