Bajaj Chetak: ಕಡಿಮೆ ಬೆಲೆಗೆ ಬರುತ್ತಿದೆ ಹೊಸ ಬಜಾಜ್ ಚೇತಕ್ ಅರ್ಬೇನ್ ಇ-ಸ್ಕೂಟರ್, ವಿಶೇಷತೆಗಳೇನು?
ದೇಶೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಬಜಾಜ್ (Bajaj) ಕಂಪನಿಯ ಬೈಕ್ ಹಾಗೂ ಸ್ಕೂಟರ್‌ಗಳು ವಿಶ್ವಾಸಾರ್ಹತೆಗೆ ಹೆಸರುವಾಗಿಯಾಗಿರುವುದರಿಂದ ಪ್ರತಿಯೊಬ್ಬರು ಇಷ್ಟಪಟ್ಟು ಖರೀದಿಸುತ್ತಾರೆ. ಕಂಪನಿಯು ಎಲೆಕ್ಟ್ರಿಕ್ ವಾಹನಗಳಿಗೆ ಬೆಳೆಯುತ್ತಿರುವ ಬೇಡಿಕೆಯನ್ನು ಗಮನಿಸಿ, ಚೇತಕ್ (Chetak) ಇವಿಯನ್ನು ಬಿಡುಗಡೆಗೊಳಿಸಿತ್ತು. ಈಗ, ಕಡಿಮೆ ಬೆಲೆಗೆ ಹೊಸ ರೂಪಾಂತರ ಲಾಂಚ್‌ಗೆ ಸಿದ್ಧತೆಯನ್ನು ನಡೆಸುತ್ತಿದೆ.
ಬಜಾಜ್ ಕಂಪನಿಯು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನ ನೂತನ ವೇರಿಯೆಂಟ್ ಅಭಿವೃದ್ಧಿಪಡಿಸುತ್ತಿರುವ ಬಗ್ಗೆ ಸೋರಿಕೆಯಾಗಿರುವ ಸರ್ಕಾರಿ ದಾಖಲೆಗಳಿಂದ ತಿಳಿದುಬಂದಿದೆ. ಇದು, ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಎಲೆಕ್ಟ್ರಿಕ್ ಸ್ಕೂಟರ್ ಆಗಿರಲಿದೆ ಎಂದು ಅಂದಾಜಿಸಲಾಗಿದೆ. ಹೊಸ ಸ್ಕೂಟರ್‌ಗೆ ಬಜಾಜ್ ಚೇತಕ್ ಅರ್ಬೇನ್ (Bajaj Chetak Urbane) ಎಂದು ಹೆಸರಿಡಬಹುದೆಂಬ ಮಾಹಿತಿ ದೊರೆತಿದೆ.

ಚೇತಕ್ ಹೊಸ ರೂಪಾಂತರವಾಗಿರುವ ಅರ್ಬೇನ್, ಅದರ ಪ್ರೀಮಿಯಂ ರೂಪಾಂತರಕ್ಕೆ ಹೋಲಿಸಿದರೆ, ಸಣ್ಣ 2.48 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿರಲಿದೆ. ಸದ್ಯ, ಚೇತಕ್ ಪ್ರೀಮಿಯಂ 2.88 kWh ಬ್ಯಾಟರಿ ಪ್ಯಾಕ್ ಹೊಂದಿದೆ. ರೇಂಜ್ ವಿಚಾರಕ್ಕೆ ಬರುವುದಾದರೆ, ನೂತನ ಅರ್ಬೇನ್ ರೂಪಾಂತರ ಸಂಪೂರ್ಣ ಚಾರ್ಜ್ ನಲ್ಲಿ 113 km ಕ್ರಮಿಸಬಹುದು.
ಹೊಸ ಚೇತಕ್ ಅರ್ಬೇನ್ ರೂಪಾಂತರ ಹಾಗೂ ಪ್ರೀಮಿಯಂ ವೇರಿಯೆಂಟ್, ಒಂದೇ ರೀತಿಯ ಸುತ್ತಳತೆಯನ್ನು ಹೊಂದಿರಲಿವೆ. ಅರ್ಬೇನ್, ರಸ್ತೆಗೆ ಬಂದಾಗ ವಿನ್ಯಾಸವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಇವೆರಡರ ನಡುವಿನ ವ್ಯತ್ಯಾಸ ಗೊತ್ತಾಗುತ್ತದೆ. ಚೇತಕ್ ಪ್ರೀಮಿಯಂ ಮಾದರಿಗೆ ಹೋಲಿಸಿದರೆ, ಅರ್ಬೇನ್ 3 ಕೆಜಿ ಹಗುರವಾಗಿರಲಿದೆ. ವೈಶಿಷ್ಟ್ಯ ಸೇರಿದಂತೆ ಬೇರೆ ಯಾವುದೇ ವಿವರಗಳು ಲಭ್ಯವಿಲ್ಲ.

ಇತ್ತೀಚೆಗೆ ಹಬ್ - ಮೌಂಟೆಡ್ ಮೋಟಾರ್ ಹೊಂದಿರುವ ಚೇತಕ್ ಇವಿ ಪ್ರಾಯೋಗಿಕ ಸಂಚಾರ ನಡೆಸುವಾಗ ಕಂಡುಬಂದಿದ್ದು, ಇದೇ ಚೇತಕ್ ಹೊಸ ರೂಪಾಂತರ 'ಅರ್ಬೇನ್' ಆಗಿರಲಿದೆ ಎನ್ನಲಾಗಿದೆ. ಹಬ್ಬದ ಋತುವಿನಲ್ಲಿ ಬಜಾಜ್ ಕಂಪನಿಯು ಚೇತಕ್ ಇವಿ ಬೆಲೆಯನ್ನು ಭಾರೀ ಪ್ರಯಾಣದಲ್ಲಿ ಇಳಿಕೆ ಮಾಡಿತ್ತು. ಪ್ರಸ್ತುತ, ಚೇತಕ್ ರೂ.1.30 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ.
ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ (Bajaj Chetak Electric Scooter) ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಇಕೋ ಮೋಡ್ ನಲ್ಲಿ 90 km ಮತ್ತು ಸ್ಪೋರ್ಟ್ ಮೋಡ್ ನಲ್ಲಿ 80 km ರೇಂಜ್ ನೀಡುತ್ತದೆ. ಇದರಲ್ಲಿ 3 - ಫೇಸ್ ಪರ್ಮನೇಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟಾರ್ ಬಳಕೆ ಮಾಡಲಾಗಿದ್ದು, 20 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಈ ಸ್ಕೂಟರ್, ಬಾಡಿಯನ್ನು ಸಂಪೂರ್ಣವಾಗಿ ಉಕ್ಕಿನಿಂದ (steel) ಮಾಡಲಾಗಿದೆ. ಇದರ ಬ್ಯಾಟರಿ ಪ್ಯಾಕ್, ಕೇವಲ 5 ಗಂಟೆಯಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಇದು LCD ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬಾಡಿ -ಕಲರ್ಡ್ ರೇರ್ ವ್ಯೂ ಮಿರರ್ಸ್, ಡ್ಯುಯಲ್ -ಟೋನ್ ಸೀಟ್, ವೀಲ್ ರಿಮ್‌ಗಳಲ್ಲಿ ಡೆಕಾಲ್ ಬ್ರ್ಯಾಂಡಿಂಗ್, ಪಿಲಿಯನ್ ಫುಟ್‌ರೆಸ್ಟ್, USB ಚಾರ್ಜರ್, 4G ಕನೆಕ್ಟಿವಿಟಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








