ಅಗ್ಗದ ಬೆಲೆ, ಯುವಕರ ನಿದ್ದೆಗೆಡಿಸುವ ಆಕರ್ಷಕ ವಿನ್ಯಾಸದ ಬಜಾಜ್ ಪಲ್ಸರ್ N150 ವಿಶೇಷತೆಗಳು

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬಜಾಜ್ ಆಟೋ ತನ್ನ ಹೊಸ ಬಜಾಜ್ ಪಲ್ಸರ್ N150 (Bajaj Pulsar N150) ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಬಜಾಜ್ ಪಲ್ಸರ್ N150 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.18 ಲಕ್ಷವಾಗಿದೆ.

ಈ ಹೊಸ ಬೈಕ್ ಅನ್ನು ಸ್ಪೋರ್ಟಿಯರ್ ಪಲ್ಸರ್ N160 ಮತ್ತು ಪಲ್ಸರ್ P150 ಬೈಕ್ ಗಳ ನಡುವಿನ ಸ್ಥಾನದಲ್ಲಿ ಇರಿಸಲಾಗಿದೆ. ಭಾರತದಲ್ಲಿ ಬಜಾಜ್ ಪಲ್ಸರ್ N150 ಬೈಕ್ ಬಿಡುಗಡೆಯೊಂದಿಗೆ, ಬಜಾಜ್ ಆಟೋ ಪ್ರಸ್ತುತ ಭಾರತದಲ್ಲಿ 150cc ಮೋಟಾರ್‌ಸೈಕಲ್‌ಗಳ ವ್ಯಾಪಕ ಸರಣಿಯನ್ನು ಹೊಂದಿದೆ. 150cc ಮೋಟಾರ್‌ಸೈಕಲ್ ವಿಭಾಗದಲ್ಲಿ ಇಂತಹ ವ್ಯಾಪಕ ಉತ್ಪನ್ನ ಪೋರ್ಟ್‌ಫೋಲಿಯೊದೊಂದಿಗೆ, ಬಜಾಜ್ ಆಟೋ ವಿಭಾಗದಲ್ಲಿ ಎಲ್ಲಾ ಸಂಭಾವ್ಯ ಗ್ರಾಹಕರನ್ನು ಆಕರ್ಷಿಸಲು ಎದುರು ನೋಡುತ್ತಿದೆ.

Bajaj Pulsar N150

ವಿನ್ಯಾಸ: ಹೊಸ ಬಜಾಜ್ ಪಲ್ಸರ್ ಎನ್150 ಬೈಕ್ ಮತ್ತು ಇದರ ಹಿರಿಯ ಸಹೋದರ ಬೈಕ್ ಎನ್160 ಮಾದರಿಗೆ ಹೋಲಿಸಿದರೆ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತದೆ. ಎರಡೂ ಬೈಕ್‌ಗಳು ಒಂದೇ ಸರಣಿಯ ಅಡಿಯಲ್ಲಿ ಬರುವುದರಿಂದ ಇದು ಸಾಕಷ್ಟು ಸಾಮ್ಯವಿದೆ. ವಿನ್ಯಾಸದ ಅಂಶಗಳಲ್ಲಿ ಕೆಲವು ಸೂಕ್ಷ್ಮ ವ್ಯತ್ಯಾಸಗಳನ್ನು ನೀವು ನೋಡಬಹುದು.

ಹೊಸದಾಗಿ ಬಿಡುಗಡೆಯಾದ ಪಲ್ಸರ್ N150 ಬೈಕಿನಲ್ಲಿ ಹೊಸ ಸಿಂಗಲ್-ಪೀಸ್ ಸೀಟ್, ವಿಭಿನ್ನ ಅಲಾಯ್ ವ್ಹೀಲ್ ಗಳು (ಪಲ್ಸರ್ P150 ಮೋಟಾರ್‌ಸೈಕಲ್‌ನಲ್ಲಿರುವಂತೆಯೇ) ಮತ್ತು ಹೊಸ ಗ್ರಾಬ್ ರೈಲ್ ಮತ್ತು ಇನ್ನೂ ಕೆಲವು ಅಂಶಗಳು ಸೇರಿವೆ. ಹೊಸ ಬಜಾಜ್ ಪಲ್ಸರ್ ಎನ್150 ಬೈಕ್ ಅನ್ನು ಹೆಚ್ಚು ದುಬಾರಿ ಪಲ್ಸರ್ N160 ಬೈಕಿನಿಂದ ಮತ್ತಷ್ಟು ಪ್ರತ್ಯೇಕಿಸಲು, ಹೊಸ ಮಾದರಿಯು ವಿಭಿನ್ನ ಗ್ರಾಫಿಕ್ಸ್‌ಗಳನ್ನು ಸಹ ಪಡೆಯುತ್ತದೆ.

ಬಣ್ಣಗಳ ಆಯ್ಕೆ: ಹೊಸ ಬಜಾಜ್ ಪಲ್ಸರ್ N150 ಬೈಕ್ ರೇಸಿಂಗ್ ರೆಡ್, ಎಬೊನಿ ಬ್ಲಾಕ್ ಮತ್ತು ಮೆಟಾಲಿಕ್ ಪರ್ಲ್ ವೈಟ್ ಎಂಬ ಮೂರು ವಿಭಿನ್ನ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ನೀವು ಇದರಲ್ಲಿ ಮೆಚ್ಚಿನ ಬಣ್ಣಗಳ ಆಯ್ಕೆಯ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಮೂರು ಬಣ್ಣಗಳ ಮಾದರಿಗಳು ಒಂದಕ್ಕೊಂದು ಒಂದು ಆಕರ್ಷಕವಾಗಿದೆ.

ಎಂಜಿನ್: ಬಜಾಜ್ ಪಲ್ಸರ್ P150 ಮೋಟಾರ್‌ಸೈಕಲ್‌ನಂತೆಯೇ ಹೊಸ ಬಜಾಜ್ ಪಲ್ಸರ್ N150 ಬೈಕಿನಲ್ಲಿ 149.68cc, ಸಿಂಗಲ್-ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿದೆ. ಈ ಎಂಜಿನ್ ಅನ್ನು 8,500rpm ನಲ್ಲಿ 14.3bhp ಮತ್ತು 6,000rpm ನಲ್ಲಿ 13.5Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಒಳಗೊಂಡಿದೆ.

ಇನ್ನು ಬಜಾಜ್ ಪಲ್ಸರ್ N160 ಬೈಕ್ ದೊಡ್ಡ 164.82cc, ಸಿಂಗಲ್-ಸಿಲಿಂಡರ್, ಆಯಿಲ್-ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 8,750rpm ನಲ್ಲಿ 15.7bhp ಮತ್ತು 6,750rpm ನಲ್ಲಿ 14.65Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಒಳಗೊಂಡಿರುತ್ತದೆ.

ಫೀಚರ್ಸ್: ಹೊಸದಾಗಿ ಬಿಡುಗಡೆಯಾದ ಬಜಾಜ್ ಪಲ್ಸರ್ N150 ಬೈಕ್ ಅದೇ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದಲ್ಲದೆ, ಹೊಸ ಪಲ್ಸರ್ N150 ಬೈಕ್ ಫ್ಯೂಯಲ್ ಟ್ಯಾಂಕ್‌ನಲ್ಲಿ ಪಲ್ಸರ್ N160 ನಂತೆ ಅತ್ಯಂತ ಅನುಕೂಲಕರ USB ಚಾರ್ಜಿಂಗ್ ಪೋರ್ಟ್ ಅನ್ನು ಸಹ ಹೊಂದಿದೆ. ಈ ರೀತಿಯ ಅತ್ಯಂತ ಅವಶ್ಯಕವಾಗಿರುವ ಫೀಚರ್ಸ್ ಗಳನ್ನು ಹೊಂದಿವೆ.

ಹೊಸ ಬಜಾಜ್ ಪಲ್ಸರ್ N150 ಬೈಕ್ ಬಿಡುಗಡೆಯೊಂದಿಗೆ, ಬಜಾಜ್ ಆಟೋ ಭಾರತದಲ್ಲಿ 150cc ಮೋಟಾರ್‌ಸೈಕಲ್‌ಗಳ ವ್ಯಾಪಕ ಸರಣಿಯನ್ನು ಹೊಂದಿದೆ. ಅಂತಹ ವಿಶಾಲವಾದ 150cc ಉತ್ಪನ್ನ ಪೋರ್ಟ್ಫೋಲಿಯೊದೊಂದಿಗೆ, ಬಜಾಜ್ ಬಜಾಜ್ ಪಲ್ಸರ್ ಕುಟುಂಬದೊಳಗೆ ಸಂಭಾವ್ಯ ಗ್ರಾಹಕರನ್ನು ಇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಹೊಸ ಪಲ್ಸರ್ N150 ಬೈಕ್ ತನ್ನ ಗ್ರಾಹಕರಿಗೆ ಯೋಗ್ಯವಾದ ಪ್ರಾಯೋಗಿಕತೆ ಮತ್ತು ಸ್ಪೋರ್ಟಿ ನೋಟವನ್ನು ನೀಡುತ್ತದೆ. ಭಾರತದಲ್ಲಿ ಹೊಸ ಪಲ್ಸರ್ ಎನ್150 ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

More from DriveSpark

Article Published On: Thursday, September 28, 2023, 11:28 [IST]
English summary
New bajaj pulsar n150 top things
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+