Hero Glamour: ಅತಿ ಕಡಿಮೆ ಬೆಲೆಯ ಹೊಸ ಹೀರೋ ಗ್ಲಾಮರ್ ಬೈಕ್‌ನ ವಿಶೇಷತೆಗಳು
ಹೀರೋ ಮೋಟೋಕಾರ್ಪ್ (Hero Motocorp), ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ಜನಪ್ರಿಯತೆ ಗಳಿಸಿದೆ. ಇತ್ತೀಚೆಗೆ, ಕಂಪನಿಯು ಕಡಿಮೆ ಬೆಲೆಯಲ್ಲಿ ನವೀಕರಿಸಿದ ಹೊಚ್ಚ ಹೂಸ ಗ್ಲಾಮರ್ (2023) ಮೋಟಾರ್‌ಸೈಕಲ್ ಅನ್ನು ಬಿಡುಗಡೆಗೊಳಿಸಿತ್ತು. ಹಬ್ಬದ ಋತುವಿನಲ್ಲಿ ಈ ಬೈಕ್, ಇನ್ನಷ್ಟು ಗ್ರಾಹಕರನ್ನು ಸೆಳೆಯಬಹುದು ಎಂದು ಅಂದಾಜಿಸಲಾಗಿದೆ.
ನೂತನ ಹೀರೋ ಗ್ಲಾಮರ್ ಮೋಟಾರ್‌ಸೈಕಲ್, ಹಿಂದಿನ ಮಾದರಿಗೆ ಹೋಲಿಸಿದರೆ ಹಲವು ಬದಲಾವಣೆಗಳನ್ನು ಪಡೆದಿದೆ. ಈ ಮೂಲಕ ಹೆಚ್ಚು ಆಕರ್ಷಕವಾಗಿದ್ದು, ಇದರಿಂದಲೇ ಮಾರಾಟ ಪ್ರಮಾಣ ಮತ್ತಷ್ಟು ಹೆಚ್ಚಾಗಬಹುದು ಎಂದು ಕಂಪನಿ ನಂಬಿದೆ. ಅಂದಹಾಗೆ, ಹೊಸ ಹೀರೋ ಗ್ಲಾಮರ್ ಬೈಕ್ ಕುರಿತು ನೀವು ತಿಳಿದುಕೊಳ್ಳಬೇಕಾದ ಟಾಪ್ 5 (ಬೆಲೆ, ವೈಶಿಷ್ಟ್ಯ ಹಾಗೂ ಕಾರ್ಯಕ್ಷಮತೆ) ವಿಷಯಗಳು ಇಲ್ಲಿವೆ.

ವಿನ್ಯಾಸ: ಹೊಸ ಹೀರೋ ಗ್ಲಾಮರ್ ಮೋಟಾರ್‌ಸೈಕಲ್ ಯುವ ಗ್ರಾಹಕರನ್ನು ತನ್ನತ್ತ ಆಕರ್ಷಿಸುವ ವಿನ್ಯಾಸವನ್ನು ಹೊಂದಿದೆ. ಇದರಿಂದ ಪ್ರಯಾಣಿಕ ಮೋಟಾರ್‌ಸೈಕಲ್ ವಿಭಾಗದಲ್ಲಿ ಕಂಪನಿಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಸಾಧ್ಯವಾಗುತ್ತದೆ. ಜೊತೆಗೆ ಈ ಬೈಕ್, ಕ್ಯಾಂಡಿ ಬ್ಲೇಜಿಂಗ್ ರೆಡ್, ಟೆಕ್ನೋ ಬ್ಲೂ-ಬ್ಲಾಕ್ ಹಾಗೂ ಸ್ಪೋರ್ಟ್ಸ್ ರೆಡ್ ಬ್ಲಾಕ್ ಎಂಬ 3 ಬಣ್ಣಗಳ ಆಯ್ಕೆಯೊಂದಿಗೆ ಖರೀದಿಗೆ ದೊರೆಯುತ್ತದೆ.
ಬೆಲೆ ಹಾಗೂ ರೂಪಾಂತರ: ಭಾರತದ ಮಾರುಕಟ್ಟೆಯಲ್ಲಿ ನವೀಕರಿಸಿದ ಹೀರೋ ಗ್ಲಾಮರ್ ಬೈಕ್, ಎರಡು ರೂಪಾಂತರದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಡ್ರಮ್ (Drum) ಹಾಗೂ ಡಿಸ್ಕ್ (Disc). ಇವುಗಳ ಅನ್ವಯ, ಕ್ರಮವಾಗಿ ರೂ.82,348 ಹಾಗೂ ರೂ.86,348 ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗಲಿದೆ. ಆದರೆ, ರಾಜ್ಯದಿಂದ ರಾಜ್ಯಕ್ಕೆ ರಸ್ತೆ ತೆರಿಗೆ ಅನುಗುಣವಾಗಿ ಆನ್-ರೋಡ್ ಬೆಲೆಗಳು ಬೇರೆಯಾಗುತ್ತವೆ.

ಪವರ್‌ಟ್ರೇನ್: ಹೊಸ ಹೀರೋ ಗ್ಲಾಮರ್ ಮೋಟಾರ್‌ಸೈಕಲ್ 125 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 7,500 rpmನಲ್ಲಿ 10.68 bhp ಗರಿಷ್ಠ ಪವರ್ ಹಾಗೂ 6,000 rpmನಲ್ಲಿ 10.6 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಜೊತೆಗೆ ಸರಿ ಸುಮಾರು 63 kmpl ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಹೀರೋ ಗ್ಲಾಮರ್ ಬೈಕ್ ನಲ್ಲಿ ಬಳಕೆ ಮಾಡಿರುವ ಎಂಜಿನ್ ಅನ್ನು ದೇಶಾದ್ಯಂತ ಏಪ್ರಿಲ್ 1 ರಿಂದ ಜಾರಿಯಾಗಿರುವ BS6 ಹಂತ 2 ಮಾನದಂಡಗಳ ಅನ್ವಯ ಮೇಲ್ದರ್ಜೆರಿಸಲಾಗಿದೆ. ಜೊತೆಗೆ E20 ಫ್ಯುಯೆಲ್ (ಶೇಕಡ 80% ಪೆಟ್ರೋಲ್ ಹಾಗೂ 20% ಎಥೆನಾಲ್)ಗೂ ಬೆಂಬಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇಂಧನ ದಕ್ಷತೆಯನ್ನು ಹೆಚ್ಚಿಸಲು ಈ ಮೋಟಾರ್‌ಸೈಕಲ್, i3S ಐಡಲ್ ಸ್ಟಾರ್ಟ್ - ಸ್ಟಾಪ್ ಸಿಸ್ಟಮ್ ಹೊಂದಿದೆ.
ವೈಶಿಷ್ಟ್ಯಗಳು: ನವೀಕರಿಸಿದ ಹೊಚ್ಚ ಹೂಸ ಹೀರೋ ಗ್ಲಾಮರ್ ಮೋಟಾರ್‌ಸೈಕಲ್, ಸಾಮಾನ್ಯವಾಗಿ ಯುವ ಗ್ರಾಹಕರನ್ನು ಆಕರ್ಷಿಸವ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಮುಖವಾಗಿ, ಎಲೆಕ್ಟ್ರಿಕ್ ಸ್ಟಾರ್ಟರ್, ಅಲಾಯ್ ವೀಲ್ಸ್, USB ಚಾರ್ಜಿಂಗ್ ಪೋರ್ಟ್, ಹೊಸದಾದ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ. ಇದು, ರಿಯಲ್ ಟೈಮ್ ಮೈಲೇಜ್ ಇಂಡಿಕೇಟರ್, ಲೊ ಫ್ಯುಯೆಲ್ ಇಂಡಿಕೇಟರ್ ಮಾಹಿತಿಯನ್ನು ತೋರಿಸುತ್ತದೆ.
ಇನ್ನೇನು ಬದಲಾವಣೆ: ಹೀರೋ ಕಂಪನಿಯು ಗ್ಲಾಮರ್‌ನ ರೈಡರ್ ಹಾಗೂ ಪಿಲಿಯನ್ ಸೀಟ್ ಎತ್ತರವನ್ನು ಕ್ರಮವಾಗಿ 8 ಎಂಎಂ & 17 ಎಂಎಂ ಕಡಿಮೆ ಮಾಡಿದೆ. ಇದು, ಬೈಕಿನ ಸೀಟ್ ಸ್ವಲ್ಪ ಉದ್ದವಾಗಿ ಕಾಣುವಂತೆ ಮಾಡುತ್ತದೆ. ಒಟ್ಟಾರೆ, ಈ ಅಂಶಗಳನ್ನು ಗಮನಿಸಿದಾಗ ಈ ಹೀರೋ ಗ್ಲಾಮರ್ ಮೋಟಾರ್‌ಸೈಕಲ್ ಅತ್ಯುತ್ತಮವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಮುಂಬರುವ ದಿನಗಳಲ್ಲಿ ಗ್ಲಾಮರ್ ಕಂಪನಿಗೆ ಕಾಮಧೇನುವಾದರೂ ಅಚ್ಚರಿ ಇಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








