ಕಡಿಮೆ ಬೆಲೆಯ ಹೊಸ ಹೀರೋ ಎಕ್ಸ್‌ಟ್ರಿಮ್ 160R 4V ಬೈಕಿನ ಭರ್ಜರಿ ವಿಶೇಷತೆಗಳು

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಾದ ಹೀರೋ ಮೋಟೋಕಾರ್ಪ್ ತನ್ನ ಜನಪ್ರಿಯ ಎಕ್ಸ್‌ಟ್ರಿಮ್ 160R 4V (Hero Xtreme 160R 4V) ಬೈಕ್ ಅನ್ನು ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಹೀರೋ ಎಕ್ಸ್‌ಟ್ರಿಮ್ 160R 4V ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 1.27 ಲಕ್ಷವಾಗಿದೆ.

ಹೊಸ ಹೀರೋ ಎಕ್ಸ್‌ಟ್ರಿಮ್ 160R 4V ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ N160, TVS ಅಪಾಚೆ RTR 160 4V ಮತ್ತು ಬಜಾಜ್ ಪಲ್ಸರ್ NS160 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ. ಈ ಹೊಸ ಹೀರೋ ಎಕ್ಸ್‌ಟ್ರಿಮ್ 160R 4V ಬೈಕಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಜೂನ್ 15 ರಂದು ಪ್ರಾರಂಭಿಸಲಿದೆ. ಈ ಬೈಕಿನ ಬೆಲೆ ಮತ್ತು ವಿಶೇಷತೆಗಳ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Hero Xtreme 160R 4V

ಬೆಲೆಗಳು: ಹೊಸ ಹೀರೋ ಎಕ್ಸ್‌ಟ್ರಿಮ್ 160R 4V ಬೈಕ್ ಸ್ಟ್ಯಾಂಡರ್ಡ್, ಕನೆಕ್ಟೆಡ್ ಮತ್ತು ಪ್ರೊ ಎಂಬ ಮೂರೂ ರೂಪಾಂತರಗಳಲ್ಲಿ ಲಭ್ಯವಿದೆ. ಇನ್ನು ಈ ಬೈಕಿನ ರೂಪಾಂತರಗಳಿಗೆ ಅನುಗುಣವಾಗಿ ಸ್ಟ್ಯಾಂಡರ್ಡ್ ಬೈಕಿನ ಬೆಲೆಯು ರೂ.127,300 ಆದರೆ ಕನೆಕ್ಟೆಡ್ ಮಿಡ್ ರೂಪಾಂತರಕ್ಕೆ ರೂ.132,80 ಆಗಿದೆ. ಇನ್ನೂ ಈ ಹೊಸ ಹೀರೋ ಬೈಕಿನ ಟಾಪ್-ಸ್ಪೆಪ್ ಆದ ಪ್ರೊ ರೂಪಾಂತರಕ್ಕೆ ರೂ.136,500 ಆಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಎಂಜಿನ್: ಹೀರೋ ಎಕ್ಸ್‌ಟ್ರಿಮ್ 160R 4V ಬೈಕ್ ಎರಡು-ವಾಲ್ವ್ ಎಂಜಿನ್ ಅನ್ನು ನಾಲ್ಕು-ವಾಲ್ವ್ ಆಗಿ ಅಪ್‌ಗ್ರೇಡ್ ಮಾಡಿದೆ. ಮತ್ತೊಂದು ಪ್ರಮುಖ ನವೀಕರಣವು ಅಪ್ ಸೈಡ್ ಫೋರ್ಕ್‌ಗಳ ರೂಪದಲ್ಲಿ ಬರುತ್ತದೆ. 2023ರ ಎಕ್ಸ್‌ಟ್ರಿಮ್ 160R 4V ಬೈಕಿನಲ್ಲಿ ಪರಿಷ್ಕೃತ ಎಂಜಿನ್ ರೂಪದಲ್ಲಿ ದೊಡ್ಡ ನವೀಕರಣವು ಬರುತ್ತದೆ. ಇದು ಈಗ ನಾಲ್ಕು-ವಾಲ್ವ್ ಹೆಡ್ ಅನ್ನು ಹೊಂದಿದೆ. ಇದರಿಂದ ಈ ಬೈಕ್ ಹೆಸರಿನಲ್ಲಿ 4V ಸೇರ್ಪಡೆಗೆ ಕಾರಣವಾಗಿದೆ.

Hero Xtreme 160R 4V

ಆದು ಆಯಿಲ್-ಕೂಲ್ಡ್ ಎಂಜಿನ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ಟಾಪ್-ಎಂಡ್ ಅನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಹೊಸ ಬೈಕಿನಲ್ಲಿ 163 cc ಎಂಜಿನ್ ಅನ್ನು ನೀಡಲಾಗಿದೆ. ಈ ಎಂಜಿನ್ 16.6 bhp ಪವರ್ ಮತ್ತು 14.6 NM ಟಾರ್ಜ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಹೊಸ ಬದಾಲಾವಣೆ: ಈ ಬೈಕ್ ತಯಾರಕರು ತನ್ನ ವಿಭಾಗದಲ್ಲಿ ಹಗುರವಾದ ಆಯಿಲ್-ಕೂಲ್ಡ್ ಮಾದರಿ ಎಂದು ಹೇಳಿಕೊಳ್ಳುತ್ತಾರೆ. ಇದು ಭಾರತದಲ್ಲಿ ಅತಿ ವೇಗದ 160cc ಮೋಟಾರ್‌ಸೈಕಲ್ ಎಂದು ಕೂಡ ಹೇಳಿಕೊಂಡಿದೆ. ಇನ್ನೊಂದು ಪ್ರಮುಖ ಬದಲಾವಣೆಯೆಂದರೆ ಮುಂಭಾಗದಲ್ಲಿ ಅಪ್ ಸೈಡ್ ಫೋರ್ಕ್‌ಗಳನ್ನು ಸೇರಿಸುವುದು. ಇಲ್ಲಿಯವರೆಗೆ, ಸಾಂಪ್ರದಾಯಿಕ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಹೊಂದಿರುವ ಬೈಕ್ ಆಗಿತ್ತು. ಈ ಬೈಕ್ USD ಫೋರ್ಕ್‌ಗಳು ಹೆಚ್ಚಿನ ಪ್ರತಿಕ್ರಿಯೆಯನ್ನು ಒದಗಿಸಲು ಸಹಾಯ ಮಾಡುತ್ತದೆ.

ಬ್ರೇಕಿಂಗ್ ಮತ್ತು ವಿನ್ಯಾಸ: ಹೊಸ ಹೀರೋ ಎಕ್ಸ್‌ಟ್ರಿಮ್ 160R 4V ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 276 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗವು 220 ಎಂಎಂ ಪೆಟಲ್ ಡಿಸ್ಕ್ ಅಥವಾ 130 ಎಂಎಂ ಡ್ರಮ್ ಬ್ರೇಕ್‌ನ ಆಯ್ಕೆಯನ್ನು ನೀಡಿದೆ. ಈ ಹೊಸ ಹೀರೋ ಎಕ್ಸ್‌ಟ್ರಿಮ್ 160R 4V ಬೈಕ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಪರಿಷ್ಕೃತ, ತೀಕ್ಷ್ಣವಾದ LED ಹೆಡ್‌ಲ್ಯಾಂಪ್ ಜೊತೆಗೆ LED ಡೇಟೈಮ್ ರನ್ನಿಂಗ್ ಲೈಟ್ ಸಂಯೋಜಿಸಲಾಗಿದೆ.

ಬಣ್ಣಗಳು ಮತ್ತು ಫೀಚರ್ಸ್: ಇನ್ನು ಈ ಹೊಸ ಬೈಕ್ ಮ್ಯಾಟ್ ಸ್ಲೇಟ್ ಬ್ಲಾಕ್, ನಿಯಾನ್ ನೈಟ್ ಸ್ಟಾರ್ ಮತ್ತು ಬ್ಲೇಜಿಂಗ್ ಸ್ಪೋರ್ಟ್ಸ್ ರೆಡ್ ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಇನ್ನು ಈ ಬೈಕಿನಲ್ಲಿ ಪರಿಷ್ಕೃತ ಡಿಜಿಟಲ್ ಕ್ಲಸ್ಟರ್ ಅದರ ಪ್ರೀಮಿಯಂ ಅನ್ನು ಹೆಚ್ಚಿಸುತ್ತದೆ. ಕ್ಲಾಸ್-ಲೀಡಿಂಗ್ ವೈಶಿಷ್ಟ್ಯಗಳೊಂದಿಗೆ ಬೈಕ್ ಹೀರೋ ಕನೆಕ್ಟ್ 2.0 ಅನ್ನು ಪಡೆಯುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Article Published On: Saturday, June 17, 2023, 11:22 [IST]
English summary
New hero xtreme 160r 4v bike top things to know
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+