60 ಕಿ.ಮೀ ಮೈಲೇಜ್, ಕಡಿಮೆ ಬೆಲೆಯಲ್ಲಿ ಹೊಸ ಹೋಂಡಾ ಲಿವೋ ಬೈಕ್ ಬಿಡುಗಡೆ
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಹೋಂಡಾ ಲಿವೋ (Honda Livo) ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಹೋಂಡಾ ಲಿವೋ ಬೈಕ್ OBD2-ಕಾಂಪ್ಲೈಂಟ್ ಆವೃತ್ತಿಯಾಗಿದ್ದ್ದು, ಈ ಬೈಕ್ ಡ್ರಮ್ ಮತ್ತು ಡಿಸ್ಕ್ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿದೆ.
ಹೊಸ ಹೋಂಡಾ ಲಿವೋ ಬೈಕ್ ಬೆಲೆಗೆ ಸಂಬಂದಿಸಿದಂತೆ, ಹೋಂಡಾ ಲಿವೋ ಬೈಕಿನ ಡ್ರಮ್ ರೂಪಾಂತರದ ಬೆಲೆಯು ರೂ.78,500 ಆದರೆ, ಡಿಸ್ಕ್ ರೂಪಾಂತರದ ಬೆಲೆಯು ರೂ.82,500 ಆಗಿದೆ. ಈ ಎರಡೂ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಹೊಸ ಬೈಕ್ OBD2 ಕಂಪ್ಲೈಂಟ್ ಆಗಿರುವುದರಿಂದ, ಹೊಸ ಗ್ರಾಫಿಕ್ಸ್ ಅನ್ನು ಸಹ ಪಡೆದುಕೊಂಡಿದೆ. ಇದರಿಂದ ಈ ಬೈಕಿನ ವಿನ್ಯಾಸವು ಮತ್ತಷ್ಟು ಆಕರ್ಷಕವಾಗಿದೆ.

ಹೊಸ ಹೋಂಡಾ ಲಿವೋ ಬೈಕಿನಲ್ಲಿ ಅದೇ 110 cc, ಏರ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,500 rpm ನಲ್ಲಿ 8.67 bhp ಪವರ್ ಮತ್ತು 5,500 rpm ನಲ್ಲಿ 9.30 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ಈ ಹೊಸ ಹೋಂಡಾ ಲಿವೋ ಬೈಕಿನ ಎಂಜಿನ್ ಒಂದು ನಿಶ್ಯಬ್ದ ಸ್ಟಾರ್ಟರ್‌ನೊಂದಿಗೆ ಸ್ಟಾರ್ಟರ್ ಮೋಟಾರ್‌ನೊಂದಿಗೆ ಬರುತ್ತದೆ. ಇದು ಜೋಲ್ಟ್-ಫ್ರೀ ಆಟೋ-ಸ್ಟ್ರಾಟ್ ಅನ್ನು ಮಾಡುತ್ತದೆ. ಈ ಬೈಕ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ. ಇದರ ಹೊರತಾಗಿ, ಈ ಹೊಸ ಹೋಂಡಾ ಲಿವೋ ಬೈಕ್ ಆಟೋ-ಚೋಕ್ ಫೀಚರ್ ಮತ್ತು ಬಾಹ್ಯವಾಗಿ ಇರಿಸಲಾದ ಫ್ಯೂಯಲ್ ಪಂಪ್ ಅನ್ನು ಸಹ ಹೊಂದಿದೆ.

ಈ ಹೊಸ ಬೈಕಿನ ಫೀಚರ್ಸ್ ಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ ಸಾಕಷ್ಟು ಉದ್ದವಾದ ಸಿಂಗಲ್-ಪೀಸ್ ಸೀಟ್ ಇದೆ. ಇನ್ನು ಈ ಬೈಕಿನಲ್ಲಿ ಹೆಡ್‌ಲ್ಯಾಂಪ್ ಹ್ಯಾಲೊಜೆನ್ ಬಲ್ಬ್ ಹೊಂದಿದೆ. ಈ ಬೈಕಿನಲ್ಲಿ ಇಂಟಿಗ್ರೇಟೆಡ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್ ಆಫರ್‌ನಲ್ಲಿದೆ.ಹೋಂಡಾ ಕಾಂಬಿ-ಬ್ರೇಕಿಂಗ್ ಸಿಸ್ಟಮ್, ಸೀಲ್ ಚೈನ್ ಮತ್ತು ಸರ್ವಿಸ್ ಡ್ಯೂ ಇಂಡಿಕೇಟರ್ ನಂತರ ಫೀಚರ್ಸ್ ಗಳನ್ನು ಕೂಡ ಒಳಗೊಂಡಿದೆ.
ಹೊಸ ಹೋಂಡಾ ಲಿವೋ ಬೈಕಿನಲ್ಲಿ 3 ವರ್ಷಗಳ ವಾರಂಟಿಯನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತದೆ. ಮಾಲೀಕರು ಬಯಸಿದರೆ ಆಯ್ಕೆಯ 7 ವರ್ಷಗಳ ವಿಸ್ತೃತ ವಾರಂಟಿಯನ್ನು ಪಡೆಯುವ ಮೂಲಕ ಅದನ್ನು 10 ವರ್ಷಗಳವರೆಗೆ ವಿಸ್ತರಿಸಬಹುದು. ಈ ಹೊಸ ಹೋಂಡಾ ಲಿವೋ ಬೈಕ್ ಅಥ್ಲೆಟಿಕ್ ಬ್ಲೂ ಮೆಟಾಲಿಕ್, ಮ್ಯಾಟ್ ಕ್ರಸ್ಟ್ ಮೆಟಾಲಿಕ್ ಮತ್ತು ಬ್ಲಾಕ್ ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

ಹೊಸ ಹೋಂಡಾ ಲಿವೋ ಬೈಕಿನಲ್ಲಿ 18-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಈ ಹೊಸ ಹೋಂಡಾ ಲಿವೋ ಬೈಕಿನ ಸಸ್ಪೆಕ್ಷನ್ ಬಗ್ಗೆ ಹೇಳುವುದಾದರೆ, ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಡ್ಯುಯಲ್ ಸ್ಪ್ರಿಂಗ್‌ಗಳನ್ನು ಹೊಂದಿವೆ. ಇನ್ನು ಪ್ರಮುಖವಾಗಿ ಸುರಕ್ಷತಾ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಗಳನ್ನು ಹೊಂದಿವೆ. ಇದರ ಟಾಪ್ ಸ್ಪೆಕ್ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಸೇಲ್ಸ್ ಮತ್ತು ಮಾರ್ಕೆಟಿಂಗ್ ನಿರ್ದೇಶಕರಾದ ಯೋಗೇಶ್ ಮಾಥುರ್ ಅವರು ಮಾತನಾಡಿ, 2015 ರಲ್ಲಿ ಪ್ರಾರಂಭವಾದಾಗಿನಿಂದ, ಲಿವೋ ತನ್ನ ವಿಭಾಗದಲ್ಲಿ ಮಹತ್ವಾಕಾಂಕ್ಷೆಯ ಖರೀದಿದಾರರಲ್ಲಿ ನೆಚ್ಚಿನದಾಗಿದೆ ಮತ್ತು OBD2 ಮಾನದಂಡಗಳ ಪರಿಚಯದೊಂದಿಗೆ, ನಾವು ಅದರ ಆಕರ್ಷಣೆಯನ್ನು ಹೆಚ್ಚಿಸುತ್ತಿದ್ದೇವೆ. ಈಗ ಸುಧಾರಿತ ತಂತ್ರಜ್ಞಾನದಿಂದ ತುಂಬಿರುವ 2023ರ ಹೋಂಡಾ ಲಿವೊ ಆಧುನಿಕ-ದಿನದ ಸವಾರರ ನಿರೀಕ್ಷೆಗಳನ್ನು ಪೂರೈಸುವ ಶೈಲಿ, ಸೌಕರ್ಯ ಮತ್ತು ಕಾರ್ಯಕ್ಷಮತೆಯ ಪರಿಪೂರ್ಣ ಮಿಶ್ರಣವಾಗಿದೆ ಎಂದು ಹೇಳಿದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications