ಸೂಟ್‌ಕೇಸ್ ರೀತಿಯ ಫೋಲ್ಡಬಲ್ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳು
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ (Honda) ವಾಹನ ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನು ಸೃಷ್ಟಿಸಿದೆ. ಹೋಂಡಾ ಕಾಂಪನಿಯು ಇತ್ತೀಚೆಗೆ ಮೊಟೊಕಾಂಪಾಕ್ಟೊ ಮಾದರಿಯನ್ನು ಅನಾವರಣಗೊಳಿಸಿತು, ಇದು ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. 1980ರ ದಶಕದ ಆರಂಭದ ಐಕಾನಿಕ್ ಮೋಟೋಕಾಂಪೊ ದ್ವಿಚಕ್ರ ವಾಹನದ ಹೆಸರಿನಲ್ಲಿ ಈ ಹೊಸ ಮಾದರಿಯನ್ನು ತರುತ್ತಿದೆ.
ಹೋಂಡಾ ಮೊಟೊಕಾಂಪಾಕ್ಟೊ (Honda Motocompacto) ಎಲೆಕ್ಟ್ರಿಕ್ ಸ್ಕೂಟರ್ ನಗರಗಳಲ್ಲಿ ಸಂಚರಿಸಲು ಸೂಕ್ತವಾಗಿದೆ. ಇದಲ್ಲದೆ, ಇದು ಮಡಚಬಲ್ಲದು ಮತ್ತು ಆಧುನಿಕ ನಗರ ಪ್ರಯಾಣಿಕರಿಗೆ ಮೋಜಿನ-ಸವಾರಿ ಅನುಭವವನ್ನು ನೀಡುತ್ತದೆ. ಇದರ ಕಾಂಪ್ಯಾಕ್ಟ್ ಗಾತ್ರದ ಹೊರತಾಗಿಯೂ, ಮೊಟೊಕಾಂಪಾಕ್ಟೊ ಶೈಲಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಇದು ಸಂಪೂರ್ಣ ಬಿಳಿ ಬಾಡಿಯೊಂದಿಗೆ ರೆಟ್ರೊ ಸೌಂದರ್ಯವನ್ನು ಉಳಿಸಿಕೊಂಡಿದೆ, ಅದು ಟೈಮ್‌ಲೆಸ್ ಚಾರ್ಮ್ ಅನ್ನು ಪ್ರದರ್ಶಿಸುತ್ತದೆ ಎಂದು ಹೇಳಬಹುದು.

ವಿನ್ಯಾಸ: ಈ ನವೀನ ಸ್ಕೂಟರ್ ಅನ್ನು ನುರಿತ ಓಹಿಯೋ ಮತ್ತು ಕ್ಯಾಲಿಫೋರ್ನಿಯಾದ ಹೋಂಡಾ ಎಂಜಿನಿಯರ್‌ಗಳು ನಿರ್ಮಿಸಿದ್ದಾರೆ. ಜನಪ್ರಿಯ ವಾಹನ ವಿನ್ಯಾಸಕಾರರು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಿನ್ಯಾಸ ಮಾಡಿದ್ದಾರೆ. ಈ ಹೊಸ ಹೋಂಡಾ ಮೊಟೊಕಾಂಪಾಕ್ಟೊ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗೆ 32 ಪೇಟೆಂಟ್‌ಗಳನ್ನು ಸಂಯೋಜಿಸಿದ್ದಾರೆ. ಈ ಸ್ಕೂಟರ್ ಹ್ಯಾಂಡಲ್ ಮತ್ತು ಸೀಟ್ ಕಂದು ಲೆದರ್ ಬಣ್ಣವನ್ನು ಹೊಂದಿದೆ.
ಫೀಚರ್ಸ್: ಹೋಂಡಾ ಮೊಟೊಕಾಂಪಾಕ್ಟೊ ಸ್ಕೂಟರ್ ನಲ್ಲಿ ಸಣ್ಣ ಎಲ್ಇಡಿ ಡಿಸ್ ಪ್ಲೇಯನ್ನು ನೀಡಲಾಗಿದೆ. ಹೋಂಡಾ ಮೊಟೊಕಾಂಪಾಕ್ಟೊ ವಿಶಿಷ್ಟತೆಯು ಅದರ ಕಾಂಪ್ಯಾಕ್ಟ್, ಹಗುರವಾದ ಮತ್ತು ಸಾಗಿಸುವ ರೀತಿಯ ಸೂಟ್ ಕೇಸ್ ಆಗಿ ರೂಪಾಂತರಗೊಳ್ಳುತ್ತದೆ. ಈ ವೈಶಿಷ್ಟ್ಯದಿಂದ ವಾಹನದಲ್ಲಿ ಸಾಗಿಸಲು, ಸಾರ್ವಜನಿಕ ಸಾರಿಗೆಯನ್ನು ತೆಗೆದುಕೊಳ್ಳಲು ಅಥವಾ ಬಿಗಿಯಾದ ಸ್ಥಳಗಳಲ್ಲಿ ಇಡಲು ಸುಲಭ.

ಮೋಟಾರ್: ಈ ಹೊಸ ಹೋಂಡಾದ ಮೋಟೋಕಾಂಪಾಕ್ಟೋ ಎಲೆಕ್ಟ್ರಿಕ್ ಸ್ಕೂಟರ್ ಪರ್ಮೆನೆಂಟ್ ಮ್ಯಾಗ್ನೆಟ್, ಡೈರೆಕ್ಟ್-ಡ್ರೈವ್ ಮೋಟಾರ್ ಅನ್ನು ಹೊಂದಿದ್ದು, 490 W ಗರಿಷ್ಠ ಉತ್ಪಾದನೆ ಮತ್ತು 16 Nm ಟಾರ್ಕ್ ಅನ್ನು ನೀಡುತ್ತದೆ. ಇದು ಫ್ರಂಟ್-ವೀಲ್ ಡ್ರೈವ್ ಆಗಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ 24 ಕಿ.ಮೀ ಟಾಪ್ ಪ್ಸೀಡ್ ಅನ್ನು ಹೊಂದಿದೆ.
ಬ್ಯಾಟರಿ ಪ್ಯಾಕ್: ಈ ಹೊಸ ಹೋಂಡಾ ಮೋಟೋಕಾಂಪಾಕ್ಟೋ ಎಲೆಕ್ಟ್ರಿಕ್ ಸ್ಕೂಟರ್ 6.8-Ah ಬ್ಯಾಟರಿಯಿಂದ ಚಾಲಿತವಾಗಿದೆ, ಇದನ್ನು ಸ್ಟ್ಯಾಂಡರ್ಡ್ 110-ವೋಲ್ಟ್ ಔಟ್ಲೆಟ್ ಬಳಸಿ 3.5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಈ ಹೋಂಡಾದ ಮೋಟೋಕಾಂಪಾಕ್ಟೋ ಎಲೆಕ್ಟ್ರಿಕ್ ಸ್ಕೂಟರ್ ಸಿಂಗಲ್ ಚಾರ್ಜ್‌ನಲ್ಲಿ 19 ಕಿಮೀ ವರೆಗೆ ರೇಂಜ್ ಅನ್ನು ನೀಡುತ್ತದೆ.
ಆಯಾಮಗಳು: ಹೊಸ ಹೋಂಡಾ ಮೋಟೋಕಾಂಪಾಕ್ಟೋ ಎಲೆಕ್ಟ್ರಿಕ್ ಸ್ಕೂಟರ್ 742 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ. ರೆಡಿ-ಟು-ರೈಡ್ ಮತ್ತು ಮಡಿಚಿದ ಸಂರಚನೆಯಲ್ಲಿ ಇದರ ಉದ್ದವು ಕ್ರಮವಾಗಿ 968 ಎಂಎಂ ಮತ್ತು 742 ಎಂಎಂ ಆಗಿದೆ. ಸವಾರಿ ಮಾಡಲು ಸಿದ್ಧವಾದಾಗ ಎತ್ತರವು 889 ಎಂಎಂ ಮತ್ತು ಮಡಿಚಿದಾಗ ಕಾಂಪ್ಯಾಕ್ಟ್ 536 ಎಂಎಂ ಆಗಿದೆ.
ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ಸೀಟ್ ಎತ್ತರವನ್ನು 622.3 ಮಿಮೀ ಹೊಂದಿಸಲಾಗಿದೆ, ಇದು ಬಳಕೆದಾರರಿಗೆ ಆರಾಮದಾಯಕ ರೈಡಿಂಗ್ ಸ್ಥಾನವನ್ನು ಒದಗಿಸುತ್ತದೆ. ತೂಕದ ವಿಷಯದಲ್ಲಿ, ಹೋಂಡಾ ಮೊಟೊಕಾಂಪಾಕ್ಟೊ ಕೇವಲ 18 ಕೆಜಿ ತೂಕ ಹೊಂದಿದೆ. ಹೋಂಡಾ ವಾಹನಗಳು ಹೆಚ್ಚಿನವು ಸವಾರಿಯ ಗುಣಮಟ್ಟವನ್ನು ಅವಲಂಬಿಸಿರುತ್ತದೆ, ಆದರೆ ಈ ಹೊಸ ಹೋಂಡಾ ಮಾದರಿಯು ವಿಭಿನ್ನ ಶೈಲಿಯ ಮೂಲಕ ಸದ್ದು ಮಾಡುತ್ತಿದೆ.
ಇನ್ನು ಹೋಂಡಾ ಮೋಟಾರ್‌ಸೈಕಲ್ ಕಂಪನಿ ಭಾರತದಲ್ಲಿ ಹಬ್ಬದ ಸೀಸನ್ ನಲ್ಲಿ ಹೆಚ್ಚಿನ ಗ್ರಾಹಕರು ಸೆಳೆಯಲು ತನ್ನ 2023ರ ಹೋಂಡಾ CB200X ( Honda CB200X) ಬೈಕ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಹೋಂಡಾ CB200X ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.47 ಲಕ್ಷವಾಗಿದೆ. ಈ 2023ರ ಹೋಂಡಾ CB200X ಬೈಕ್ ಇತ್ತೀಚಿನ BS6 ಹಂತ 2 ಎಮಿಷನ್ ಮಾನದಂಡಗಳನ್ನು ಅನುಸರಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications