ಆಕರ್ಷಕ ವಿನ್ಯಾಸದಲ್ಲಿ ಹೊಸ ಸ್ಕೂಪಿ ಸ್ಕೂಟರ್ ಪರಿಚಯಿಸಿದ ಹೋಂಡಾ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾದ ಸ್ಕೂಪಿ (Scoopy) ನಿಯೋ-ರೆಟ್ರೋ ಸ್ಕೂಟರ್ ಆಗಿದ್ದು, ಇದು ಅನೇಕ ಆಗ್ನೇಯ ಏಷ್ಯಾದ ದೇಶಗಳಲ್ಲಿ ಮಾರಾಟವಾಗುತ್ತಿದೆ. ಹೋಂಡಾ ಕಂಪನಿಯು ಭಾರತದಲ್ಲಿ ಸ್ಕೂಪಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸುವ ಆಲೋಚನೆಯಲ್ಲಿದೆ. ಹೋಂಡಾ ಕಂಪನಿಯು ಭಾರತದಲ್ಲಿ ಸ್ಕೂಪಿ ಎಂಬ ಹೆಸರಿನಲ್ಲಿ ಪೇಟೆಂಟ್ ಅನ್ನು ಕೂಡ ಸಲ್ಲಿಸಿದೆ.

ಹೋಂಡಾ ಸ್ಕೂಪಿ ಸ್ಕೂಟರ್ ಅನ್ನು 2023ರ ಮಾದರಿಯಾಗಿ ಹೊಸ ವೈಶಿಷ್ಟ್ಯಗಳು ಮತ್ತು ಬಣ್ಣ ಆಯ್ಕೆಗಳೊಂದಿಗೆ ನವೀಕರಿಸಿದೆ. ಇಂಡೋನೇಷ್ಯಾದ ಮಾರುಕಟ್ಟೆಯಲ್ಲಿ ಐದನೇ ತಲೆಮಾರಿನ ಹೋಂಡಾ ಸ್ಕೂಪಿ ಸ್ಕೂಟರ್ ಅನ್ನು ಮಾರಾಟ ಮಾಡುತ್ತಿದೆ. ಈ ಹೋಂಡಾ ಸ್ಕೂಪಿಯ ಮುಖ್ಯ ಹೈಲೈಟ್ ಅದರ ವಿನ್ಯಾಸವಾಗಿದೆ. ವಿಶೇಷವಾಗಿ ಮುಂಭಾಗದಲ್ಲಿ ದೊಡ್ಡ ಹೆಡ್‌ಲೈಟ್ ಜೋಡಣೆಯು ಅದರ ಏಪ್ರನ್‌ನಲ್ಲಿದೆ. ಈ ಹೊಸ ಹೋಂಡಾ ಸ್ಕೂಪಿ ಸ್ಕೂಟರ್ ದೊಡ್ಡ ಪ್ರೊಜೆಕ್ಟರ್ ಯುನಿಟ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಸ್ಕೂಪಿ ಸ್ಕೂಟರ್ ಪರಿಚಯಿಸಿದ ಹೋಂಡಾ

ಈ ಸ್ಕೂಟರ್ ನಲ್ಲಿ ಟರ್ನ್ ಇಂಡಿಕೇಟರ್ಸ್ ಗಳೊಂದಿಗೆ ಸುತ್ತುವರಿದ ಶೈಲಿಯಲ್ಲಿ ಹೆಡ್‌ಲೈಟ್ ಜೋಡಣೆಯು ಆಕರ್ಷಕವಾಗಿದೆ. ಈ ಏಪ್ರನ್‌ನ ಮೇಲ್ಭಾಗದಲ್ಲಿ ಸ್ಕೂಪಿಯ ಇನ್‌ಸ್ಟ್ರುಮೆಂಟ್ ಕನ್ಸೋಲ್ ಅನ್ನು ಹೊಂದಿದೆ. ಈ ಸ್ಕೂಟರ್ ನಲ್ಲಿ ರೌಂಡ್ ORVM ಗಳು ಅದರ ಒಟ್ಟಾರೆ ರೆಟ್ರೊ ಲುಕ್ ಅನ್ನು ನೀಡುತ್ತದೆ. ಈ ಏಪ್ರನ್‌ನ ಹಿಂದೆ ಸ್ಮಾರ್ಟ್‌ಫೋನ್‌ಗಳಿಗಾಗಿ USB ಚಾರ್ಜರ್ ಸೇರಿದಂತೆ ಸ್ಟೋರೇಜ್ ಸ್ಪೇಸ್ ಅನ್ನು ಹೊಂದಿದೆ. ಇದು ಹೋಂಡಾದ ಹೊಸ ಸ್ಮಾರ್ಟ್ ಕೀಯನ್ನು ಪಡೆಯುತ್ತದೆ,

ಇದು ಇತ್ತೀಚೆಗೆ ಭಾರತದಲ್ಲಿ ಆಕ್ಟಿವಾದೊಂದಿಗೆ ಟಾಪ್-ಸ್ಪೆಕ್ ಟ್ರಿಮ್‌ನಲ್ಲಿ ಪ್ರಾರಂಭವಾಯಿತು. ಈ ಸ್ಕೂಟರ್ ಸೈಡ್ ಬಾಡಿ ಪ್ಯಾನೆಲ್‌ಗಳು ಹಿಂದಿನ ಸ್ಕೂಟರ್‌ಗಳನ್ನು ನೆನಪಿಸುತ್ತವೆ ಮತ್ತು ಹೋಂಡಾ ಸ್ಕೂಪಿಯ ಒಟ್ಟಾರೆ ವಿನ್ಯಾಸದೊಂದಿಗೆ ಆಕರ್ಷಕವಾಗಿ ಕಾಣುತ್ತದೆ. ಈ 2023ರ ಹೋಂಡಾ ಸ್ಕೂಪಿ ಸ್ಕೂಟರ್ ಅನ್ನು ಒಟ್ಟು 8 ಬಣ್ಣಗಳ ಆಯ್ಕೆಗಳ ಮಾರಾಟ ಮಾಡಲಾಗುತ್ತದೆ. ಈ ಸ್ಕೂಟರ್ ಡ್ಯುಯಲ್-ಟೋನ್ ಶೇಡ್‌ಗಳೊಂದಿಗೆ, ಹೋಂಡಾ ವಿಭಿನ್ನ ಶೈಲಿಯ ಸೀಟ್, ಫ್ಲೋರ್‌ಬೋರ್ಡ್, ಏಪ್ರನ್ ಪ್ಲಾಸ್ಟಿಕ್ ಮತ್ತು ಸೈಡ್ ಬಾಡಿ ಪ್ಯಾನೆಲ್‌ಗಳಲ್ಲಿ ಡಿಕಾಲ್‌ಗಳನ್ನು ನೀಡುತ್ತದೆ.

ಈ ಸ್ಕೂಟರ್ ಹಿಂಭಾಗದಲ್ಲಿ ಗ್ರ್ಯಾಬ್ ಹ್ಯಾಂಡಲ್ ಅನ್ನು ಸಹ ಅಂದವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಸೀಟ್ ಬಾಹ್ಯ ಲೈನ್ ಗಳನ್ನು ಹೊಂದಿದೆ. ಈ ಸ್ಕೂಟರ್ ಕ್ರೋಮ್-ಸಿದ್ಧಪಡಿಸಿದ ಎಕ್ಸಾಸ್ಟ್ ಹೀಟ್ ಗಾರ್ಡ್ ಅದರ ರೆಟ್ರೊ ವೈಬ್‌ಗಳನ್ನು ಹೊಂದಿವೆ. ಹೋಂಡಾ ಸ್ಕೂಪಿ ಸ್ಕೂಟರ್ ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಗಳನ್ನ ನೀಡಲಾಗಿದೆ. ಇನ್ನು ಈ ಸ್ಕೂಟರ್ 4.5 ಲೀಟರ್ ಫ್ಯೂಯಲ್ ಟ್ಯಾಂಕ್ ನೊಂದಿಗೆ, ಸ್ಕೂಪಿ ಕೇವಲ 95 ಕೆಜಿ ತೂಕವನ್ನು ಹೊಂದಿದೆ.

ನವೀಕರಿಸಿದ 2023ರ ಹೋಂಡಾ ಸ್ಕೂಪಿ ಸ್ಕೂಟರ್ ಸ್ಮಾರ್ಟ್ ಕೀಯನ್ನು ಪಡೆಯುತ್ತದೆ, ಈ ಫೀಚರ್ ಅನ್ನು ಇತ್ತೀಚೆಗೆ ಭಾರತದಲ್ಲಿ ಹೊಸ ಹೋಂಡಾ ಆಕ್ಟಿವಾದಲ್ಲಿ ಕೂಡ ನೀಡಲಾಗಿದೆ. ಆಕ್ಟಿವಾದಲ್ಲಿ ಸ್ಮಾರ್ಟ್ ಕೀ ಎಂಬ ವೆರಿಯೆಂಟ್ ನಲ್ಲೇ ಬಿಡುಗಡೆಗೊಳಿಸಿದೆ. ಈ ಹೊಸ ಹೋಂಡಾ ಸ್ಕೂಪಿ ರೆಟ್ರೊ ಸ್ಕೂಟರ್ ನಲ್ಲಿ 109.5 cc ಸಿಂಗಲ್-ಸಿಲಿಂಡರ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಇದು ಹೆಚ್ಚಾಗಿ ಭಾರತದಲ್ಲಿನ ಆಕ್ಟಿವಾ 6G ಸ್ಕೂಟರ್'ಗೆ ಹೋಲುತ್ತದೆ. ಏಕೆಂದರೆ ಇದು EURO 3 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿದೆ.

ಇನ್ನು ಸ್ಕೂಪಿ ಸ್ಕೂಟರ್ ನಲ್ಲಿರುವ 109.5 cc ಎಂಜಿನ್ 9 bhp ಪವರ್ ಮತ್ತು 9.3 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಭಾರತದಲ್ಲಿರುವ ಆಕ್ಟಿವಾ 6G ಸ್ಕೂಟರ್ 7.68 bhp ಮತ್ತು 8.84 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಹೋಂಡಾ ತನ್ನ ಸರಣಿಯಲ್ಲಿ ಗ್ರಾಜಿಯಾ ರೂಪದಲ್ಲಿ ಪ್ರೀಮಿಯಂ ಸ್ಕೂಟರ್ ಅನ್ನು ಹೊಂದಿದೆ.ಭಾರತಕ್ಕಾಗಿ ಹೋಂಡಾದ ಪ್ರೀಮಿಯಂ ಸ್ಕೂಟರ್ ಕೊಡುಗೆಯನ್ನು ಹೆಚ್ಚಿಸಲು ಪ್ತ್ರಯತ್ನಿಸುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂದಿತ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳಲ್ಲಿ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Thursday, February 16, 2023, 12:00 [IST]
English summary
New honda scoopy debuts features engine details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+