10 ವರ್ಷಗಳ ವಾರಂಟಿ, ಕೈಗೆಟುಕುವ ಬೆಲೆಯಲ್ಲಿ ಜನಪ್ರಿಯ ಹೋಂಡಾ ಶೈನ್ 125 ಬಿಡುಗಡೆ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ತನ್ನ ಹೊಸ 2023ರ ಹೋಂಡಾ ಶೈನ್ 125 (Honda Shine 125) ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಹೋಂಡಾ ಶೈನ್ 125 ಬೈಕಿನ ಪ್ರಾರಂಭಿಕ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.79,800 ಆಗಿದೆ.

2023ರ ಹೋಂಡಾ ಶೈನ್ 125 ಬೈಕ್ ಡ್ರಮ್ ಮತ್ತು ಡಿಸ್ಕ್ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿದೆ. ಈ ಹೊಸ ಹೋಂಡಾ ಶೈನ್ 125 ಬೈಕಿನ ಡ್ರಮ್ ಬ್ರೇಕ್ ರೂಪಾಂತರದ ಬೆಲೆಯು ರೂ. 79,800 ಆಗಿದ್ದರೆ ಡಿಸ್ಕ್ ಬ್ರೇಕ್ ರೂಪಾಂತರವು ರೂ.83,800 ಆಗಿದೆ. ಈ ಎಲ್ಲಾ ಬೆಲೆಗಳಿ ಎಕ್ಸ್ ಶೋರೂಂ ಪ್ರಕಾರವಾಗಿದೆ.

2023 Honda Shine 125

ಹೋಂಡಾ ಶೈನ್ 125 ಅದೇ ಫ್ಯೂಯಲ್-ಇಂಜೆಕ್ಟೆಡ್ 123.94cc ಸಿಂಗಲ್-ಸಿಲಿಂಡರ್ ಎಂಜಿನ್‌ ಅನ್ನು ಮುಂದುವರೆಸಿದೆ. ಆದರೆ ಈ ಎಂಜಿನ್ ಹೊಸ ನವೀಕರಣಗಳನ್ನು ಪಡೆದುಕೊಂಡಿವೆ. ಹೋಂಡಾ ಎಂಜಿನ್ ಅನ್ನು ನವೀಕರಿಸರಿಸುವುದರಿಂದ ಈಗ OBD2 ಹೊರಸೂಸುವಿಕೆಯ ಮಾನದಂಡಗಳನ್ನು ಅನುಸರಿಸುತ್ತದೆ. ಹೋಂಡಾದ ACG ಸ್ಟಾರ್ಟರ್ ಮೋಟರ್ ಅನ್ನು ಒಳಗೊಂಡಿರುವ ಮತ್ತು E20 ಮಿಶ್ರಿತ ಇಂಧನದಲ್ಲಿ ಚಲಿಸಬಲ್ಲ ಎಂಜಿನ್ ಆಗಿದೆ.

ಈ ಎಂಜಿನ್ 7,500rpm ನಲ್ಲಿ 10.59bhp ಮತ್ತು 6,000rpm ನಲ್ಲಿ 11Nm ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನ್ನು ಹೊಂದಿದೆ. ಈ ಎಂಜಿನ್ ಅನ್ನು ಸ್ಪೀಡ್ ಗೇರ್‌ಬಾಕ್ಸ್ ಮೂಲಕ ಹಿಂದಿನ ವ್ಹೀಲ್ ಗಳಿಗೆ ಪವರ್ ಕಳುಹಿಸಲಾಗುತ್ತದೆ. ಹೊಸ ಹೋಂಡಾ ಶೈನ್ 125 ಬೈಕ್ ಬ್ಲ್ಯಾಕ್, ಜೆನಿ ಗ್ರೇ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ, ರೆಬೆಲ್ ರೆಡ್ ಮೆಟಾಲಿಕ್ ಮತ್ತು ಡಿಸೆಂಟ್ ಬ್ಲೂ ಮೆಟಾಲಿಕ್ ಎಂಬ ಬಣ್ಣಗಳ ಆಯ್ಕೆಗಳನ್ನು ಹೊಂದಿವೆ.

2023 Honda Shine 125

ಈ ಹೊಸ ಹೋಂಡಾ ಶೈನ್ 125 ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಟ್ವಿನ್ ಸ್ಪ್ರಿಂಗ್‌ಗಳು 5 ಹಂತದ ಹೊಂದಾಣಿಕೆಯನ್ನು ನೀಡುತ್ತವೆ. ಇನ್ನು ಈ ಹೊಸ ಶೈನ್ 125 ಬೈಕ್ 162 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ.

ಹೊಸ ಹೋಂಡಾ ಶೈನ್ 125 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೇಸ್ ಸ್ಪೆಕ್ ಮಾದರಿಯಲ್ಲಿ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ. ಇನ್ನು ಈ ಬೈಕಿನ ಟಾಪ್ ಸ್ಪೆಕ್ 240 ಎಂಎಂ ಡಿಸ್ಕ್ ಬ್ರೇಕ್ ಅನ್ನು ಪಡೆಯುತ್ತದೆ. ಇನ್ನು ಬ್ರೇಕ್‌ಗಳಿಗೆ ಕಾಂಬಿ-ಬ್ರೇಕ್ ಸಿಸ್ಟಮ್ ಮತ್ತು ಕಮ್ಯೂಟರ್ ಮೋಟಾರ್‌ಸೈಕಲ್ 18-ಇಂಚಿನ ವ್ಹೀಲ್ 80/100 ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿವೆ.

ಈ ಹೊಸ ಹೋಂಡಾ ಶೈನ್ 125 ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಶೈನ್ 125 ಬಾಡಿ-ಬಣ್ಣದ ಕೌಲ್ ಮತ್ತು ಕ್ರೋಮ್ ಅಲಂಕರಣದೊಂದಿಗೆ ಸಿಂಗಲ್-ಪಾಡ್ DC ಹೆಡ್‌ಲೈಟ್ ಅನ್ನು ಹೊಂದಿದೆ. ಸೈಡ್ ಪ್ಯಾನೆಲ್‌ಗಳಲ್ಲಿ ಮತ್ತು ಸೈಡ್-ಸ್ಲಂಗ್ ಮಫ್ಲರ್‌ಗಾಗಿ ಹೀಟ್ ಕವರ್‌ ಅನ್ನು ಒಳಗೊಂಡಿದೆ.

ಹೊಸ ಹೋಂಡಾ ಶೈನ್ 125 ಬೈಕ್ ಈಗ ಹೋಂಡಾದಿಂದ ವಿಶೇಷ 10 ವರ್ಷಗಳ ವಾರಂಟಿ ಪ್ಯಾಕೇಜ್‌ನೊಂದಿಗೆ ನೀಡಲಾಗುತ್ತಿದೆ. ಇದು ನಿಯಮಿತ 3-ವರ್ಷದ ಸ್ಟ್ಯಾಂಡರ್ಡ್ ವಾರಂಟಿ ಪ್ಯಾಕೇಜ್ ಮತ್ತು ಆಯ್ಕೆಯ 7-ವರ್ಷದ ವಿಸ್ತೃತ ವಾರಂಟಿಯನ್ನು ಒಳಗೊಂಡಿದೆ. ಕೈಗೆಟುಕುವ ಬೆಲೆಯಲ್ಲಿ ಹೊಸ ಬೈಕ್ ಅನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಅತ್ಯುತ್ತಮ ಆಯ್ಕೆಯಾಗಿದೆ.

Article Published On: Tuesday, June 20, 2023, 18:35 [IST]
English summary
New honda shine 125 launched price specs features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+