ಭಾರತದಲ್ಲಿ ಬಹುನಿರೀಕ್ಷಿತ ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೊರ್ 650 ಬೈಕ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ತನ್ನ ಹೊಸ ಸೂಪರ್ ಮಿಟಿಯೊರ್ 650 ಬೈಕ್ ಅನ್ನು ಕೊನೆಗೂ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೊರ್ 650 (Royal Enfield Super Meteor 650) ಬೈಕಿನ ಆರಂಭಿಕೆ ಬೆಲೆಯು ರೂ. 3.48 ಲಕ್ಷವಾಗಿದೆ.

ಹೊಸ ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೊರ್ 650 ಬೈಕ್ ಸ್ಟ್ಯಾಂಡರ್ಡ್ ಮತ್ತು ಟೂರರ್ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿದೆ. ಈ ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೊರ್ 650 ಬೈಕ್ 648cc, ಏರ್ ಮತ್ತು ಆಯಿಲ್-ಕೂಲ್ಡ್, ಪ್ಯಾರಲಲ್-ಟ್ವಿನ್ ಎಂಜಿನ್‌ ಅನ್ನು ಹೊಂದಿದೆ. ಇದೇ ಎಂಜಿನ್ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್ ಗಳಲ್ಲಿದೆ. ಕಂಪನಿಯು ಸೂಪರ್ ಮಿಟಿಯೊರ್‌ನ ಎಂಜಿನ್ ಮತ್ತು ಅದರ ಗೇರಿಂಗ್ ಅನ್ನು ನವೀಕರಿಸಿದೆ.

ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೊರ್ 650 ಬೈಕ್ ಬಿಡುಗಡೆ

ಸೂಪರ್ ಮೆಟಿಯರ್ 650 ಅದೇ 648cc, ಸಮಾನಾಂತರ-ಟ್ವಿನ್ ಎಂಜಿನ್ ಅನ್ನು ಬಳಸುತ್ತದೆ. ಈ ಮೋಟಾರ್ ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಹೊಂದಿಕೆಯಾಗುತ್ತದೆ ಮತ್ತು 46.2bhp ಮತ್ತು 52Nm ಅನ್ನು ಉತ್ಪಾದಿಸುತ್ತದೆ. ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೊರ್ 650 ಬೈಕಿನಲ್ಲಿರುವ ಎಂಜಿನ್ ಅದೇ 648 cc,ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 46.2 ಬಿಹೆಚ್‍ಪಿ ಪವರ್ ಮತ್ತು 52 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನ್ನು ಆಯಾಮದಲ್ಲಿ, ಹೊಸ ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೊರ್ 650 ಬೈಕ್ 2260 mm ಉದ್ದ, 890 mm ಅಗಲ ಮತ್ತು 1155 mm ಎತ್ತರವನ್ನು ಹೊಂದಿದೆ. ಇನ್ನು ಈ ಹೊಸ ಬೈಕ್ 1500 mm ವ್ಹೀಲ್ ಬೇಸ್ ಮತ್ತು 135 mm ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಇನ್ನು ಈ ಮಿಟಿಯೊರ್ 650 ಬೈಕ್ ಸೀಟ್ 740 ಎಂಎಂ ಎತ್ತರವನ್ನು ಹೊಂದಿದೆ.

ಹೊಸ ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೊರ್ 650 ಬೈಕಿನ ಬಣ್ಣಗಳ ಆಯ್ಕೆಯ ಬಗ್ಗೆ ಹೇಳುವುದಾದರೆ, ಈ ಬೈಕಿನ ಸ್ಟ್ಯಾಂಡರ್ಡ್ ರೂಪಾಂತರವು ಆಸ್ಟ್ರಲ್ ಬ್ಲೂ, ಆಸ್ಟ್ರಲ್ ಬ್ಲಾಕ್, ಆಸ್ಟ್ರಲ್ ಗ್ರೀನ್, ಇಂಟರ್ ಸ್ಟೆಲ್ಲರ್ ಗ್ರೀನ್ ಮತ್ತು ಇಂಟರ್ ಸ್ಟೆಲ್ಲರ್ ಗೆರಿ.ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇನ್ನು ಟೂರರ್ ರೂಪಾಂತರವು ಸೆಲೆಸ್ಟಿಯಲ್ ಬ್ಲೂ ಮತ್ತು ಸೆಲೆಸ್ಟಿಯಲ್ ರೆಡ್ ಎಂಬ ಎರಡೂ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಗ್ರಾಹಕರು ಇದರಲ್ಲಿ ತಮ್ಮ ಮೆಚ್ಚಿನ ಬಣ್ಣದ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ರಾಯಲ್ ಎನ್‌ಫೀಲ್ಡ್ ಕ್ರೂಸರ್ 650 ಸಿಸಿ ಬೈಕ್‌ನಲ್ಲಿ 19 ಇಂಚಿನ ಮುಂಭಾಗ ಮತ್ತು 16 ಇಂಚಿನ ಹಿಂಬದಿಯ ಚಕ್ರಗಳನ್ನು ಕ್ರಮವಾಗಿ 100/90 ಮತ್ತು 150/80 ಟೈರ್‌ಗಳೊಂದಿಗೆ ಅಳವಡಿಸಲಾಗಿದೆ. ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂಗಳ ಬಗ್ಗೆ ಹೇಳುವುದಾದರೆ, ಮುಂಭಾಗ ಮತ್ತು 300 ಎಂಎಂ ಹಿಂಭಾಗದ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ. ಇನ್ನು ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಸ್ಟ್ಯಾಂಡರ್ಡ್ ಫಿಟ್ಮೆಂಟ್ ಆಗಿ ಪಡೆಯುತ್ತದೆ.

ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650 ಬೈಕ್ ಯುಎಸ್‌ಡಿ ಫೋರ್ಕ್ ಸಸ್ಪೆಕ್ಷನ್ ಅನ್ನು ಹೊಂದಿದೆ. ಇನ್ನು ಈ ಬೈಕ್ ಸಂಪೂರ್ಣ ಎಲ್‌ಇಡಿ ಹೆಡ್‌ಲ್ಯಾಂಪ್ ಅನ್ನು ಒಳಗೊಂಡಿರುವ ಕಂಪನಿಯ ಮೊದಲ ಬೈಕ್ ಆಗಿದೆ. ಇದು ಒಟ್ಟು 241 ಕೆಜಿ ತೂಕದ ಅತ್ಯಂತ ಭಾರವಾದ ರಾಯಲ್ ಎನ್‌ಫೀಲ್ಡ್ ಬೈಕ್ ಆಗಿದೆ. ಈ ಕ್ರೂಸರ್ ಟ್ರಿಪ್ಪರ್ ನ್ಯಾವಿಗೇಷನ್ ಪಾಡ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ. ಈ ಬೈಕ್ ಟಿಯರ್‌ಡ್ರಾಪ್ ಆಕಾರದ ಇಂಧನ ಟ್ಯಾಂಕ್, ವೃತ್ತಾಕಾರದ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ಎಂಜಿನ್ ಕೇಸಿಂಗ್‌ಗಳಲ್ಲಿ ಬ್ಲ್ಯಾಕ್ ಫಿನಿಶ್ ಮತ್ತು ಅಲ್ಯೂಮಿನಿಯಂ ಫಿನಿಶ್ಡ್ ಸ್ವಿಚ್ ಕ್ಯೂಬ್‌ಗಳನ್ನು ಒಳಗೊಂಡಿದೆ.

ಸೊಲೊ ಟೂರರ್ ಥೀಮ್ ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650 ಅಚ್ಚುಕಟ್ಟಾಗಿ ಬಾರ್-ಎಂಡ್ ಮಿರರ್‌ಗಳು, ಬಾರ್-ಎಂಡ್ ಫಿನಿಶರ್, ಫ್ರಂಟ್ ಮತ್ತು ರಿಯರ್ ಎಲ್‌ಇಡಿ, ಇಂಡಿಕೇಟರ್‌ಗಳು, ಸೋಲೋ ಫಿನಿಶರ್ ಕಿಟ್, ಕಾಂಪ್ಯಾಕ್ಟ್ ಇಂಜಿನ್ ಗಾರ್ಡ್, ಡೀಲಕ್ಸ್ ರೈಡರ್ ಫೂಟ್ ಪೆಗ್‌ಗಳು ಸೇರಿದಂತೆ ಬೆಸ್ಪೋಕ್ ಅಕ್ಸೆಸರೀಸ್ ಶ್ರೇಣಿಯೊಂದಿಗೆ ಬರುತ್ತದೆ. ಗ್ರ್ಯಾಂಡ್ ಟೂರರ್ ಥೀಮ್ ಸೆಲೆಸ್ಟಿಯಲ್ ರೂಪಾಂತರದಲ್ಲಿ ಲಭ್ಯವಿದೆ ಮತ್ತು ಇದು OE-ಅಳವಡಿಕೆಯ ಡಿಲಕ್ಸ್ ಟೂರಿಂಗ್ ಸೀಟ್, ಪಿಲಿಯನ್ ಬ್ಯಾಕ್‌ರೆಸ್ಟ್ ಮತ್ತು ಟೂರಿಂಗ್ ಫ್ಲೈಸ್ಕ್ರೀನ್ ಅನ್ನು ಒಳಗೊಂಡಿದೆ.

Most Read Articles

Kannada
English summary
New royal enfield super meteor 650 launched specs features variants details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X