100ಕ್ಕೂ ಹೆಚ್ಚು ಕಿ.ಮೀ ರೇಂಜ್, ಆಕರ್ಷಕ ಬೆಲೆಯಲ್ಲಿ ಟಾರ್ಕ್ ಕ್ರಾಟೋಸ್-ಆರ್ ಅರ್ಬನ್ ಟ್ರಿಮ್ ಬಿಡುಗಡೆ

ಪುಣೆ ಮೂಲದ ದೇಶದ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಕಂಪನಿ ಟಾರ್ಕ್ ಮೋಟಾರ್ಸ್ ತನ್ನ ಕ್ರಾಟೋಸ್-ಆರ್ ಎಲೆಕ್ಟ್ರಿಕ್ ಬೈಕಿನ ಹೊಸ ಅರ್ಬನ್ ಟ್ರಿಮ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟಾರ್ಕ್ ಕ್ರಾಟೋಸ್-ಆರ್ ಅರ್ಬನ್ ಟ್ರಿಮ್ ಬೆಲೆಯು ಪುಣೆ ಎಕ್ಸ್ ಶೋರೂಂ ಪ್ರಕಾರ ರೂ.1.67 ಲಕ್ಷವಾಗಿದೆ.

ಹೊಸ ಟಾರ್ಕ್ ಕ್ರಾಟೋಸ್-ಆರ್ ಅರ್ಬನ್ ಟ್ರಿಮ್ (Tork Kratos-R Urban Trim) ಮಾದರಿಯು ಸಿಟಿ ಸವಾರರನ್ನು ಗುರಿಯಾಗಿರಿಸಿಕೊಂಡಿದೆ. ಈ ಹೊಸ ಟಾರ್ಕ್ ಕ್ರಾಟೋಸ್-ಆರ್ ಅರ್ಬನ್ ಟ್ರಿಮ್ ಮಾದರಿಯು ಸೀಮಿತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಆದರೆ ಲಭ್ಯವಿರುವ ವೈಶಿಷ್ಟ್ಯಗಳು ದೈನಂದಿನ ನಗರ ಪ್ರಯಾಣಕ್ಕೆ ತುಂಬಾ ಉಪಯುಕ್ತವಾಗಿವೆ. ಸಿಟಿಗಳಲ್ಲಿ ಕಚೇರಿಗಳಿಗೆ ತೆರಳಲು ಅಥವಾ ದೈನಿಂದಿನ ಅಗತ್ಯಕ್ಕೆ ಈ ಹೊಸ ಮಾದರಿಯು ಉತ್ತಮ ಆಯ್ಕೆಯಾಗಿದೆ.

Tork Kratos-R Urban Trim

ಹೊಸ ಟಾರ್ಕ್ ಕ್ರಾಟೋಸ್-ಆರ್ ಅರ್ಬನ್ ಟ್ರಿಮ್ ಮಾದರಿಯು ಬಿಡುಗೆಡೆಯ ಕುರಿತು ಟಾರ್ಕ್ ಮೋಟಾರ್ಸ್ ಸಂಸ್ಥಾಪಕ ಮತ್ತು ಸಿಇಒ ಕಪಿಲ್ ಶೆಲ್ಕೆ ಅವರು ಮಾತನಾಡಿ, ಹೊಸ 'ಅರ್ಬನ್' ಟ್ರಿಮ್ ನಗರ ಪ್ರಯಾಣಿಕರ ಅವಶ್ಯಕತೆಗಳನ್ನು ಪೂರೈಸುತ್ತದೆ. ರಾಜಿಯಾಗದ ಕಾರ್ಯಕ್ಷಮತೆ ಮತ್ತು ಶ್ರೇಣಿಯನ್ನು ಅತ್ಯಂತ ಕೈಗೆಟೆಕುವ ಬೆಲೆಯಲ್ಲಿ ಮತ್ತು ಅವರಿಗೆ ದೈನಂದಿನ ಅಗತ್ಯವಿರುವ ವೈಶಿಷ್ಟ್ಯಗಳನ್ನು ಪೂರೈಸುತ್ತಾರೆ ಎಂದು ಹೇಳಿದ್ದಾರೆ.

ಹೊಸದಾಗಿ ಬಿಡುಗಡೆಗೊಂಡ ಟಾರ್ಕ್ ಕ್ರಾಟೋಸ್-ಆರ್ ಅರ್ಬನ್ ಟ್ರಿಮ್ 'ಸಿಟಿ' ರೈಡ್ ಮೋಡ್‌ನೊಂದಿಗೆ ಬರುತ್ತದೆ. ಇದರ ಹೊರತಾಗಿ, ಈ ಹೊಸ ಮಾದರಿಯು 70 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇದು ನಗರಗಳಲ್ಲಿ ಯೋಗ್ಯವಾಗಿರುವ ವೇಗವಾಗಿದೆ. ಈ ಹೊಸ ಬೈಕ್ ಮಾದರಿಯನ್ನು ಸಂಪೂರ್ಣ ಚಾರ್ಜ್ ಮಾಡಿದರೆ 100 ಕಿಲೋಮೀಟರ್‌ಗಳಿಗಿಂತ ಹೆಚ್ಚು ರೇಂಜ್ ಅನ್ನು ನೀಡುತ್ತದೆ.

ಟಾರ್ಕ್ ಕ್ರಾಟೋಸ್-ಆರ್ ಅರ್ಬನ್ ಟ್ರಿಮ್ ಮಾದರಿಯು 4.0kWh Li-ion ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಈ ಬ್ಯಾಟರಿ ಪ್ಯಾಕ್ IP 67 ರೇಟೆಡ್ ಆಗಿದೆ ಮತ್ತು 'ಆಕ್ಸಿಯಲ್ ಫ್ಲಕ್ಸ್' ಮೋಟರ್ ಅನ್ನು ಪವರ್ ಮಾಡುತ್ತದೆ. ಈ ಎಲೆಕ್ಟ್ರಿಕ್ ಮೋಟರ್‌ನ ದಕ್ಷತೆಯನ್ನು ಶೇಕಡಾ 96 ರಷ್ಟು ರೇಟ್ ಮಾಡಲಾಗಿದೆ ಮತ್ತು ಕಂಪನಿಗೆ ಇತ್ತೀಚೆಗೆ ಪೇಟೆಂಟ್ ನೀಡಲಾಗಿದೆ.

ಟಾರ್ಕ್ ಕ್ರಾಟೋಸ್-ಆರ್ ಅರ್ಬನ್ ಟ್ರಿಮ್ ಮಾದರಿಯು ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಸ್ಟ್ಯಾಂಡರ್ಡ್ ಟಾರ್ಕ್ ಕ್ರಾಟೋಸ್-ಆರ್ ಮಾದರಿಯಂತಿಯೇ ಇದೆ. ಈ ಹೊಸ ಟಾರ್ಕ್ ಕ್ರಾಟೋಸ್-ಆರ್ ಅರ್ಬನ್ ಟ್ರಿಮ್ ಮಾದರಿಯು ಸ್ಟ್ರೀಕಿ ರೆಡ್, ಓಷಿಯಾನಿಕ್ ಬ್ಲೂ ಮತ್ತು ಮಿಡ್‌ನೈಟ್ ಬ್ಲ್ಯಾಕ್ ಎಂಬ ಮೂರು ಮಾದರಿಗಳಲ್ಲಿ ಲಭ್ಯವಿದೆ. ಗ್ರಾಹಕರು ಇದರಲ್ಲಿ ತಮ್ಮ ಮೆಚ್ಚಿನ ಬಣ್ಣದ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಮೊದಲೇ ಹೇಳಿದಂತೆ, ಹೊಸ Tork Kratos-R ಅರ್ಬನ್ ಟ್ರಿಮ್ ಸೀಮಿತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಹೊಸ ಖರೀದಿದಾರರು 30 ದಿನಗಳವರೆಗೆ ಯಾವುದೇ ನಿರ್ಬಂಧಗಳಿಲ್ಲದೆ ವೈಶಿಷ್ಟ್ಯಗಳ ಸಂಪೂರ್ಣ ಸೂಟ್ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಈ ತಾತ್ಕಾಲಿಕವಾಗಿ ಲಭ್ಯವಿರುವ ವೈಶಿಷ್ಟ್ಯಗಳು ಮಲ್ಟಿ-ರೈಡ್ ಮೋಡ್‌ಗಳಾಗಿವೆ. ಇವುಗಳು ಇಕೋ, ಸಿಟಿ ಮತ್ತು ಸ್ಪೋರ್ಟ್ಸ್ ಆಗಿದೆ. ಇನ್ನು ಈ ಬೈಕಿನಲ್ಲಿ ರಿವರ್ಸ್ ಮೋಡ್ ಅನ್ನು ನೀಡಲಾಗಿದೆ.

ಟಾರ್ಕ್ ಕ್ರಾಟೋಸ್-ಆರ್ ಅರ್ಬನ್ ಟ್ರಿಮ್ ಮಾದರಿಯಲ್ಲಿ ಫಾಸ್ಟ್ ಚಾರ್ಜಿಂಗ್, ಇನ್-ಆಪ್ ನ್ಯಾವಿಗೇಷನ್, ಬ್ಲೂಟೂತ್ ಮೂಲಕ ಲೈವ್ ಡ್ಯಾಶ್, ವೆಹಿಕಲ್ ಲೊಕೇಟರ್, ಆಂಟಿ-ಥೆಫ್ಟ್ ಸಿಸ್ಟಮ್, ಜಿಯೋಫೆನ್ಸಿಂಗ್, ಚಾರ್ಜಿಂಗ್ ಪಾಯಿಂಟ್ ಸ್ಥಳ, OTA ಅಪ್‌ಡೇಟ್‌ಗಳು, ರೈಡ್ ಅನಾಲಿಟಿಕ್ಸ್, ಟ್ರ್ಯಾಕ್ ಮೋಡ್ ಅನಾಲಿಟಿಕ್ಸ್, ಸ್ಮಾರ್ಟ್ ಅನಾಲಿಟಿಕ್ಸ್ ಮತ್ತು ಗೈಡ್ ಮಿ ಹೋಮ್ ಲೈಟ್ಸ್ ನಂತಹ ಫೀಚರ್ಸ್ ಗಳನ್ನು ಹೊಂದಿವೆ.

ಮೇಲೆ ಪಟ್ಟಿ ಮಾಡಲಾದ ವೈಶಿಷ್ಟ್ಯಗಳನ್ನು ಅನ್‌ಲಾಕ್ ಮಾಡಲು Tork Kratos-R ಅರ್ಬನ್ ಟ್ರಿಮ್ ಗ್ರಾಹಕರು 20,000 ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಸಬಹುದು. ಇದನ್ನು ಖರೀದಿಸಿದ ಮೊದಲ ಆರು ತಿಂಗಳೊಳಗೆ ಮಾಡಬೇಕು. ಹೊಸದಾಗಿ ಪರಿಚಯಿಸಲಾದ ಟಾರ್ಕ್ ಕ್ರಾಟೋಸ್-ಆರ್ ಅರ್ಬನ್ ಟ್ರಿಮ್ ಹಾರ್ಡ್‌ವೇರ್ ವಿಷಯದಲ್ಲಿ ಸ್ಟ್ಯಾಂಡರ್ಡ್ ಮಾದರಿಗೆ ಹೋಲುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Saturday, August 12, 2023, 11:52 [IST]
English summary
New tork kratos r urban trim launched price details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+