ಸಿಹಿಸುದ್ದಿ: ಫ್ಲಿಪ್‌ಕಾರ್ಟ್‌ನಲ್ಲಿ ಈ ಕಂಪನಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಲಭ್ಯ.. ಡಿಸ್ಕೌಂಟ್
ದೇಶದಲ್ಲಿ ಎಲೆಕ್ಟ್ರಲ್ ದ್ವಿಚಕ್ರ ವಾಹನ (ಇವಿ)ಗಳು ದಿನದಿಂದ ದಿನಕ್ಕೆ ಖ್ಯಾತಿಗಳಿಸುತ್ತಿವೆ. ಕೆಲವು ಕಂಪನಿಗಳು ಸಾಂಪ್ರದಾಯಿಕ ಪದ್ದತಿಯಂತೆ ಡೀಲರ್ ಶಿಪ್ ಮುಖಾಂತರವೇ ಸ್ಕೂಟರ್ ಹಾಗೂ ಬೈಕ್‌ಗಳನ್ನು ಮಾರಾಟ ಮಾಡುತ್ತಿವೆ. ಇದೀಗ, ಒಡಿಸ್ಸೆ ಎಲೆಕ್ಟ್ರಿಕ್ ವೆಹಿಕಲ್ಸ್ ಒಂದು ಹೆಜ್ಜೆ ಮುಂದೆ ಹೋಗಿದ್ದು, ಆನ್‌ಲೈನ್‌ನಲ್ಲಿ ತನ್ನ ಇವಿಗಳನ್ನು ಸೇಲ್ ಮಾಡಲು ನಿರ್ಧರಿಸಿದೆ.
ಈ ಸಂಬಂಧ ಒಡಿಸ್ಸೆ (Odysee) ಎಲೆಕ್ಟ್ರಿಕ್ ವೆಹಿಕಲ್ಸ್, ಫ್ಲಿಪ್‌ಕಾರ್ಟ್‌ನೊಂದಿಗೆ ಸಹಭಾಗಿತ್ವವನ್ನು ಘೋಷಿಸಿದೆ. ಇನ್ಮುಂದೆ, ಆಸಕ್ತ ಗ್ರಾಹಕರು ಫ್ಲಿಪ್‌ಕಾರ್ಟ್ ಮೂಲಕವೇ ಒಡಿಸ್ಸೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬುಕ್ಕಿಂಗ್ ಮಾಡಬಹುದು ಅಥವಾ ಖರೀದಿಸಬಹುದು. ಕಂಪನಿಯು ಭಾರತದಲ್ಲಿ ವಾಡರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್, ಹಾಕ್ ಪ್ಲಸ್, ರೇಸರ್ ಲೈಟ್ ವಿ2, E2Go ಲೈಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹಾಗೂ ಇವೊಕಿಸ್ ಇ-ಬೈಕ್ ಅನ್ನು ಮಾರಾಟ ಮಾಡುತ್ತಿದೆ.

ದೇಶಾದ್ಯಂತ ಫ್ಲಿಪ್‌ಕಾರ್ಟ್ ಮೂಲಕ ತನ್ನೆಲ್ಲ ದ್ವಿಚಕ್ರ ವಾಹನಗಳು, ಗ್ರಾಹಕರಿಗೆ ಸುಲಭವಾಗಿ ದೊರೆಯಲಿದೆ ಎಂದು ಒಡಿಸ್ಸೆ ಕಂಪನಿ ಅಧಿಕೃತ ಹೇಳಿಕೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದೆ. ಜೊತೆಗೆ ಫ್ಲಿಪ್‌ಕಾರ್ಟ್ ಮೂಲಕ ಸೇಲ್ ಮಾಡುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೇಲೆ ಭರ್ಜರಿ ರಿಯಾಯಿತಿ ಹಾಗೂ ಆಕರ್ಷಕ ಹಣಕಾಸು ಕೊಡುಗೆಗಳನ್ನು ನೀಡಲಾಗುತ್ತದೆ ಎಂದು ಕಂಪನಿ ಘೋಷಣೆ ಮಾಡಿದೆ.
ಒಡಿಸ್ಸೆ ಕಂಪನಿಯು ತನ್ನ ಬಹುನೀರಿಕ್ಷಿತ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ 'ವಾಡೆರ್' ಅನ್ನು ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ರೂ.1,09,999 (ಎಕ್ಸ್ ಶೋರೂಂ, ಅಹಮದಾಬಾದ್) ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ಈ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಬೇರೆ ಇರುತ್ತದೆ. ಇದು, 3.7kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ.

ಈ ಎಲೆಕ್ಟ್ರಿಕ್ ಬೈಕ್ ಇಕೋ, ಡ್ರೈವ್ ಹಾಗೂ ಸ್ಪೋರ್ಟ್ಸ್ ಎಂಬ ಮೂರು ರೈಡಿಂಗ್ ಮೋಡ್ ಅನ್ನು ಹೊಂದಿದೆ. ಸಂಪೂರ್ಣ ಚಾರ್ಜಿನಲ್ಲಿ 125 km ರೇಂಜ್ ನೀಡಲಿದೆ. ಇದರ ಬ್ಯಾಟರಿ ಪ್ಯಾಕ್ 0 - 100% ಚಾರ್ಜ್ ಆಗಲು 4 ಗಂಟೆಬೇಕು. ವಾಡೆರ್ ಮೋಟಾರ್‌ಸೈಕಲ್ ಭರಪೂರ ವೈಶಿಷ್ಟ್ಯಗಳನ್ನು ಪಡೆದಿದೆ. ಮುಖ್ಯವಾಗಿ ಡಸ್ಟ್ ಹಾಗೂ ವಾಟರ್ ಪ್ರೊಫ್ 7 ಇಂಚಿನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ.
ಒಡಿಸ್ಸೆ ಕಂಪನಿಯ ಹಾಕ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಕುರಿತು ಮಾತನಾಡುವುದಾದರೆ, ಇದು ರೂ.1.18 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ 2.96 KW ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಸಂಪೂರ್ಣ ಚಾರ್ಜಿನಲ್ಲಿ 170 km ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದ್ದು, ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.
ರೇಸರ್ ಲೈಟ್ ವಿ2 ಎಲೆಕ್ಟ್ರಿಕ್ ಸ್ಕೂಟರ್, ರೂ.77,250 ದರವನ್ನು ಹೊಂದಿದೆ. 1.3 KW ಬ್ಯಾಟರಿ ಪ್ಯಾಕ್ ಒಳಗೊಂಡಿದ್ದು, ಫುಲ್ ಚಾರ್ಜಿನಲ್ಲಿ 75 Km ರೇಂಜ್ ನೀಡುತ್ತದೆ. ಇದರ ಬ್ಯಾಟರಿ ಕೇವಲ 3.5 ಗಂಟೆಯಲ್ಲಿ ಫುಲ್ ಚಾರ್ಜ್ ಆಗುತ್ತದೆ. ಫ್ರಂಟ್ ಹಾಗೂ ರೇರ್ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದ್ದು, ಟ್ಯೂಬ್ ಲೇಸ್ ಟೈಯರ್ಸ್ ಅನ್ನು ಪಡೆದಿದೆ.
ಭಾರತದಲ್ಲಿ E2Go ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ರೂ.71,100 ಬೆಲೆಯಲ್ಲಿ ಲಭ್ಯವಿದೆ. 20 AH ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದ್ದು, 25 Km/ hr ಟಾಪ್ ಸ್ವೀಡ್ ಹೊಂದಿದೆ. ಇವೊಕಿಸ್ ಇ-ಬೈಕ್ ರೂ.1,71,250 ದರದಲ್ಲಿ ಖರೀದಿಗೆ ದೊರೆಯಲಿದ್ದು, ಸಂಪೂರ್ಣ ಚಾರ್ಜಿನಲ್ಲಿ 140 Km ರೇಂಜ್ ನೀಡುತ್ತದೆ. 80 Kmph ಟಾಪ್ ಸ್ವೀಡ್ ಪಡೆಯಲಿದೆ.


Click it and Unblock the Notifications