ಪೆಟ್ರೋಲ್ ವಾಹನಗಳ ಮೇಲೆ ಉತ್ತಮ Meme ಮಾಡಿದವರಿಗೆ ಉಚಿತ ಸ್ಕೂಟರ್ ಘೋಷಿಸಿದ Ola CEO
ಭಾರತದಲ್ಲಿ ಹೆಚ್ಚಾಗುತ್ತಿರುವ ಪೆಟ್ರೋಲ್ ಬೆಲೆಗಳಿಂದ ಪರದಾಡುತ್ತಿರುವ ಸಾರ್ವಜನಿಕರಿಗೆ ಎಲೆಕ್ಟ್ರಿಕ್ ವಾಹನಗಳು ವರದಾನವಾಗಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಓಲಾ ಎಲೆಕ್ಟ್ರಿಕ್‌ನ ಸಿಇಒ ಭವಿಶ್ ಅಗರ್ವಾಲ್ ಅವರು, ಪ್ರಸ್ತುತದ ಪರಿಸ್ಥಿತಿಗಳಿಗೆ ಅನುಗುಣವಾಗಿ ಪೆಟ್ರೋಲ್ ವಾಹನಗಳ ಕುರಿತು ಉತ್ತಮ ಮೆಮೆ ಹಂಚಿಕೊಳ್ಳುವವರಿಗೆ ಉಚಿತ Ola S1 Pro ವಿಶೇಷ ಆವೃತ್ತಿಯನ್ನು ನೀಡುವುದಾಗಿ ಘೋಷಿಸಿದ್ದಾರೆ.
ಈಗಾಗಲೇ ಓಲಾ ಸ್ಕೂಟರ್‌ಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಕಳೆದ ವರ್ಷ ಒಂದಷ್ಟು ಅನಿರೀಕ್ಷಿತ ಘಟನೆಗಳಿಂದ (ಬೆಂಕಿ ಅವಘಡಗಳು, ಸಸ್ಪೆನ್ಷನ್ ಮುರಿತ) ಓಲಾಗೆ ತುಸು ಹಿನ್ನಡೆಯಾಗಿತ್ತು. ಇದಾದ ಬಳಿಕ ಕಂಪನಿಯು ನಿರ್ಮಾಣ ಗುಣಮಟ್ಟ ಹಾಗೂ ಬ್ಯಾಟರಿ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಿಕೊಂಡು ಮಾರುಕಟ್ಟೆಯಲ್ಲಿ ಮತ್ತೊಮ್ಮೆ ತನ್ನ ಬೇಡಿಕೆ ಹೆಚ್ಚಿಸಿಕೊಂಡು ಉತ್ತಮ ಮಾರಾಟವನ್ನು ಗಳಿಸುತ್ತಿದೆ.

ಸದ್ಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಓಲಾ ಅಗ್ರಸ್ಥಾನದಲ್ಲಿದೆ. ಸಮಯ ಸಿಕ್ಕಾಗಲೆಲ್ಲಾ ಓಲಾ ಸಿಇಓ ಭವಿಷ್ ಅಗರ್ವಾಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಗ್ರಾಹಕರೊಂದಿಗೆ ತಮ್ಮ ಹೊಸ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಪೆಟ್ರೋಲ್ ಚಾಲಿತ ವಾಹನಗಳ ಕುರಿತು ಉತ್ತಮ ಮೆಮೆಯನ್ನು ನೀಡುವವರಿಗೆ ಉಚಿತ ವಾಹನ ನೀಡುವುದಾಗಿ ಹೇಳಿದ್ದರು. ಅದರಂತೆ ಸಾವಿರಾರು ಮೆಮೆಗಳು ಹರಿದುಬಂದಿವೆ.
ಈ ಸಾವಿರಾರು ಮೆಮೆಗಳಲ್ಲಿ ಟಾಪ್ ಮೆಮೆಗಳನ್ನು ಇಲ್ಲಿ ನೋಡೋಣ. ಹಾಗೆಯೇ ಅವುಗಳ ಕುರಿತು ಚರ್ಚಿಸೋಣ. ಮೊದಲಿಗೆ ಈ ಮೆಮೆಗಳಲ್ಲಿ ತಮಿಳು ನಟ ಅಜಿತ್ ಕುಮಾರ್ ಅವರ ಮೆಮೆ ಸಖತ್ ಸದ್ದು ಮಾಡುತ್ತಿದೆ. ಇದರಲ್ಲಿ ಅವರ ಮುಖಾಭಿನಯಕ್ಕೆ ತಕ್ಕಂತೆ ವಿವಿಧ ವಾಹನಗಳನ್ನು ಹೋಲಿಸಲಾಗಿದೆ. ಪ್ರಸ್ತುತ ಇಂಧನ ಬೆಲೆಗಳಿಗೆ ಪೆಟ್ರೋಲ್ ಚಾಲಿತ ವಾಹನಗಳ ಮಾಲೀಕರ ಪರಿಸ್ಥಿತಿಯನ್ನು ಈ ಮೆಮೆ ವಿವರಿಸುತ್ತದೆ.

ಇದಾದ ನಂತರ ಇನ್ನೊಂದು ಮೆಮೆ ಸಖತ್ ಸದ್ದು ಮಾಡುತ್ತಿದೆ. ಇದರಲ್ಲಿ ಇಂಧನ ಚಾಲಿತ ವಾಹನಗಳಿಗೆ ಗ್ಯಾಸ್ ಸಮಸ್ಯೆ ಇದೆ ಎಂದು ಹೇಳುವ ಮೂಲಕ ಮಹಿಳೆಯೊಬ್ಬರು ಸ್ಕೂಟರ್ ಓಡಿಸುತ್ತಾ ಮೂಗು ಮುಚ್ಚಿಕೊಂಡಿರುವ ಮೆಮೆಯನ್ನು ರಚಿಸಲಾಗಿದೆ. ಇದರಲ್ಲಿ ಕಾರ್ಬನ್ ಸಮಸ್ಯೆಯನ್ನು ಎತ್ತಿತೋರಲಾಗಿದೆ. ಕೆಳಗೆ ಓಲಾ ಸ್ಕೂಟರ್‌ಗಳು ಯಾವುದೇ ಪರಿಸರ ಹಾನಿ ಮಾಡದೇ ಹೋಗುವ ಫೋಟೋವನ್ನು ಮರ್ಜ್ ಮಾಡಿದ್ದಾರೆ.
ಮೂರನೇ ವೈರಲ್ ಮೆಮೆಯನ್ನು ನೋಡುವುದಾದರೆ, ಈ ಮೆಮೆಯು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಹಲವು ವಿಷಯಗಳ ಕುರಿತು ಮಾಡಲಾಗಿದ್ದು, ಈಗ ಪೆಟ್ರೋಲ್ ಏರಿಕೆ ಕುರಿತು ಮಾಡಲಾಗಿದೆ. ಇದು ಗಾಡ್ಜಿಲ್ಲಾ ಸಿನಿಮಾದಲ್ಲಿ ಕಾಂಗ್ ಹಾಗೂ ಗಾಡ್ಜಿಲ್ಲಾ ಹೊಡೆದಾಡುವ ಚಿತ್ರವಾಗಿದ್ದು, ಪೆಟ್ರೋಲ್-ಡೀಸಲ್ ಬೆಲೆಗಳು ಹೊಡೆದಾಡುವಾಗ ನಾಯಿಯೊಂದು ಅವರನ್ನು ಹೊಡೆದೋಡಿಸುವುದನ್ನು ಬಿಂಬಿಸಲಾಗಿದೆ. ಇಲ್ಲಿ ನಾಯಿಯನ್ನು ಎಲೆಕ್ಟ್ರಿಕ್ ವಾಹನಗಳ ಮಾಲೀಕರಿಗೆ ಹೋಲಿಸಲಾಗಿದೆ.
ಇನ್ನೂ ಹಲವು ಮೆಮೆಗಳು ಸಾಮಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅದರಲ್ಲಿ ಕೇವಲ ಟಾಪ್ ಮೆಮೆಗಳನ್ನು ಮಾತ್ರ ಇಲ್ಲಿ ತೋರಿಸಿದ್ದೇವೆ. ಸದ್ಯ ಈ ಎಲ್ಲಾ ಮೆಮೆಗಳು ಇಂಧನ ಚಾಲಿತ ವಾಹನ ಕಂಪನಿಗಳಿಗೆ ನೇರ ಹೊಡೆತವನ್ನು ನೀಡುತ್ತಿವೆ. ಏಕೆಂದರೆ ಸಾಮಾಜಿಕ ಜಾಲತಾಣದಲ್ಲಿ ಮೆಮೆಗಳು ಸಾಕಷ್ಟು ಪ್ರಭಾವ ಭೀರುತ್ತವೆ. ಇನ್ನು ವಿಜೇತರ ಕುರಿತು ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಾವು ಕಾಯಿತ್ತಿದ್ದು, ಬಂದ ಬಳಿಕ ನಿಮ್ಮ ಬಳಿ ಹಂಚಿಕೊಳ್ಳುತ್ತೇವೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications