Ola S1 Air - Ather 450S: ಓಲಾ ಎಸ್1 ಏರ್ vs ಎಥರ್ 450ಎಸ್ ಎರಡು ಬೆಂಗಳೂರಿನ ಸ್ಕೂಟರ್‌ಗಳೇ.. ಬೆಸ್ಟ್ ಯಾವುದು?
ದೇಶದಲ್ಲಿ ಕಳೆದ ಎರಡು ವರ್ಷದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಭಾರೀ ಜನಪ್ರಿಯತೆಯನ್ನು ಗಳಿಸಿವೆ. ಇದೀಗ, ವಿವಿಧ ಕಂಪನಿಗಳು ತಮ್ಮ ಗ್ರಾಹಕರಿಗಾಗಿ ಕಡಿಮೆ ಬೆಲೆಯ ಎಂಟ್ರಿ ಲೆವೆಲ್ ಇ - ಸ್ಕೂಟರ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಈ ಸಾಲಿಗೆ ಬೆಂಗಳೂರು ಮೂಲಕ ಓಲಾ ಹಾಗೂ ಎಥರ್ ಸೇರ್ಪಡೆಯಾಗಿದೆ.
ಭಾರತದ ಮಾರುಕಟ್ಟೆಯಲ್ಲಿ ಹೋದ ತಿಂಗಳು ಓಲಾ ಎಲೆಕ್ಟ್ರಿಕ್ (Ola Electric) ಎಸ್1 ಏರ್ (S1 Air) ಹಾಗೂ ನಿನ್ನೆಯಷ್ಟೇ ಎಥರ್ ಎನರ್ಜಿ (Ather Energy) 450ಎಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದೆ. ಬಹುತೇಕ ಇವೆರೆಡು ಸ್ಕೂಟರ್‌ಗಳು ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದ್ದು, ರೇಂಜ್, ಬ್ಯಾಟರಿ ಪ್ಯಾಕ್ ಹಾಗೂ ಬೆಲೆ ಸಂಬಂಧಿಸಿದಂತೆ ಹೋಲಿಕೆ ಮಾಡಲಾಗಿದ್ದು, ಬನ್ನಿ ಹೇಗಿವೆ ಎಂಬುದನ್ನು ತಿಳಿಯೋಣ.

ಮೊದಲಿಗೆ ಪವರ್ ಟ್ರೈನ್ ಬಗ್ಗೆ ಮಾತನಾಡೋಣ. ಎಥರ್ 450ಎಸ್ ಇ-ಸ್ಕೂಟರ್‌ನಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 5.4 kW (7.2 hp) ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಓಲಾ ಎಸ್1 ಏರ್ ಸ್ಕೂಟರ್ ಹೊಂದಿರುವ ಮೋಟಾರ್, 6 hp ಪವರ್ ಹೊರಹಾಕುತ್ತದೆ. ಇವೆರೆಡು ಸ್ಕೂಟರ್‌ಗಳು ಒಂದೇ ರೀತಿಯ (90 kmph) ಟಾಪ್ ಸ್ವೀಡ್ ಹೊಂದಿವೆ.
ಆದರೆ, 0 ರಿಂದ 40 kmph ವೇಗವನ್ನು ಪಡೆಯುವಲ್ಲಿ ವ್ಯತ್ಯಾಸಗಳಿದ್ದು, ಓಲಾ ಎಸ್1 ಏರ್ ಕೇವಲ 3.3 ಸೆಕೆಂಡುಗಳಲ್ಲಿ ಈ ಸ್ವೀಡ್ ಹೊಂದಲಿದೆ. ಎಥರ್ 450ಎಸ್ ಇ-ಸ್ಕೂಟರ್ 3.9 ಸೆಕೆಂಡುಗಳಲ್ಲಿ ಈ ವೇಗವನ್ನು ಪಡೆಯಲಿದ್ದು, ಕೊಂಚ ಸೆಕೆಂಡುಗಳ ಅಂತರದಲ್ಲಿ ಓಲಾವೇ ಮುಂದಿದೆ. ರೈಡ್ ಮೋಡ್ ವಿಚಾರವಾಗಿ ತಿಳಿಯುವುದಾದರೆ, ಎಥರ್ 450ಎಸ್ ಸ್ಮಾರ್ಟ್ಇಕೋ, ಇಕೋ, ರೈಡ್, ಸ್ಪೋರ್ಟ್ ಎಂಬ ನಾಲ್ಕು ಮೋಡ್ ಅನ್ನು ಪಡೆದಿದೆ.

ಓಲಾ ಎಸ್1 ಏರ್ ಕೇವಲ ಮೂರು ರೈಡ್ ಮೋಡ್ ಗಳನ್ನು ಹೊಂದಿದೆ. ಅವುಗಳೆಂದರೆ, ಇಕೋ, ನಾರ್ಮಲ್ ಹಾಗೂ ಸ್ಪೋರ್ಟ್. ಬ್ಯಾಟರಿ ಪ್ಯಾಕ್ ಹಾಗೂ ರೇಂಜ್ ವಿಚಾರವಾಗಿ ಹೇಳುವುದಾದರೆ, ಎಥರ್ 450ಎಸ್ ಇ-ಸ್ಕೂಟರ್ 2.9 kWh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 115 km ರೇಂಜ್ ನೀಡುತ್ತದೆ. ಓಲಾ ಎಸ್1 ಏರ್, 3 kWh ಬ್ಯಾಟರಿ ಪ್ಯಾಕ್ ಪಡೆದಿದ್ದು, 125 km ರೇಂಜ್ ಕೊಡುತ್ತದೆ.
ಚಾರ್ಜಿಂಗ್ ವಿಚಾರವಾಗಿ ಮಾತನಾಡುವುದಾದರೆ, ಎಥರ್ 450ಎಸ್ ಇ-ಸ್ಕೂಟರ್ ಬ್ಯಾಟರಿ ಪ್ಯಾಕ್, ಮನೆಯ ವಿದ್ಯುತ್ ಬಳಕೆಯಲ್ಲಿ ಫುಲ್ ಚಾರ್ಜ್ ಆಗಲು 8 ಗಂಟೆ 36 ನಿಮಿಷ ತೆಗೆದುಕೊಳ್ಳುತ್ತದೆ. ಆದರೆ, ಓಲಾ ಎಸ್1 ಏರ್ ಕೇವಲ 5 ಗಂಟೆಯಲ್ಲಿ ಚಾರ್ಜ್ ಆಗಲಿದ್ದು, ಇದನ್ನು ಗಮನಿಸಿದಾಗ ಎಸ್1 ಏರ್ ವೇಗವಾಗಿ ಚಾರ್ಜ್ ಆಗುತ್ತದೆ ಎಂದು ಸುಲಭವಾಗಿ ಹೇಳಬಹುದು.
ಸಸ್ಪೆನ್ಷನ್ ಸೆಟಪ್ ಹಾಗೂ ಬ್ರೇಕಿಂಗ್ ವಿಚಾರವಾಗಿ ಮಾತನಾಡುವುದಾದರೆ, ಓಲಾ ಎಸ್1 ಏರ್ ಫ್ರಂಟ್ ಟೆಲಿಸ್ಕೋಪಿಕ್ ಪೋರ್ಕ್ಸ್ ಹಾಗೂ ರೇರ್ ಟ್ವಿನ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಎರಡು ತುದಿಯಲ್ಲಿ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಎಥರ್ 450ಎಸ್ ಇ-ಸ್ಕೂಟರ್, ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ಸ್, ರೇರ್, ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಪಡೆದಿದ್ದು, ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.
ಇವೆರೆಡು ಸ್ಕೂಟರ್‌ಗಳು ಒಂದೇ ರೀತಿಯ ವೈಶಿಷ್ಟ್ಯವನ್ನು ಪಡೆದಿವೆ. ಬೆಲೆ ವಿಚಾರವಾಗಿ ಹೇಳುವುದಾದರೆ, ಎಥರ್ 450ಎಸ್ ಇ-ಸ್ಕೂಟರ್ ರೂ.1.3 ಲಕ್ಷ ಹಾಗೂ ಓಲಾ ಎಸ್1 ಏರ್ ರೂ.1.1 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಇದು, ಪರಿಚಯಾತ್ಮಕ ಬೆಲೆ ಎಂಬುದನ್ನು ಗಮನಿಸಬೇಕಾಗಿದೆ. ಮುಂಬರುವ ದಿನಗಳಲ್ಲಿ ಇದು ಬದಲಾಗಬಹುದು. ಇವೆರೆಡು ಸ್ಕೂಟರ್ ಗಳಲ್ಲಿ ಯಾವುದು ಉತ್ತಮ ನೀವೇ ಹೇಳಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications