ರೆಡಿಯಾಯ್ತು ದೇಶದ ಮೊದಲ Royal Enfield Electric Bike
ಭಾರತದಲ್ಲಿ ಮುಂಬರುವ ವರ್ಷಗಳಲ್ಲಿ ಎಲೆಕ್ಟ್ರಿಕ್ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡುವುದಾಗಿ ಕಂಪನಿ ಈಗಾಗಲೇ ಘೋಷಿಸಿದೆ. ಆದ್ರೆ ಅದಕ್ಕೆ ತುಂಬಾ ಸಮಯವಿದೆ, ಅಲ್ಲಿಯವರೆಗೆ ಕಾಯಲು ಸಿದ್ಧವಿಲ್ಲದ ರಾಯಲ್ ಎನ್‌ಫೀಲ್ಡ್ ಅಭಿಮಾನಿಯೊಬ್ಬರು ತಮ್ಮ ಹಳೆಯ ಕ್ಲಾಸಿಕ್ ಮಾದರಿಯನ್ನು ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಿದ್ದಾರೆ.
ಬೆಂಗಳೂರು ಮೂಲದ ಬುಲೆಟೀರ್ ಕಸ್ಟಮ್ಸ್ ಈ ಹಳೆಯ ರಾಯಲ್ ಎನ್‌ಫೀಲ್ಡ್ ಬುಲೆಟ್ ಅನ್ನು ಅತ್ಯಾಧುನಿಕ ಎಲೆಕ್ಟ್ರಿಕ್ ವಾಹನವನ್ನಾಗಿ ಮಾರ್ಪಡಿಸಿದೆ. ಈ ಮನಸೆಳೆಯುವ ಬೈಕ್‌ನ ಮಾಲೀಕ ರಿಕಿ, ಈತ ಈ ಎಲೆಕ್ಟ್ರಿಕ್ ಅದ್ಭುತ ರಚನೆಯ ಹಿಂದಿನ ಪ್ರಮುಖ ವ್ಯಕ್ತಿಯಾಗಿದ್ದಾರೆ. 1984 ರ ರಾಯಲ್ ಎನ್‌ಫೀಲ್ಡ್ ಸ್ಟ್ಯಾಂಡರ್ಡ್ ಬೈಕ್ ಈ ಹಿಂದೆ ರಿಕಿ ಅವರ ತಂದೆಯ ಒಡೆತನದಲ್ಲಿತ್ತು.

ಬಳಿಕ ರಿಕಿಯ ಕೈಸೇರಿ ಈಗ ಇದು ಹೊಸ ರೂಪದೊಂದಿಗೆ ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತನೆಗೊಂಡಿದೆ. ಇದಕ್ಕಾದ ವೆಚ್ಚದ ಬಗ್ಗೆ ಕೇಳಿದಾಗ, ಬೆಲೆ ಬ್ಯಾಟರಿ ಗಾತ್ರ ಮತ್ತು ಆಯ್ಕೆಮಾಡಿದ ಮೋಟಾರ್ ಪವರ್ ಮೇಲೆ ಅವಲಂಬಿಸಿರುತ್ತದೆ ಎಂದು ರಿಕಿ ತಿಳಿಸಿದ್ದಾರೆ. ಅಂದಾಜು ವೆಚ್ಚ ರೂ. 3 ಲಕ್ಷದಿಂದ 3.5 ಲಕ್ಷಕ್ಕೂ ಹೆಚ್ಚಾಗಿ ಖರ್ಚಾಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಈ ಬೈಕ್ ಎಲೆಕ್ಟ್ರಿಕ್ ವೈಶಿಷ್ಟ್ಯಗಳ ಜೊತೆಗೆ ಹಲವಾರು ಗಮನಾರ್ಹ ಅಂಶಗಳನ್ನು ಹೊಂದಿದೆ. ಇದು ಸ್ಟೈಲಿಷ್ ಕ್ಲಿಪ್ ಆನ್ ಹ್ಯಾಂಡಲ್‌ಬಾರ್‌ಗಳು, ಕಸ್ಟಮ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಘಟಕ, ಮೆಷಿನ್ ಫಿನಿಷ್ಡ್ ವೀಲ್ಸ್, ಎರಡೂ ತುದಿಗಳಲ್ಲಿ ಸಿಂಗಲ್ ಡಿಸ್ಕ್ ಸೆಟಪ್‌ಗಳು, ಫ್ಯಾಟ್ ಟೈರ್‌ಗಳು ಮತ್ತು ರೌಂಡ್ ಹೆಡ್‌ಲೈಟ್‌ಗಳನ್ನು ಒಳಗೊಂಡಿದೆ.

ಮೂಲ ಚಾಸಿಸ್ ಕೆಳಗೆ ಇದ್ದ ಎಂಜಿನ್ ಜಾಗದಲ್ಲಿ ಈಗ ಸಾಕಷ್ಟು ಬ್ಯಾಟರಿ ಪ್ಯಾಕ್ ಅನ್ನು ನೀಡಲಾಗಿದೆ. ಇಂಧನ ಟ್ಯಾಂಕ್ ಈಗ ಬ್ಯಾಟರಿ ಮತ್ತು ಮೋಟಾರ್ ನಿಯಂತ್ರಕವನ್ನು ಹೊಂದಿದೆ. ಈ ಮೋಟಾರ್‌ಸೈಕಲ್ 5 kW ಹಿಂಭಾಗದ ಹಬ್ ಮೋಟಾರ್ ಕೂಡ ಹೊಂದಿದೆ. ಬ್ಯಾಟರಿಯು ಸಂಪೂರ್ಣವಾಗಿ ಚಾರ್ಜ್ ಆಗಲು ಸುಮಾರು ಆರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಪ್ರತಿ ಚಾರ್ಜ್‌ಗೆ 90 ಕಿ.ಮೀ ರೇಂಜ್ ನೀಡುತ್ತದೆ ಎಂದು ಮಾಲೀಕ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಈ ಬೈಕನ್ನು ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿರುವುದಾಗಿ ರಿಕಿ ಹೇಳಿಕೊಂಡಿದ್ದಾರೆ. ಕ್ರೋಮ್ ಫಿನಿಶ್ ಫಿನ್‌ಗಳೊಂದಿಗೆ ಬೃಹತ್ ಎಂಜಿನ್ ಅನ್ನು ಹೋಲುವ ಕಸ್ಟಮ್ ನಿರ್ಮಿತ ಬ್ಯಾಟರಿ ಕವರ್ ಬೈಕ್‌ನ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ರೈಡಿಂಗ್ ಭಂಗಿಯು ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ 750 ಅನ್ನು ನೆನಪಿಸುತ್ತದೆ.

ಏನೇ ಹೇಳಿ ಈ ಬೈಕ್ ಲುಕ್ ಹಾಗೂ ಡಿಸೈನ್ ಎಂಥವರನ್ನೂ ಸೆಳೆಯುತ್ತದೆ. ಆದ್ರೆ ರಾಯಲ್ ಎನ್‌ಫೀಲ್ಡ್ ಕಟ್ಟಾ ಅಭಿಮಾನಿಗಳು ಮಾತ್ರ ಇದನ್ನು ಒಪ್ಪೋದಿಲ್ಲ. ಏಕೆಂದರೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಎಂಜಿನ್ ಹಾಗೂ ಶಬ್ದಕ್ಕೆ ಮುಖ್ಯವಾಗಿ ಫೆಮಸ್ ಆಗಿವೆ. ಈಗ ಎಲೆಕ್ಟ್ರಿಕ್ ಬೈಕ್‌ನಲ್ಲಿ ಎಕ್ಸಾಸ್ಟ್ ನೋಟ್ ಇರದಿದ್ದರೆ ಅದನ್ನು ಸ್ವೀಕರಿಸುವುದು ತುಸು ಕಷ್ಟವಾಗುತ್ತದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ.


Click it and Unblock the Notifications








