ಎಲ್ಲರೂ ಹುಡುಕುತ್ತಿರುವ ಸುಜುಕಿ ಜಿಕ್ಸರ್ ಸರಣಿ ಬೈಕ್‌ಗಳು ಲಾಂಚ್: ಇಲ್ಲಿದೆ ಮಾಹಿತಿ

ಜಪಾನ್​ನ ಪ್ರಮುಖ ವಾಹನ ತಯಾರಕ ಕಂಪನಿ ಸುಜುಕಿ, ತಯಾರಿಸುವ ದ್ವಿಚಕ್ರ ವಾಹನಗಳನ್ನು ಪ್ರತಿಯೊಬ್ಬರು ಇಷ್ಟಪಟ್ಟು ಖರೀದಿ ಮಾಡುತ್ತಾರೆ. ಅವುಗಳ ಆಕರ್ಷಕ ಲುಕ್ ಹಾಗೂ ಕಾರ್ಯಕ್ಷಮತೆಯನ್ನು ಎಲ್ಲರನ್ನು ಸೆಳೆಯುತ್ತದೆ. ಇದೀಗ, ಕಂಪನಿಯು ನವೀಕರಿಸಿದ ಜಿಕ್ಸರ್ ಸರಣಿ ಬೈಕ್‌ಗಳನ್ನು ಹೊಸ ಬಣ್ಣಗಳ ಆಯ್ಕೆಯಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿದೆ.

ಹೊಚ್ಚ ಹೊಸ ಜಿಕ್ಸರ್ ಸರಣಿ ಮೋಟಾರ್‌ಸೈಕಲ್ಸ್ ಆರಂಭಿಕ ಮಾದರಿಯು ರೂ.1.40 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ (ಎಕ್ಸ್ ಶೋರೂಂ). ಟಾಪ್ ಎಂಡ್ ಮಾದರಿ ಜಿಕ್ಸರ್ ಎಸ್ಎಫ್ 250, ರೂ.2.02 ಲಕ್ಷ ದರವನ್ನು ಹೊಂದಿದೆ. ಸುಜುಕಿ ಕಂಪನಿಯು ಜಿಕ್ಸರ್ ಸರಣಿ ಬೈಕ್‌ಗಳನ್ನು ಅತ್ಯಾಕರ್ಷಕವಾಗಿ ನವೀಕರಿಸಿದ್ದು, ಸಾಕಷ್ಟು ಆಧುನಿಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅಲ್ಲದೆ, ಈ ಬೈಕ್ ರಸ್ತೆಯಲ್ಲಿ ಸಂಚರಿಸುವಾಗ ಎಲ್ಲರೂ ಒಂದು ಕ್ಷಣ ತಿರುಗಿ ನೋಡುವಂತೆ ಕಂಪನಿ ರೆಡಿ ಮಾಡಿದೆ ಎಂದು ಹೇಳಿದ್ದಾರೆ ತಪ್ಪಾಗುವುದಿಲ್ಲ.

ಆಕರ್ಷಕ ಬಣ್ಣದೊಂದಿಗೆ ಸುಜುಕಿ ಜಿಕ್ಸರ್ ಸರಣಿ ಬೈಕ್‌ಗಳು ಬಿಡುಗಡೆ: ಇಲ್ಲಿದೆ ಹೆಚ್ಚಿನ ಮಾಹಿತಿ

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಸುಜುಕಿ, ಜಿಕ್ಸರ್ ಸರಣಿಯ ನಾಲ್ಕು ಮಾದರಿ ಮೋಟಾರ್‌ಸೈಕಲ್ ಗಳನ್ನು ಮಾರಾಟ ಮಾಡುತ್ತಿದೆ. ಅವುಗಳೆಂದರೆ, ಜಿಕ್ಸರ್, ಜಿಕ್ಸರ್ ಎಸ್ಎಫ್, ಜಿಕ್ಸರ್ 250 ಹಾಗೂ ಜಿಕ್ಸರ್ ಎಸ್ಎಫ್ 250. ಇವು ತನ್ನದೇ ಆದ ವಿಶೇಷತೆಯನ್ನು ಹೊಂದಿವೆ. ಇವುಗಳಲ್ಲಿ ಪ್ರಮುಖವಾಗಿ ಜಿಕ್ಸರ್ ಎಸ್ಎಫ್ 250 ಟಾಪ್ ಎಂಡ್ ಮಾದರಿಯಾಗಿದ್ದು, ಯುವ ರೈಡರ್ ಗಳನ್ನು ಆಕರ್ಷಿಸುವ ವೈಶಿಷ್ಟ್ಯಗಳನ್ನು ಪಡೆದಿದೆ. ಇದೀಗ ನವೀಕರಣಗೊಳುವ ಮೂಲಕ ಬಿಡುಗಡೆಯಾಗಿದೆ.

ಸುಜುಕಿ ಮಾರುಕಟ್ಟೆಗೆ ಪರಿಚಯಿಸಿರುವ ಜಿಕ್ಸರ್ ಸರಣಿ ಮೋಟಾರ್‌ಸೈಕಲ್ ಗಳ ಹೊಸ ಬಣ್ಣಗಳ ಆಯ್ಕೆ ಕುರಿತು ಮಾತನಾಡುವುದಾದರೆ,. ಜಿಕ್ಸರ್ 250 ಮೆಟಾಲಿಕ್ ಮ್ಯಾಟ್ ಸ್ಟೆಲ್ಲರ್ ಬ್ಲೂ ಹಾಗೂ ಮೆಟಾಲಿಕ್ ಮ್ಯಾಟ್ ಬ್ಲಾಕ್ ಬಣ್ಣದ ಆಯ್ಕೆಯಲ್ಲಿ ಖರೀದಿಗೆ ದೊರೆತರೆ, ಜಿಕ್ಸರ್ ಎಸ್ಎಫ್ 250, ಮೆಟಾಲಿಕ್ ಸೋನಿಕ್ ಸಿಲ್ವರ್, ಪರ್ಲ್ ಬ್ಲೇಜ್ ಆರೆಂಜ್, ಮೆಟಾಲಿಕ್ ಟ್ರೈಟಾನ್ ಬ್ಲೂ ಮತ್ತು ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ ಬಣ್ಣಗಳಲ್ಲಿ ಸಿಗಲಿದೆ. ಇವು ಹೊಸ ಗ್ರಾಹರನ್ನು ಸೆಳೆಯಲಿದೆ ಎಂಬುದು ಕಂಪನಿಯ ನಂಬಿಕೆಯಾಗಿದೆ.

ಸುಜುಕಿ ಜಿಕ್ಸರ್ ಸರಣಿ ಬೈಕ್‌ಗಳ ವೈಶಿಷ್ಟ್ಯದ ಬಗ್ಗೆ ಹೇಳುವುದಾದರೆ, ಇದು ಬ್ಲೂಟೂತ್ ಕನೆಕ್ಟ್ದ್ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟರ್ನ್ - ಬೈ - ಟರ್ನ್ ನ್ಯಾವಿಗೇಷನ್, ಎಸ್ಟಿಮೇಟೆಡ್ ಟೈಮ್ ಆಫ್ ಅರೈವಲ್ (ಇಟಿಎ), ಇನ್ - ಕಾಮಿಂಗ್ ಕಾಲ್, ಮಿಸ್ಡ್ ಕಾಲ್, ಎಸ್‌ಎಂಎಸ್ ಮತ್ತು ವಾಟ್ಸಾಪ್ ಅಲರ್ಟ್ ಡಿಸ್ಪ್ಲೇ, ಸ್ವೀಡ್, ಫೋನ್ ಬ್ಯಾಟರಿ ಲೆವೆಲ್ ಡಿಸ್ಪ್ಲೇ ಸೇರಿದಂತೆ ಹತ್ತು ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ ಎಂದು ಹೇಳಬಹುದು.

ಆಕರ್ಷಕ ಬಣ್ಣದೊಂದಿಗೆ ಸುಜುಕಿ ಜಿಕ್ಸರ್ ಸರಣಿ ಬೈಕ್‌ಗಳು ಬಿಡುಗಡೆ: ಇಲ್ಲಿದೆ ಹೆಚ್ಚಿನ ಮಾಹಿತಿ

ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ ಸುಜುಕಿ ಜಿಕ್ಸರ್ ಸರಣಿ ಬೈಕ್‌ಗಳ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ತಿಳಿಯುವುದಾದರೆ, ಇದು 155 ಸಿಸಿ, ಸಿಂಗಲ್ - ಸಿಲಿಂಡರ್ ಎಂಜಿನ್ ಹೊಂದಿದ್ದು, 13.4 bhp ಗರಿಷ್ಠ ಪವರ್ ಹಾಗೂ 13.8 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದುಕೊಂಡಿದೆ. 5 - ಸ್ವೀಡ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ ಎಂಜಿನ್ ಕಾರ್ಯಕ್ಷಮತೆ ಅತ್ಯುತ್ತಮವಾಗಿದ್ದು, ರಸ್ತೆಯಲ್ಲಿ ಇದಕ್ಕೆ ಸರಿ-ಸಾಟಿಯೇ ಇಲ್ಲ.

ಜಿಕ್ಸರ್ ಸರಣಿ ಬೈಕ್‌ಗಳ ಲಾಂಚ್ ಬಗ್ಗೆ ಮಾತನಾಡಿರುವ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಸತೋಶಿ ಉಚಿಡಾ, 'ಜಿಕ್ಸರ್ ಬೈಕ್ಸ್ ಭಾರತದ ಮಾರುಕಟ್ಟೆಯಲ್ಲಿ ಹೇರಳವಾಗಿ ಜನಪ್ರಿಯತೆಯನ್ನು ಗಳಿಸಿವೆ. ಅಲ್ಲದೆ, ಈ ಬೈಕ್‌ಗಳು ವಿದೇಶದಲ್ಲೂ ಸಾಕಷ್ಟು ಹೊಸ ಗ್ರಾಹಕರನ್ನು ಆಕರ್ಷಿಸಿದ್ದು, ಅಲ್ಲಿಗೂ ರಫ್ತು ಮಾಡಲಾಗುತ್ತಿದೆ ಜೊತೆಗೆ ಹೊಸ ಬಣ್ಣದ ಆಯ್ಕೆಯಲ್ಲಿ ಜಿಕ್ಸರ್ ಸರಣಿ ಬೈಕ್‌ಗಳನ್ನು ಬಿಡುಗಡೆ ಮಾಡಿರುವುದು ಸಂತೋಷ ತಂದಿದೆ. ಇದನ್ನು ಗ್ರಾಹಕರು ಸ್ವೀಕರಿಸುತ್ತಾರೆ ಎಂದು ನಂಬಿದ್ದೇವೆ' ಎಂದು ಹೇಳಿದ್ದಾರೆ.

ಸುಜುಕಿ ಜಿಕ್ಸರ್ ಸರಣಿ ಬೈಕುಗಳನ್ನು ಹೊಸ ಬಣ್ಣಗಳು ಹಾಗೂ ನವೀನ ವೈಶಿಷ್ಟ್ಯಗಳ ಬಗ್ಗೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವುದು ಗ್ರಾಹಕರಿಗೆ ಎಲ್ಲಿಲ್ಲದ ಖುಷಿ ತಂದಿದೆ. ಈ ಬೈಕ್ ಬಿಡುಗಡೆ ಮೂಲಕ ಪ್ರತಿಸ್ಪರ್ಧಿಗಳಿಗೆ ತೀವ್ರ ಪೈಪೋಟಿ ಒಡ್ಡುವ ಮೂಲಕ ಮತ್ತೆ ಪಾಬಲ್ಯವನ್ನು ಸಾದಿಸಲು ಸುಜುಕಿ ಮುಂದಾಗಿದೆ ಎಂದು ಹೇಳಬಹುದು. ಜೊತೆಗೆ ಬೆಲೆಯೂ ಅಷ್ಟಾಗಿ ದುಬಾರಿ ಇಲ್ಲ. ಕೈಗೆಟುಕುವ ರೀತಿಯಲ್ಲಿ ಇದ್ದು, ಹೊಸ ಖರೀದಿದಾರರನ್ನು ಸೆಳೆಯುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Thursday, February 9, 2023, 8:35 [IST]
English summary
Suzuki gixxer range launched in india details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+