Tata Zeeta Max: ಟಾಟಾದ ಅಗ್ಗದ ಬೆಲೆಯ 'ಸ್ಟ್ರೈಡರ್ ಜೀಟಾ ಮ್ಯಾಕ್ಸ್' ಇ-ಬೈಸಿಕಲ್ ಬಿಡುಗಡೆ, ಫಿದಾ ಆಗುತ್ತೀರಿ!
ಇತ್ತೀಚಿನ ದಿನಗಳಲ್ಲಿ ಬಹುತೇಕರು ಪರಿಸರ ಸ್ನೇಹಿ ವಾಹನಗಳನ್ನು ಹುಡುಕುತ್ತಿದ್ದಾರೆ. ಅಂತಹವರಿಗಾಗಿ ಟಾಟಾ (Tata) ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ಅಂಗಸಂಸ್ಥೆಯಾದ 'ಸ್ಟ್ರೈಡರ್' ಜೀಟಾ ಸರಣಿಯ ಹೊಚ್ಚ ಹೊಸ ಇ-ಬೈಸಿಕಲ್‌ನ್ನು ಬಿಡುಗಡೆಗೊಳಿಸಿದೆ. ಇದು, ಯಾವ ಬೈಕ್‌ಗಳಿಗೂ ಕಮ್ಮಿಯಿಲ್ಲದಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಸ್ಟ್ರೈಡರ್ ಸೈಕಲ್ಸ್ (Stryder Cycles) ತನ್ನ ಎಲೆಕ್ಟ್ರಿಕ್ ಬೈಸಿಕಲ್ ಲೈನ್-ಅಪ್ ಬಲಪಡಿಸಲು ರೂ.29,995 ಪರಿಚಯಾತ್ಮಕ ಬೆಲೆಗೆ ಜೀಟಾ ಮ್ಯಾಕ್ಸ್ (Zeeta Max) ಇ-ಬೈಸಿಕಲ್ ಲಾಂಚ್ ಮಾಡಿದೆ. ಮುಂಬರುವ ದಿನಗಳಲ್ಲಿ ಇದಕ್ಕೆ ರೂ.36,995 ದರವಿಯುತ್ತದೆ. ಈ ಜೀಟಾ ಮ್ಯಾಕ್ಸ್, 36V/ 7.5Ah ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 35 km ತನಕ ಚಲಿಸಬಲ್ಲದು. ಪೆಡಲ್ ಸಹಾಯದಿಂದಲೂ ಓಡಿಸಬಹುದು.

ಇದು, 270 Wh ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವುದರಿಂದ ಯಾವುದೇ ತರಹದ ಹಳ್ಳ - ದಿಣ್ಣೆಯ ರಸ್ತೆಗಳಲ್ಲಿ ಸುಲಭವಾಗಿ ಚಲಿಸಬಲ್ಲದು. ಮುಖ್ಯವಾಗಿ, ಇದನ್ನು ಒಂದು ಕಿಲೋಮೀಟರ್ ಓಡಿಸಲು ಕೇವಲ ರೂ.7 ಪೈಸೆ ಮಾತ್ರ ಖರ್ಚು ಮಾಡಬೇಕು. ಇದರ ಬ್ಯಾಟರಿ ಮನೆಯ ವಿದ್ಯುತ್ ಬಳಕೆಯಲ್ಲಿ ಮೂರರಿಂದ ನಾಲ್ಕು ಗಂಟೆಯಲ್ಲಿ ಚಾರ್ಜ್ ಆಗಿಬಿಡುತ್ತದೆ.
ವಿನ್ಯಾಸ ವಿಚಾರವಾಗಿ ಹೇಳುವುದಾದರೆ, ಜೀಟಾ ಮ್ಯಾಕ್ಸ್ ಇ-ಬೈಸಿಕಲ್ ಅನ್ನು ದೀರ್ಘಕಾಲ ಬಾಳಿಕೆ ಬರುವಂತೆ ಡಿಸೈನ್ ಮಾಡಲಾಗಿದ್ದು, ಸ್ಟೀಲ್ ಹಾರ್ಡ್‌ಟೈಲ್ ಫ್ರೇಮ್ ಹೊಂದಿದೆ. ಜೊತೆಗೆ ಮ್ಯಾಟ್ ಗ್ರೇ ಮತ್ತು ಮ್ಯಾಟ್ ಬ್ಲೂ ಎಂಬ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. 25 km/hr ಟಾಪ್ ಸ್ವೀಡ್ ಪಡೆಯಲಿದ್ದು, ಉಬ್ಬು ತಗ್ಗಿನಿಂದ ಕೂಡಿದ ರಸ್ತೆಯಲ್ಲಿ ಯಾವುದೇ ಅಡಚಣೆ ಇಲ್ಲದೇ ಚಲಿಸಲು ಅತ್ಯುತ್ತಮ ಫ್ರಂಟ್ ಸಸ್ಪೆನ್ಷನ್ ಸೆಟಪ್ ಒಳಗೊಂಡಿದ್ದು, ಆಟೋ-ಕಟ್ ಬ್ರೇಕ್‌ನ್ನು ಹೊಂದಿದೆ.

ಜೀಟಾ ಮ್ಯಾಕ್ಸ್ ಇ-ಬೈಸಿಕಲ್ ಬೆಲೆಗೆ ತಕ್ಕಂತೆ ಅತ್ಯಾಧುನಿಕ ವೈಶಿಷ್ಟ್ಯವನ್ನು ಹೊಂದಿದೆ. ಪ್ರಮುಖವಾಗಿ, LCD ಡಿಸ್ಪ್ಲೇಯಿದೆ. ಇಲ್ಲಿ, ಬ್ಯಾಟರಿ ಲೆವೆಲ್, ಓಡೋಮೀಟರ್ ಸೇರಿದಂತೆ ಹೆಚ್ಚಿನ ಮಾಹಿತಿ ದೊರೆಯುತ್ತದೆ. ಇದು, ಕಳೆದ ತಿಂಗಳು ಬಿಡುಗಡೆಯಾಗಿದ್ದ ಜೀಟಾ ಪ್ಲಸ್ ಇ-ಬೈಸಿಕಲ್ 'ಉತ್ತರಾಧಿಕಾರಿ' ಎಂದೇ ಬಿಂಬಿಸಲಾಗಿದೆ. ಐದು ರೈಡಿಂಗ್ ಮೋಡ್ ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಾಗಿದೆ.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ದೊರೆಯುವ ಜೀಟಾ ಪ್ಲಸ್ ಇ-ಬೈಸಿಕಲ್ ಬಗ್ಗೆ ಮಾತನಾಡೋಣ. ಇದು, ರೂ.26,995 ಆಫರ್ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪೆಡಲ್ ಆಯ್ಕೆಯೊಂದಿಗೆ 6-volt/6 Ah ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದ್ದು, 216 Wh ಪವರ್ ಉತ್ಪಾದಿಸುತ್ತದೆ. 25 kmph ಟಾಪ್ ಸ್ವೀಡ್ ಹೊಂದಿದ್ದು, ಫುಲ್ ಚಾರ್ಜಿನಲ್ಲಿ 30 km ವರೆಗೆ ಚಲಿಸಬಲ್ಲದು.
ಈ ಜೀಟಾ ಪ್ಲಸ್ ಇ-ಬೈಸಿಕಲ್ ನಗರ ಪ್ರದೇಶದ ಸಂಚಾರಕ್ಕೆ ಹೇಳಿ ಮಾಡಿದ ರೀತಿಯಲಿದ್ದು, ಇದರ ಬ್ಯಾಟರಿ ಪ್ಯಾಕ್ ಗೃಹ ವಿದ್ಯುತ್ ಬಳಕೆಯಲ್ಲಿ ಮೂರರಿಂದ ನಾಲ್ಕು ಗಂಟೆ ಚಾರ್ಜ್ ಆಗುತ್ತದೆ. ಇದು ಕೂಡ ಸುರಕ್ಷತೆಯ ದೃಷ್ಟಿಯಿಂದ ಆಟೋ-ಕಟ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಇದರಲ್ಲಿ ನೀವು ಒಂದು ಕಿಲೋಮೀಟರ್ ಕ್ರಮಿಸಲು ರೂ.10 ಪೈಸೆಯನ್ನು ಖರ್ಚು ಮಾಡಬೇಕು.
ಇನ್ನು, ಟಾಟಾ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ಅಂಗಸಂಸ್ಥೆಯಾದ 'ಸ್ಟ್ರೈಡರ್' ಜೀಟಾ ಸರಣಿಯ ಇ-ಬೈಸಿಕಲ್ ಬಿಡುಗಡೆಗೊಳಿಸುವ ಮೂಲಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಸರಿಯಾಗಿಯೇ ಪೈಪೋಟಿ ನೀಡುತ್ತಿದೆ ಎಂದು ಹೇಳಬಹುದು. ಇವು ಪರಿಸರ ಸ್ನೇಹಿಯಾಗಿದ್ದು, ಎಂತಹ ರಸ್ತೆಗಳಲ್ಲೂ ಸುಲಭವಾಗಿ ಚಲಿಸುವ ಸಾಮರ್ಥ್ಯ ಹೊಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ದೇಶೀಯ ಗ್ರಾಹಕರು ಮುಂಬರುವ ದಿನಗಳಲ್ಲಿ ಖರೀದಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications