ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್‌ಗಳಿವು!

ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೊಸ ಕಂಪನಿಗಳು ಸೇರಿದಂತೆ ದೈತ್ಯ ಕಂಪನಿಗಳು ಕೂಡ ತಮ್ಮ ಹೊಸ ಮಾದರಿಗಳನ್ನು ಪೈಪೋಟಿಯೊಂದಿಗೆ ಬಿಡುಗಡೆ ಮಾಡುತ್ತವೆ. ಗ್ರಾಹಕರು ಕೂಡ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದು, ಮಾರಾಟದಲ್ಲಿ ಗಣನೀಯ ಏರಿಕೆ ಕಾಣುತ್ತಿವೆ. ಸದ್ಯ ದೇಶದ ಬಹುತೇಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಗಳು ತಮ್ಮ ಮಾರಾಟ ವರದಿಗಳನ್ನು ಬಿಡುಗಡೆ ಮಾಡಿವೆ.

ಕಳೆದ ತಿಂಗಳು, ಓಲಾ ಎಲೆಕ್ಟ್ರಿಕ್ ಮತ್ತೊಮ್ಮೆ ದೇಶದಲ್ಲಿ ಹೆಚ್ಚಿನ ಸ್ಕೂಟರ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಓಲಾ ಅಧಿಕೃತ ಮಾರಾಟ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲವಾದರೂ, ವರದಿಗಳ ಪ್ರಕಾರ, ಕಂಪನಿಯು ಜನವರಿ ತಿಂಗಳಲ್ಲಿ 18,270 ಯೂನಿಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಈ ಅಂಕಿ ಅಂಶದೊಂದಿಗೆ, ಕಂಪನಿಯು ಸತತ ಮೂರನೇ ತಿಂಗಳಿಗೂ ಅಗ್ರಸ್ಥಾನದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಹೊಸ ಉತ್ಪನ್ನಗಳನ್ನು ಪರಿಚಯಿಸಲು ಪ್ರೋತ್ಸಾಹ ನೀಡುವಂತಾಗಿದೆ.

ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್‌ಗಳಿವು!

ಓಲಾ ಎಲೆಕ್ಟ್ರಿಕ್‌ನ ಅಧಿಕೃತ ಅಂಕಿಅಂಶಗಳ ಪ್ರಕಾರ, ಕಂಪನಿಯು ಕಳೆದ ವರ್ಷ ಡಿಸೆಂಬರ್‌ನಲ್ಲಿ 25,000 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಅದರಂತೆ, ಜನವರಿ 2023 ರಲ್ಲಿ ಸ್ಕೂಟರ್‌ಗಳ ಮಾರಾಟದಲ್ಲಿ 6,730 ಯುನಿಟ್‌ಗಳ ಇಳಿಕೆ ಕಂಡುಬಂದಿದೆ. ಇದರ ಹೊರತಾಗಿಯೂ, ಓಲಾ ಮಾರಾಟದಲ್ಲಿ ಇತರ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಗಳಿಗಿಂತ ಮುಂದಿದೆ. ಓಲಾ ಸದ್ಯ ಎಲೆಕ್ಟ್ರಿಕ್ ಬೈಕ್ ಹಾಗೂ ಕಾರಿನ ತಯಾರಿಯಲ್ಲಿ ತೊಡಗಿಸಿಕೊಂಡಿದೆ. ಶೀಘ್ರದಲ್ಲೇ ಈ ಬಗ್ಗೆ ಮಾಹಿತಿ ಹೊರಬರಲಿದೆ.

ಸಾಮಾನ್ಯ ಐಸಿಇ ಎಂಜಿನ್‌ ವಾಹನಗಳಲ್ಲದೇ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲೂ ಟಿವಿಎಸ್ ಉತ್ತಮ ಮಾರಾಟವನ್ನು ದಾಖಲಿಸುತ್ತಿದೆ. ಬರೋಬ್ಬರಿ ತನ್ನ 10,378 ಯುನಿಟ್‌ಗಳ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟವನ್ನು ನೋಂದಾಯಿಸಿದೆ. ಈ ಮೂಲಕ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಹಾಗೆಯೇ ಮೂರನೇ ಸ್ಥಾನದಲ್ಲಿ ಹೀರೋ ಮೋಟೋಕಾರ್ಪ್ ಬೆಂಬಲಿತ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಅಥರ್ ಎನರ್ಜಿ ಒಟ್ಟು 9,187 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿ ಮೂರನೇ ಸ್ಥಾನವನ್ನು ಪಡೆದಿದೆ.

ಹೊಸ ಕಂಪನಿಯಾದ ಒಕಿನಾವಾ ಬಗ್ಗೆ ಮಾತನಾಡುವುದಾದರೆ ಕಂಪನಿಯು 6,457 ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ನಂತರ ಆಂಪಿಯರ್ 4,424 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿ ಈ ಬಾರಿ ತನ್ನ ಮಾರಾಟ ಅಂಕಿ ಅಂಶಗಳನ್ನು ಹೆಚ್ಚಿಸಿಕೊಂಡಿದೆ. ಇದಾದ ಬಳಿಕ ಬಜಾಜ್ ತನ್ನ 2,606 ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇನ್ನು ಕೈನೆಟಿಕ್ ಬಗ್ಗೆ ಹೇಳುವುದಾದರೆ ಕಂಪನಿಯು 1,336 ಇ-ಸ್ಕೂಟರ್‌ಗಳ ಮಾರಾಟವನ್ನು ನೋಂದಾಯಿಸಿದೆ.

ಪಟ್ಟಿಯ ಕೆಳಭಾಗದಲ್ಲಿ ಒಕಾಯಾ ಮತ್ತು ಪ್ಯೂರ್ ಇವಿ ಕಂಪನಿಗಳು ಕ್ರಮವಾಗಿ 1,293 ಮತ್ತು 726 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿವೆ. ಎಲೆಕ್ಟ್ರಿಕ್ ಬೈಕ್‌ಗಳ ಕುರಿತು ಮಾತನಾಡುವುದಾದರೆ, ರಿವೋಲ್ಟ್ ಮೋಟಾರ್ಸ್ ಕಳೆದ ತಿಂಗಳು ಕೇವಲ 14 ಇ-ಬೈಕ್‌ಗಳನ್ನು ಮಾತ್ರ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ, ಟಾರ್ಕ್ ಮೋಟಾರ್ಸ್ ತನ್ನ ಎಲೆಕ್ಟ್ರಿಕ್ ಬೈಕ್‌ಗಳ 64 ಯುನಿಟ್‌ಗಳ ಮಾರಾಟವನ್ನು ನೋಂದಾಯಿಸಿದೆ. ಮುಂದಿನ ದಿನಗಳಲ್ಲಿ ಈ ಅಂಕಿ ಅಂಶಗಳು ಹೆಚ್ಚಾಗುವ ನಿರೀಕ್ಷೆಯಿದೆ.

ಇವು ಸದ್ಯ ಭಾರತದಲ್ಲಿ ಗ್ರಾಹಕರಿಂದ ಉತ್ತಮ ಪ್ರತಯಿಕ್ರಿಯೆ ಪಡೆದಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳು. ಈ ವರ್ಷದ ಆರಂಭದಲ್ಲಿ ನಡೆ ಆಟೋ ಎಕ್ಸ್‌ಪೋದಲ್ಲಿ ಹಲವು ಕಂಪನಿಗಳು ತಮ್ಮ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪ್ರದರ್ಶಿಸಿದ್ದವು. ಇವು ಕೂಡ ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಪೈಪೋಟಿ ಹೆಚ್ಚಾಗಲಿದೆ. ಅಲ್ಲದೇ ಐಸಿಇ ಸ್ಕೂಟರ್‌ಗಳಷ್ಟೇ ಬೇಡಿಕೆ ಪಡೆದುಕೊಳ್ಳುವ ನಿರೀಕ್ಷೆಗಳು ಸಹ ಹೆಚ್ಚಾಗಿವೆ. ಓಲಾ, ಎಥರ್ ಕಂಪನಿಗಳು ತಮ್ಮ ನವೀಕೃತ ಮಾದರಿಗಳನ್ನು ಹಾಗೂ ಹೊಸ ಮಾದರಿಗಳನ್ನು ಶೀಘ್ರದಲ್ಲೇ ಹೊರತರಲಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
The best selling electric scooters last January 2023
Story first published: Friday, February 3, 2023, 19:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X