Just In
- 1 hr ago
6 ಏರ್ಬ್ಯಾಗ್ ಜೊತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಟಾಪ್ 5 ಕಾರುಗಳು
- 1 hr ago
ಎಲೆಕ್ಟ್ರಿಕ್ ಬಳಿಕ ಸಿಎನ್ಜಿ ಕಾರುಗಳ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ
- 1 hr ago
ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV700 ಟೀಸರ್ ಬಿಡುಗಡೆ... ಫೆ.10 ರಂದು BE ಸರಣಿ SUV ಗಳ ಪ್ರದರ್ಶನ
- 2 hrs ago
ಭಾರತದಲ್ಲಿ ಬಿಡುಗಡೆಯಾಗಲಿವೆ ಹೋಂಡಾದ 3 ಕಾರುಗಳು: ಇವು ಬಂದ್ರೆ...!
Don't Miss!
- Movies
ಕಿಚ್ಚ ಒಪ್ಪಿಲ್ಲ.. ಓಂ ಪ್ರಕಾಶ್ ರಾವ್ ಕೇಳಿಲ್ಲ? 'ಬಾಜಿಗರ್' ರಿಮೇಕ್ ಮಿಸ್ ಆಗಿದ್ದೆಲ್ಲಿ?
- News
ರಾಯಚೂರು: ಶಿವರಾಜ್ ಪಾಟೀಲ್ ಪ್ರಾಬಲ್ಯ ಕೊನೆಗೊಳಿಸಲು ವಿಪಕ್ಷಗಳ ತಂತ್ರ
- Sports
ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ 2007ರ ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ
- Technology
ಹರಾಜಿನಲ್ಲಿರುವ ಈ ಹಳೆಯ ಐಫೋನ್ ಬೆಲೆ ಅರ್ಧಕೋಟಿ ದಾಟಿದ್ರೂ ಅಚ್ಚರಿಯಿಲ್ಲ!
- Finance
ಅಮುಲ್ ಹಾಲಿನ ದರ ಮತ್ತೆ 3 ರೂ ಏರಿಕೆ, ನೂತನ ದರ ಪರಿಶೀಲಿಸಿ
- Lifestyle
Maha Shivratri 2023 : ಮಹಾಶಿವರಾತ್ರಿ ದಿನಾಂಕ, ಪೂಜಾ ಮುಹೂರ್ತ, ಮಹತ್ವ, ಆಚರಣೆ ಹಿನ್ನೆಲೆ ಏನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತದಲ್ಲಿ ಈ ತಿಂಗಳು ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಹೊಸ ಬೈಕ್, ಸ್ಕೂಟರ್‌ಗಳು
ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಗೆ ಈ ತಿಂಗಳು ಪ್ರತಿಷ್ಠಿತ ಕಂಪನಿಗಳ ಹೊಸ ಬೈಕ್, ಸ್ಕೂಟರ್‌ಗಳು ಬಿಡುಗಡೆಯಾಗಲಿವೆ. ಇವುಗಳಲ್ಲಿ ಎಲೆಕ್ಟ್ರಿಕ್ ವಾಹನಗಳು (EV) ಸೇರಿದ್ದು, ಭಾರತದ ಖರೀದಿದಾರರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇಲ್ಲಿ ಲಾಂಚ್ ಆಗಲಿರುವ ಐದು ಬ್ರ್ಯಾಂಡ್ ನ್ಯೂ ಬೈಕ್, ಸ್ಕೂಟರ್‌ಗಳ ಬಗ್ಗೆ ತಿಳಿಸಿಕೊಡಲಾಗಿದೆ.
ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650:
ಈ ತಿಂಗಳು ಬಿಡುಗಡೆಯಲಿರುವ ಪ್ರಮುಖ ಬೈಕುಗಳಲ್ಲಿ ರಾಯಲ್ ಎನ್‌ಫೀಲ್ಡ್ ಸೂಪರ್ ಮೆಟಿಯರ್ 650 ಒಂದಾಗಿದೆ. ರಾಯಲ್ ಎನ್‌ಫೀಲ್ಡ್ ಅತ್ಯಾಕರ್ಷಕ ಹೊಸ ಸೂಪರ್ ಮೀಟಿಯರ್ 650ಯನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಇಟಲಿಯ ಮಿಲನ್‌ನಲ್ಲಿ EICMAನಲ್ಲಿ ಅಧಿಕೃತವಾಗಿ ಪ್ರದರ್ಶಿಸಲಾಯಿತು. ನಂತರ ರೈಡರ್ ಮೇನಿಯಾದಲ್ಲಿ ಭಾರತಕ್ಕೆ ಪ್ರವೇಶಿಸಿತು. ರಾಯಲ್ ಎನ್‌ಫೀಲ್ಡ್ ಕಂಪನಿಯು 648 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಬಳಸಿರುವ ಮೂರನೇ ಮೋಟಾರ್‌ಸೈಕಲ್ ಈ ಸೂಪರ್ ಮೀಟಿಯರ್ ಆಗಿದೆ.
ಸೂಪರ್ ಮೀಟಿಯರ್ 650 ಶೋವಾ ಅಪ್‌ಸೈಡ್-ಡೌನ್ ಫೋರ್ಕ್ಸ್, ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಅಲ್ಯೂಮಿನಿಯಂ ಭಾಗಗಳಂತಹ ನವೀಕರಿಸಿದ ಸಾಧನಗಳನ್ನು ಹೊಂದಿದ್ದು, ಸುಮಾರು 3.5 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಬಹುದು. 648 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್, 2,500 rpmನಲ್ಲಿ 80 ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಇದರ ಮೋಟಾರ್ 7,250 rpmನಲ್ಲಿ 47bhp ಗರಿಷ್ಠ ಪವರ್ ಮತ್ತು 5,650 rpmನಲ್ಲಿ 52 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಬಹುದು.
ನವೀಕರಿಸಿದ ಎಥರ್ 450X:
ಇತ್ತೀಚೆಗಷ್ಟೇ ಈ ಸ್ಕೂಟರ್‌ಗೆ ಅಪ್‌ಡೇಟ್ ಮಾಡಲಾಗಿದ್ದರೂ, ಈ ತಿಂಗಳು ಮತ್ತೊಂದು ನವೀಕರಣ ಪಡೆಯಲಿದೆ. ಪ್ರಸ್ತುತಿ ಸೋರಿಕೆಯಾಗಿರುವ ಮಾಹಿತಿ ಆಧರಿಸಿ, ಈ ಎಥರ್ 450X ಸ್ಕೂಟರ್ ನಾಲ್ಕು ಹೊಸ ಬಣ್ಣದ ಆಯ್ಕೆಗಳನ್ನು ಪಡೆಯಲಿದೆ. ಜೊತೆಗೆ ಪರಿಷ್ಕೃತ ಸೀಟ್ ಮೊದಲಿಗಿಂತ ಹೆಚ್ಚು ಸ್ಥಳಾವಕಾಶವನ್ನು ಹೊಂದಿರಲಿದೆ. ಸದ್ಯ ಲೀಕ್ ಆಗಿರುವ ಬಣ್ಣಗಳ ವಿವರವನ್ನು ನೋಡುವುದಾದರೆ, ಕಾಸ್ಮಿಕ್ ಬ್ಲಾಕ್, ಲೂನಾರ್ ಗ್ರೇ, ಸಾಲ್ಟ್ ಗ್ರೀನ್ ಮತ್ತು ರೆಡ್. ಇವುಗಳು 450X ಜೊತೆಗೆ ಆಫರ್‌ನಲ್ಲಿರುವ ವೈಟ್, ಸ್ಪೇಸ್ ಗ್ರೇ ಹಾಗೂ ಮಿಂಟ್ ಗ್ರೀನ್‌ಗಿಂತ ಭಿನ್ನವಾಗಿವೆ.
ಈ ಸ್ಕೂಟರ್ ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, ಮೊದಲಿನಂತೆಯೇ ಮುಂದುವರಿಯಲಿದೆ. ಎಥರ್ 450X Gen 3, 3.66 kWh ಬ್ಯಾಟರಿ ಪ್ಯಾಕ್ ಹೊಂದಿದೆ. ಇದು ಎಥರ್ 450X Gen 2ನ 2.23 kWh ಬ್ಯಾಟರಿ ಪ್ಯಾಕ್‌ಗಿಂತ 1.33 kWh ದೊಡ್ಡದಾಗಿದೆ. Gen 3, 3-ಹಂತದ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟಾರ್ ಹೊಂದಿದ್ದು, ಇದು 450X Gen 2ಗಿಂತ 1 kW ಹೆಚ್ಚು ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಸದ್ಯ ಎಥರ್ 450X ರೂ.1,31,606 ಆರಂಭಿಕ ಬೆಲೆಯನ್ನು ಹೊಂದಿದೆ.
ನೂತನ ಟಾರ್ಕ್ ಕ್ರಾಟೋಸ್:
ಟಾರ್ಕ್ ಕಂಪನಿ ಭಾರತದ ಮಾರುಕಟ್ಟೆಗೆ ಕ್ರಾಟೋಸ್ ಬೈಕ್ ಬಿಡುಗಡೆ ಮಾಡಲು ಬಹಳಷ್ಟು ಸಮಯ ತೆಗೆದುಕೊಂಡಿತು. ಇದೀಗ ಅಧಿಕೃತವಾಗಿ ಗ್ರಾಹಕರಿಗೆ ಖರೀದಿಗೆ ಸಿಕ್ಕು ಒಂದು ವರ್ಷವಾಗಿದೆ. ಈಗಾಗಲೇ ಕ್ರಾಟೋಸ್ ಬೈಕ್ ಅನ್ನು ನವೀಕರಿಸಲಾಗುತ್ತಿದೆ. ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ನವೀಕರಿಸಿದ ಕ್ರ್ಯಾಟೋಸ್ ಬೈಕ್ ನೋಡಲು ಕಾಣಸಿಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಅಲ್ಲೇ ಕಾಸ್ಮೆಟಿಕ್ ಟ್ವೀಕ್‌ಗಳು ಅಥವಾ ಯಾಂತ್ರಿಕ ಬದಲಾವಣೆ ಜೊತೆಗೆ ಬೆಲೆ ಪರಿಷ್ಕರಣೆ ಸಂಬಂಧ ಹೆಚ್ಚಿನ ಮಾಹಿತಿ ದೊರೆಯಲಿದೆ.
ಸದ್ಯ ಮಾರುಕಟ್ಟೆಯಲ್ಲಿರುವ ಕ್ರಾಟೋಸ್ 4 kWh ಲಿಥಿಯಂ-ಐಯಾನ್ ಬ್ಯಾಟರಿಯಿಂದ ಚಾಲಿತವಾಗಲಿದ್ದು, ಇದು 10 bhp ಗರಿಷ್ಠ ಪವರ್ ಮತ್ತು 28 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಸಂಪೂರ್ಣ ಚಾರ್ಜ್ ಮಾಡಿದರೆ ಗರಿಷ್ಠ 120 ಕಿ.ಮೀ ಮೈಲೇಜ್ ನೀಡುತ್ತದೆ. ಕ್ರಾಟೋಸ್ ಆರ್ 9kW ಎಲೆಕ್ಟ್ರಿಕ್ ಮೋಟಾರ್ ಹೊಂದಿದ್ದು, 12 bhp ಗರಿಷ್ಠ ಪವರ್ ಮತ್ತು 38 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 105 ಕಿ.ಮೀ ಇದ್ದು, ಈ ಬೈಕ್ ವೇಗದ ಚಾರ್ಜಿಂಗ್ ಆಯ್ಕೆಯಲ್ಲಿ ಕೇವಲ 60 ನಿಮಿಷಗಳಲ್ಲಿ ಶೇಕಡ 80ರಷ್ಟು ಪೂರ್ತಿ ಚಾರ್ಜ್ ಆಗಲಿದೆ.
ಮ್ಯಾಟರ್ ಎನರ್ಜಿ ಇ-ಬೈಕ್:
ಮ್ಯಾಟರ್ ಎನರ್ಜಿ ಇತ್ತೀಚೆಗೆ ತನ್ನ ಚೊಚ್ಚಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನಾವರಣಗೊಳಿಸಿತ್ತು. ದೆಹಲಿಯಲ್ಲಿ ನಡೆಯಲಿರುವ ಬಹುನಿರಿಕ್ಷಿತ ಆಟೋ ಎಕ್ಸ್‌ಪೋದಲ್ಲಿ ಬೈಕಿನ ಹೆಸರು ಮತ್ತು ಬೆಲೆಯನ್ನು ಘೋಷಿಸುವ ನಿರೀಕ್ಷೆಯಿದೆ. 10.5kW ಮೋಟಾರ್‌ನಿಂದ ಚಾಲನೆಗೊಳ್ಳುವ ಮ್ಯಾಟರ್ ಇ-ಬೈಕ್, 4-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಒಳಗೊಂಡಿದ್ದು, 5.0kWh ಲಿಕ್ವಿಡ್-ಕೂಲ್ಡ್ ಬ್ಯಾಟರಿ ಪ್ಯಾಕ್ ಹೊಂದಿದೆ. ಇದು ಬರೋಬ್ಬರಿ 125 - 150km ರೇಂಜ್ ನೀಡಲಿದೆ. ಇದು ಗ್ರಾಹಕರಿಗೆ ಇಷ್ಟವಾಗಬಹುದು.
ಎಂಬಿಪಿ ಎಂ502ಎನ್:
ಇಟಾಲಿಯನ್ ಬ್ರ್ಯಾಂಡ್ Moto Bologna Passione (ಎಂಬಿಪಿ) ಇದೀಗ ಚೀನಾದ ಮಾಲೀಕತ್ವದಲ್ಲಿದೆ. ಆಟೋ ಎಕ್ಸ್‌ಪೋದಲ್ಲಿ ತನ್ನ ಮೊದಲ ಮೊದಲ ಬೈಕ್ M502N ಅನಾವರಣಗೊಳಿಸಲಿದೆ. ಇದು ಲಿಕ್ವಿಡ್-ಕೂಲ್ಡ್, 486 ಸಿಸಿ, ಪ್ಯಾರಲಲ್-ಟ್ವಿನ್ ಎಂಜಿನ್‌ನಿಂದ ಚಾಲಿತವಾಗಲಿದ್ದು, 8,500 rpm ನಲ್ಲಿ 51 hp ಗರಿಷ್ಠ ಪವರ್ ಮತ್ತು 6,750 rpm ನಲ್ಲಿ 45 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ.