TVS - Hero - Honda: ಟಾಪ್ 5 ಅತ್ಯಂತ ಕೈಗೆಟುಕುವ ಬೆಲೆಯ ಪೆಟ್ರೋಲ್ ಸ್ಕೂಟರ್‌ಗಳಿವು
ಭಾರತದಲ್ಲಿ ಮಧ್ಯಮ ವರ್ಗದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಾರೆ. ಅವರಿಗೆ ದಿನನಿತ್ಯ ದೂರದ ಸ್ಥಳಗಳಿಗೆ ಕೆಲಸಕ್ಕೆ ತೆರಳಲು ದ್ವಿಚಕ್ರ ವಾಹನಗಳು ಅಗತ್ಯ. ಬಹುತೇಕ ಸ್ಕೂಟರ್, ಬೈಕ್ ಬೆಲೆ ಒಂದು ಲಕ್ಷಕ್ಕಿಂತ ಹೆಚ್ಚಿದೆ. ಇಲ್ಲಿ ಅದಕ್ಕಿಂದ ಕಡಿಮೆ ಬೆಲೆಗೆ ಖರೀದಿಗೆ ಸಿಗುವ ಹೀರೋ, ಹೋಂಡಾ, ಟಿವಿಎಸ್ ಸ್ಕೂಟರ್ ಬಗ್ಗೆ ತಿಳಿಯೋಣ.
ಮೊದಲಿಗೆ ಹೀರೋ ಡೆಸ್ಟಿನಿ 125 ಪ್ರೈಮ್ (Hero Destini 125 Prime) ಸ್ಕೂಟರ್ ಬಗ್ಗೆ ಮಾತನಾಡೋಣ. ಇದು, ರೂ.71,499 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ದೊರೆಯಲಿದ್ದು, ಇದರ 124.6 ಸಿಸಿ, ಏರ್ ಕೊಲ್ಡ್ ಎಂಜಿನ್, 9 bhp ಗರಿಷ್ಠ ಪವರ್ ಹಾಗೂ 10.36 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯ ಹೊಂದಿದೆ. ಸರಿ ಸುಮಾರು 45 kmpl ಮೈಲೇಜ್ ನೀಡಬಹುದು.

ಹೀರೋ ಡೆಸ್ಟಿನಿ 125 ಪ್ರೈಮ್ ಸ್ಕೂಟರ್ ಪಡೆದುಕೊಂಡಿರುವ ವೈಶಿಷ್ಟ್ಯಗಳ ಬಗ್ಗೆ ತಿಳಿಯುವುದಾದರೆ, ಬಾಡಿ ಕಲರ್ ಮಿರರ್, ಸಿಂಗಲ್ ಪೀಸ್ ಗ್ರಾಬ್ ರೈಲ್, ಸಿಂಗಲ್ ಟೋನ್ ಸೀಟ್, ಆಟೋ ಸ್ಟಾರ್ಟ್/ ಸ್ಟಾಪ್ ಹಾಗೂ ಸೆಮಿ ಡಿಜಿಟಲ್ ಕನ್ಸೋಲ್ ಹೊಂದಿದೆ. ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ಸ್, ರೇರ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಒಳಗೊಂಡಿದೆ. ಜೊತೆಗೆ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.
ಹೋಂಡಾ ಡಿಯೋ 125 (Honda Dio 125) ಸ್ಟ್ಯಾಂಡರ್ಡ್ ವೇರಿಯೆಂಟ್ ರೂ.83,400 ಮತ್ತು ಸ್ಮಾರ್ಟ್ ವೇರಿಯೆಂಟ್ ರೂ. 91,300 ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಇದು, ಎಮಿಷನ್ ಮಾನದಂಡಗಳ ಅನ್ವಯ ಮೇಲ್ದರ್ಜೆಗೇರಿಸಿರುವ 125 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದು, 8.3hp ಗರಿಷ್ಠ ಪವರ್ ಹಾಗೂ 10.4 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಈ ಸ್ಕೂಟರ್, ಸ್ಟಾರ್ಟ್/ ಸ್ಟಾಪ್ ಸಿಸ್ಟಮ್, ಸೈಲೆಂಟ್ ಸ್ಟಾರ್ಟರ್, ಡಿಜಿಟಲ್ ಡ್ಯಾಶ್ ಮತ್ತು ಎಲ್‌ಇಡಿ ಹೆಡ್‌ಲೈಟ್, ಸೈಡ್ - ಸ್ಟ್ಯಾಂಡ್ ಇಂಡಿಕೇಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಫ್ರಂಟ್ ಡಿಸ್ಕ್, ರೇರ್ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದ್ದು, ಅಲಾಯ್ ವೀಲ್ಸ್ ನೊಂದಿಗೆ 12/10 ಇಂಚಿನ ಟೈಯರ್ಸ್ ಒಳಗೊಂಡಿದೆ.
ಹೀರೋ ಕ್ಸೂಮ್ 110 (Hero Xoom 110) ಭಾರತದ ಮಾರುಕಟ್ಟೆಯಲ್ಲಿ ರೂಪಾಂತರಗಳಿಗೆ ಅನುಗುಣವಾಗಿ ರೂ.70,184 ದಿಂದ ರೂ.78,517 ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಇದು, 110 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8.05 bhp ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದ್ದು, i3S ಐಡಲ್ ಸ್ಟಾರ್ಟ್ - ಸ್ಟಾಪ್ ತಂತ್ರಜ್ಞಾನದೊಂದಿಗೆ ಗ್ರಾಹಕರಿಗೆ ಸಿಗಲಿದೆ.

ಈ ಸ್ಕೂಟರ್, ಪೋಲೆಸ್ಟಾರ್ ಬ್ಲೂ, ಸ್ಪೋರ್ಟ್ಸ್ ರೆಡ್, ಮ್ಯಾಟ್ ಅಬ್ರಾಕ್ಸ್ ಆರೆಂಜ್, ಪರ್ಲ್ ಸಿಲ್ವರ್ ವೈಟ್ ಮತ್ತು ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದ್ದು, ಡಿಜಿಟಲ್ ಇನ್ಸ್ರುಮೆಂಟಲ್ ಕ್ಲಸ್ಟರ್, USB ಚಾರ್ಜಿಂಗ್ ಪೋರ್ಟ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಫ್ರಂಟ್ ಸ್ಪೋರ್ಟ್ಸ್ ಟೆಲಿಸ್ಕೋಪಿಕ್ ಫೋರ್ಕ್ಸ್, ರೇರ್ ಮೊನೊಶಾಕ್ ಸೆಟಪ್ ಪಡೆದಿದ್ದು, ಡ್ರಮ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ.
ಹೀರೋ ಪ್ಲೆಷರ್ ಪ್ಲಸ್ (Hero Pleasure Plus) ರೂ.72,258 ದಿಂದ ರೂ.84,558 ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. ಇದು, 110.9 ಸಿಸಿ ಎಂಜಿನ್ ಹೊಂದಿದ್ದು, 8 PS ಗರಿಷ್ಠ ಪವರ್ ಹಾಗೂ 8.70 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಐಡಲ್ ಸ್ಟಾರ್ಟ್ - ಸ್ಟಾಪ್ ಸಿಸ್ಟಮ್ ಹೊಂದಿದೆ. ಜೊತೆಗೆ ಫ್ರಂಟ್ ಹಾಗೂ ರೇರ್ 130 ಎಂಎಂ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.
ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ (TVS Scooty Pep Plus) ರೂ.80,643 ಆನ್ - ರೋಡ್ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. 87.8 ಸಿಸಿ, ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 5.36 bhp ಗರಿಷ್ಠ ಪವರ್ ಉತ್ಪಾದಿಸುತ್ತದೆ. 50 kmpl ಮೈಲೇಜ್ ನೀಡುತ್ತದೆ. 4.2 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಪಡೆದಿದೆ.


Click it and Unblock the Notifications