ಭಾರತದಲ್ಲಿ ಸಿಗುವ ಕಡಿಮೆ ಬೆಲೆಯ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳು: 70 ಸಾವಿರದಿಂದ ಆರಂಭ
ದೇಶೀಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್‌ಗಳು ಭಾರೀ ಜನಪ್ರಿಯತೆಯನ್ನು ಗಳಿಸುತ್ತಿವೆ. ಪ್ರಸ್ತುತ ಹೈ ಸ್ಪೀಡ್‌ನಿಂದ ಕಡಿಮೆ ವೇಗದ ಸ್ಕೂಟರ್‌ಗಳು ಖರೀದಿಗೆ ಲಭ್ಯವಿದ್ದು, ಉತ್ತಮ ವಿನ್ಯಾಸ, ವೈಶಿಷ್ಟ್ಯ ಹಾಗೂ ಕೈಗೆಟುಕುವ ಬೆಲೆಯ ದ್ವಿಚಕ್ರ ವಾಹನ ಕೊಂಡುಕೊಳ್ಳುವವರಿಗಾಗಿ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ತಿಳಿಸಿಕೊಡಲಾಗಿದೆ.
ಬೌನ್ಸ್ ಇನ್ಫಿನಿಟಿ:
ಭಾರತದ ಮಾರುಕಟ್ಟೆಯಲ್ಲಿ ಬೌನ್ಸ್ ಇನ್ಫಿನಿಟಿ ಸ್ಕೂಟರ್, ಮೂರು ವರ್ಷ ಅಥವಾ 40 ಸಾವಿರ ಕಿಲೋಮೀಟರ್ ವಾರಂಟಿಯೊಂದಿಗೆ ಖರೀದಿಗೆ ಲಭ್ಯವಿದೆ. ಇದು ಗರಿಷ್ಠ 65 ಕಿಮೀ/ಗಂ ವೇಗವನ್ನು ಪಡೆಯಲಿದ್ದು, ಸೀಟಿನ ಕೆಳಗೆ 1.9 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಈ ಸ್ಕೂಟರ್ ಫುಲ್ ಚಾರ್ಜ್ ಮಾಡಿದರೇ 85 ಕಿಮೀ ರೇಂಜ್ ನೀಡಲಿದೆ. ಗ್ರಾಹಕರಿಗೆ ರೂ.70,499 ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, 4-5 ಗಂಟೆಯಲ್ಲಿ ಸಂಪೂರ್ಣ ಬ್ಯಾಟರಿ ಚಾರ್ಜ್ ಆಗಲಿದೆ.

ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್:
ದೇಶೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ 10 ಬಣ್ಣಗಳು ಹಾಗೂ ಮೂರು ರೂಪಾಂತರಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಸಿಗಲಿದೆ. ಬೇಸ್ ಐಕ್ಯೂಬ್ ಮತ್ತು ಮಿಡ್-ಸ್ಪೆಕ್ ಐಕ್ಯೂಬ್ ಎಸ್ ಒಂದೇ ರೀತಿಯ 3.04 kWh ಬ್ಯಾಟರಿ ಸಹಾಯದಿಂದ ಚಾಲಿತವಾಗಲಿವೆ. ಟಾಪ್-ಸ್ಪೆಕ್ ಐಕ್ಯೂಬ್ ದೊಡ್ಡ 4.56 kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ. ಟಿವಿಎಸ್ ಐಕ್ಯೂಬ್ ST ಇನ್ನೂ ಬುಕಿಂಗ್‌ಗೆ ಮಾತ್ರ ಲಭ್ಯವಿದೆ.
ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಆರಂಭಿಕ ಬೆಲೆ ರೂ.99,130 ಇದೆ. ಸಂಪೂರ್ಣ ಚಾರ್ಜ್ ಮಾಡಿದ ಬ್ಯಾಟರಿ ಪ್ಯಾಕ್, ಬರೋಬ್ಬರಿ 100 km ರೇಂಜ್ ನೀಡಲಿದ್ದು, 78 km/h ಟಾಪ್ ಸ್ವೀಡ್ ಹೊಂದಿದೆ. ಇದರ ಬ್ಯಾಟರಿ ಪ್ಯಾಕ್ ಮನೆಯ ವಿದ್ಯುಚ್ಛಕ್ತಿ ಬಳಕೆಯಲ್ಲಿ 4 ಗಂಟೆ 30 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗಲಿದೆ. ಎಲ್‌ಇಡಿ ಲೈಟಿಂಗ್ ಸಿಸ್ಟಮ್, ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಸ್ಮಾರ್ಟ್‌ಫೋನ್ ಸಂಪರ್ಕದಂತಹ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಓಲಾ S1:
ಬೆಂಗಳೂರು ಮೂಲದ ಓಲಾ ಕಂಪನಿಯ S1 ಎಲೆಕ್ಟ್ರಿಕ್ ಸ್ಕೂಟರ್ ಮೂರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಎಸ್1 ಏರ್, ಎಸ್1 ಮತ್ತು ಎಸ್1 ಪ್ರೊ. ಎಲ್ಲಾ ಮೂರು ರೂಪಾಂತರಗಳು ವಿಭಿನ್ನ ಬ್ಯಾಟರಿ ಪ್ಯಾಕ್ ಅನ್ನು ಹೊಂದಿವೆ. S1 ಏರ್ ಚಿಕ್ಕದಾದ 2.5 kWh ಬ್ಯಾಟರಿ ಪಡೆದಿದೆ. ಎಸ್1, 3 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಅದು ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟರ್‌ಗೆ ಪವರ್ ನೀಡುತ್ತದೆ. ಟಾಪ್ ಎಂಡ್ ಮಾದರಿ S1 ಪ್ರೊ, ಟಾಪ್ ಸ್ವೀಡ್ ಹಾಗೂ ಅತ್ಯಧಿಕ ರೇಂಜ್ ನೀಡುತ್ತದೆ.
ಓಲಾ S1 1,04,999 ಆರಂಭಿಕ ಬೆಲೆಯನ್ನು ಹೊಂದಿದ್ದು, 3 kWh ಬ್ಯಾಟರಿ ಪ್ಯಾಕ್ ನಿಂದ ಚಾಲಿತವಾಗಲಿದ್ದು, ಈ ಸ್ಕೂಟರ್ ಅನ್ನು ಮನೆಯ ವಿದ್ಯುಚ್ಛಕ್ತಿ ಉಪಯೋಗಿಸಿಕೊಂಡು 5 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಮಾಡಬಹುದು. ಇದು 95 km/h ಟಾಪ್ ಸ್ವೀಡ್ ಹೊಂದಿದೆ. ಇದು ಸಾರ್ಟ್‌ಫೋನ್ ಸಂಪರ್ಕದೊಂದಿಗೆ ಏಳು ಇಂಚಿನ ಟಿಎಫ್‌ಟಿ ಇನ್ಸ್ರುಮೆಟಲ್ ಕ್ಲಸ್ಟರ್, ಬ್ಲೂಟೂತ್, ಜಿಪಿಎಸ್ ಮತ್ತು ವೈಫೈ ಸಂಪರ್ಕವನ್ನು ಪಡೆದಿದೆ. ಸೈಡ್-ಸ್ಟ್ಯಾಂಡ್-ಡೌನ್ ಮತ್ತು ಆಂಟಿ-ಥೆಫ್ಟ್ ಅಲರ್ಟ್, ಜಿಯೋಫೆನ್ಸಿಂಗ್, ಕ್ರೂಸ್ ಕಂಟ್ರೋಲ್, ರಿವರ್ಸ್ ಮೋಡ್ ಅಂತಹ ಇತರೆ ಇತರೇ ವೈಶಿಷ್ಟ್ಯಗಳನ್ನು ಹೊಂದಿದೆ.
ಎಥರ್ 450X:
ಕಳೆದ ವರ್ಷ, ಎಥರ್ 450X ಮತ್ತು 450 ಪ್ಲಸ್ ಇ-ಸ್ಕೂಟರ್‌ಗಳನ್ನು ನವೀಕರಣ ಮಾಡಲಾಯಿತು. ಈ ಸ್ಕೂಟರ್‌ಗಳು ದೊಡ್ಡ ಬ್ಯಾಟರಿ, BLDC ಎಲೆಕ್ಟ್ರಿಕ್ ಮೋಟರ್‌ನಿಂದ ಪವರ್ ಉತ್ಪಾದನೆಯನ್ನು ಹೆಚ್ಚಿಸಿಕೊಂಡಿವೆ. ಇದಲ್ಲದೆ, 450 ಪ್ಲಸ್ 2.6 kWh ಬ್ಯಾಟರಿಯನ್ನು ಹೊಂದಿದ್ದು, 450X, 3.34 kWh ಬ್ಯಾಟರಿಯಿಂದ ಪಡೆದಿದೆ. ಎಥರ್ 450X ಬೆಲೆ 1,35,452 ರೂ. ಇದ್ದು,105 km ರೇಂಜ್ ನೀಡಲಿದ್ದು, 90 km/h ಟಾಪ್ ಸ್ವೀಡ್ ಹೊಂದಿದೆ.
ಬಜಾಜ್ ಚೇತಕ್ ಇವಿ:
ಇದು ಅತ್ಯಂತ ದುಬಾರಿ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ ಎಂದು ಹೇಳಬಹುದು. ಆಕರ್ಷಕ ರೆಟ್ರೊ ವಿನ್ಯಾಸವನ್ನು ಹೊಂದಿದ್ದು, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್‌ಇಡಿ ಲೈಟ್‌ಗಳು ಮತ್ತು ರಿವರ್ಸ್ ಗೇರ್‌ನಂತಹ ವೈಶಿಷ್ಟ್ಯಗಳನ್ನು ಪಡೆದಿದೆ. ಭಾರತೀಯ ಮಾರುಕಟ್ಟೆಯಲ್ಲಿ 1,51,958 ರೂ.ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, 85-95 km/h ರೇಂಜ್ ನೀಡಲಿದೆ. ಅಲ್ಲದೆ, 70 km/h ಟಾಪ್ ಸ್ವೀಡ್ ಹೊಂದಿದೆ. ಮನೆಯ ವಿದ್ಯುಚ್ಛಕ್ತಿ ಬಳಕೆಯಲ್ಲಿ ಈ ಸ್ಕೂಟರ್, 4 ಗಂಟೆಗಳಲ್ಲಿ ಫುಲ್ ಚಾರ್ಜ್ ಆಗಲಿದೆ.


Click it and Unblock the Notifications