Electric Scooters: 100 KM ಕ್ರಮಿಸುವ 100,000 ರೂಪಾಯಿಯೊಳಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಭಾರತದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರಿದ್ದು, ಅದಕ್ಕಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಖರೀದಿಸಲು ಗ್ರಾಹಕರು ಆಸಕ್ತಿ ತೋರುತ್ತಿದ್ದಾರೆ. ಆದರೆ, ತಮ್ಮ ಬಜೆಟ್‌ನಲ್ಲಿ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳು ಸಿಗುತ್ತದೆಯೋ, ಇಲ್ಲವೋ ಎಂಬ ಗೊಂದಲವಿದೆ. ಅಂತಹವರಿಗಾಗಿ 100 ಕಿ.ಮೀ ರೇಂಜ್ ನೀಡುವ ರೂ.1 ಲಕ್ಷದೊಳಗೆ ಸಿಗುವ ಸ್ಕೂಟರ್‌ಗಳ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡಿದ್ದೇವೆ.

ದೇಶೀಯ ಮಾರುಕಟ್ಟೆಯಲ್ಲಿ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಓಲಾ (Ola) ಗುರುತಿಸಿಕೊಳ್ಳುತ್ತಿದೆ. ಇದರ 3 kWh ಬ್ಯಾಟರಿ ಪ್ಯಾಕ್ ಹೊಂದಿರುವ 'ಎಸ್1 ಏರ್' ಎಲೆಕ್ಟ್ರಿಕ್ ಸ್ಕೂಟರ್ ರೂ.99,999 ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು,125 ಕಿ.ಮೀ (IDC) ರೇಂಜ್ ನೀಡುತ್ತದೆ. ಇದು, 7-ಇಂಚಿನ ಟಚ್‌ಸ್ಕ್ರೀನ್, 34 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್, ವೈಫೈ ಕನೆಕ್ಟಿವಿಟಿ, ಜಿಪಿಎಸ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

Electric Scooters: 100 KM ಕ್ರಮಿಸುವ 100,000 ರೂಪಾಯಿಯೊಳಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಹೀರೋ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಭಾರತದಲ್ಲಿ ಈಗಾಗಲೇ ಖ್ಯಾತಿಗಳಿಸಿದ್ದು, ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿಯೇ ಅಂದರೇ ರೂ.85,190 (ಎಕ್ಸ್ ಶೋರೂಂ) ಬೆಲೆಗೆ ಡ್ಯುಯಲ್ ಬ್ಯಾಟರಿ ಆಯ್ಕೆ ಹೊಂದಿರುವ 'ಆಪ್ಟಿಮಾ CX' ಸ್ಕೂಟರ್ ಅನ್ನು ಮಾರಾಟ ಮಾಡುತ್ತಿದೆ. ಇದು ಪವರ್ ಫುಲ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಸಂಪೂರ್ಣ ಚಾರ್ಜಿನಲ್ಲಿ 140 ಕಿ.ಮೀ ರೇಂಜ್ ನೀಡುವ ಸಾಮರ್ಥ್ಯ ಪಡೆದಿದೆ. ಆದರೆ, ಓಲಾ ಸ್ಕೂಟರ್‌ಗಳಿಂದ ಕೊಂಚ ಹಿನ್ನೆಡೆ ಅನುಭವಿಸುತ್ತಿದೆ.

ಸದ್ಯ, ದೇಶದಲ್ಲಿ ಮುನ್ನೆಲೆ ಬರುತ್ತಿರುವ ಒಕಿನಾವಾದ 'ಡ್ಯುಯಲ್ 100' ಎಲೆಕ್ಟ್ರಿಕ್ ಸ್ಕೂಟರ್‌ ಬಹುಬೇಡಿಕೆಯನ್ನು ಪಡೆದುಕೊಂಡಿದೆ. ಇದು ರೂ.79,813 ದರದಲ್ಲಿ ಖರೀದಿಗೆ ಲಭ್ಯವಿದ್ದು, 200 ಕೆಜಿ ತೂಕವರೆಗೆ ಸರಕನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 149 ಕಿ.ಮೀ ರೇಂಜ್ ನೀಡಲಿದೆ. ಆದರೆ, ಈ ಸ್ಕೂಟರ್ ಕಂಪನಿಯ ವೆಬ್‌ಸೈಟ್‌ನಲ್ಲಿ ಔಟ್ ಆಫ್ ಸ್ಟಾಕ್ ಎಂದು ತೋರಿಸಿದ್ದು, ಇವತ್ತು ಬುಕ್ ಮಾಡಿದರೂ ವಿತರಣೆ ಪಡೆಯಲು ಕನಿಷ್ಠವೆಂದರೂ ಆರು ತಿಂಗಳು ಕಾಯಬೇಕು.

Electric Scooters: 100 KM ಕ್ರಮಿಸುವ 100,000 ರೂಪಾಯಿಯೊಳಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಟಿವಿಎಸ್ ಐಕ್ಯೂಬ್ ರೂ.99,999 (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 4.56 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಬಳಸಿರುವ ಐಕ್ಯೂಬ್ ST ರೂಪಾಂತರ ಸಂಪೂರ್ಣ ಚಾರ್ಜಿನಲ್ಲಿ 145 ಕಿಮೀ ರೇಂಜ್ ನೀಡಲಿದೆ. 3.04 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಎಂಟ್ರಿ ಲೆವೆಲ್ ಮತ್ತು ಮಿಡ್ ಲೆವೆಲ್ ಐಕ್ಯೂಬ್ S ರೂಪಾಂತರದಲ್ಲಿ ಉಪಯೋಗಿಸಲಾಗಿದ್ದು, ಫುಲ್ ಚಾರ್ಜಿನಲ್ಲಿ 100 ಕಿ.ಮೀ ರೇಂಜ್ ನೀಡಲಿವೆ.

ದೇಶೀಯ ಕಂಪನಿ ಟಿವಿಎಸ್ ತಯಾರಿಸುವ ಈ ಐಕ್ಯೂಬ್ ಸ್ಕೂಟರ್‌, ಯುವ ಖರೀದಿದಾರನ್ನು ಆಕರ್ಷಿಸವಂತಹ ಭರಪೂರ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಎಲ್ಇಡಿ ಲೈಟಿಂಗ್ ಜೊತೆಗೆ ಫುಲ್ ಕಲರ್ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ. ಜೊತೆಗೆ ರೈಡಿಂಗ್ ಅಂಕಿಅಂಶಗಳು, ರಿಮೋಟ್ ಬ್ಯಾಟರಿ ರೇಂಜ್, ಜಿಯೋ ಫೆನ್ಸಿಂಗ್‌ನಂತಹ ಹಲವು ಮಾಹಿತಿ ಪಡೆಯಲು ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್‌ನೊಂದಿಗೆ ಡಿಸ್‌ಪ್ಲೇಯನ್ನು ಕನೆಕ್ಟ್ ಮಾಡಬಹುದು. ಈ ಸ್ಕೂಟರ್, 78 Kmph ಟಾಪ್ ಸ್ವೀಡ್ ಹೊಂದಿದೆ.

ಕೊನೆಯದಾಗಿ ಆಂಪಿಯರ್ ಮ್ಯಾಗ್ನಸ್ EX ಸ್ಕೂಟರ್ ಬಗ್ಗೆ ತಿಳಿಯೋಣ. ಇದು ರೂ.81,900 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯದೆ. ಫುಲ್ ಚಾರ್ಜಿನಲ್ಲಿ 121 ಕಿ.ಮೀ. ರೇಂಜ್ ನೀಡಲಿದ್ದು, 50 kmph ಟಾಪ್ ಸ್ವೀಡ್ ಹೊಂದಿದೆ. ಇದರ ಬ್ಯಾಟರಿ ಪ್ಯಾಕ್ ಸಂಪೂರ್ಣ ಚಾರ್ಜ್ ಆಗಲು 4 ರಿಂದ 5 ಗಂಟೆ ತೆಗೆದುಕೊಳ್ಳುತ್ತದೆ. ಈ ಸ್ಕೂಟರ್ ಕೂಡ ಗ್ರಾಹಕರನ್ನು ಆಕರ್ಷಿಸವ ಹಲವು ನವೀನ ವೈಶಿಷ್ಟ್ಯಗಳೊಂದಿಗೆ ಲಭ್ಯವಿದೆ.

ಒಟ್ಟಾರೆ, ಓಲಾ ಎಸ್1 ಏರ್, ಒಕಿನಾವಾ, ಡ್ಯುಯಲ್ 100, ಹೀರೊ ಆಪ್ಟಿಮಾ CX, ಟಿವಿಎಸ್ ಐಕ್ಯೂಬ್ ಹಾಗೂ ಆಂಪಿಯರ್ ಮ್ಯಾಗ್ನಸ್ EX ಎಲೆಕ್ಟ್ರಿಕ್ ಸ್ಕೂಟರ್‌ಗಳು ರೂ.1 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ದೊರೆಯಲಿವೆ. ಜೊತೆಗೆ ಅತ್ಯುತ್ತಮ ರೇಂಜ್ ನೀಡಲಿದ್ದು, ಬೆಲೆಗೆ ತಕ್ಕಂತೆ ಇವುಗಳು ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿವೆ. ನಿಮಗೆ ಇಷ್ಟವಾಗುವ ಒಂದು ಸ್ಕೂಟರ್ ಅನ್ನು ಆರಿಸಿಕೊಳ್ಳಬಹುದು.

Article Published On: Thursday, March 30, 2023, 16:08 [IST]
English summary
Top 5 electric scooters under rs 1 lakh tvs ola hero okinawa ampere details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+