ಕಡಿಮೆ ತೂಕ, ಕಡಿಮೆ ಎತ್ತರ... ಯುವತಿಯರಿಗೆ ಹೇಳಿಮಾಡಿಸಿದ ಟಾಪ್ 5 ಸ್ಟೈಲಿಷ್ ಬೈಕ್‌ಗಳು
ಭಾರತದಲ್ಲಿ ಇತ್ತೀಚೆಗೆ ಮೋಟಾರ್ ಸೈಕಲ್ ಕ್ರೇಜ್ ಯುವತಿಯರಲ್ಲೂ ವಿಪರೀತವಾಗಿ ಹೆಚ್ಚಾಗಿದೆ. ಆದರೆ ಯುವಕರು ಬೈಕ್‌ಗಳನ್ನು ಬ್ಯಾಲೆನ್ಸ್ ಮಾಡುವಷ್ಟು ಯುವತಿಯರು ಮಾಡುವುದು ತುಸು ಕಷ್ಟವಾಗಿರುತ್ತದೆ. ಜೊತೆಗೆ ಕಾಲುಗಳು ಎಟುಕುವಲ್ಲಿ ಹಾಗೂ ಕಡಿಮೆ ತೂಕವಿರುವ ಮೋಟಾರ್‌ಸೈಕಲ್ ಯಾವುದು ಎಂಬ ಗೊಂದಲ ಹಲವರು ಯುವತಿಯರಿಗೆ ಇದೆ.
ಈ ಗೊಂದಗಳನ್ನು ದೂರ ಮಾಡಿ ಯುವತಿಯರು ಖರೀದಿಸಬಹುದಾದ ಟಾಪ್ 5 ಸ್ಟೈಲಿಷ್ ಬೈಕ್‌ಗಳು ಪಟ್ಟಿ ಮಾಡಿದ್ದೇವೆ. ಇಲ್ಲಿ ಯುವಕರು ಇಷ್ಟಪಡುವಂತೆಯೇ ಸ್ಟೈಲಿಷ್ ಹಾಗೂ ಹೆಚ್ಚಿನ ಸಿಸಿ ಜೊತೆಗೆ ಕಡಿಮೆ ಸೀಟಿನ ಎತ್ತರ ಹೊಂದಿರುವ ಬೈಕ್‌ಗಳನ್ನು ಪಟ್ಟಿ ಮಾಡಲಾಗಿದೆ ಎಂಬುದನ್ನು ಗಮನಿಸಬೇಕು. 2023 ರಲ್ಲಿ ಯುವತಿಯರು ಓಡಿಸಬಹುದಾದ ಸ್ಟೈಲಿಷ್ ಲೈಟ್‌ವೈಟ್ ಮೋಟಾರ್‌ಸೈಕಲ್‌ಗಳನ್ನು ಇಲ್ಲಿ ನೋಡೋಣ.

ರಾಯಲ್ ಎನ್‌ಫೀಲ್ಡ್ ಹಂಟರ್: ಹಂಟರ್ ಬೈಕ್ ಇತರ ರಾಯಲ್ ಎನ್‌ಫೀಲ್ಡ್‌ಗಳಂತಲ್ಲದೇ ಕಡಿಮೆ ತೂಕದೊಂದಿಗೆ ಬರುತ್ತದೆ. ಇದು ನಮಗೆ 1.50 ಲಕ್ಷ ರೂ. (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 349cc ಸಿಂಗಲ್ ಸಿಲಿಂಡರ್ ಎಂಜಿನ್ 20.2hp ಪವರ್ ಹಾಗೂ 27Nm ಟಾರ್ಕ್ ಅನ್ನು ಹೊರಹಾಕುತ್ತದೆ. 181 kg ತೂಕದೊಂದಿಗೆ ಬರುತ್ತದೆ.
ಜಾವಾ ಪೆರಾಕ್: ಜಾವಾ ಪೆರಾಕ್ ಯುವತಿಯರು ಬ್ಯಾಲೆನ್ಸ್ ಮಾಡಬಹುದಾದ 750mm ಸೀಟ್ ಹೈಟ್ ಹಾಗೂ 185 kg ಲೈಟ್ ವೇಟ್‌ನೊಂದಿಗೆ ಬರುತ್ತದೆ. ಸದ್ಯ ಮಾರುಕಟ್ಟೆಯಲ್ಲಿ 2.13 ಲಕ್ಷ ರೂ. ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 334 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, 4-ಸ್ಟ್ರೋಕ್ ಎಂಜಿನ್‌ನೊಂದಿಗೆ 30.2 hp ಪವರ್ ಹಾಗೂ 32.74 Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ.

ಬಜಾಜ್ ಅವೆಂಜರ್: ಬಜಾಜ್ ಅವೆಂಜರ್ ಕ್ರೂಸರ್ ಮೋಟಾರ್‌ಸೈಕಲ್ ಆಗಿದೆ. ಇದರ ಆರಂಭಿಕ ಬೆಲೆಯು 1.60 ಲಕ್ಷ ರೂ. (ಎಕ್ಸ್ ಶೋರೂಂ) ಇದೆ. ಇದು ನಿಮಗೆ 160 ಸ್ಟ್ರೀಟ್, 220 ಸ್ಟ್ರೀಟ್, 220 ಕ್ರೂಸ್ ಎಂಬ ಮೂರು ವೇರಿಯೆಂಟ್‌ನಲ್ಲಿ ಲಭ್ಯವಿದೆ. ಇದರ ಟಾಪ್ ವೇರಿಯೆಂಟ್ 1.43 (ಎಕ್ಸ್ ಶೋರೂಂ) ಲಕ್ಷವಿದೆ. 160 ಸ್ಟ್ರೀಟ್ 153 kg ತೂಕವಿದ್ದರೆ, 220 ಎರಡೂ ವೇರಿಯೆಂಟ್‌ಗಳು 163 kg ಇವೆ.
ಕೆಟಿಎಂ 200 ಡ್ಯೂಕ್: ಕೆಟಿಎಂ 200 ಡ್ಯೂಕ್ ನೇಕೆಡ್ ಮೋಟಾರ್‌ಸೈಕಲ್ 159 kg ತೂಕವಿದೆ. 1.96 ಲಕ್ಷ ರೂ. (ಎಕ್ಸ್ ಶೋರೂಂ) ಬೆಲೆಯಿದೆ. ಇದು, 199.5 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೋಲ್ಡ್ ಎಂಜಿನ್ ಹೊಂದಿದೆ. 24.68 bhp ಪವರ್ ಹಾಗೂ 19.3 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 6 ಸ್ವೀಡ್ ಗೇರ್ ಬಾಕ್ಸ್ ಪಡೆದಿದೆ.

ಟಿವಿಎಸ್ ರೋನಿನ್: ಇದು ಕೂಡ ಕ್ರೂಸರ್ ಮೋಟಾರ್‌ಸೈಕಲ್ ಆಗಿದೆ. ಕಡಿಮೆ ಸೀಟಿನ ಎತ್ತರದೊಂದಿಗೆ ಬರುವ ಈ ಬೈಕ್ ಆರಂಭಿಕ ಬೆಲಯು 1.49 ಲಕ್ಷ ರೂ.ನಿಂದ ಆರಂಭವಾಗಿ 1.69 ಲಕ್ಷ ರೂ. (ಎಕ್ಸ್ ಶೋರೂಂ) ವರೆಗೆ ಇದೆ. 20.12 ಬಿಎಚ್‌ಪಿ ಮತ್ತು 19.93 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಹೊಸ ಎಂಜಿನ್ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‌ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications