ಸಾಮರ್ಥ್ಯ ತಿಳಿಯದೇ ಭಾರತದಲ್ಲಿ ಕಡಿಮೆ ಅಂದಾಜಿಸಲಾದ ಟಾಪ್ 5 ಅಗ್ಗದ ಬೈಕ್‌ಗಳಿವು!

ಭಾರತದಲ್ಲಿ ಅನೇಕರಿಗೆ ಬೈಕ್‌ಗಳ ಬಗ್ಗೆ ಅಷ್ಟೇನು ತಿಳಿದಿರುವುದಿಲ್ಲ, ಟಿವಿ ಜಾಹಿರಾತು ಅಥವಾ ಇನ್ನೊಬ್ಬರು ಹೇಳುವುದನ್ನು ಕೇಳಿ ಮೋಟಾರ್‌ ಸೈಕಲ್‌ಗಳನ್ನು ಖರೀದಿಸುತ್ತಾರೆ. ಆದರೆ ನಿಜಕ್ಕೆ ಮೋಟಾರ್‌ ಸೈಕಲ್ ಖರೀದಿಸಬೇಕಾದರೆ ನಾವೇ ಖುದ್ದು ಅದರ ಪವರ್, ಮೈಲೇಜ್, ಪರ್ಫಾಮೆನ್ಸ್ ಬಗ್ಗೆ ತಿಳಿದುಕೊಳ್ಳಬೇಕು. ಇಂತಹ ವಿಚಾರಗಳನ್ನು ತಿಳಿಯದೇ ಕಡಿಮೆ ಅಂದಾಜಿಸಲಾದ ಅಗ್ಗದ ಕೆಲ ಬೈಕ್‌ಗಳು ಇಲ್ಲಿವೆ.

ಕೆಳಗೆ ತಿಳಿಸಲಾದ ಬೈಕ್‌ಗಳಲ್ಲಿ ವಿವಿಧ ಎಂಜಿನ್ ಸಾಮರ್ಥ್ಯದ ಮೋಟಾರ್‌ ಸೈಕಲ್‌ಗಳಿವೆ. ಅಂದರೆ ಅವುಗಳ ವಿಭಾಗಗಳು ಬೇರೆಯಾದರು ಬೆಲೆಗೆ ತಕ್ಕಂತೆ ಅವುಗಳ ಕಾರ್ಯಕ್ಷಮತೆ ಹಾಗೂ ಮೌಲ್ಯಯುತವಾಗಿರುತ್ತವೆ. ಇವುಗಳಲ್ಲಿ ಒಂದನ್ನು ಹೊರತುಪಡಿಸಿ ಹೆಚ್ಚಿನವು 2 ಲಕ್ಷಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿವೆ. ಈ ಮೋಟಾರ್‌ ಸೈಕಲ್‌ಗಳ ಮಾರಾಟವು ಜನಪ್ರಿಯ ಮಾದರಿಗಳಿಗೆ ಸರಿಸಮಾನವಾಗಿ ಇಲ್ಲದಿರಬಹುದು, ಆದರೆ ಬೆಲೆಗೆ ತಕ್ಕಂತೆ ಉತ್ತಮ ಪರ್ಫಾಮೆನ್ಸ್ ನೀಡಬಲ್ಲ ಪವರ್ ಔಟ್‌ಪುಟ್‌ ಸಾಮರ್ಥ್ಯವನ್ನು ಹೊಂದಿವೆ.

ಸಾಮರ್ಥ್ಯ ತಿಳಿಯದೇ ಭಾರತದಲ್ಲಿ ಕಡಿಮೆ ಅಂದಾಜಿಸಲಾದ ಟಾಪ್ 5 ಅಗ್ಗದ ಬೈಕ್‌ಗಳಿವು!

TVS Apache RTR200 4V (ರೂ. 1,40,920, ಎಕ್ಸ್ ಶೋ ರೂಂ, ದೆಹಲಿ):
RTR200 4V ಹಣಕ್ಕೆ ಸರಿಯಾದ ಮೌಲ್ಯದ ಉತ್ಪನ್ನಗಳಲ್ಲಿ ಒಂದಾಗಿದೆ, ವಿಶೇಷವಾಗಿ ಇದು ಹಲವು ವೈಶಿಷ್ಟ್ಯಗಳಿಗೆ ಜನಪ್ರಿಯವಾಗಿದೆ. RTR 200 4V ಯ 197.75 cc, ಸಿಂಗಲ್-ಸಿಲಿಂಡರ್ ಎಂಜಿನ್ 17.08bhp ಮತ್ತು 16.51 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಾಗೆಯೇ ಇದರಲ್ಲಿ ಸ್ಪೋರ್ಟ್, ಸಿಟಿ ಮತ್ತು ರೈನ್ ಎಂಬ ಮೂರು ಮೋಡ್‌ಗಳಿವೆ. ಅರ್ಬನ್ ಮತ್ತು ರೈನ್ ಮೋಡ್‌ಗಳಲ್ಲಿ 17.08bhp ಮತ್ತು 16.51 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇನ್ನು ಸ್ಪೋರ್ಟ್ ಮೋಡ್‌ನಲ್ಲಿ, ಬೈಕ್ 20.53bhp ಮತ್ತು 17.25 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೆಚ್ಚುವರಿಯಾಗಿ RTR 200 4V TVS ನ SmartXonnect ಬ್ಲೂಟೂತ್ ಸಂಪರ್ಕ ತಂತ್ರಜ್ಞಾನದೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹ ಪಡೆದುಕೊಂಡಿದೆ. ಇದು ನಿಮಗೆ ರೇಸ್ ಟೆಲಿಮೆಟ್ರಿ ಮತ್ತು ಲೀನ್ ಆಂಗಲ್ ಮೋಡ್‌ಗೆ ಪ್ರವೇಶ ನೀಡುತ್ತದೆ, ಜೊತೆಗೆ ಡ್ಯುಯಲ್-ಚಾನೆಲ್ ABS ಮತ್ತು ಉತ್ತಮ ಎಕ್ಸಾಸ್ಟ್ ನೋಟ್, ಹೊಸ ಮಫ್ಲರ್ ವಿನ್ಯಾಸವನ್ನು ಪಡೆದುಕೊಂಡಿದೆ.

Yamaha FZ25 (Rs1.49 ಲಕ್ಷ, ಎಕ್ಸ್ ಶೋ ರೂಂ ಬೆಲೆ, ದೆಹಲಿ):
ಯಮಹಾ ಸರಣಿಗಳಲ್ಲಿ FZ25 ಕಡಿಮೆ ಅಂದಾಜಿಸಲಾದ ಅಗ್ಗದ ಬೈಕ್ ಆಗಿದೆ. ಇದು 20.51bhp ಮತ್ತು 20.1Nm ಟಾರ್ಕ್ ಅನ್ನು ಉತ್ಪಾದಿಸುವ ಇಂಧನ ಇಂಜೆಕ್ಷನ್‌ನೊಂದಿಗೆ 249cc, ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಬೈಕ್ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ ಮತ್ತು ಮಲ್ಟಿ-ಫಂಕ್ಷನ್ ನೆಗೆಟಿವ್ ಎಲ್ಇಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ನೊಂದಿಗೆ ಕ್ಲಾಸ್ ಡಿ ಬೈ ಫಂಕ್ಷನಲ್ ಎಲ್ಇಡಿ ಹೆಡ್ಲೈಟ್ ಘಟಕವನ್ನು ಹೊಂದಿದೆ.

KTM RC125 (ರೂ. 1,88,640, ಎಕ್ಸ್ ಶೋ ರೂಂ ಬೆಲೆ, ದೆಹಲಿ):
KTM RC125 ನಾವು ಇಲ್ಲಿ ತಿಳಿಸಲಾದ ಇತರ ಬೈಕ್‌ಗಳಿಗಿಂತ ಪವರ್‌ನಲ್ಲಿ ಕಡಿಮೆಯಾಗಿರಬಹುದು, ಆದರೆ ಭಾರತದಲ್ಲಿ ಅತ್ಯಂತ ಶಕ್ತಿಶಾಲಿ 125cc ಮೋಟಾರ್‌ಸೈಕಲ್ ಆಗಿದೆ. ಇದು 9250rpm ನಲ್ಲಿ 14.3bhp ಮತ್ತು 8000rpm ನಲ್ಲಿ 12 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. RC200 ಮತ್ತು RC390 ನಲ್ಲಿ ನೋಡಿದಂತೆ Moto-GP-ಪ್ರೇರಿತ ಬಾಡಿವರ್ಕ್ RC125 ನಲ್ಲೂ ನೋಡಬಹುದು. Supermoto ABS, ಇಂಟಿಗ್ರೇಟೆಡ್ ಬ್ಲಿಂಕರ್‌ಗಳೊಂದಿಗೆ ಪೈಲಟ್ ಲ್ಯಾಂಪ್‌ಗಳು ಮತ್ತು LCD ಡ್ಯಾಶ್ ಡಿಸ್ಪ್ಲೇಯಂತಹ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಸುಜುಕಿ SF 250 (ರೂ. 1.95 ಲಕ್ಷದಿಂದ ಪ್ರಾರಂಭ, ಎಕ್ಸ್ ಶೋ ರೂಂ, ದೆಹಲಿ):
ಸುಜುಕಿ SF 250 ಭಾರತದಲ್ಲಿ ಕಡಿಮೆ ಅಂದಾಜಿಸಲಾದ ಮೋಟಾರ್‌ಸೈಕಲ್ ಆಗಿದ್ದು, ಇದರ ಬೆಲೆ 2 ಲಕ್ಷಕ್ಕಿಂತ ಕಡಿಮೆ ಇರುತ್ತದೆ. ಇದು ಆಯಿಲ್ ಕೂಲ್ಡ್, 249cc ಎಂಜಿನ್‌ನಿಂದ ಚಾಲಿತವಾಗಿದ್ದು, 26.13 bhp ಹಾಗೂ 22.2 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

BMW G310 GS (ರೂ. 3.20 ಲಕ್ಷದಿಂದ, ಎಕ್ಸ್ ಶೋ ರೂಂ, ದೆಹಲಿ):
BMW G310 GS ಈ ಪಟ್ಟಿಯಲ್ಲಿರುವ ಅತ್ಯಂತ ದುಬಾರಿ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ. ಇದು ಇಲ್ಲಿಯ ಏಕೈಕ ADV (ಅಡ್ವೆಂಚರ್) ಬೈಕ್ ಕೂಡ ಹೌದು. ಇದು 313cc, ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದ್ದು ಅಪಾಚೆ RR310 ನಲ್ಲಿನ ಪವರ್ ಔಟ್‌ಪುಟ್‌ಗಳೊಂದಿಗೆ ಹಂಚಿಕೊಳ್ಳುತ್ತದೆ. ಇದು 34bhp ಮತ್ತು 28 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಅತ್ಯಂತ ಕಡಿಮೆ ದರದ ಮತ್ತು ಸಾಕಷ್ಟು ಸಮರ್ಥ ADV ಗಳಲ್ಲಿ ಒಂದಾಗಿದೆ.

Article Published On: Saturday, March 18, 2023, 9:35 [IST]
English summary
Top 5 underrated affordable bikes in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+