Electric Scooters: ಟಿವಿಎಸ್, ಹೀರೋ ಸೇರಿದಂತೆ 1.5 ಲಕ್ಷದೊಳಗೆ ಸಿಗುವ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಿವು

ದೇಶದಲ್ಲಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವುದರಿಂದ ಬಹುತೇಕರು, ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು (Electric Scooters) ಖರೀದಿಸಲು ಮನಸ್ಸು ಮಾಡುತ್ತಿದ್ದಾರೆ. ಆದರೆ, ಇಂಧನ ಚಾಲಿತ ದ್ವಿಚಕ್ರ ವಾಹನಗಳಿಗೆ ಹೋಲಿಸಿದರೆ, ಇವುಗಳ ಬೆಲೆ ಹೆಚ್ಚಿರುವುದರಿಂದ ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇಲ್ಲಿ 1.5 ಲಕ್ಷದೊಳಗೆ ಸಿಗುವ ಪ್ರಮುಖ ಕಂಪನಿಯ ಇ-ಸ್ಕೂಟರ್‌ಗಳ ಬಗ್ಗೆ ತಿಳಿಸಲಾಗಿದೆ.

ಮೊದಲಿಗೆ ಟಿವಿಎಸ್ ಐಕ್ಯೂಬ್ (TVS iQube) ಬಗ್ಗೆ ಮಾತನಾಡೋಣ. ಈ ಎಲೆಕ್ಟ್ರಿಕ್ ಸ್ಕೂಟರ್ ರೂ.1.23 ಲಕ್ಷ (ಎಕ್ಸ್ ಶೋರೂಂ, ದೆಹಲಿ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ 3.04 kWh ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ km ರೇಂಜ್ ನೀಡುತ್ತದೆ. ಜೊತೆಗೆ 78 kmph ಟಾಪ್ ಸ್ವೀಡ್ ಪಡೆಯಲಿದೆ.

Electric Scooters: ಟಿವಿಎಸ್, ಹೀರೋ ಸೇರಿದಂತೆ 1.5 ಲಕ್ಷದೊಳಗೆ ಸಿಗುವ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಿವು

ಟಿವಿಎಸ್ ಐಕ್ಯೂಬ್ ಗ್ರಾಹಕರನ್ನು ಆಕರ್ಷಿಸುವ ಹಲವು ನವೀನ ವೈಶಿಷ್ಟ್ಯಗಳನ್ನು ಪಡೆದಿದೆ. ಮುಖ್ಯವಾಗಿ, 7 ಇಂಚಿನ TFT ಟಚ್‌ಸ್ಕ್ರೀನ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ, ರಿವರ್ಸ್ ಮೋಡ್‌, USB ಚಾರ್ಜಿಂಗ್ ಪೋರ್ಟ್ ಫೀಚರ್ಸ್ ಹೊಂದಿದೆ. ಪರ್ಲ್ ವೈಟ್, ಟೈಟಾನಿಯಂ ಗ್ರೇ ಗ್ಲೋಸಿ, ಮರ್ಕ್ಯುರಿ ಗ್ರೇ ಗ್ಲೋಸಿ, ಸ್ಟಾರ್‌ಲೈಟ್ ಬ್ಲೂ ಗ್ಲೋಸಿ, ಮಿಂಟ್ ಬ್ಲೂ, ಶೈನಿಂಗ್ ರೆಡ್ ಸೇರಿದಂತೆ 11 ಬಣ್ಣಗಳ ಆಯ್ಕೆಗಳಲ್ಲಿ ದೊರೆಯುತ್ತದೆ.

ಓಲಾದ ಅಗ್ಗದ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಎಂದು ಖ್ಯಾತಿಗಳಿಸುವ ಎಸ್1 ಏರ್ (S1 Air) ರೂ.1.10 ಲಕ್ಷ ಎಕ್ಸ್ ಶೋರೂಂ (FAME-II ಸಬ್ಸಿಡಿ) ಬೆಲೆಯಲ್ಲಿ ಲಭ್ಯವಿದ್ದು, ಶೀಘ್ರದಲ್ಲೇ ವಿತರಣೆಗಳು ಶುರುವಾಗಲಿದೆ. ಈ ಸ್ಕೂಟರ್ 3 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಫುಲ್ ಚಾರ್ಜ್‌ನಲ್ಲಿ 125 km (IDC) ರೇಂಜ್ ನೀಡುತ್ತದೆ.

ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ 4.5 kW ಮೋಟಾರ್ ಪಡೆದಿದ್ದು, 85 kmph ಟಾಪ್ ಸ್ವೀಡ್ ಹೊಂದಿದೆ. ದೇಶೀಯ ಗ್ರಾಹಕರನ್ನು ಆಕರ್ಷಿಸುವ ವಿವಿಧ ಫೀಚರ್ಸ್ ಒಳಗೊಂಡಿದೆ. ಪ್ರಮುಖವಾಗಿ, ಎಲ್ಇಡಿ ಹೆಡ್ ಲ್ಯಾಂಪ್, 7 ಇಂಚಿನ ಟಚ್‌ಸ್ಕ್ರೀನ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 34 ಲೀಟರ್ ಸಾಮರ್ಥ್ಯ ಅಂಡರ್ ಸೀಟ್ ಸ್ಟೋರೇಜ್ ಪಡೆದಿದೆ.

iVOOMi ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದು ರೂ.84,999 (ಎಕ್ಸ್ ಶೋರೂಂ) ಬೆಲೆಯಲ್ಲಿ ದೊರೆಯಲಿದೆ. ಇದರಲ್ಲಿ 60V/35 Ah ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್ ಉಪಯೋಗಿಸಲಾಗಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 110 km ರೇಂಜ್ ನೀಡುತ್ತದೆ. ಟ್ರೂ ರೆಡ್, ಸ್ಕಾರ್ಲೆಟ್ ರೆಡ್, ಪರ್ಲ್ ವೈಟ್, ಮೂನ್ ಗ್ರೇ, ಮಿಡ್ನೈಟ್ ಬ್ಲೂ ಸೇರಿದಂತೆ 6 ಬಣ್ಣಗಳ ಆಯ್ಕೆಯಲ್ಲಿ ಸಿಗಲಿದೆ.

ಒಕಿನಾವಾ ಪ್ರೈಸ್ ಪ್ರೊ (Okinawa Praise Pro) ರೂ.99,645 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. 2.08 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದ್ದು, ಫುಲ್ ಚಾರ್ಜ್‌ನಲ್ಲಿ 81 km ರೇಂಜ್ ಕೊಡುತ್ತದೆ. 56 kmph ಟಾಪ್ ಸ್ವೀಡ್ ಹೊಂದಿದೆ. USB ಚಾರ್ಜಿಂಗ್ ಪೋರ್ಟ್, ಆಂಟಿ ಥೆಫ್ಟ್ ಅಲಾರ್ಮ್‌, ಸೆಂಟ್ರಲ್ ಲಾಕಿಂಗ್, ರಿಮೋಟ್ ಕೀಲೆಸ್ ಎಂಟ್ರಿಯಂತಹ ವೈಶಿಷ್ಟ್ಯಗಳನ್ನು ಪಡೆದಿದೆ.

ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಸಿಎಕ್ಸ್ (Hero Electric Optima CX) ರೂ.85,190 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. 51.2V/30Ah ಸಾಮರ್ಥ್ಯದ ಡ್ಯೂಯೆಲ್ ಬ್ಯಾಟರಿ ಆಯ್ಕೆಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 140 km ರೇಂಜ್ ನೀಡುತ್ತದೆ. 45 kmph ಹೊಂದಿದೆ. ಟೆಲಿಸ್ಕೋಪಿಕ್ ಸಸ್ಪೆನ್ಷನ್, 12 ಇಂಚಿನ ಅಲಾಯ್ ವೀಲ್ಸ್, USB ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Article Published On: Friday, July 21, 2023, 9:49 [IST]
English summary
Top electric scooters india rs 1 5 lakh details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+