2023 ರಲ್ಲಿ ಬಿಡುಗಡೆಯಾದ ಟಾಪ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು

ಭಾರತದಲ್ಲಿ ದ್ವಿಚಕ್ರ ಎಲೆಕ್ಟ್ರಿಕ್ ವೆಹಿಕಲ್ (ಇವಿ) ವಿಭಾಗದಲ್ಲಿ ಸ್ಕೂಟರ್‌ಗಳು ಮಾತ್ರವಲ್ಲದೆ, ಈ ವರ್ಷ ಅನೇಕ ಎಲೆಕ್ಟ್ರಿಕ್ ಮೋಟಾರ್‌ ಸೈಕಲ್‌(Electric motorcycle) ಗಳನ್ನು ಸಹ ಬಿಡುಗಡೆ ಮಾಡಲಾಗಿದೆ. 2023 ರಲ್ಲಿ ದೇಶದಲ್ಲಿ ಬಿಡುಗಡೆಯಾದ ಪ್ರಮುಖ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳ ನೋಟ ಇಲ್ಲಿದೆ.

ಕೈನೆಟಿಕ್ ಜುಲು: ಕೈನೆಟಿಕ್‌ನ ಹೊಚ್ಚ ಹೊಸ ಜುಲು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇದೇ ತಿಂಗಳ ಆರಂಭದಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ಸ್ಟ್ಯಾಂಡರ್ಡ್ ಬ್ಯಾಟರಿ ಪ್ಯಾಕ್‌ಗಾಗಿ ಪರಿಚಯಾತ್ಮಕ ಬೆಲೆ ರೂ. 94,990 (ಎಕ್ಸ್-ಶೋರೂಮ್, ಮುಂಬೈ, FAME II ಸೇರಿದಂತೆ)ಗೆ ಪರಿಚಯಿಸಲಾಯಿತು. ಕೈನೆಟಿಕ್ ಆಯಿಲ್-ಕೂಲ್ಡ್ ಬ್ಯಾಟರಿ ಸೆಟಪ್‌ನೊಂದಿಗೆ ನಂತರದ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಕಂಪನಿ ಹೇಳಿದೆ.

top-electric-two-wheelers-launched-in-2023-details

ಟಿವಿಎಸ್ ಎಕ್ಸ್: ಟಿವಿಎಸ್ ಕಳೆದ ವರ್ಷದ ಆಗಸ್ಟ್‌ನಲ್ಲಿ ಎಕ್ಸ್ ಎಂಬ ಹೊಸ ಇವಿ ಸ್ಕೂಟರ್ ಅನ್ನು ಬಿಡುಗಡೆ ಮಾಡಿತು. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ 2.50 ಲಕ್ಷ ರೂಪಾಯಿ (ಎಕ್ಸ್-ಶೋರೂಮ್) ಆಗಿದೆ. ಇದು ಭಾರತದಲ್ಲಿ ತಯಾರಿಸಲಾಗುವ ಅತ್ಯಂತ ಪ್ರೀಮಿಯಂ ಸ್ಕೂಟರ್ ಆಗಿದೆ. ಇ-ಸ್ಕೂಟರ್‌ನ ವಿತರಣೆಗಳು ನವೆಂಬರ್‌ನಿಂದ ಪ್ರಾರಂಭವಾಗಬೇಕಾಗಿದ್ದರೂ, ಈ ಬಗ್ಗೆ ಕಂಪನಿ ಏನೂ ಹೇಳಿಲ್ಲ.

ಈ ಸ್ಕೂಟರ್ 4.44 kWh ಬ್ಯಾಟರಿ ಪ್ಯಾಕ್‌ನಿಂದ ಹಾಗೂ 11kW ಎಲೆಕ್ಟ್ರಿಕ್ ಮೋಟರ್‌ನಿಂದ ನಡೆಸಲ್ಪಡುತ್ತಿದೆ. ಸ್ಕೂಟರ್ 105 kmph ಗರಿಷ್ಠ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. 0 ಯಿಂದ 40 kmph ಅನ್ನು ಕೇವಲ 2.6 ಸೆಕೆಂಡುಗಳಲ್ಲಿ ತಲುಪುತ್ತದೆ. ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್‌ನ ನಿಖರವಾದ ರೇಂಜ್ ಅನ್ನು ಇನ್ನೂ ಬಹಿರಂಗಪಡಿಸಿಲ್ಲ.

top-electric-two-wheelers-launched-in-2023-details

Ola S1 X: ಓಲಾ ತನ್ನ ಅತ್ಯಂತ ಕೈಗೆಟುಕುವ S1-X ಅನ್ನು ಆಗಸ್ಟ್‌ನಲ್ಲಿ ಪರಿಚಯಿಸಿತು. ಬೆಲೆ ಕೇವಲ 89,999 (ಎಕ್ಸ್ ಶೋ ರೂಂ, FAME II ಸಬ್ಸಿಡಿ ಸೇರಿದಂತೆ). ಇದು ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಬರುತ್ತದೆ. 2 kWh ಮತ್ತು 3 kWh- ಕ್ರಮವಾಗಿ 85 ಕಿ.ಮೀ ಮತ್ತು 90 ಕಿ.ಮೀ ರೇಂಜ್ ನೀಡುತ್ತವೆ. 40 ಕಿ.ಮೀ ವೇಗವನ್ನು 4.1 ಸೆಕೆಂಡುಗಳಲ್ಲಿ ತಲುಪಬಲ್ಲವು.

ಓರ್ಕಾ ಮಾಂಟಿಸ್: ಓರ್ಕ್ಸಾ ಎನರ್ಜಿಸ್ ಈ ವರ್ಷದ ನವೆಂಬರ್‌ನಲ್ಲಿ ಹೊಸ ಮ್ಯಾಂಟಿಸ್ ಅನ್ನು ಬಿಡುಗಡೆ ಮಾಡಿತು. ರೂ. 3.60 ಲಕ್ಷ (ಎಕ್ಸ್ ಶೋರೂಂ) ಬೆಲೆಯ, Mantis 8.9kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದು ಒಂದೇ ಚಾರ್ಜ್‌ನಲ್ಲಿ 221 km IDC ರೇಂಜ್ ಹೊಂದಿದೆ. 3.3kW ವೇಗದ ಚಾರ್ಜರ್‌ನಲ್ಲಿ 2.5 ಗಂಟೆಗಳಲ್ಲಿ ಶೇ 80% ವರೆಗೆ ಚಾರ್ಜ್ ಮಾಡಬಹುದು.

top-electric-two-wheelers-launched-in-2023-details

ಸಿಂಪಲ್ ಡಾಟ್ ಒನ್: ಸಿಂಪಲ್ ಎನರ್ಜಿಸ್ ಈ ವರ್ಷದ ಡಿಸೆಂಬರ್‌ನಲ್ಲಿ ಹೊಸ ಪ್ರವೇಶ ಮಟ್ಟದ ಸ್ಕೂಟರ್ ಅನ್ನು ಬಿಡುಗಡೆ ಮಾಡಿತು. ರೂ. 1.0 ಲಕ್ಷ (ಎಕ್ಸ್ ಶೋರೂಂ) ಬೆಲೆಯ ಡಾಟ್ ಒನ್ 8.5 kW ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಿದ್ದು, ಕೇವಲ 2.77 ಸೆಕೆಂಡುಗಳಲ್ಲಿ 40 ಕಿ.ಮೀ ವೇಗವನ್ನು ತಲುಪುತ್ತದೆ. ಇದರ ಗರಿಷ್ಠ ವೇಗ 105 ಕಿಮೀ ಎಂದು ರೇಟ್ ಮಾಡಲಾಗಿದೆ.

ಒಬೆನ್ ರೋರ್: ಕಳೆದ ವರ್ಷ ಅನಾವರಣಗೊಂಡ ಓಬೆನ್ ರೋರ್ ಅನ್ನು ಈ ವರ್ಷದ ಜುಲೈನಲ್ಲಿ ನವೀಕರಿಸಿದ ಅವತಾರದಲ್ಲಿ ರೂ. 1.50 ಲಕ್ಷಕ್ಕೆ (ಎಕ್ಸ್ ಶೋ ರೂಂ) ಬಿಡುಗಡೆ ಮಾಡಲಾಯಿತು. ಇದು 8.8kW PMS ಮೋಟಾರ್‌ನಿಂದ ಚಾಲಿತವಾಗಿದ್ದು, 100 ಕಿ.ಮೀ ಗರಿಷ್ಠ ವೇಗವನ್ನು ತಲುಪಬಲ್ಲದು. ಇದು 4.4 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಸಜ್ಜುಗೊಂಡಿದೆ, ಒಂದೇ ಚಾರ್ಜ್‌ನಲ್ಲಿ 187 ಕಿ.ಮೀ ರೇಂಜ್ ನೀಡುತ್ತದೆ.

More from DriveSpark

Article Published On: Thursday, December 21, 2023, 17:13 [IST]
English summary
Top electric two wheelers launched in 2023 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+