ದಾಖಲೆ ಸೃಷ್ಟಿ: ಭಾರತದಲ್ಲಿ ಓಲಾ ಸ್ಕೂಟರ್‌ಗಳೇ ನಂಬರ್ 1

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬಹು ಬೇಡಿಕೆ ಸೃಷ್ಟಿಯಾಗಿದೆ. 2023 ಫೆಬ್ರವರಿ ತಿಂಗಳ ಮಾರಾಟ ಅಂಕಿ ಅಂಶ ಪ್ರಕಟವಾಗಿದೆ. ಸರ್ಕಾರಿ ಸ್ವಾಮ್ಯದ 'ವಾಹನ್ ಪೋರ್ಟಲ್' ಪ್ರಕಾರ, ಓಲಾ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದು, ಟಿವಿಎಸ್ ಮೋಟಾರ್ ಎರಡನೇ ಸ್ಥಾನದಲ್ಲಿದೆ. ಉಳಿದ ಕಂಪನಿಗಳು ಯಾವ ರೀತಿಯಲ್ಲಿ ಪ್ರಗತಿ ಸಾಧಿಸಿವೆ ಎಂಬುದನ್ನು ತಿಳಿಯೋಣ.

ಓಲಾ ಎಲೆಕ್ಟ್ರಿಕ್: ಭಾರತದ ಮಾರುಕಟ್ಟೆಯಲ್ಲಿ ಓಲಾ ಸ್ಕೂಟರ್ ಗಳಿಗೆ ಸರಿ ಸಾಟಿಯೇ ಇಲ್ಲ ಎಂದು ಹೇಳಬಹುದು. ಫೆಬ್ರವರಿ ತಿಂಗಳಲ್ಲಿ ಬರೋಬ್ಬರಿ 17,667 ಯುನಿಟ್ ಮಾರಾಟ ಮಾಡಿದೆ. ಶೇಕಡ 27% ಮಾರುಕಟ್ಟೆ ಪಾಲು ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಆದರೆ, ಜನವರಿ ತಿಂಗಳಲ್ಲಿ 18,282 ಯುನಿಟ್ ಸೇಲ್ ಮಾಡಿತ್ತು. ಅದಕ್ಕೆ ಹೋಲಿಸಿದರೆ, ಕೊಂಚ ಇಳಿಕೆಯಾಗಿದೆ. ಅಲ್ಲದೆ, ಕಳೆದ 11 ತಿಂಗಳಲ್ಲಿ 1,29,866 ಯುನಿಟ್ ಸ್ಕೂಟರ್ ಮಾರಾಟ ಮಾಡಲು ಯಶಸ್ವಿಯಾಗಿದೆ.

ದಾಖಲೆ ಸೃಷ್ಟಿ: ಭಾರತದಲ್ಲಿ ಓಲಾ ಸ್ಕೂಟರ್‌ಗಳೇ ನಂಬರ್ 1

ಭಾರತದ ಮಾರುಕಟ್ಟೆಯಲ್ಲಿ ಓಲಾದ ಕಡಿಮೆ ಬೆಲೆಯ ಸ್ಕೂಟರ್ ಎಸ್1 ಏರ್, ಬ್ಯಾಟರಿ ಪ್ಯಾಕ್ ಗೆ ಅನುಗುಣವಾಗಿ ರೂ.84,999, ರೂ.99,999 ಹಾಗೂ ರೂ.1,09,999 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. ಓಲಾ ಎಸ್1 ರೂ.ರೂ.99,999 ದಿಂದ ರೂ.1,09,999 ಬೆಲೆಯನ್ನು ಪಡೆದಿದೆ. ಓಲಾದ ಟಾಪ್ ಎಂಡ್ ಸ್ಕೂಟರ್ ಎಸ್1 ಪ್ರೊ, ರೂ.1,29,999 ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ಸಿಗಲಿದ್ದು, 181 km ರೇಂಜ್ ನೀಡಲಿದ್ದು, 116 kmph ಟಾಪ್ ಸ್ವೀಡ್ ಹೊಂದಿದೆ.

ಟಿವಿಎಸ್: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟದಲ್ಲಿ ಕಂಪನಿಯು ಎರಡನೇ ಸ್ಥಾನದಲ್ಲಿದೆ. ಮಾರುಕಟ್ಟೆಯಲ್ಲಿ ಶೇಕಡ 19% ಪಾಲನ್ನು ತನ್ನದಾಗಿಸಿಕೊಂಡಿದೆ. ಫೆಬ್ರವರಿಯಲ್ಲಿ 12,573 ಯುನಿಟ್ ಮಾರಾಟ ಮಾಡಿ, ದಾಖಲೆ ನಿರ್ಮಿಸಿದೆ. ಜನವರಿಯಲ್ಲಿ 10,423 ಯುನಿಟ್ ಸೇಲ್ ಮಾಡಿತ್ತು. ಆದರೆ, ಫೆಬ್ರವರಿಯಲ್ಲಿ 15,522 ಯುನಿಟ್ ಮಾರಾಟ ಮಾಡಲಾಗಿದೆ ಎಂದು ಟಿವಿಎಸ್ ಕಂಪನಿ ಹೇಳಿಕೊಂಡಿದೆ. ಅಂಕಿ ಅಂಶದ ಗೊಂದಲವಿದೆ. ಪರಿಶೀಲನೆ ನಡೆಸಿದಾಗ 'ವಾಹನ್ ಪೋರ್ಟಲ್' ಕೆಲವು ರಾಜ್ಯಗಳ ಮಾರಾಟ ವಿವರವನ್ನು ನೀಡಿಲ್ಲ.

ದಾಖಲೆ ಸೃಷ್ಟಿ: ಭಾರತದಲ್ಲಿ ಓಲಾ ಸ್ಕೂಟರ್‌ಗಳೇ ನಂಬರ್ 1

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಿವಿಎಸ್ ಐಕ್ಯೂಬ್, ಬೆಂಗಳೂರಿನಲ್ಲಿ ರೂ. 1,12,231 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಸಂಪೂರ್ಣ ಚಾರ್ಜಿನಲ್ಲಿ 100 Km ರೇಂಜ್ ನೀಡಲಿದ್ದು, 78 Kmph ಟಾಪ್ ಸ್ವೀಡ್ ಹೊಂದಿದೆ. ಎರಡು ರೂಪಾಂತರ ಹಾಗೂ ಏಳು ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಮನೆಯ ವಿದ್ಯುತ್ ಬಳಕೆಯಲ್ಲಿ ಐದು ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ.

ಎಥರ್ ಎನರ್ಜಿ: ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಎಥರ್, ಫೆಬ್ರವರಿಯಲ್ಲಿ 10,013 ಯುನಿಟ್ ಮಾರಾಟ ಮಾಡಿದೆ. ಅದೇ ಜನವರಿಯಲ್ಲಿ 9,139 ಯುನಿಟ್ ಸೇಲ್ ಮಾಡಿತ್ತು. ಜೊತೆಗೆ ಕಳೆದ 11 ತಿಂಗಳಲ್ಲಿ 63,963 ಯುನಿಟ್ ಸ್ಕೂಟರ್ ಮಾರಾಟ ಮಾಡಿದೆ. ಎಥರ್ ದೇಶೀಯ ಮಾರುಕಟ್ಟೆಯಲ್ಲಿ '450X Gen 3' ಸ್ಕೂಟರ್ ಮಾರಾಟ ಮಾಡುತ್ತಿದ್ದು, ಬೆಂಗಳೂರಿನಲ್ಲಿ ರೂ.1,41,375 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, 108 Km ರೇಂಜ್ ನೀಡಲಿದೆ.

ಆಂಪಿಯರ್: ಭಾರತ ಎಲೆಕ್ಟ್ರಿಕ್ ದ್ವಿಚಕ್ರ ಮಾರಾಟ ವಿಭಾಗದಲ್ಲಿ ಆಂಪಿಯರ್ ನಾಲ್ಕನೇ ಸ್ಥಾನದಲ್ಲಿ ಮುಂದುವರಿದ್ದು, ಫೆಬ್ರವರಿಯಲ್ಲಿ 5,842 ಸೇಲ್ ಮಾಡಿದೆ. ಕಳೆದ 11 ತಿಂಗಳಲ್ಲಿ ಒಟ್ಟು 74,932 ಯುನಿಟ್ ಮಾರಾಟ ಮಾಡಿದೆ. ಆಂಪಿಯರ್ ಕೆಲವೇ ದಿನಗಳ ಹಿಂದೆ 'ಪ್ರೈಮಸ್'ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದ್ದು, ಬೆಂಗಳೂರಿನಲ್ಲಿ ರೂ.1,22,034 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. ಸಂಪೂರ್ಣ ಚಾರ್ಜಿನಲ್ಲಿ 107 Km ರೇಂಜ್ ನೀಡಲಿದ್ದು, 77 Kmph ಟಾಪ್ ಸ್ವೀಡ್ ಹೊಂದಿದೆ.

ಹೀರೋ ಎಲೆಕ್ಟ್ರಿಕ್: ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಹೀರೋ, ಫೆಬ್ರವರಿಯಲ್ಲಿ 5,861 ಯುನಿಟ್ ಮಾರಾಟ ಮಾಡಿದೆ. ಅದೇ ಜನವರಿಯಲ್ಲಿ 6,393 ಯುನಿಟ್ ಸೇಲ್ ಮಾಡಿತ್ತು. ಹೀರೋ 'ವಿಡಾ ವಿ1' ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಎರಡು ರೂಪಾಂತರಗಳಲ್ಲಿ ಮಾರಾಟ ಮಾಡುತ್ತಿದೆ. ಅವುಗಳೆಂದರೆ, ವಿ1 ಪ್ರೊ ಹಾಗೂ ವಿ1 ಪ್ಲಸ್. ಕ್ರಮವಾಗಿ 3.94kWh, 3.44kWh ಬ್ಯಾಟರಿ ಪ್ಯಾಕ್ ಪಡೆದಿವೆ. ಅಲ್ಲದೆ, 80 kmph ಟಾಪ್ ಸ್ವೀಡ್ ಹೊಂದಿವೆ.

ಓಕಿನಾವಾ & ಬಜಾಜ್: ಈಗಷ್ಟೇ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಮುನ್ನೆಲೆಗೆ ಬರುತ್ತಿರುವ ಓಕಿನಾವಾ, ಫೆಬ್ರವರಿ ತಿಂಗಳಲ್ಲಿ 3,842 ಯುನಿಟ್ ಮಾರಾಟ ಮಾಡಿದೆ. ಓಕಿನಾವಾ ಭಾರತದಲ್ಲಿ ಆರಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡುತ್ತಿದೆ. ಅದರಲ್ಲಿ 'OKHI-90' ಟಾಪ್ ಎಂಡ್ ಮಾದರಿಯಾಗಿದ್ದು, ರೂ. 2,04,520 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಬಜಾಜ್ ಫೆಬ್ರವರಿ ತಿಂಗಳಲ್ಲಿ ಅತಿಕಡಿಮೆ 1,314 ಯುನಿಟ್ ಸೇಲ್ ಮಾಡಿದೆ. ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ರೂ.1,29,405 ಬೆಲೆಯಲ್ಲಿ ಖರೀದಿಗೆ ಸಿಗಲಿದೆ.

Article Published On: Thursday, March 9, 2023, 10:40 [IST]
English summary
Top ev sales chart february india details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+