ಹಾರ್ಲೆ To ಕರೀಜ್ಮಾ: 2023ರಲ್ಲಿ ಬಿಡುಗಡೆಯಾದ ಭಾರತೀಯರ ಟಾಪ್‌ 5 ಡ್ರೀಮ್‌ ಬೈಕ್‌ಗಳು

2023 ಅಂತೂ ಬೈಕ್ ಪ್ರೀಯರ ಪಾಲಿಗೆ ಹಬ್ಬವಾದ ವರ್ಷ ಎಂದರೆ ಕಿಂಚಿತ್ತೂ ತಪ್ಪಾಗಲಾರದು. ಯಾಕೆಂದರೆ ಈ ವರ್ಷದಲ್ಲಿ ಭಾರತೀಯ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿದ ಬೈಕ್‌ಗಳಂತೂ ಎಲ್ಲರ ಮನಗೆಲ್ಲುವಲ್ಲಿ ಸಫಲವಾಗಿದೆ. ಇಂದಿನ ಈ ಲೇಖನದಲ್ಲಿ ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಟಾಪ್‌ 5 ಬೈಕ್‌ಗಳ ಕಡೆ ಕಣ್ಣಾಡಿಸೋಣ.

ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ 450: ಈ ವರ್ಷ ಮಾರುಕಟ್ಟೆಗೆ ಬದಂತಹ ಪ್ರಮುಖ ಬೈಕ್‌ಗಳಲ್ಲಿ ಈ ಹೊಸ ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ 450 ಪ್ರಮುಖವಾದುದು. ಈ ಹಿಂದೆ ಕಾಣದಂತಹ ಡಿಸೈನ್‌ ಮತ್ತು ಪರ್ಫಾಮೆನ್ಸ್ ಜೊತೆಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಬೈಕ್‌, ದ್ವಿಚಕ್ರ ಪ್ರೀಯರ ನೆಚ್ಚಿನ ಬೈಕಾಗಿ ಹೊರಹೊಮ್ಮಿದೆ. ಈಗಾಗಲೇ ಈ ಬೈಕ್‌ ಕುರಿತಾಗಿ ಹಲವಾರು ತಜ್ಞರು ತಮ್ಮ ಅಭಿಪ್ರಾಯಗಳನ್ನು ಹೊರ ಹಾಕಿದ್ದು ಭಾರತೀಯ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸುವುದರಲ್ಲಿ ಎರಡು ಮಾತಿಲ್ಲ.

Dream Bikes

ಕೆಟಿಎಂ 390 ಡ್ಯೂಕ್‌: ಹಲವಾರು ನಿರೀಕ್ಷೆಗಳೊಂದಿಗೆ ಮಾರುಕಟ್ಟೆಗೆ ಬಂದಿ ಹೊಸ ಕೆಟಿಎಂ 390 ಡ್ಯೂಕ್ ತನ್ನ ಅಭಿಮಾನಿಗಳ ನಿರೀಕ್ಷೆಯಂತೆ ಎಂಜಿನ್‌ ಮತ್ತು ಹೊರಾಂಗಣ ವಿಭಾಗದ ವಿನ್ಯಾಸದಲ್ಲಿ ಹಲವಾರು ಮಾರ್ಪಾಡುಗಳನ್ನು ಮಾಡಿಕೊಂಡು ಮಾರುಕಟ್ಟೆಗೆ ಈ ವರ್ಷ ಲಾಂಚ್‌ ಆಗಿತ್ತು. ಈ ಬೈಕಿನಲ್ಲಿ 398.63 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಇದ್ದು, 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 46 HP ಪವರ್, 39 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಹೀರೋ ಕರೀಜ್ಮಾ XMR: ಒಂದು ಕಾಲದಲ್ಲಿ ಭಾರತೀಯ ಬೈಕ್‌ ಮಾರುಕಟ್ಟೆಯನ್ನು ಆಳಿದ್ದ ಕರೀಜ್ಮಾ ZMR ಉತ್ಪಾದನೆ ನಿಂತ ಅಂದಿನಿಂದ ಇಲ್ಲಿಯವರೆಗೆ ಈ ಬೈಕ್‌ ಮತ್ತೆ ಯಾವಾಗ ಲಾಂಚ್‌ ಆಗುತ್ತದೆ ಎಂದು ಶಬರಿಯಂತೆ ಕಾಯುತ್ತಾ ಕುಳಿತಿದ್ದ ಬೈಕ್‌ ಪ್ರೇಮಿಗಳಿಗೆ ಪೂರ್ಣ ವಿರಾಮ ನೀಡಿದ ವರ್ಷ 2023. ಹೀರೋ ಕರೀಜ್ಮಾ XMR ಬೈಕ್‌ ಲಾಂಚ್‌ ಆದಾಗ ಭಾರತೀಯರಿಗೆ ಆದ ಖುಷಿ ಅಷ್ಟಿಷ್ಟಲ್ಲ. ಗತಕಾಲದ ವೈಭವವನ್ನು ಈ ಬೈಕ್‌ ಮುಂದುವರೆಸುತ್ತದೆಯೇ ಎಂಬುದನ್ನು ಕಾದು ನೊಡಬೇಕಾಗಿದೆ.

Dream Bikes

ಹೊಸ ಹೀರೋ ಕರೀಜ್ಮಾ XMR ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 1.80 ಲಕ್ಷ ಬೆಲೆ ಹೊಂದಿದೆ. ಹೊಸ ಬೈಕಿನಲ್ಲಿ ಅತ್ಯುತ್ತಮ ಪರ್ಫಾಮೆನ್ಸ್ ಗಾಗಿ ಸ್ಲಿಪ್ ಅಂಡ್ ಅಸಿಸ್ಟ್ ಕ್ಲಚ್ ಸಾಥ್‌ ನೀಡುತ್ತಿದ್ದು, ಈ ಬೈಕ್‌ಗೆ 210 ಸಿಸಿ ಸಿಂಗಲ್ ಸಿಲಿಂಡರ್ ಡಿಏಹೆಚ್ ಸಿ, ಲಿಕ್ವಿಡ್ ಕೂಲ್ಡ್ ಎಂಜಿನ್ ಜೋಡಣೆ ಮಾಡಲಾಗಿದೆ. 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 25.1 ಹಾರ್ಸ್ ಪವರ್ ಮತ್ತು 20.4 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು

ಟ್ರಯಂಫ್‌ ಸ್ಪೀಡ್‌ 400, ಸ್ಕ್ರಾಂಬ್ಲರ್ 400 ಎಕ್ಸ್‌: ವಿಶ್ವ ವಿಖ್ಯಾತ ಬೈಕ್‌ ನಿರ್ಮಾಣ ಕಂಪನಿ ಟ್ರಯಂಫ್‌ ಭಾರತದಲ್ಲಿ ಕೈಗಟುಕುವ ಬೆಲೆಯಲ್ಲಿ ಬೈಕ್‌ಗಳನ್ನು ಪರಿಚಯಿಸಿದ ವರ್ಷ 2023. 400 ಸಿಸಿ ಸೆಗ್ಮೆಂಟ್‌ನಲ್ಲಿ ಟ್ರಯಂಫ್‌ ಈ ವರ್ಷ ಟ್ರಯಂಫ್‌ ಸ್ಪೀಡ್‌ 400, ಸ್ಕ್ರಾಂಬ್ಲರ್ 400 ಎಕ್ಸ್‌. ಟ್ರಯಂಫ್‌ ಈ ಹೊಸ ಬೈಕ್‌ಗಳಲ್ಲಿ 398 ಸಿಸಿ ಲಿಕ್ವಿಡ್ ಕೋಲ್ಡ್ ಎಂಜಿನ್ ಜೋಡಣೆ ಮಾಡಿದ್ದು, 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 39.5 ಹಾರ್ಸ್ ಪವರ್ ಉತ್ಪಾದಿಸುತ್ತವೆ.

Dream Bikes

ಹಾರ್ಲೆ ಡೇವಿಡ್ಸನ್‌ ಎಕ್ಸ್‌440: ಹೀರೋ ಮೋಟೋಕಾರ್ಪ್‌ ಸಹಭಾಗಿತ್ವದಲ್ಲಿ ಹಾರ್ಲೆ ಡೇವಿಡ್ಸನ್‌ ಕಂಪನಿಯು ಭಾರತದಲ್ಲಿ ಅಗ್ಗದ ಬೆಲೆಗೆ ಲಾಂಚ್‌ ಮಾಡಿದಂತಹ ಬೈಕ್‌ ಈ ಹಾರ್ಲೆ ಡೇವಿಡ್ಸನ್‌ ಎಕ್ಸ್‌440. ಈ ಬೈಕ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 2.29 ಲಕ್ಷದಿಂದ ಆರಂಭವಾಗುತ್ತಿದ್ದು ಕಡಿಮೆ ಬೆಲೆಗೆ ಹೊಸ ಹಾರ್ಲೆ ಡೇವಿಡ್ಸನ್‌ ಬೈಕ್‌ ಕೊಳ್ಳುವವರ ನೆಚ್ಚಿನ ಆಯ್ಕೆ ಇದಾಗಿರಲಿದೆ.

ಇನ್ನು ಹಾರ್ಲೆ ಡೇವಿಡ್ಸನ್‌ ಎಕ್ಸ್‌440 ಬೈಕ್‌ನ ಇತರ ವಿಷಯಗಳ ಕುರಿತು ಮಾತನಾಡುವುದಾದರೆ, ಈ ಬೈಕ್‌ಗೆ 440 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಇದು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 27 ಹಾರ್ಸ್ ಪವರ್ ಮತ್ತು 38 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಈ ಬೈಕ್‌ಗೆ ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, December 28, 2023, 16:20 [IST]
English summary
Top five dream bikes of 2023 launched in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+