TORK ಮೋಟಾರ್ಸ್ ಗ್ರಾಹಕರೇ ಚಾರ್ಜಿಂಗ್ ಆತಂಕವೇ ಬೇಡ: ನಿಮಗಾಗಿ ಕಂಪನಿ ಭರ್ಜರಿ ಒಪ್ಪಂದ

TORK ಮೋಟಾರ್ಸ್ ಭಾರತದ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಕಂಪನಿಯಾಗಿದ್ದು, ಇವರು ತಮ್ಮ ಗ್ರಾಹಕರಿಗೆ ಚಾರ್ಜಿಂಗ್ ಸಮಸ್ಯೆಯನ್ನು ನೀಗಿಸಲು ಹೊಸ ಆಲೋಚನೆಯೊಂದಿಗೆ ಮುಂದೆಬಂದಿದ್ದಾರೆ. ಭಾರತದ ಪ್ರಮುಖ EV ಸಾಫ್ಟ್‌ವೇರ್ ಮತ್ತು ಚಾರ್ಜಿಂಗ್ ಮೂಲಸೌಕರ್ಯ ಪೂರೈಕೆದಾರರಾದ Bolt.Earth ಅವರೊಂದಿಗೆ ಕೈಜೋಡಿಸಿ ಚಾರ್ಜಿಂಗ್ ಮೂಲಸೌಕರ್ಯವನ್ನು ಹೆಚ್ಚಿಸಲು ಹೊರಟಿದ್ದಾರೆ.

ಈ ಪಾಲುದಾರಿಕೆಯೊಂದಿಗೆ, TORK ಮೋಟಾರ್ಸ್ ಗ್ರಾಹಕರು ಈಗ 30,000 ಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್‌ಗಳ Bolt.Earth ನ ನೆಟ್‌ವರ್ಕ್‌ಗೆ ಪ್ರವೇಶವನ್ನು ಹೊಂದಬಹುದಾಗಿದೆ. ಈ ಪಾಲುದಾರಿಕೆಯು ಗ್ರಾಹಕರಿಗೆ ಅವರ ಅನುಕೂಲಕ್ಕೆ ಅನುಗುಣವಾಗಿ ಚಾರ್ಜಿಂಗ್ ಪಾಯಿಂಟ್ ಅನ್ನು ಅವರ ಹತ್ತಿರ ಹುಡುಕುವ ನಮ್ಯತೆಯನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ಟಾರ್ಕ್ ಮೋಟಾರ್ಸ್ ತಿಳಿಸಿದೆ.

tork-motors-bolt-earth-partner-make-charging-infrastructure

Bolt.Earth ಪ್ರಸ್ತುತ ಭಾರತದಾದ್ಯಂತ 1,100 ಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರ ನೆಟ್‌ವರ್ಕ್ ಈಗ TORK Kratos R ಬೈಕ್‌ಗಳನ್ನು ಹೊಂದಿರುವ ರೈಡರ್‌ಗಳಿಗೆ ದೇಶದಲ್ಲಿ ಲಭ್ಯವಿರುತ್ತದೆ. TORK ಮೋಟಾರ್ಸ್ ಮತ್ತು Bolt.Earth ಎರಡೂ ಲೈಟ್ EV ಗಳಿಗೆ ಇಂಟರ್‌ಆಪರೇಬಲ್ DC ಚಾರ್ಜಿಂಗ್ ಮೂಲಸೌಕರ್ಯವನ್ನು ನೀಡಲು ಭಾರತ್ ಚಾರ್ಜ್ ಅಲೈಯನ್ಸ್‌ನ ಭಾಗವಾಗಿದೆ.

ಈ ಪಾಲುದಾರಿಕೆಯು KRATOS-R ಮಾಲೀಕರಿಗೆ ಪ್ರಯಾಣದಲ್ಲಿರುವಾಗ ತಮ್ಮ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಸುಲಭವಾಗಿ ಚಾರ್ಜ್ ಮಾಡಲು ಸಹಾಯ ಮಾಡುತ್ತದೆ. ಈ ಚಾರ್ಜಿಂಗ್ ಪಾಯಿಂಟ್‌ಗಳನ್ನು TORK ನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಅಸ್ತಿತ್ವದಲ್ಲಿರುವ ಚಾರ್ಜಿಂಗ್ ಮೂಲಸೌಕರ್ಯಕ್ಕಾಗಿ ನೀಡಲಾಗಿರುವ ಮ್ಯಾಪ್‌ಗೆ ಎಂಬೆಡ್ ಮಾಡಲಾಗುತ್ತದೆ. ಈ ಮೂಲಕ ಸುತ್ತಮುತ್ತಲಿನ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು ಎಂದು ಕಂಪನಿ ತಿಳಿಸಿದೆ.

tork-motors-bolt-earth-partner-make-charging-infrastructure

ಪ್ರಸ್ತುತ, TORK ಮೋಟಾರ್ಸ್ KRATOS-R ಅನ್ನು ಸ್ಟ್ಯಾಂಡರ್ಡ್ ಜೊತೆಗೆ ಅರ್ಬನ್ ಟ್ರಿಮ್ ಆಯ್ಕೆಗಳೊಂದಿಗೆ ನೀಡುತ್ತಿದೆ. ಆಕರ್ಷಕ ವಿನ್ಯಾಸ, ಪಂಚ್ ಪವರ್‌ಟ್ರೇನ್ ಮತ್ತು ಸಮರ್ಥ ಚಾಸಿಸ್‌ನಲ್ಲಿ ಇದನ್ನು ನಿರ್ಮಿಸಲಾಗಿದೆ. ಇದು ಪ್ರೀಮಿಯಂ ಕಮ್ಯೂಟರ್ ಮೋಟಾರ್‌ಸೈಕಲ್ ಆಗಿದ್ದು, ಅದರ ಸ್ಪೋರ್ಟಿ ಡಿಸೈನ್ ನೋಡುಗರನ್ನು ಆಕರ್ಷಿಸುತ್ತದೆ. ಹಾಗೆಯೇ ಉತ್ತಮ ಪರ್ಫಾಮೆನ್ಸ್ ಮತ್ತು ನಿರ್ವಹಣೆಯನ್ನು ನೀಡುತ್ತದೆ.

ಇನ್ನು Bolt.Earth ನ EV ಚಾರ್ಜಿಂಗ್ ನೆಟ್‌ವರ್ಕ್ ಬಗ್ಗೆ ಹೇಳುವುದಾದರೆ, ಇದು 1,200 MWh ಶಕ್ತಿಯನ್ನು ವಿತರಿಸಿದೆ. ವಿವಿಧ EV ಪ್ಲಾಟ್‌ಫಾರ್ಮ್‌ಗಳಲ್ಲಿ ಹೊಂದಿಕೆಯಾಗುವ ಸ್ಮಾರ್ಟ್, ಸುರಕ್ಷಿತ ಮತ್ತು ಸರಳ ಚಾರ್ಜಿಂಗ್ ಸಾಧನಗಳೊಂದಿಗೆ 1,50,000 ಕ್ಕೂ ಹೆಚ್ಚು ಬಳಕೆದಾರರನ್ನು ಸಜ್ಜುಗೊಳಿಸಿದೆ. ಸದ್ಯ ತನ್ನ ಹೆಗ್ಗುರುತನ್ನು ಬೆಳೆಸುವಲ್ಲಿ ಸತತವಾಗಿ ಮುನ್ನುಗ್ಗುತ್ತಿದೆ.

tork-motors-bolt-earth-partner-make-charging-infrastructure

ಇವರ ಪಾಲುದಾರಿಕೆ ಕುರಿತು TORK ಮೋಟಾರ್ಸ್‌ನ ಸಂಸ್ಥಾಪಕ ಮತ್ತು ಸಿಇಒ ಕಪಿಲ್ ಶೆಲ್ಕೆ ಮಾತನಾಡಿ, "ಬ್ರಾಂಡ್‌ನಂತೆ, ಮೈಲೇಜ್ ಆತಂಕವು EV ಬಳಕೆದಾರರಲ್ಲಿ ಇನ್ನೂ ಕಾಡುತ್ತಿರುವುದು ನಮಗೆ ತಿಳಿದಿದೆ. ಹೆಚ್ಚಿನ ಜನರು ತಮ್ಮ ವಾಹನಗಳನ್ನು ಮನೆಯಲ್ಲಿಯೇ ಚಾರ್ಜ್ ಮಾಡಿದ್ರೂ ಕೂಡ ದಿನವಿಡೀ ಹೊರಗಡೆ ಒಡಾಡುವಾಗ ಇತರ ಸ್ಥಳಗಳಲ್ಲಿನ ಚಾರ್ಜಿಂಗ್ ಸ್ಟೇಷನ್‌ಗಳಿಗೆ ಪ್ರವೇಶ ಪಡೆದರೆ ಆ ಚಿಂತೆಗಳನ್ನು ಕಡಿಮೆ ಮಾಡುತ್ತದೆ.

ಹಾಗಾಗಿಯೇ Bolt.Earth ಜೊತೆಗಿನ ನಮ್ಮ ಪಾಲುದಾರಿಕೆಯು ನಮ್ಮ ಗ್ರಾಹಕರಿಗೆ ಶಾಂತಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಅನೇಕ ಚಾರ್ಜಿಂಗ್ ಪಾಯಿಂಟ್‌ಗಳಿಗೆ ಅವರ ನಗರಗಳಲ್ಲಿ ಪ್ರವೇಶವನ್ನು ನೀಡುವ ಮೂಲಕ ಈ ಉಪಕ್ರಮವು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವವರಲ್ಲಿ ಚಾರ್ಜಿಂಗ್ ಮತ್ತು ಶ್ರೇಣಿಯ ಆತಂಕವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ ಎಂದರು.

tork-motors-bolt-earth-partner-make-charging-infrastructure

Bolt.Earth ನ ಸ್ಟ್ರಾಟಜಿ ಮತ್ತು ಲೀಡರ್‌ಶಿಪ್ ಮುಖ್ಯಸ್ಥ ರಾಘವ್ ಭಾರದ್ವಾಜ್ ಮಾತನಾಡಿ, "Bolt.Earth ನ ಧ್ಯೇಯವು EV ಲ್ಯಾಂಡ್‌ಸ್ಕೇಪ್ ಅನ್ನು ಪ್ರವೇಶಿಸಬಹುದಾದ ಚಾರ್ಜಿಂಗ್ ಮೂಲಸೌಕರ್ಯಗಳ ಮೂಲಕ ವಿಶ್ವಾದ್ಯಂತ ಕ್ರಾಂತಿಗೊಳಿಸುವುದಾಗಿದೆ. ಭಾರತ್ ಚಾರ್ಜ್ ಅಲೈಯನ್ಸ್ ರೂಪಿಸಿದ ಉಪಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು EVcel ಅನ್ನು ಅಳವಡಿಸಿಕೊಳ್ಳುವ ನಮ್ಮ ಬದ್ಧತೆಗೆ ಬಲವಾಗಿ ಹೊಂದಿಕೊಳ್ಳುತ್ತದೆ.

ಮುಂಬರುವ ವರ್ಷಗಳಲ್ಲಿ ಟಾರ್ಕ್ ಮೋಟಾರ್ಸ್ ಜೊತೆಗಿನ ಪಾಲುದಾರಿಕೆಯು ಭಾರತವನ್ನು ಎಲೆಕ್ಟ್ರಿಕ್ ಭವಿಷ್ಯಕ್ಕಾಗಿ ಜಾಗತಿಕ ಕೇಂದ್ರವಾಗಿ ಇರಿಸುವ ನಮ್ಮ ದೃಷ್ಟಿಯನ್ನು ಪ್ರತಿಧ್ವನಿಸುತ್ತದೆ. ಈ ಕಾರ್ಯತಂತ್ರದ ಸಹಯೋಗವು ಭಾರತದಾದ್ಯಂತ EV ಬಳಕೆದಾರರಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ, ನಮ್ಮ ಅತ್ಯಾಧುನಿಕ ಚಾರ್ಜಿಂಗ್ ಮೂಲಸೌಕರ್ಯವನ್ನು ಪ್ರವೇಶಿಸಲು ಅವರಿಗೆ ಅನುವು ಮಾಡಿಕೊಡುತ್ತದೆ ಎಂದರು.

More from DriveSpark

Article Published On: Wednesday, October 11, 2023, 11:38 [IST]
English summary
Tork motors bolt earth partner make charging infrastructure
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+