ದ್ವಿಚಕ್ರ ವಾಹನಗಳಿಗಾಗಿ ಏರ್‌ಬ್ಯಾಗ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ ಹೋಂಡಾ: ಸುರಕ್ಷತೆ ಡಬಲ್ ಸ್ಟ್ರಾಂಗ್
ಇತ್ತೀಚೆಗಿನ ವರ್ಷಗಳಲ್ಲಿ ವಾಹನಗಳು ಖರೀದಿಸುವ ಗ್ರಾಹಕರು ಹೆಚ್ಚಾಗಿ ಅದರ ಸುರಕ್ಷತೆಯ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ಜನರು ಈಗ ಸುರಕ್ಷಿತ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ವಾಹನ ತಯಾರಕರು ಕೂಡ ತಮ್ಮ ವಾಹನಗಳಲಿ ಹೆಚ್ಚಿನ ಸುರಕ್ಷತಾ ಅಂಶಗಳನ್ನು ಸೇರಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ ಎಂದು ಹೇಳಬಹುದು.
ಕೇಂದ್ರ ಸರ್ಕಾರ ವಾಹನ ಪ್ರಯಾಣಿಕರ ಸುರಕ್ಷತೆಗಾಗಿ ಎಲ್ಲಾ ಆಸನಗಳ ವಾಹನಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಿದೆ. ಸುರಕ್ಷಿತ ಕಾರು ಎಂದು ಖರೀದಿದಾರರಿಂದ ನಂಬಿಕೆಯನ್ನು ಸಾಧಿಸಲು ಕಾರುಗಳಲ್ಲಿ ಏರ್ ಬ್ಯಾಗ್ ಗಳು ಕೂಡ ಪ್ರಮುಖ ಅಂಶವಾಗಿದೆ. ಆದರೆ ದ್ವಿಚಕ್ರ ವಾಹನಗಳ ಸವಾರರ ಸುರಕ್ಷತೆಗಾಗಿ ಯಾವುದೇ ಏರ್ ಬ್ಯಾಗ್ ಗಳು ಇರುವುದಿಲ್ಲ. ಆದರೆ ಇದೀಗ ಹೋಂಡಾ ಕಂಪನಿಯು ದ್ವಿಚಕ್ರ ವಾಹನಗಳಿಗಾಗಿ ಏರ್‌ಬ್ಯಾಗ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಹೋಂಡಾ ಕಂಪನಿಯು ಸಲ್ಲಿಸಿದ ಇತ್ತೀಚಿನ ವಿನ್ಯಾಸದ ಪೇಟೆಂಟ್‌ಗಳು ಜಪಾನಿನ ದೈತ್ಯ ಮೋಟಾರ್‌ಸೈಕಲ್ ಏರ್‌ಬ್ಯಾಗ್‌ಗಳನ್ನು ಅಭಿವೃದ್ಧಿಪಡಿಸುವುದರ ಬಗ್ಗೆ ಮಾಹಿತಿ ತಿಳಿಸುತ್ತದೆ. ಏರ್‌ಬ್ಯಾಗ್ ಸವಾರನ ತಬ್ಬಿಕೊಂಡ ರೀತಿಯಲ್ಲಿ ಸುತ್ತಲೂ ಸುತ್ತಿಕೊಳ್ಳುತ್ತದೆ. ನಂತರ ವಾಹನದಿಂದ ಬೇರ್ಪಡುತ್ತದೆ. ಹೋಂಡಾ ದ್ವಿಚಕ್ರ ವಾಹನಗಳಲ್ಲಿ ಏರ್‌ಬ್ಯಾಗ್ ತಂತ್ರಜ್ಞಾನದ ಪ್ರವರ್ತಕವಾಗಿದೆ, 2006 ರಿಂದ ಹೋಂಡಾ ಕಂಪನಿಯು ತನ್ನ ಗೋಲ್ಡ್ ವಿಂಗ್ ಟೂರರ್ ಬೈಕಿನ ಮುಂಭಾಗದ ಏರ್‌ಬ್ಯಾಗ್ ಅನ್ನು ನೀಡುತ್ತಿದೆ.
ಅಂದಿನಿಂದ ಒಂದೂವರೆ ದಶಕಗಳಲ್ಲಿ, ಈ ತಂತ್ರಜ್ಞಾನವು ನಿಜವಾಗಿಯೂ ಮುಖ್ಯವಾಹಿನಿಗೆ ಪ್ರವೇಶಿಸಲಿಲ್ಲ. ಹೋಂಡಾ ಗೋಲ್ಡ್ ವಿಂಗ್ ಈಗಲೂ ಏರ್ ಬ್ಯಾಗ್ ಹೊಂದಿರುವ ಏಕೈಕ ಬೈಕ್ ಆಗಿದೆ. ತೀರಾ ಇತ್ತೀಚೆಗೆ, ಆದರೂ, ಹೋಂಡಾದ ಪೇಟೆಂಟ್ ಫೈಲಿಂಗ್‌ಗಳಿಂದ ಬಹಿರಂಗವಾದ ಮಾಹಿತಿಯ ಪ್ರಕಾರ, ಏರ್‌ಬ್ಯಾಗ್ ತಂತ್ರಜ್ಙಾನವನ್ನು ಮುಂದಿನ ಹಂತಕ್ಕೆ ಕೊಂಡ್ಯೊಯಲು ಸಿದ್ಧವಾಗುತ್ತಿದೆ. ಸ್ಕೂಟರ್‌ಗಳಲ್ಲಿ ಮುಂಭಾಗದ ಏರ್‌ಬ್ಯಾಗ್‌ಗಳಿಗಾಗಿ ಹೋಂಡಾ ಭಾರತದಲ್ಲಿಯೇ ಸಲ್ಲಿಸಿದ ವಿನ್ಯಾಸದ ಪೇಟೆಂಟ್ ಇತ್ತೀಚೆಗೆ ಬಹಿರಂಗವಾಗಿತ್ತು.

ಈಗ, ಹೊಸ ಫೈಲಿಂಗ್‌ಗಳು ಹೊರಹೊಮ್ಮಿವೆ. ಅದು ಡಿಟ್ಯಾಚೇಬಲ್ ಏರ್‌ಬ್ಯಾಗ್ ಪರಿಕಲ್ಪನೆಯನ್ನು ತೋರಿಸುತ್ತದೆ. ಹೆಚ್ಚಿನ ಏರ್‌ಬ್ಯಾಗ್ ಸಿಸ್ಟಂಗಳಂತೆ, ಇದು ಅಪಘಾತದ ಸಂದರ್ಭದಲ್ಲಿ ಏರ್‌ಬ್ಯಾಗ್ ಅನ್ನು ತ್ವರಿತವಾಗಿ ತುಂಬಲು ಒತ್ತಡದ ಅನಿಲದ ಡಬ್ಬಿಯನ್ನು ಬಳಸುತ್ತದೆ. ಅದು ಉಬ್ಬಿದಾಗ, ಅದು ಸವಾರನ ಸುತ್ತ ಸುತ್ತುತ್ತದೆ, ಅವರ ಎದೆ ಮತ್ತು ಬೆನ್ನಿಗೆ ರಕ್ಷಣೆ ನೀಡುತ್ತದೆ. ಅದರ ನಂತರ, ವಿಷಯಗಳು ಆಸಕ್ತಿದಾಯಕವಾದಾಗ. ಏರ್ ಬ್ಯಾಗ್ ಶಾಖವನ್ನು ಬಳಸಿ ಮುಚ್ಚಲಾಗುತ್ತದೆ ಮತ್ತು ನಂತರ ವಾಹನದಿಂದ ಬೇರ್ಪಡುತ್ತದೆ.
ಏರ್‌ಬ್ಯಾಗ್ ನಿಯಂತ್ರಿತ ದರದಲ್ಲಿ ಡಿಫ್ಲೇಟ್ ಆಗುವುದನ್ನು ಖಚಿತಪಡಿಸಿಕೊಳ್ಳಲು ಚೆಕ್ ವಾಲ್ವ್ ಅನ್ನು ನಿಯೋಜಿಸಲಾಗಿದೆ, ಇನ್ನು ಏರ್‌ಬ್ಯಾಗ್ ಅನ್ನು ಎರಡು ಪ್ರಮುಖ ವಿನ್ಯಾಸಗಳ ಶೈಲಿಯಲ್ಲಿ ಅಭಿವೃದ್ಧಿ ಹಂತದಲ್ಲಿವೆ. ಮೊದಲನೆಯದು ಸೀಟು ಮುಂಭಾಗದಲ್ಲಿ, ಸವಾರನ ಕಾಲುಗಳ ನಡುವೆ ಏರ್‌ಬ್ಯಾಗ್ ಸಿಸ್ರಂ ಅನ್ನು ಹೊಂದಿದೆ. ಅಲ್ಲಿಂದ ಏರ್‌ಬ್ಯಾಗ್ ಉಬ್ಬಿಕೊಳ್ಳುತ್ತದೆ ಮತ್ತು ಸವಾರನ ಸುತ್ತ ಸುತ್ತುತ್ತದೆ.

ಎರಡನೇಯದು ಹೆಚ್ಚು ಆರಾಮದಾಯಕವಾದ ವಿನ್ಯಾಸದ ಏರ್‌ಬ್ಯಾಗ್ ಸಿಸ್ಟಂ ಆಗಿದೆ. ಈ ಏರ್‌ಬ್ಯಾಗ್ ಸವಾರನ ಹಿಂದೆ, ಸರಿಸುಮಾರು ರೈಡರ್ ಸೀಟ್ ಮತ್ತು ಪಿಲಿಯನ್ ಸೀಟ್ ನಡುವೆ ಇರಿಸುತ್ತದೆ. ಈ ತಂತ್ರಜ್ಞಾನವು ಅಭಿವೃದ್ಧಿಯ ಆರಂಭಿಕ ಹಂತಗಳಲ್ಲಿದೆ, ಆದ್ದರಿಂದ ಇದು ಯಾವುದೇ ಸಮಯದಲ್ಲಿ ಶೀಘ್ರದಲ್ಲೇ ಉತ್ಪಾದನಾ ವಾಹನದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ. ಆದರೆ ಎಲ್ಲಾ ವಿಭಿನ್ನ ಆಕಾರಗಳು ಮತ್ತು ಗಾತ್ರಗಳ ಸವಾರರಿಗೆ ಅವಕಾಶ ಕಲ್ಪಿಸಲು ಹೋಂಡಾ ಯಾವ ಪರಿಹಾರಗಳನ್ನು ನೀಡುತ್ತದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications