ಭಾರತದಲ್ಲಿ Bluetooth ಕನೆಕ್ಟಿವಿಟಿಯೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗುವ ಪ್ರಮುಖ ದ್ವಿಚಕ್ರ ವಾಹನಗಳು

ದೇಶೀಯ ಮಾರುಕಟ್ಟೆಯಲ್ಲಿ 'ಬ್ಲೂಟೂತ್ ಕನೆಕ್ಟಿವಿಟಿ' ಹೊಂದಿರುವ ದ್ವಿಚಕ್ರ ವಾಹನಗಳನ್ನು ಪ್ರತಿಯೊಬ್ಬರು ಲೈಕ್ ಮಾಡುತ್ತಾರೆ. ಈ ವೈಶಿಷ್ಟ್ಯ ಪಡೆದಿರುವ ಬೈಕ್, ಸ್ಕೂಟರ್ ಗಳಲ್ಲಿ ಕಾಲ್, ಎಸ್ಎಂಎಸ್, ವಾಟ್ಸಪ್ ಅಲರ್ಟ್ ಸೇರಿದಂತೆ ಇನ್ನಿತರೇ ಮಾಹಿತಿಗಳು ಸವಾರರಿಗೆ ಸಿಗುತ್ತದೆ. 1 ಲಕ್ಷದೊಳಗೆ ಸಿಗುವ ಪ್ರಮುಖ ಪ್ರಮುಖ ದ್ವಿಚಕ್ರ ವಾಹನಗಳು ಇಲ್ಲಿವೆ.

ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಹೀರೋ ಮೋಟೊಕಾರ್ಪ್, ಇತ್ತೀಚೆಗೆ ಆಕರ್ಷಕ ವೈಶಿಷ್ಟ್ಯದೊಂದಿಗೆ ಅದರಲ್ಲೂ ಬ್ಲೂಟೂತ್ ಸಂಪರ್ಕಿತ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಆಯ್ಕೆಯೊಂದಿಗೆ ನೂತನ ಸ್ಪ್ಲೆಂಡರ್ ಪ್ಲಸ್ XTEC ಬೈಕ್ ನ್ನು ರೂ.76,346 ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ಇದು, ಲೊ ಫ್ಯುಯೆಲ್ ಇಂಡಿಕೇಷನ್, ರಿಯಲ್ ಟೈಮ್ ಮೈಲೇಜ್ ಸೇರಿದಂತೆ ವಿವಿಧ ಮಾಹಿತಿಯನ್ನು ಸವಾರರಿಗೆ ಒದಗಿಸುತ್ತದೆ.

ಭಾರತದಲ್ಲಿ Bluetooth ಕನೆಕ್ಟಿವಿಟಿಯೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗುವ ಪ್ರಮುಖ ದ್ವಿಚಕ್ರ ವಾಹನಗಳು

ಈ ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ XTEC ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 97.2 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8000 rpmನಲ್ಲಿ 7.92 bhp ಗರಿಷ್ಠ ಪವರ್ ಹಾಗೂ 6000 rpmನಲ್ಲಿ 8.05 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ. 75- 81km/l ಮೈಲೇಜ್ ನೀಡುತ್ತದೆ.

ದೇಶೀಯ ಮಾರುಕಟ್ಟೆಯಲ್ಲಿ ಯಮಹಾ ಕಂಪನಿಯ 'ಫ್ಯಾಸಿನೊ 125' ಸ್ಕೂಟರ್ ಎರಡು ರೂಪಾಂತರಗಳಲ್ಲಿ ಖರೀದಿಗೆ ದೊರೆಯಲಿದೆ. ಅವುಗಳೆಂದರೆ ಡ್ರಮ್ ಹಾಗೂ ಡಿಸ್ಕ್. ಆದರೆ, ಈ ಸ್ಕೂಟರ್ ನ ಡಿಸ್ಕ್ ರೂಪಾಂತರ ಮಾತ್ರ ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ರೂ.88,230 (ಎಕ್ಸ್ ಶೋರೂಂ) ಬೆಲೆಯಲ್ಲಿಗ್ರಾಹಕರಿಗೆ ಸಿಗಲಿದೆ. ಈ ವೈಶಿಷ್ಟ್ಯವನ್ನು ಪಡೆದಿರುವುದರಿಂದ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲಿ ಕಾಲ್ ಅಲರ್ಟ್, ಎಸ್ಎಂಎಸ್, ಇ-ಮೇಲ್, ಫೋನ್ ಬ್ಯಾಟರಿ ಸೇರಿದಂತೆ ಇನ್ನಿತರೆ ಉಪಯುಕ್ತ ಮಾಹಿತಿಯನ್ನು ನೋಡಬಹುದು.

ಭಾರತದಲ್ಲಿ Bluetooth ಕನೆಕ್ಟಿವಿಟಿಯೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗುವ ಪ್ರಮುಖ ದ್ವಿಚಕ್ರ ವಾಹನಗಳು

ಯಮಹಾ ಫ್ಯಾಸಿನೊ ಸ್ಕೂಟರ್, 125 ಸಿಸಿ ಎಂಜಿನ್ ಹೊಂದಿದ್ದು, 8.2 PS ಗರಿಷ್ಠ ಪವರ್ ಹಾಗೂ 10.3 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 68.75 kmpl ಮೈಲೇಜ್ ನೀಡಲಿದೆ. 99 kg ತೂಕವಿರುವ ಈ ಸ್ಕೂಟರ್, 5.2 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಪಡೆದಿದೆ. ಐದು ರೂಪಾಂತರಗಳು ಹಾಗೂ 16 ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ.

ಯಮಹಾ ಫ್ಯಾಸಿನೊ 125ರಂತೆಯೇ ಸುಜುಕಿಯ ಎಂಟ್ರಿ ಲೆವೆಲ್ ಸ್ಕೂಟರ್ 'ಆಕ್ಸೆಸ್ 125' ಆಗಿದ್ದು, ಮೂರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಸ್ಟ್ಯಾಂಡರ್ಡ್, ಸ್ಪೆಷಲ್ ಎಡಿಷನ್ ಮತ್ತು ರೈಡ್ ಕನೆಕ್ಟ್ ಎಡಿಷನ್. ಆದರೆ, ಇವುಗಳಲ್ಲಿ ರೈಡ್ ಕನೆಕ್ಟ್ ಎಡಿಷನ್ ಸ್ಕೂಟರ್ ಮಾತ್ರ ಬ್ಲೂಟೂತ್ ಕನೆಕ್ಟಿವಿಟಿ ಆಯ್ಕೆಯನ್ನು ಹೊಂದಿದ್ದು, ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲಿ ಕಾಲರ್ ಐಡಿ, ಫೋನ್ ಬ್ಯಾಟರಿ ಸೇರಿದಂತೆ ಹೆಚ್ಚಿನ ವಿವರವನ್ನು ತೋರಿಸುತ್ತದೆ. ರೂ.85,500 ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.

ಭಾರತದಲ್ಲಿ Bluetooth ಕನೆಕ್ಟಿವಿಟಿಯೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗುವ ಪ್ರಮುಖ ದ್ವಿಚಕ್ರ ವಾಹನಗಳು

ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾರುವ 'ಟಿವಿಎಸ್' ಕಂಪನಿಯ Ntorq 125 ರೇಸ್ ಎಡಿಷನ್, ರೂ.92,891 ದರದಲ್ಲಿ ಖರೀದಿಗೆ ದೊರೆಯಲಿದೆ. ಇದರ ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಇನ್-ಕಮಿಂಗ್ ಕಾಲ್, ಎಸ್ಎಂಎಸ್, ಮಿಸ್ಡ್ ಕಾಲ್ ಸೇರಿದಂತೆ ವಿವಿಧ ಮಾಹಿತಿಯನ್ನು ತೋರಿಸುತ್ತದೆ. ಇದು 124.8 ಸಿಸಿ ಎಂಜಿನ್ ಹೊಂದಿದ್ದು, 9.25 bhp ಗರಿಷ್ಠ ಪವರ್ ಹಾಗೂ 10.5 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 40 kmpl ಮೈಲೇಜ್ ನೀಡುತ್ತದೆ.

ಒಟ್ಟಾರೆ, ಈ ದ್ವಿಚಕ್ರ ವಾಹನಗಳು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗಲಿದ್ದು, ಬ್ಲೂಟೂತ್ ಕನೆಕ್ಟಿವಿಟಿ ಪಡೆದಿರುವುದರಿಂದ ಹೆಚ್ಚು ಆಕರ್ಷಕವಾಗಿದ್ದು, ಇವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಯುವ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಅದರಲ್ಲೂ ಹೀರೋ ಸ್ಪ್ಲೆಂಡರ್ ಪ್ಲಸ್ XTEC ಈ ವೈಶಿಷ್ಟ್ಯದೊಂದಿಗೆ ಕಡಿಮೆ ಬೆಲೆಯಲ್ಲಿ ದೊರೆಯುವ ಬೈಕ್ ಆಗಿದೆ. ಜೊತೆಗೆ ಉತ್ತಮ ಇಂಧನ ದಕ್ಷತೆಯನ್ನು ಹೊಂದಿದೆ ಎಂದು ಹೇಳಬಹುದು.

Article Published On: Monday, March 20, 2023, 13:52 [IST]
English summary
Two wheelers bluetooth connectivity under rs 1 lakh in india details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+