Ultraviolette F77: ಎರಡು ದಾಖಲೆ ನಿರ್ಮಿಸಿದ ಬೆಂಗಳೂರಿನ ಎಲೆಕ್ಟ್ರಿಕ್ ಬೈಕ್... 6,727 ಕಿ.ಮೀ ಪ್ರಯಾಣ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ರಂಗಕ್ಕೆ ಎಂಟ್ರಿಕೊಟ್ಟ ಕೆಲವೇ ವರ್ಷಗಳಲ್ಲಿ ಬೆಂಗಳೂರು ಮೂಲದ ಅಲ್ಟ್ರಾವೈಲೆಟ್ ಕಂಪನಿಯು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದೆ. ಎಲೆಕ್ಟ್ರಿಕ್ ಮೋಟಾರ್‌ ಸೈಕಲ್‌ನಲ್ಲಿ ಗರಿಷ್ಠ ದೂರವನ್ನು ಕ್ರಮಿಸಿದ ಮೊದಲ ಬೈಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಂಪನಿಯ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಆದ ಅಲ್ಟ್ರಾವೈಲೆಟ್ F77 ಕೇವಲ 22 ದಿನಗಳಲ್ಲಿ 6,727 ಕಿ.ಮೀ ಪ್ರಯಾಣವನ್ನು ಪೂರ್ಣಗೊಳಿಸುವ ಮೂಲಕ ಈ ಗಮನಾರ್ಹ ಸಾಧನೆಯನ್ನು ಸಾಧಿಸಿದೆ. ಸಹಿಷ್ಣುತೆ, ವಿಶ್ವಾಸಾರ್ಹತೆ ಮತ್ತು ರಾಜಿಯಾಗದ ಕಾರ್ಯಕ್ಷಮತೆ ಮೂಲಕ ಈ ಅದ್ಭುತ ಸಾಧನೆಯು ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಜಾಗದಲ್ಲಿ F77 ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.

Ultraviolette F77: ಎರಡು ದಾಖಲೆ ನಿರ್ಮಿಸಿದ ಬೆಂಗಳೂರಿನ ಎಲೆಕ್ಟ್ರಿಕ್ ಬೈಕ್... 6,727 ಕಿ.ಮೀ ಪ್ರಯಾಣ

ಈ ಅಸಾಧಾರಣ ಸಾಹಸಕ್ಕೆ ಕಾರಣರಾದವರು ಬಾಲ ಮಣಿಕಂದನ್, ಇವರು ಅಲ್ಟ್ರಾವೈಲೆಟ್ F77 ಅನ್ನು ಮೇ 21, 2023 ರಂದು ಚೆನ್ನೈನಿಂದ ಪ್ರಾರಂಭಿಸಿ, ಸವಾಲಿನ ಭೂಪ್ರದೇಶಗಳು ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲೂ ಮುನ್ನುಗ್ಗಿದ್ದಾರೆ. ತಾಪಮಾನವು 45°C ನಿಂದ ಹಿಡಿದು -15°C ವರೆಗಿನ ಅತ್ಯಂತ ಶಿತದಲ್ಲೂ ವಾಹನ ಯಶಸ್ವಿಯಾಗಿ ಮುನ್ನುಗ್ಗಿದೆ ಎಂದು ಬಾಲ ಮಣಿಕಂದನ್ ಹೇಳಿದ್ದಾರೆ.

ಪ್ರಯಾಣ ಸಮಯದಲ್ಲಿ, ಅವರು 55 ಕೆ.ಜಿಯ ಹೆಚ್ಚುವರಿ ಪೇಲೋಡ್‌ನೊಂದಿಗೆ 14 ರಾಜ್ಯಗಳ ಮೂಲಕ ಪ್ರಯಾಣಿಸಿ ಅಂತಿಮವಾಗಿ ಜೂನ್ 12, 2023 ರಂದು ಬೆಂಗಳೂರಿನಲ್ಲಿ ಅವರ ಸವಾರಿಯನ್ನು ಕೊನೆಗೊಳಿಸಿದ್ದಾರೆ. ಈ ಮೂಲಕ ಇಷ್ಟು ದೊಡ್ಡ ಸುಧೀರ್ಘ ಸವಾರಿಯನ್ನು ಮುಗಿಸಿದ ಮೊದಲ ಎಲೆಕ್ಟ್ರಿಕ್ ಬೈಕ್ ಎಂಬ ಖ್ಯಾತಿಯನ್ನು ಅಲ್ಟ್ರಾವೈಲೆಟ್ F77 ಪಡೆದುಕೊಂಡಿದೆ.

Ultraviolette F77: ಎರಡು ದಾಖಲೆ ನಿರ್ಮಿಸಿದ ಬೆಂಗಳೂರಿನ ಎಲೆಕ್ಟ್ರಿಕ್ ಬೈಕ್... 6,727 ಕಿ.ಮೀ ಪ್ರಯಾಣ

ಹೇಗಿತ್ತು ಅನುಭವ: ಕಂಪನಿಯು ಈ ಬೈಕ್‌ನಲ್ಲಿ ಗ್ಲೈಡ್, ಕಾಂಬ್ಯಾಟ್ ಮತ್ತು ಬ್ಯಾಲಿಸ್ಟಿಕ್ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ನೀಡಿದೆ. ಪ್ರತಿಯೊಂದೂ ವಿಭಿನ್ನ ಪವರ್ ಮತ್ತು ರೇಂಜ್ ಸೆಟ್ಟಿಂಗ್‌ಗಳನ್ನು ಹೊಂದಿದೆ. ಇವುಗಳಲ್ಲಿ, ಹೆಚ್ಚಿನ ಪರ್ಫಾಮೆನ್ಸ್‌ಗಾಗಿ ರೈಡ್ ಉದ್ದಕ್ಕೂ ಕಾಂಬ್ಯಾಟ್ ಮೋಡ್ ಅನ್ನು ಹೆಚ್ಚಾಗಿ ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ.

27,000 ಹಣ ಉಳಿಕೆ: ಒಂದು ಪೆಟ್ರೋಲ್ ಚಾಲಿತ ಬೈಕ್ ಪ್ರಯಾಣದ ಉದ್ದಕ್ಕೂ ಸೇವಿಸುವ ಪೆಟ್ರೋಲ್‌ಗೆ ಹೋಲಿಸಿದರೆ ಬೆರಗುಗೊಳಿಸುವ 270 ಲೀಟರ್ ಪೆಟ್ರೋಲ್ ಅನ್ನು ಅಲ್ಟ್ರಾವೈಲೆಟ್ F77 ಉಳಿಸಿದೆ. ಇದು 645 ಕೆ.ಜಿ CO2 ಹೊರಸೂಸುವಿಕೆಯನ್ನು ಉಳಿಸುವ ಮೂಲಕ ಬರೋಬ್ಬರಿ ರೂ. 27,000 ಕ್ಕಿಂತ ಹೆಚ್ಚಿನ ಹಣವನ್ನು ಉಳಿಸಿರುವುದಾಗಿ ಕಂಪನಿ ತಿಳಿಸಿದೆ.

ಅದ್ಬುತ ವೈಶಿಷ್ಟ್ಯಗಳು: ಅಲ್ಟ್ರಾವೈಲೆಟ್ F77 ಬ್ಲೂಟೂತ್ ಮತ್ತು ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ 5-ಇಂಚಿನ TFT ಇನ್‌ಸ್ಟ್ರೂಮೆಂಟ್ ಕ್ಲಸ್ಟರ್, LED ಲೈಟಿಂಗ್, ರೈಡ್ ಅನಾಲಿಟಿಕ್ಸ್, 9-ಆಕ್ಸಿಸ್ IMU ಮತ್ತು ಡ್ಯುಯಲ್-ಚಾನೆಲ್ ABS ನಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದ್ದು, ಪ್ರಯಾಣದಲ್ಲಿ ಸವಾರರಿಗೆ ಉತ್ತಮ ಅನುಭವ ನೀಡುವುದಾಗಿ ಕಂಪನಿ ತಿಳಿಸಿದೆ.

ಸಂಪೂರ್ಣ ಚಾರ್ಜ್‌ ಮಾಡಿದರೆ 307 ಕಿ.ಮೀ ರೇಂಜ್ ನೀಡುತ್ತದೆ. ಕೇವಲ 2.9 ಸೆಕೆಂಡುಗಳಲ್ಲಿ 60 km/h ವೆಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ 152 km/h ಟಾಪ್ ಸ್ಪೀಡ್ ಹೊಂದಿದೆ. ಅಲ್ಟ್ರಾವೈಲೆಟ್ F77 8 ವರ್ಷಗಳವರೆಗೆ ಅಥವಾ 1,00,000 ಕಿ.ಮೀ ವಾರಂಟಿಯೊಂದಿಗೆ ಬರುತ್ತದೆ. ಇದರ ಬೆಲೆಗಳು ರೂ 3.8 ಲಕ್ಷದಿಂದ ಪ್ರಾರಂಭವಾಗುತ್ತವೆ (ಎಕ್ಸ್-ಶೋರೂಮ್, ಭಾರತ).

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

More from DriveSpark

Article Published On: Wednesday, September 6, 2023, 8:58 [IST]
English summary
Ultraviolette f77 enters asia book of records
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+