ಆ ಹೆಸರಿಗೆ ಅಷ್ಟು ತಾಕತ್ತು ಇದ್ಯಾ?.. ಪ್ರಖ್ಯಾತ ಕಂಪನಿಯೊಂದಿಗೆ ಬೆಂಗಳೂರಿನ ಅಲ್ಟ್ರಾವೈಲೆಟ್ ಕಾನೂನು ಸಮರ!

ಯಾವುದೇ ದ್ವಿಚಕ್ರ ವಾಹನದ ಯಶಸ್ಸು ಕೊಂಚವಾದರೂ ಅದರ ಹೆಸರಿನ ಮೇಲೆ ಅವಲಂಬನೆಯಾಗಿರುತ್ತದೆ. ಆ ಕಾರಣಕ್ಕೆ, ಪ್ರತಿಯೊಂದು ಕಂಪನಿಗಳು ಗ್ರಾಹಕರನ್ನು ಸೆಳೆಯುವ ಹೆಸರಿಡಲು ಪ್ರಯತ್ನಿಸುತ್ತಾರೆ. ಭಾರತದಲ್ಲಿ ಯಾವುದೇ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೊದಲು ಅದರ ಹೆಸರನ್ನು ಟ್ರೇಡ್ ಮಾರ್ಕ್ ಮಾಡಬೇಕು.

ಬೆಂಗಳೂರು ಮೂಲದ ಎಲೆಕ್ಟ್ರಿಕ್ ವಾಹನ (ಇವಿ) ತಯಾರಕ ಕಂಪನಿ ಅಲ್ಟ್ರಾವೈಲೆಟ್ ಆಟೋಮೋಟಿವ್ (Ultraviolette Automotive) ಮತ್ತು ಐಷಾರಾಮಿ ಮೋಟಾರ್‌ಸೈಕಲ್ ತಯಾರಕ ಹಾರ್ಲೆ - ಡೇವಿಡ್‌ಸನ್ (Harley - Davidson) ನಡುವೆ ಕಾನೂನು ಸಮರ ನಡೆಯುತ್ತಿದೆ. ಅಲ್ಟ್ರಾವೈಲೆಟ್, ಹಾರ್ಲೆ - ಡೇವಿಡ್‌ಸನ್ ಕಂಪನಿಯ 'ಎಕ್ಸ್440' ಹೆಸರನ್ನು ವಿರೋಧಿಸಿದ್ದು, 2022ರಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಟ್ರೇಡ್‌ಮಾರ್ಕ್‌ ಮಾಡಿದ 'ಎಕ್ಸ್44' ಹೆಸರಿಗೆ ಹೋಲಿಕೆಯಾಗುತ್ತದೆ ಎಂದು ವಾದಿಸಿದೆ.

ಆ ಹೆಸರಿಗೆ ಅಷ್ಟು ತಾಕತ್ತು ಇದ್ಯಾ?.. ಪ್ರಖ್ಯಾತ ಕಂಪನಿಯೊಂದಿಗೆ ಬೆಂಗಳೂರಿನ ಅಲ್ಟ್ರಾವೈಲೆಟ್ ಕಾನೂನು ಸಮರ!

ಇತ್ತೀಚೆಗೆ, ಹಾರ್ಲೆ - ಡೇವಿಡ್‌ಸನ್ ಕಂಪನಿಯೂ ಭಾರತದ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಐಷಾರಾಮಿ ವೈಶಿಷ್ಟ್ಯಗಳಿರುವ ಎಕ್ಸ್440 (X440) ಬೈಕ್ ಬಿಡುಗಡೆಗೊಳಿಸಿತ್ತು. ಈ ಎಕ್ಸ್440 ಮೋಟಾರ್‌ಸೈಕಲ್ ಅನ್ನು ಪ್ರಮುಖ ದೇಶೀಯ ವಾಹನ ತಯಾರಕ ಹೀರೋ ಮೋಟೊಕಾರ್ಪ್ (Hero MotoCorp) ಸಹಯೋಗದಲ್ಲಿ ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲಾಗಿದೆ.

ನ್ಯಾಷನಲ್ ಫೈಲಿಂಗ್ಸ್ ಪೋರ್ಟಲ್‌ನಲ್ಲಿ ಮಾಡಿರುವ ಟ್ರೇಡ್‌ಮಾರ್ಕ್ ಫೈಲಿಂಗ್‌ ಪ್ರಕಾರ, ಅಲ್ಟ್ರಾವೈಲೆಟ್ ಕಂಪನಿಯ 'ಎಕ್ಸ್44' ಹೆಸರನ್ನು ಅಂಗೀಕರಿಸಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಹೀರೋ ಮೋಟೊಕಾರ್ಪ್ 'ಎಕ್ಸ್440' ಹೆಸರನ್ನು 2022ರ ನವೆಂಬರ್ 8ರಂದು ನೋಂದಣಿ ಮಾಡಿದೆ. ಅಂದರೆ, ಅಲ್ಟ್ರಾವೈಲೆಟ್ ಗಿಂತ 2 ತಿಂಗಳು ತಡವಾಗಿ. ಈಗಾಗಲೇ, ಹಾರ್ಲೆ - ಡೇವಿಡ್‌ಸನ್ ಎಕ್ಸ್440 ಬೈಕ್ ಬಿಡುಗಡೆಯಾಗಿದ್ದು, ಮುಂದಿನ ತಿಂಗಳು ವಿತರಣೆ ಶುರುವಾಗಲಿದೆ.

ಆ ಹೆಸರಿಗೆ ಅಷ್ಟು ತಾಕತ್ತು ಇದ್ಯಾ?.. ಪ್ರಖ್ಯಾತ ಕಂಪನಿಯೊಂದಿಗೆ ಬೆಂಗಳೂರಿನ ಅಲ್ಟ್ರಾವೈಲೆಟ್ ಕಾನೂನು ಸಮರ!

ಹಾರ್ಲೆ - ಡೇವಿಡ್‌ಸನ್ ಕಂಪನಿಯು 'ಎಕ್ಸ್440' ಹೆಸರನ್ನು ಅದರ ಎಂಜಿನ್ ಸಾಮರ್ಥ್ಯದ ಬಗ್ಗೆ ಬೆಳಕು ಹರಿಸಲು ಉಪಯೋಗ ಮಾಡಲಾಗಿದೆ. ಈ ಬೈಕ್, 440 ಸಿಸಿ ಎಂಜಿನ್ ಹೊಂದಿದೆ. ಆದರೆ, ಅಲ್ಟ್ರಾವೈಲೆಟ್ 'ಎಕ್ಸ್44' ಹೆಸರನ್ನು ಟ್ರೇಡ್‌ಮಾರ್ಕ್ ಮಾಡಿರುವುದು ಬಿಟ್ಟರೆ, ಆ ಕುರಿತ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಸದ್ಯ, ದೇಶದಲ್ಲಿ ಅಲ್ಟ್ರಾವೈಲೆಟ್ ಎಫ್77 (F77) ಹೆಸರಿನ ಪ್ರೀಮಿಯಂ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮಾರಾಟ ಮಾಡುತ್ತಿದೆ.

ಅಲ್ಟ್ರಾವೈಲೆಟ್ ಕಂಪನಿ ಟ್ರೇಡ್‌ಮಾರ್ಕ್ ಮಾಡಿರುವ 'ಎಕ್ಸ್44' ಹೆಸರನ್ನು ಮುಂಬರಲಿರುವ ಬೈಕ್ ಅಥವಾ ಸ್ಕೂಟರ್‌ಗೆ ಇಡಬಹುದು ಎಂದು ಅಂದಾಜಿಸಲಾಗಿದೆ. ಸದ್ಯ, ನಡೆಯುತ್ತಿರುವ ಕಾನೂನು ಸಮರದಲ್ಲಿ ಅಲ್ಟ್ರಾವೈಲೆಟ್ ಗೆದ್ದರೆ, ಹಾರ್ಲೆ - ಡೇವಿಡ್‌ಸನ್ ಕಂಪನಿ ಈ ಹೆಸರನ್ನು ಬಿಟ್ಟುಕೊಡಬೇಕು. ಇಲ್ಲವಾದಲ್ಲಿ ಎರಡು ಕಂಪನಿಗಳ ನಡುವೆ ಸಂಧಾನ ಏರ್ಪಾಟು ಈ ಸಮಸ್ಯೆಗೆ ಶೀಘ್ರದಲ್ಲೇ ಇತಿಶ್ರೀ ಹಾಡಬೇಕು.

ಆ ಹೆಸರಿಗೆ ಅಷ್ಟು ತಾಕತ್ತು ಇದ್ಯಾ?.. ಪ್ರಖ್ಯಾತ ಕಂಪನಿಯೊಂದಿಗೆ ಬೆಂಗಳೂರಿನ ಅಲ್ಟ್ರಾವೈಲೆಟ್ ಕಾನೂನು ಸಮರ!

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಹಾರ್ಲೆ - ಡೇವಿಡ್‌ಸನ್ 'ಎಕ್ಸ್440' ಬೈಕ್, ರೂ.2,39,500 ಬೆಲೆಯನ್ನು ಹೊಂದಿದೆ. ಇದರ 440ಸಿಸಿ ಎಂಜಿನ್ 27 bhp ಗರಿಷ್ಠ ಪವರ್ ಹಾಗೂ 38 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 - ಸ್ಪೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.

ಅಲ್ಟ್ರಾವೈಲೆಟ್ ಎಫ್77 ಎಲೆಕ್ಟ್ರಿಕ್ ಬೈಕ್, ರೂ.3.8 ಲಕ್ಷ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಪ್ರೀಮಿಯಂ ಮಾದರಿ ಎಫ್77 ರೆಕಾನ್ ರೂ.4.55 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಸಿಗುತ್ತದೆ. ಬ್ಯಾಟರಿ ಪ್ಯಾಕ್ ಅನ್ವಯ ಸಂಪೂರ್ಣ ಚಾರ್ಜ್ ನಲ್ಲಿ 206 km ರಿಂದ 307 km ರೇಂಜ್ ನೀಡುತ್ತದೆ. 147 km/h ಟಾಪ್ ಸ್ವೀಡ್ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, September 14, 2023, 10:39 [IST]
English summary
Ultraviolette harley davidson trademark war begin details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+