3 ಲಕ್ಷದೊಳಗೆ ಸಿಗುವ ಟಾಪ್ 5 ಯುವಕರ ಹಾಟ್‌ ಫೇವರೆಟ್ ಮೋಟಾರ್‌ಸೈಕಲ್‌ಗಳಿವು!

ಭಾರತೀಯ ಮಾರುಕಟ್ಟೆಯಲ್ಲಿ ರೆಟ್ರೋ ಮೋಟಾರ್‌ಸೈಕಲ್‌ಗಳು ಬಹಳ ಜನಪ್ರಿಯವಾಗಿವೆ. ಮಧ್ಯಮ ವಿಭಾಗದಲ್ಲಿ ಗ್ರಾಹಕರನ್ನು ಸೆಳೆಯಲು ಹಾಗೂ ಕೈಗೆಟುಕುವ ಬೆಲೆಯಲ್ಲಿ ನೀಡಿದ್ರೆ ಬೇಡಿಕೆ ಹೆಚ್ಚಾಗುವುದರಿಂದ ತಯಾರಕರು ಕೂಡ ಒಂದಷ್ಟು ಬೈಕ್‌ಗಳನ್ನು ಪರಿಚಯಿಸಿದ್ದಾರೆ. ಹಾಗಾದ್ರೆ ಭಾರತದಲ್ಲಿ ಪ್ರಸ್ತುತ ರೂ. 3 ಲಕ್ಷದೊಳಗೆ ಲಭ್ಯವಿರುವ ಟಾಪ್ 5 ರೆಟ್ರೋ ರೋಡ್‌ಸ್ಟರ್ ಬೈಕ್‌ಗಳನ್ನು ಇಲ್ಲಿ ನೋಡೋಣ.

ರಾಯಲ್ ಎನ್‌ಫೀಲ್ಡ್ ಹಂಟರ್ 350: ರಾಯಲ್ ಎನ್‌ಫೀಲ್ಡ್ ಹಂಟರ್ 350 ಭಾರತದಲ್ಲಿ ಖರೀದಿಸಬಹುದಾದ ಅತ್ಯಂತ ಒಳ್ಳೆಯ ರೆಟ್ರೊ ರೋಡ್‌ಸ್ಟರ್‌ಗಳಲ್ಲಿ ಒಂದಾಗಿದೆ. ಹಂಟರ್ 350 ಅನ್ನು 349cc, ಸಿಂಗಲ್-ಸಿಲಿಂಡರ್, ಏರ್-ಆಯಿಲ್ ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‌ನೊಂದಿಗೆ ಬರುತ್ತದೆ. ಇದು 20.2 bhp ಮತ್ತು 27 Nm ಟಾರ್ಕ್ ಹಾಗೂ 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಇದರ ಬೆಲೆ 1.50 ಲಕ್ಷದಿಂದ 1.75 ಲಕ್ಷದವರೆಗೆ ಇದೆ. (ಎಕ್ಸ್ ಶೋ ರೂಂ).

under-3-lakhs-top-5-motorcycles-india

ಯೆಜ್ಡಿ ರೋಡ್ಸ್ಟರ್: ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ಮೋಟಾರ್‌ಸೈಕಲ್‌ಗಳ ಬಿಡುಗಡೆಯೊಂದಿಗೆ ಮಹೀಂದ್ರಾ- ಮಾಲೀಕತ್ವದ ಕ್ಲಾಸಿಕ್ ಲೆಜೆಂಡ್ಸ್ ಐಕಾನಿಕ್ ಯೆಜ್ಡಿ ಬ್ರ್ಯಾಂಡ್ ಅನ್ನು ಮರಳಿ ತಂದಿದೆ. ಹೊಸ ಯೆಜ್ಡಿ ರೋಡ್‌ಸ್ಟರ್ ಪ್ರಸ್ತುತ ರೂ 2.08 ಲಕ್ಷದಿಂದ ರೂ 2.14 ಲಕ್ಷದವರೆಗೆ ಎಕ್ಸ್ ಶೋ ರೂಂ ಬೆಲೆ ಹೊಂದಿದೆ.

ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳಿಗೆ ನೇರ ಪ್ರತಿಸ್ಪರ್ಧಿಯಾಗಿದೆ. ಅಲ್ಲದೇ ಬೆಲೆ ಕೂಡ ಕೈಗೆಟುಕುವಂತಿರುವುದರಿಂದ ಬೇಡಿಕೆ ಹೆಚ್ಚಿದೆ. ಇದು 334cc, ಸಿಂಗಲ್-ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಿದ್ದು, 29 bhp ಮತ್ತು 28.95 Nm ಅನ್ನು ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಇದನ್ನು ಜೋಡಿಸಲಾಗಿದೆ.

under-3-lakhs-top-5-motorcycles-india

ಹಾರ್ಲೆ-ಡೇವಿಡ್ಸನ್ X440: Hero MotoCorp ಸಹಭಾಗಿತ್ವದಲ್ಲಿ Harley-Davidson ಇತ್ತೀಚೆಗೆ X440 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತು. ಈ ರೆಟ್ರೊ ರೋಡ್‌ಸ್ಟರ್ ಎಕ್ಸ್ ಶೋ ರೂಂ ಬೆಲೆ 2.27 ಲಕ್ಷ ರೂ. ಇದೆ. ಇದು 440cc, ಸಿಂಗಲ್-ಸಿಲಿಂಡರ್, ಏರ್ ಮತ್ತು ಆಯಿಲ್-ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‌ನಿಂದ ಚಾಲಿತವಾಗಿದ್ದು, 27 bhp ಮತ್ತು 38 Nm ಟಾರ್ಕ್ ಹೊರಹಾಕುತ್ತದೆ.

ಟ್ರಯಂಫ್ ಸ್ಪೀಡ್ 400: ಟ್ರಯಂಫ್ ಸ್ಪೀಡ್ 400 ಬೆಲೆ 2.33 ಲಕ್ಷ ರೂ., ಎಕ್ಸ್ ಶೋರೂಂ ಇದ್ದು, ಮೊದಲ 10,000 ಖರೀದಿದಾರರು ರೂ.10,000 ರಿಯಾಯಿತಿ ಪಡೆಯಬಹುದಾಗಿದೆ. ಟ್ರಯಂಫ್ ಸ್ಪೀಡ್ 400 ಹೊಸ 398.15cc, ಸಿಂಗಲ್-ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್‌ನೊಂದಿಗೆ ಬರುತ್ತದೆ. ಇದು 39.5 bhp ಮತ್ತು 37.5 Nm ಟಾರ್ಕ್ ಹೊರಹಾಕುತ್ತದೆ.

under-3-lakhs-top-5-motorcycles-india

ಹೋಂಡಾ CB300R: ಹೋಂಡಾದ ಈ ನಿಯೋ-ರೆಟ್ರೋ ರೋಡ್‌ಸ್ಟರ್‌ನ ಬೆಲೆ 2.77 ಲಕ್ಷ ರೂ., ಎಕ್ಸ್ ಶೋರೂಂ ಇದ್ದು, ಕಂಪನಿಯ ಬಿಗ್‌ವಿಂಗ್ ಔಟ್‌ಲೆಟ್‌ಗಳ ಮೂಲಕ ಮಾರಾಟ ಮಾಡುತ್ತಿದೆ. ಹೋಂಡಾ CB300R ಬೈಕ್ 286.01cc, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್, ಫ್ಯೂಯಲ್-ಇಂಜೆಕ್ಟೆಡ್ ಎಂಜಿನ್ ಹೊಂದಿದ್ದು, 30 bhp ಮತ್ತು 27.5 Nm ಟಾರ್ಕ್ ಹೊರಹಾಕುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, July 16, 2023, 8:30 [IST]
English summary
Under 3 lakhs top 5 motorcycles india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+