Affordable EV Scooters: ಶೀಘ್ರದಲ್ಲೇ ಭಾರತದಲ್ಲಿ ಸದ್ದು ಮಾಡಲಿರುವ ಅಗ್ಗದ ಬೆಲೆಯ ಇವಿ ಸ್ಕೂಟರ್‌ಗಳಿವು!
ಭಾರತದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರು ಎಲೆಕ್ಟ್ರಿಕ್ ಸ್ಕೂಟರ್‌ಗಳತ್ತ ಮುಖ ಮಾಡುತ್ತಿದ್ದಾರೆ. ಪ್ರಮುಖ ಇವಿ ತಯಾರಕ ಕಂಪನಿಗಳು ಕೂಡ ಪೈಪೋಟಿ ಮೇಲೆ ತಮ್ಮ ಹೊಸ ಸ್ಕೂಟರ್‌ಗಳನ್ನು ಪರಿಚಯಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಒಂದು ಲಕ್ಷಕ್ಕಿಂತಲೂ ಕಡಿಮೆ ಬೆಲೆಗೆ ಬಿಡುಗಡೆಯಾಗಲಿರುವ ಟಾಪ್ ಸ್ಕೂಟರ್‌ಗಳನ್ನು ಇಲ್ಲಿ ನೋಡೋಣ.
Ampere Zeal Ex:
ಈ ಸ್ಕೂಟರ್ ಅನ್ನು ಭಾರತದ ಪ್ರಸಿದ್ಧ ಎಲೆಕ್ಟ್ರಿಕ್ ವಾಹನ ತಯಾರಕರಾದ ಆಂಪಿಯರ್ ವೆಹಿಕಲ್ಸ್ ಅವರು ನಿರ್ಮಿಸಿದ್ದಾರೆ. Zeal Ex ಉತ್ತಮ ಪರ್ಫಾಮೆನ್ಸ್ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದರ ಬೆಲೆ ನೋಡುವುದಾದರೆ 75,000 ರೂ. ಇದ್ದು ವಿತರಣೆಯು ಜೂನ್ 2023 ರ ವೇಳೆಗೆ ಪ್ರಾರಂಭವಾಗುತ್ತದೆ.

ಈ ಹೊಸ ಸ್ಕೂಟರ್ ನೀಲಿ ಮತ್ತು ಕಪ್ಪು ಎರಡು ಬಣ್ಣಗಳಲ್ಲಿ ಲಭ್ಯವಿದೆ. 3 ವರ್ಷಗಳ ಬ್ಯಾಟರಿ ಗ್ಯಾರಂಟಿ, 1 ವರ್ಷದ ಸ್ಕೂಟರ್ ವಾರಂಟಿಯೊಂದಿಗೆ ಬರುತ್ತದೆ. ಒಟ್ಟಾರೆಯಾಗಿ ಕಡಿಮೆ-ವೆಚ್ಚ, ಪರಿಸರ ಕಾಳಜಿ ಹಾಗೂ ಉತ್ತಮ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಸ್ಕೂಟರ್ ಹುಡುಕುತ್ತಿರುವವರಿಗೆ Ampere Zeal Ex ಉತ್ತಮ ಆಯ್ಕೆಯಾಗಿದೆ ಎಂದು ಹೇಳಬಹುದು.
Ola S1 Air:
Ola S1 ಏರ್ ಸ್ಕೂಟರ್ ಬ್ಯಾಟರಿ ಆಯ್ಕೆಯ ಮೇಲೆ ಅದರ ಬೆಲೆ ಅವಲಂಭಿತವಾಗಿದೆ. 2kWh ಬ್ಯಾಟರಿಯನ್ನು ಹೊಂದಿರುವ Ola S1 ಏರ್ ಸ್ಕೂಟರ್ 84,999 ರೂ. ಬೆಲೆಯನ್ನು ಹೊಂದಿದ್ದು ಇದು 85km ರೇಂಜ್ ನೀಡುತ್ತದೆ. 3kWh ಬ್ಯಾಟರಿ ಆಯ್ಕೆಯಲ್ಲಿ ಬರುವ ಮಾದರಿಯು 1,00,013 ರೂ. ಬೆಲೆಯನ್ನು ಹೊಂದಿದ್ದು, 125km ರೇಂಜ್ ನೀಡುತ್ತದೆ.

ಕೊನೆಯದಾಗಿ 4kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುವ ಮಾದರಿಯು 1,09,985 ರೂ. ಬೆಲೆಯಿದ್ದು, 165 km ರೇಂಜ್ ನೀಡುತ್ತದೆ. ಇದು 3 ರೂಪಾಂತರಗಳಲ್ಲಿ 5 ಬಣ್ಣಗಳ ಆಯ್ಕೆಗಳನ್ನು ನೀಡುತ್ತದೆ. ಇದನ್ನು ನವೆಂಬರ್ 2022 ರಲ್ಲಿ ಪರಿಚಯಿಸಲಾಯಿತು. ಇದಕ್ಕೆ ಉತ್ತಮ ಬುಕಿಂಗ್‌ಗಳು ಬಂದಿದ್ದು, ಈ ಸ್ಕೂಟರ್‌ನ ವಿತರಣೆಯು ಜೂನ್ 2023 ರಲ್ಲಿ ಪ್ರಾರಂಭವಾಗುತ್ತದೆ.
Vespa Elettrica:
ವೆಸ್ಪಾ ಬ್ರಾಂಡ್‌ನ ಮೂಲ ಕಂಪನಿಯಾದ ಪಿಯಾಜಿಯೊ ವೆಸ್ಪಾ ಎಲೆಕ್ಟ್ರಿಕಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತಯಾರಿಸುತ್ತದೆ. ವೆಸ್ಪಾ ಎಲೆಕ್ಟ್ರಿಕಾವನ್ನು ಆಟೋ ಎಕ್ಸ್‌ಪೋ 2023 ರಲ್ಲಿ ಪ್ರದರ್ಶಿಸಲಾಯಿತು. ಈ ಸ್ಕೂಟರ್ ಬೆಲೆಯು 90,000 ರೂ. ಇದ್ದು, ಏಪ್ರಿಲ್ 2023 ರ ಅಂತ್ಯದ ವೇಳೆಗೆ ವಿತರಣೆಯನ್ನು ಪ್ರಾರಂಭಿಸಲು ಕಂಪನಿಯು ಸಿದ್ಧವಾಗಿರುವುದಾಗಿ ಈ ಹಿಂದೆ ತಿಳಿಸಿತ್ತು. ಇದು 5 ರೂಪಾಂತರಗಳಲ್ಲಿ ಬರುತ್ತದೆ ಎಂದು ಕಂಪನಿ ತಿಳಿಸಿದೆ.

LML Star
ಗಟ್ಟಿಮುಟ್ಟಾದ ನಿರ್ಮಾಣಕ್ಕೆ ಹೆಸರುವಾಸಿಯಾಗಿರುವ LML Star ಬಿಡುಗಡೆಯನ್ನು 2023ರ ದ್ವಿತಿಯಾರ್ಧದಲ್ಲಿ ನಿಗದಿ ಮಾಡಲಾಗಿದೆ. ನಮಗಿರುವ ಮಾಹಿತಿಯ ಪ್ರಕಾರ ಸೆಪ್ಟೆಂಬರ್ 2023 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರ ಬೆಲೆಯು ಅಂದಾಜು 1 ಲಕ್ಷ ರೂ. ಇರಬಹುದು ಎನ್ನಲಾಗಿದೆ. ಸಿಂಗಲ್ ಚಾರ್ಜ್‌ನಲ್ಲಿ 100 ರಿಂದ 125 ಕಿ.ಮೀ ರೇಂಜ್ ನೀಡಲಿದೆ.
Hero Electric AE-8
ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಪ್ರಖ್ಯಾತ ನಿರ್ಮಾಣವನ್ನು ಹೊಂದಿರುವ ಹೀರೋ ಕಂಪನಿಯು ಎಲೆಕ್ಟ್ರಿಕ್ ಎಇ-8 ಇವಿ ಸ್ಕೂಟರ್ ಅನ್ನು ನಿರ್ಮಿಸಿದೆ. ಇದರ ಬೆಲೆಯನ್ನು ನೋಡುವುದಾದರೆ ರೂ. 70,000 ಇರಬಹುದು ಎನ್ನಲಾಗಿದೆ. ಹೀರೋ ಎಲೆಕ್ಟ್ರಿಕ್ AE8 ಅನ್ನು ಆಟೋ ಎಕ್ಸ್‌ಪೋ 2020 ರಲ್ಲಿ ಪ್ರದರ್ಶಿಸಲಾಗಿತ್ತು. ಸಿಂಗಲ್ ಚಾರ್ಜ್‌ನಲ್ಲಿ 80 ಕಿ.ಮೀ ರೇಂಜ್ ನೀಡುತ್ತದೆ.
Lambretta V Electric:
ಲ್ಯಾಂಬ್ರೆಟ್ಟಾ V125, ಪರ್ಫಾಮೆನ್ಸ್ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದು 1950 ರ ದಶಕದಲ್ಲಿದ್ದ ಅಂತರರಾಷ್ಟ್ರೀಯವಾಗಿ ಹೆಸರಾಂತ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳಿಂದ ಪ್ರೇರಿತವಾಗಿದೆ. ಇದರ ಬಿಡುಗಡೆಯನ್ನು ಜೂನ್ 2023 ರಲ್ಲಿ ನಿರೀಕ್ಷಿಸಲಾಗಿದೆ. ಬೆಲೆಯನ್ನು ನೋಡುವುದಾದರೆ ರೂ. 90,000 ಇರಲಿದೆ. ಇದು ವಿವಿಧ ಬಣ್ಣಗಳ ಆಯ್ಕೆಯೊಂದಿಗೆ ಕ್ರೋಮ್ ಅಂಶವನ್ನು ಒಳಗೊಂಡಿರಲಿದೆ.
Everve EF1:
ಅತ್ಯಾಧುನಿಕ ತಂತ್ರಜ್ಞಾನ, ಸೊಗಸಾದ ನೋಟ ಮತ್ತು ಪರಿಸರ ಸ್ನೇಹಿ ಕಾರ್ಯಕ್ಷಮತೆಯನ್ನು ನೀಡುವ ಎವರ್ವ್ ಇಎಫ್1 ಅನ್ನು ಎವರ್ವ್ ಟೆಕ್ನಾಲಜೀಸ್ ಅಭಿವೃದ್ಧಿಪಡಿಸಿದೆ. ಇತ್ತೀಚಿನ ನವೀಕರಣದ ಪ್ರಕಾರ ಬಿಡುಗಡೆಯು ಮೇ 2023 ರಲ್ಲಿ ಆಗಲಿದೆ. ಇದರ ಬೆಲೆಯು ಅಂದಾಜು 90,000 ರೂ. ಇರಲಿದೆ. ಇದು 7 ಬಣ್ಣಗಳ ಆಯ್ಕೆ ಹಲವು ವೈಶಿಷ್ಟ್ಯಗಳೊಂದಿಗೆ ಬರಲಿದೆ.


Click it and Unblock the Notifications