Upcoming Two Wheeler in April: ದೇಶದಲ್ಲಿ ಅಬ್ಬರಿಸಲು ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿವೆ ಪ್ರಮುಖ ಬೈಕ್, ಸ್ಕೂಟರ್ಗಳು
ವಿಶ್ವದಲ್ಲಿಯೇ ಭಾರತವು ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆ ಹೊಂದಿದೆ. ಇಲ್ಲಿ ಮುಂದಿನ ತಿಂಗಳು ಪ್ರಮುಖ ಕಂಪನಿಗಳು, ವಿವಿಧ ಬೈಕ್, ಸ್ಕೂಟರ್ಗಳನ್ನು ಬಿಡುಗಡೆ ಮಾಡುತ್ತಿವೆ. ಅವುಗಳಲ್ಲಿ ಹೋಂಡಾ ಆಕ್ಟಿವಾ 125 ಎಚ್-ಸ್ಮಾರ್ಟ್, ಸಿಂಪಲ್ ಒನ್, ಡುಕಾಟಿ ಮಾನ್‌ಸ್ಟರ್ ಎಸ್‌ಪಿ, ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ & ಆರ್‌ಎಸ್ ಸೇರಿವೆ.
ಮೊದಲಿಗೆ ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿರುವ ಸಿಂಪಲ್ ಒನ್ (Simple ONE) ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಮಾತನಾಡೋಣ. ಇದನ್ನು ಬೆಂಗಳೂರು ಮೂಲಕ ಇವಿ ಸ್ಟಾರ್ಟ್-ಅಪ್ ಸಿಂಪಲ್ ಎನರ್ಜಿ ಅಭಿವೃದ್ಧಿಪಡಿಸಿದ್ದು, 2021ರಲ್ಲಿಯೇ ದೇಶೀಯ ಮಾರುಕಟ್ಟೆಯಲ್ಲಿ ಪ್ರದರ್ಶಿಸಿತ್ತು. ಆದರೆ, ಕೆಲವೊಂದು ಕಾರಣಗಳಿಂದ ಬಿಡುಗಡೆ ತಡವಾಗಿದ್ದು, ಏಪ್ರಿಲ್‌ನಲ್ಲಿ ಗ್ರಾಹಕರಿಗೆ ಸಿಗುವ ನೀರಿಕ್ಷೆಯಿದೆ. ಬೆಲೆಯು ಕೈಗೆಟುವಂತ್ತಿರಲಿದ್ದು, ರೂ.1.09 ಲಕ್ಷದಿಂದ ರೂ.1.45 ಲಕ್ಷ ದರದಲ್ಲಿ ದೊರೆಯಲಿದೆ.

ಈ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್, 4.8 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ. ಜೊತೆಗೆ ಇದರಲ್ಲಿ ಬಳಕೆ ಮಾಡಿರುವ 8.5 kW ಎಲೆಕ್ಟ್ರಿಕ್ ಮೋಟಾರ್, 11 bhp ಪವರ್ ಮತ್ತು 72 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿದ್ದು, 300 ಕಿ.ಮೀ.ವರೆಗೆ ರೇಂಜ್ ನೀಡಲಿದೆ ಎಂದು ವರದಿಯಾಗಿದೆ. ಹತ್ತು ಹಲವು ಆಕರ್ಷಕ ವೈಶಿಷ್ಟ್ಯಗಳೊಂದಿಗೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಈ ಸ್ಕೂಟರ್ ಸಿಗಲಿದೆ.
ಹೋಂಡಾ ಜನಪ್ರಿಯ ಸ್ಕೂಟರ್ಗಳಲ್ಲಿ ಆಕ್ಟಿವಾ ಪ್ರಮುಖವಾಗಿದೆ. ಏಪ್ರಿಲ್ ತಿಂಗಳಲ್ಲಿ ಕಂಪನಿ 'ಆಕ್ಟಿವಾ 125 ಹೆಚ್-ಸ್ಮಾರ್ಟ್' ಅನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದು ದೇಶಾದ್ಯಂತ ಮುಂಬರಲಿರುವ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಿರುವ ಮಾದರಿಯಾಗಿದ್ದು, ಆಟೋ ಲಾಕ್/ಅನ್‌ಲಾಕ್, ರಿಮೋಟ್ ಎಂಜಿನ್ ಸ್ಟಾರ್ಟ್ ಹಾಗೂ ಕೀಲೆಸ್ ಇಗ್ನಿಷನ್‌ನಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಆದರೆ, ಬಹುತೇಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳು ಹಿಂದಿನ ಮಾದರಿಗೆ ಹೋಲಿಕೆಯಾಗುತ್ತದೆ.
ಸದ್ಯ ಭಾರತದ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ 125 ಸ್ಕೂಟರ್, ಮೂರು ರೂಪಾಂತರಗಳಲ್ಲಿ ಖರೀದಿಗೆ ದೊರೆಯಲಿದೆ. ಅವುಗಳೆಂದರೆ, ಡ್ರಮ್ (ರೂ.77,743), ಡ್ರಮ್ ಅಲಾಯ್ (ರೂ.81,411) ಹಾಗೂ ಡಿಸ್ಕ್ (ರೂ.84,916). ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಈ ಸ್ಕೂಟರ್, 123.9ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದು, 8.29 PS ಗರಿಷ್ಠ ಪವರ್ ಹಾಗೂ 10.3 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಯುಕೆ ಮೂಲದ ಟ್ರಯಂಫ್ ಮೋಟಾರ್‌ಸೈಕಲ್ಸ್ ಇಂಡಿಯಾ, ಈ ತಿಂಗಳೇ ಭಾರತದ ಮಾರುಕಟ್ಟೆಯಲ್ಲಿ ಐಷಾರಾಮಿ ಸ್ಟ್ರೀಟ್ ಟ್ರಿಪಲ್ ಆರ್ ಮತ್ತು ಆರ್‌ಎಸ್ ಬೈಕ್ ಗಳನ್ನು ಬಿಡುಗಡೆ ಮಾಡಲು ಯೋಜಿಸಿತ್ತು. ಆದರೆ, ಕಾರಣಾಂತರಗಳಿಂದ ಅದನ್ನು ಮುಂದೂಡಿತ್ತು. ಇದೀಗ, ಏಪ್ರಿಲ್ ನಲ್ಲಿ ಈ ಬೈಕ್ ಗಳು ಲಾಂಚ್ ಆಗಲಿವೆ ಎಂದು ವರದಿಯಾಗಿದೆ. ನವೀಕರಣಗೊಂಡಿರುವ ಸ್ಟ್ರೀಟ್ ಟ್ರಿಪಲ್ ಆರ್ ಹಾಗೂ ಆರ್‌ಎಸ್ ಬೈಕ್ಸ್, 765 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿವೆ.
ಇಟಲಿ ದೇಶದ ಸೂಪರ್ ಬೈಕ್ ತಯಾರಕ ಕಂಪನಿ, 'ಡುಕಾಟಿ' ಈ ವರ್ಷ ಭಾರತದಲ್ಲಿ 9 ಮೋಟಾರ್‌ಸೈಕಲ್‌ಗಳನ್ನು ಯೋಜಿಸಿದೆ. ಆ ಬಗ್ಗೆ ಕಳೆದ ವರ್ಷವೇ ಘೋಷಣೆ ಮಾಡಿತ್ತು. ಅದರ ಭಾಗವಾಗಿ 'ಮಾನ್‌ಸ್ಟರ್ ಎಸ್‌ಪಿ' ಬೈಕ್ ಅನ್ನು ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಈ ಬೈಕ್, ಪವರ್ ಫುಲ್ ಎಂಜಿನ್, ಆಕರ್ಷಕ ವಿನ್ಯಾಸ ಹಾಗೂ ಭರಪೂರ ವೈಶಿಷ್ಟ್ಯಗಳನ್ನು ಹೊಂದಿರಲಿದೆಯಂತೆ. ಇದು ರೂ.15.95 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆ ಪಡೆದಿರಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications