ಯುವಕರ ಹಾಟ್ ಫೆವರೇಟ್ 'ಹೀರೋ XPulse' ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ: ಶುರುವಾಯ್ತು ನಡುಕ..!

ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೀರೋ ಜನಪ್ರಿಯತೆಗಳಿಸಿದೆ. ಅದರ ಬೈಕ್ ಹಾಗೂ ಸ್ಕೂಟರ್‌ಗಳ ಕಾರ್ಯಕ್ಷಮತೆ, ವೈಶಿಷ್ಟ್ಯ ಪ್ರತಿಯೊಬ್ಬ ಯುವ ಗ್ರಾಹಕರನ್ನು ಸೆಳೆಯುತ್ತದೆ. ಇದೀಗ, ಕಂಪನಿಯು ಮತ್ತಷ್ಟು ಖರೀದಿದಾರರನ್ನು ಆಕರ್ಷಿಸಲು ನವೀಕರಿಸಿದ 'XPulse 200 4V' ಬೈಕ್‌ನ್ನು ಬಿಡುಗಡೆ ಮಾಡಿದೆ.

ಮೊದಲಿಗೆ ಈ ನೂತನ ಹೀರೋ XPulse 200 4ವಿ ಬೈಕ್ ಬೆಲೆ ಬಗ್ಗೆ ಮಾತನಾಡೋಣ. ಇದು ದೇಶೀಯ ಮಾರುಕಟ್ಟೆಯಲ್ಲಿ ರೂ.1.43 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಇದರ ಟಾಪ್ ಎಂಡ್ ಮಾದರಿ 'XPulse ಪ್ರೊ' ರೂ.1.50 ಲಕ್ಷ ಆರಂಭಿಕ ದರವನ್ನು ಹೊಂದಿದೆ. ಆಸಕ್ತ ಗ್ರಾಹಕರು ಅಧಿಕೃತ ಡೀಲರ್‌ಶಿಪ್‌ಗೆ ಭೇಟಿ ನೀಡುವ ಮೂಲಕ ಕೊಂಡುಕೊಳ್ಳಬಹುದು.

ಯುವಕರ ಹಾಟ್ ಫೆವರೇಟ್ ಹೀರೋ XPulse ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ: ಶುರುವಾಯ್ತು ನಡುಕ..!

ಹೀರೋ ಕಂಪನಿ ಇದರ ಎಂಜಿನ್ ಅನ್ನು ದೇಶಾದ್ಯಂತ ಜಾರಿಗೆ ಬಂದಿರುವ OBD2 ಎಮಿಷನ್ ಮಾನದಂಡಗಳು ಹಾಗೂ E20 (ಶೇಕಡ 80% ಪೆಟ್ರೋಲ್ ಹಾಗೂ 20% ಎಥನಾಲ್) ಫ್ಯುಯೆಲ್ ಗೆ ಬೆಂಬಲಿಸುವಂತೆ ಮೇಲ್ದರ್ಜೆಗೇರಿಸಿದೆ. ಇದರಿಂದ ಖರೀದಿದಾರರಿಗೆ ತುಂಬಾ ಅನುಕೂಲವಾಗಲಿದ್ದು, ಇವರೆಡು ಇಂಧನಗಳ ಬಳಕೆಯಿಂದ ಬೈಕ್ ನಿರ್ವಹಣಾ ವೆಚ್ಚ ತುಂಬಾ ಕಡಿಮೆಯಾಗಲಿದ್ದು, ಒಂದಷ್ಟು ಹಣ ಉಳಿತಾಯವಾಗಲಿದೆ.

ಇದು ಆಫ್-ರೋಡ್ ರೈಡ್ ಗೆ ಹೇಳಿಮಾಡಿಸಿರುವ ಬೈಕ್ ಆಗಿರುವುದರಿಂದ 200 ಸಿಸಿ 4 ವಾಲ್ವ್ ಆಯಿಲ್ ಕೂಲ್ಡ್ BS-VI ಎಂಜಿನ್ ಹೊಂದಿದ್ದು, 8,000 rpmನಲ್ಲಿ 19 hp ಗರಿಷ್ಠ ಪವರ್ ಹಾಗೂ 6,500 rpmನಲ್ಲಿ 17.35 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿರುವ OBD2 ಸಾಧನವು ಎಂಜಿನ್ ನಲ್ಲಿ ಎಮಿಷನ್ ಸಂಬಂಧ ದೋಷ ಕಂಡುಬಂದಾಗ ಆ ಕುರಿತ ಮಾಹಿತಿಯನ್ನು ರೈಡರ್ ಗೆ ಒದಗಿಸುತ್ತದೆ.

ಯುವಕರ ಹಾಟ್ ಫೆವರೇಟ್ ಹೀರೋ XPulse ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ: ಶುರುವಾಯ್ತು ನಡುಕ..!

ನೂತನ ಹೀರೋ XPulse 200 4ವಿ ಬೈಕ್ ವಿನ್ಯಾಸ ಬಗ್ಗೆ ಮಾತನಾಡುವುದಾದರೆ, ಇದು ರ‍್ಯಾಲಿ ಸ್ಟೈಲ್ ವಿಂಡ್‌ಶೀಲ್ಡ್, ಎಲ್ಇಡಿ DRLs, ಹೊಸದಾದ ಕ್ಲಾಸ್-D LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ನವೀಕರಿಸಿರುವ ರೈಡರ್ ಫೂಟ್ ಪೆಗ್, ಲಗೇಜ್ ಪ್ಲೇಟ್, USB ಚಾರ್ಜಿಂಗ್ ಪೋರ್ಟ್ ಸೇರಿದಂತೆ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಬೈಕಿನ ಟಾಪ್ ಎಂಡ್ ರೂಪಾಂತರ 'ಪ್ರೊ' ಫುಲ್ಲಿ ಅಡ್ಜಸ್ಟ್ಏಬಲ್ 250 ಎಂಎಂ ಫ್ರಂಟ್ ಸಸ್ಪೆನ್ಷನ್, 220 ಎಂಎಂ ರೇರ್ ಸಸ್ಪೆನ್ಷನ್ ಅನ್ನು ಹೊಂದಿದೆ. ಸೀಟ್ ಹೈಟ್ 850 ಎಂಎಂ ಇದ್ದು, ಗ್ರೌಂಡ್ ಕ್ಲಿಯರೆನ್ಸ್ 270 ಎಂಎಂ ಹಾಗೂ ಆಫ್-ರೋಡ್ ರೈಡ್ ಗೆ ಹೊಂದಿಕೆಯಾಗುವಂತಹ ಹ್ಯಾಂಡಲ್‌ಬಾರ್ ರೈಸರ್ ಅನ್ನು ಪಡೆದಿರುವುದು ವಿಶೇಷವಾಗಿದೆ.

ನೂತನ ಹೀರೋ XPulse 200 4ವಿ ಬೈಕ್ ಬಣ್ಣಗಳ ಆಯ್ಕೆ ಬಗ್ಗೆ ಹೇಳುವುದಾದರೆ, ಇದು ಬೋಲ್ಡ್ ಗ್ರಾಫಿಕ್ಸ್ ಮತ್ತು ಸ್ಟ್ರೈಕಿಂಗ್ ಡ್ಯುಯಲ್-ಟೋನ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಬೇಸ್ ವೇರಿಯೆಂಟ್ ಮ್ಯಾಟ್ ನೆಕ್ಸಸ್ ಬ್ಲೂ, ಟೆಕ್ನೋ ಬ್ಲೂ ಮತ್ತು ಬ್ಲ್ಯಾಕ್ ಸ್ಪೋರ್ಟ್ಸ್ ರೆಡ್ ಕಲರ್ ಆಯ್ಕೆಯನ್ನು ಪಡೆದಿದೆ. ಟಾಪ್ ಎಂಡ್ ಪ್ರೊ ರೂಪಾಂತರ ರ‍್ಯಾಲಿ ಎಡಿಷನ್ ಗ್ರಾಫಿಕ್ಸ್ ಅನ್ನು ಹೊಂದಿದೆ.

ಒಟ್ಟಾರೆ, ಆಫ್-ರೋಡ್ ಬೈಕ್ ಆಗಿರುವ ಹೀರೋ XPulse 200 4ವಿ ಎಂಜಿನ್ ನವೀಕರಣದೊಂದಿಗೆ ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದು, ಹೆಚ್ಚಿನ ಯುವ ಗ್ರಾಹಕರನ್ನು ಸೆಳೆಯುತ್ತಿದೆ. ಇದರಿಂದ ಪ್ರತಿಸ್ಪರ್ಧಿ ಕಂಪನಿಗಳಿಗೆ ನಡುಕ ಶುರುವಾಗಿದೆ. ನೀವು ಕೂಡ ಅಧಿಕೃತ ಡೀಲರ್‌ಶಿಪ್‌ಗೆ ಭೇಟಿ ನೀಡುವ ಮೂಲಕ ಈ ಬೈಕ್ ಕೊಂಡುಕೊಳ್ಳಬಹುದು. ಮುಂಬರುವ ದಿನಗಳಲ್ಲಿ ಭಾರತದ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದು ಗೊತ್ತಾಗುತ್ತದೆ.

Article Published On: Wednesday, May 17, 2023, 11:15 [IST]
English summary
Updated hero xpulse 200 4v launched details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+