ಈ ಬ್ರಾಂಡ್‌ಗಳು ಒಂದಾದ್ರೆ EV ವಾಹನಗಳ ಕಥೆ ಗೋವಿಂದ... ಹೈಡ್ರೋಜನ್ ಎಂಜಿನ್ ತಯಾರಿಗೆ ಸಜ್ಜು
ದ್ವಿಚಕ್ರ ವಾಹನ ವಲಯದಲ್ಲಿ ಕ್ರಾಂತಿ ಸೃಷ್ಟಿಸಬಲ್ಲ ಸಾಮರ್ಥ್ಯವಿರುವ ದೈತ್ಯ ಕಂಪನಿಗಳು ಯಮಹಾ, ಸುಜುಕಿ, ಹೋಂಡಾ ಮತ್ತು ಕವಾಸಕಿ. ಈ ಬ್ರಾಂಡ್‌ಗಳೆಲ್ಲವೂ ಜನಾಪ್ ಮೂಲದ್ದಾಗಿದ್ದು, ಇವುಗಳ ಸಾಮರ್ಥ್ಯವು ಈಗಾಗಲೇ ಭಾರತೀಯರಿಗೆ ಗೊತ್ತು. ಇದೀಗ ದ್ವಿಚಕ್ರ ವಾಹನ ವಲಯದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲ್ಲು ಒಟ್ಟಾಗಿ ಮುಂದೆ ಬರುತ್ತಿವೆ.
ಇದನ್ನು ನಂಬಲಸಾಧ್ಯವಾದ್ರೂ ಇದು ನಿಜ. ಈ ನಾಲ್ಕೂ ಬ್ರಾಂಡ್‌ಗಳು ಹೈಡ್ರೋಜನ್-ಚಾಲಿತ ದ್ವಿಚಕ್ರ ವಾಹನಗಳ ಎಂಜಿನ್‌ಗಳ ತಯಾರಿಯಲ್ಲಿ ತೊಡಗಿಸಿಕೊಂಡಿವೆ. ಜಪಾನಿನ ಆರ್ಥಿಕ, ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯದಿಂದ (ಎಂಇಟಿಐ) ಅನುಮೋದನೆ ಪಡೆದ ನಂತರ ಈ ನಾಲ್ಕು ಬ್ರಾಂಡ್‌ಗಳು HySE (ಹೈಡ್ರೋಜನ್ ಸ್ಮಾಲ್ ಮೊಬಿಲಿಟಿ & ಎಂಜಿನ್ ಟೆಕ್ನಾಲಜಿ) ಎಂಬ ತಾಂತ್ರಿಕ ಸಂಶೋಧನಾ ಸಂಸ್ಥೆಯನ್ನು ರಚಿಸಿಕೊಂಡಿವೆ.

ಈ ಮೂಲಕ ವಾಹನ ವಲಯದ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಹೊಸ ಕ್ರಾಂತಿಗೆ ಈಗಾಗಲೇ ಮೊದಲ ಹೆಜ್ಜೆ ಇಟ್ಟಿವೆ. ಸದ್ಯ HySE ಸಣ್ಣ ದ್ವಿಚಕ್ರ ವಾಹನ ಹೈಡ್ರೋಜನ್ ಚಾಲಿತ ಎಂಜಿನ್ ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಅಂದರೆ ಈ HySE ನಲ್ಲಿ ನಾಲ್ಕೂ ಬ್ರಾಂಡ್‌ಗಳ ತಂತ್ರಜ್ಞರು ಇರುವುದರಿಂದ ನಾಲ್ಕೂ ಬ್ರಾಂಡ್‌ಗಳಿಗೆ ತಕ್ಕಂತೆ ಎಂಜಿನ್‌ಗಳು ನಿರ್ಮಾಣವಾಗಲಿವೆ.
ಈ ಸಹಭಾಗಿತ್ವದಲ್ಲಿ ಒಂದೊಂದು ಬ್ರಾಂಡ್ ವಿಭಿನ್ನ ಪಾತ್ರಗಳನ್ನು ವಹಿಸಿಕೊಳ್ಳಲಿವೆ. ಹೋಂಡಾ, ಹೈಡ್ರೋಜನ್ ಮೋಟರ್ ಗಳ ಮಾದರಿ-ನಿರ್ದಿಷ್ಟ ಅಭಿವೃದ್ಧಿಯನ್ನು ಸಂಶೋಧಿಸಲಿದೆ. ಸುಜುಕಿ ಎಂಜಿನ್ ಗಳ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯನ್ನು ಅಧ್ಯಯನ ಮಾಡಿದರೆ, ಯಮಹಾ ಮತ್ತು ಕವಾಸಕಿ ನೈಜ ಹೈಡ್ರೋಜನ್ ಚಾಲಿತ ಎಂಜಿನ್‌ಗಳನ್ನು ಬಳಸಿಕೊಂಡು ಈ ಅಂಶಗಳ ಬಗ್ಗೆ ಸಂಶೋಧನೆ ನಡೆಸಲಿದೆ.
ಇದಲ್ಲದೆ ಯಮಹಾ ಮತ್ತು ಕವಾಸಕಿ ಹೈಡ್ರೋಜನ್ ಇಂಧನ ಮರುಪೂರಣ, ಇಂಧನ ಪೂರೈಕೆ ವ್ಯವಸ್ಥೆಗಳು ಮತ್ತು ಹೆಚ್ಚಿನ ಉಪಕರಣಗಳಿಗೆ ಸಂಬಂಧಿಸಿದ ಅಂಶಗಳನ್ನು ಸಹ ಸಂಶೋಧಿಸಲಿವೆ. ಹೈಡ್ರೋಜನ್ ನೊಂದಿಗೆ ಅತ್ಯಂತ ಸವಾಲಿನ ವಿಷಯವೆಂದರೆ ಶೇಖರಣೆ, ಏಕೆಂದರೆ ಇದು ಅನಿಲಕ್ಕಿಂತ ಕಡಿಮೆ ಸಾಂದ್ರವಾಗಿರುವುದರಿಂದ ವಸ್ತುಗಳಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತದೆ. ಹಾಗಾಗಿ ಇದನ್ನು ಶೇಖರಿಸಿಡುವಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಲಿವೆ ಕಾದುನೋಡಬೇಕಿದೆ.
ಇನ್ನು ಕಾರು ವಿಭಾಗದಲ್ಲಿ ಟೊಯೋಟಾ ಈಗಾಗಲೇ ಹೈಡ್ರೋಜನ್ ಚಾಲಿತ ಎಂಜಿನ್ ತಯಾರಿ ವಿಜ್ಞಾನವನ್ನು ಅರಿತಿದೆ. ಹಾಗಾಗಿ ಕವಾಸಕಿ ಹೆವಿ ಇಂಡಸ್ಟ್ರೀಸ್ ಮತ್ತು ಟೊಯೊಟಾ ಕಾರ್ಪೊರೇಷನ್ ತಮ್ಮ ಅಸ್ತಿತ್ವದಲ್ಲಿರುವ ಹೈಡ್ರೋಜನ್ ಚಾಲಿತ ಸಂಶೋಧನಾ ಪರಿಣತಿಯನ್ನು ತರುತ್ತಿವೆ. ಜೊತೆಗೆ ಕವಾಸಕಿ ಕಂಪನಿಯು ಈಗಾಗಲೇ ತನ್ನ ಹೈಡ್ರೋಜನ್ ಫ್ಯೂಯಲ್ ಸೆಲ್ ಚಾಲಿತ ನಿಂಜಾವನ್ನು ಇಐಸಿಎಂಎ 2022ರಲ್ಲಿ ಪ್ರದರ್ಶಿಸಿದೆ.
ಎಲೆಕ್ಟ್ರಿಕ್ ಚಲನಶೀಲತೆಯ ಹೊರತಾಗಿ, ಪರ್ಯಾಯ ಇಂಧನಗಳು ಸಹ ಚಲನಶೀಲತೆಯ ಭವಿಷ್ಯದ ಅವಿಭಾಜ್ಯ ಅಂಗವಾಗಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ಸಂಪನ್ಮೂಲಗಳ ಮೇಲಿನ ಉದ್ಯಮದ ಅವಲಂಬನೆಯನ್ನು ಕಡಿಮೆ ಮಾಡುವುದರಿಂದ ಈ ರೀತಿಯ ಪ್ರೊಪಲ್ಷನ್ನಲ್ಲಿ ಹೂಡಿಕೆ ಮಾಡುವ ನಾಲ್ಕು ಬ್ರಾಂಡ್‌ಗಳಿಗೆ ಇದು ಉತ್ತಮ ವ್ಯವಹಾರದ ಕ್ರಮವಾಗಿದೆ. ಸಹಯೋಗವು ಇನ್ನೂ ಆರಂಭಿಕ ಹಂತದಲ್ಲಿದ್ದರೂ, ನಾಲ್ಕು ಬ್ರಾಂಡ್‌ಗಳು ಪರಿಕಲ್ಪನೆಯೊಂದಿಗೆ ಎಂಟ್ರಿ ಕೊಡುವವರೆಗೆ ಕಾದು ನೋಡುಬೇಕಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications