Zero Motorcycles: ಹೀರೋ ಮೂಲಕ ಝೀರೋ ಎಲೆಕ್ಟ್ರಿಕ್ ಬೈಕ್ ಭಾರತಕ್ಕೆ ಎಂಟ್ರಿ!

ಭಾರತೀಯ ಆಟೋ ವಲಯದಲ್ಲಿ ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಲ್ಲಿ ಕೆಲಸ ಮಾಡುತ್ತಿವೆ. ಈಗಾಗಲೇ ಹೊಸ ಸ್ಟಾರ್ಟ್ ಅಪ್‌ಗಳು ತಮ್ಮ ಎಲೆಕ್ಟ್ರಿಕ್ ವಾಹನಗಳೊಂದಿಗೆ ದೊಡ್ಡ ಕಂಪನಿಗಳನ್ನು ಹಿಂದಿಕ್ಕಿವೆ. ಓಲಾ, ಎಥರ್ ನಂತಹ ಬ್ರಾಂಡ್‌ಗಳಿಗೆ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆಯಿದೆ. ಇವುಗಳೊಂದಿಗೆ ಟಿವಿಎಸ್ ಐಕ್ಯೂಬ್ ಮಾತ್ರ ಉತ್ತಮ ಪೈಪೋಟಿ ನೀಡುತ್ತಿದೆ.

ಉಳಿದಂತೆ ಎಲ್ಲಾ ಪ್ರಮುಖ ಬ್ರಾಂಡ್‌ಗಳು ಹೆಸರಿಗೆ ಒಂದೆರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹೊಂದಿವೆ. ಅದರಲ್ಲಿ ಹೀರೋ ಕಂಪನಿಯ ಬಗ್ಗೆ ಇಲ್ಲಿ ಹೇಳಲೇಬೇಕು, ಕಂಪನಿಯು ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಆದ್ರೆ ಈವರೆಗೆ ಗಮನಾರ್ಹ ಪ್ರಗತಿ ಕಂಡಿಲ್ಲ. ಮಾರಾಟವೂ ನಿರೀಕ್ಷೆಯಂತೆ ಆಗಿಲ್ಲ. ಅದೇನೇ ಆದರೂ EV ವಿಭಾಗದಲ್ಲಿ ತನ್ನ ಸ್ಥಾನವನ್ನು ಬಲಪಡಿಸಲು ಹೀರೋ ಹಪಹಪಿಸುತ್ತಿದೆ.

zero-electric-motorcycles-entry-into-india-by-hero

ಈ ನಡುವೆ EV ವಲಯದಲ್ಲಿ ಪ್ರಮುಖ ಸ್ಟಾರ್ಟ್‌ಅಪ್‌ಗಳೊಂದಿಗೆ ಪಾಲುದಾರಿಕೆಯನ್ನು ಹೊಂದುವ ಮೂಲಕ ತುಸು ನಿರಾಳವಾಗಿದೆ. ಎಥರ್ ಎನರ್ಜಿಯಲ್ಲಿ ಹೀರೋ ಈಗಾಗಲೇ 35% ಪಾಲನ್ನು ಹೊಂದಿದೆ. ಇದರ ಜೊತೆಗೆ ಮತ್ತೊಂದು ಪ್ರಮುಖ ಕ್ಯಾಲಿಫೋರ್ನಿಯಾ ಮೂಲದ ಝೀರೋ ಮೋಟಾರ್‌ಸೈಕಲ್ಸ್ (Zero Motorcycles) ನೊಂದಿಗೂ ಪಾಲುದಾರಿಕೆ ಹೊಂದುವ ಮೂಲಕ ತನ್ನ ಸ್ಥಾನ ಭದ್ರವಾಗಿಸಿಕೊಂಡಿದೆ.

ಕ್ಯಾಲಿಫೋರ್ನಿಯಾ ಮೂಲದ ಝೀರೋ ಮೋಟಾರ್‌ಸೈಕಲ್ಸ್ ಉನ್ನತ- ಪರ್ಫಾಮೆನ್ಸ್ ಎಲೆಕ್ಟ್ರಿಕ್ ಬೈಕುಗಳನ್ನು ತಯಾರಿಸುತ್ತದೆ. ಕಳೆದ ವರ್ಷ, ಹೀರೋ ಮೋಟೋಕಾರ್ಪ್ ಝೀರೋ ಮೋಟಾರ್‌ಸೈಕಲ್‌ನಲ್ಲಿ $60 ಮಿಲಿಯನ್ (ಅಂದಾಜು ರೂ. 491 ಕೋಟಿ) ಹೂಡಿಕೆಯನ್ನು ಘೋಷಿಸಿತ್ತು. ಭವಿಷ್ಯದಲ್ಲಿ ಪಾಲುದಾರಿಕೆ ಅಡಿಯಲ್ಲಿ ತಾಂತ್ರಿಕವಾಗಿ ಜೀರೋನಿಂದ ಹೀರೋ ವಾಹನಗಳ ಉತ್ಪಾದನೆಯಾಗಬಹುದು ಎನ್ನಲಾಗಿದೆ.

zero-electric-motorcycles-entry-into-india-by-hero

ಭಾರತೀಯ ಮಾರುಕಟ್ಟೆಗೆ ವಿದೇಶಿ ವಾಹನಗಳನ್ನು ತರುವುದು ಸವಾಲಿನ ಸಂಗತಿಯಾಗಿದೆ. ಏಕೆಂದರೆ ಆಮದು ಮಾಡಿಕೊಂಡರೆ ಬೈಕುಗಳು ದುಬಾರಿಯಾಗಲಿವೆ, ಹಾಗಾಗಿ ಸ್ಥಳೀಯವಾಗಿ ಉತ್ಪಾದನೆಯಾದರೆ ಬೆಲೆ ಕಡಿಮೆಯಾಗಬಹುದು. ಇದರ ಬಗ್ಗೆ ಹೀರೋ ಗಮನಹರಿಸುವ ಸಾಧ್ಯತೆಯಿದೆ. ಕೈಗೆಟುಕುವ ಬೆಲೆಯನ್ನು ಸಾಧಿಸಲು ಎಷ್ಟು ರಾಜಿ ಮಾಡಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಝೀರೋ ಎಲೆಕ್ಟ್ರಿಕ್ ವಿಶ್ವ ದರ್ಜೆಯ ವಾಹನಗಳಾಗಿವೆ. ಝೀರೋ SR/S ಇದು 110 hp ಗರಿಷ್ಠ ಪವರ್ ಮತ್ತು 190 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಎಲೆಕ್ಟ್ರಿಕ್ ಮೋಟಾರ್ 17.3 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ನಗರ ಪರಿಸ್ಥಿತಿಗಳಲ್ಲಿ ಬರೋಬ್ಬರಿ 187 ಮೈಲುಗಳು (301 ಕಿಮೀ) ರೇಂಜ್ ಹೊಂದಿದೆ.

zero-electric-motorcycles-entry-into-india-by-hero

ಗರಿಷ್ಠ ವೇಗ ಮತ್ತು ನಿರಂತರ ಗರಿಷ್ಠ ವೇಗವನ್ನು ಕ್ರಮವಾಗಿ 124 mph (200 km/h) ಮತ್ತು 110 mph (177 km/h) ಎಂದು ರೇಟ್ ಮಾಡಲಾಗಿದೆ. ಝೀರೋ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು 7.2 kWh ನಿಂದ 17.3 kWh ಸಾಮರ್ಥ್ಯದ ಬ್ಯಾಟರಿಗಳನ್ನು ಹೊಂದಿವೆ. ಈ ಬೈಕ್‌ಗಳ ಬೆಲೆ $13,000 ರಿಂದ $25,000, ಅಂದರೆ ಸುಮಾರು 10.64 ಲಕ್ಷದಿಂದ 20.46 ಲಕ್ಷ ರೂ. ಇದೆ.

ಆದರೆ ಭಾರತೀಯ ಮಾರುಕಟ್ಟೆಗೆ ಕಡಿಮೆ ಬೆಲೆಯಲ್ಲಿ ತರಲು ಹೀರೋ ಯಾವ ತಂತ್ರಗಳನ್ನು ರೂಪಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಒಟ್ಟಾರೆ ಹೀರೋ ಮೋಟೋಕಾರ್ಪ್ ಮೂಲಕ ಶೀಘ್ರದಲ್ಲೇ ಝೀರೋ ಮೋಟಾರ್‌ಸೈಕಲ್‌ಗಳಿಂದ ಉತ್ಪಾದಿಸಲ್ಪಟ್ಟ ಹೈ-ಪರ್ಫಾಮೆನ್ಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು ದೇಶಕ್ಕೆ ಲಗ್ಗೆಯಿಡಲಿವೆ ಎಂದು ಮೂಲಗಳು ಹೇಳುತ್ತಿವೆ.

zero-electric-motorcycles-entry-into-india-by-hero

ಝೀರೋ ಮೋಟಾರ್‌ಸೈಕಲ್‌ಗಳೊಂದಿಗಿನ ಹೀರೋ ಪಾಲುದಾರಿಕೆಯು ವಿಶ್ವ ದರ್ಜೆಯ ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳು ಮತ್ತು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉತ್ಪನ್ನಗಳಿಗೆ ಪ್ರವೇಶವನ್ನು ಅನುಮತಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಹೀರೋ ತನ್ನ ಕಡಿಮೆ-ವೆಚ್ಚದ ಉತ್ಪಾದನಾ ಸಾಮರ್ಥ್ಯ ಮತ್ತು ಅದರ ವಿಶಾಲವಾದ ಮಾರಾಟ ಮತ್ತು ಸೇವಾ ಜಾಲವನ್ನು ಬಳಸಿಕೊಳ್ಳುವ ಮೂಲಕ ಕೊಡುಗೆ ನೀಡಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Thursday, July 27, 2023, 19:38 [IST]
English summary
Zero electric motorcycles entry into india by hero
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+