1.51 ಲಕ್ಷಕ್ಕೆ 250cc: ಟ್ರಾಕ್ಷನ್‌ ಕಂಟ್ರೋಲ್‌, ಡಿಜಿಟಲ್‌ ಕನ್ಸೋಲ್‌, ಎಬಿಎಸ್‌ ಮೋಡ್‌... ಪಕ್ಕಾ ಗೇಮ್‌ ಚೇಂಜರ್‌!

ಬಹು ನಿರೀಕ್ಷೆಯಂತೆ ನಿನ್ನೆ 2024 ಬಜಾಜ್‌ ಪಲ್ಸರ್‌ N250 ಬೈಕ್ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದು ಗ್ರಾಹಕರಿಂದ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಂದಿನ ಈ ಲೇಖನದಲ್ಲಿ ಈ ಬೈಕ್‌ನ ಟಾಪ್‌ ವಿಷಯಗಳ ಕುರಿತಾಗಿ ಮಾತನಾಡಲಿದ್ದು, ಈ ಲೇಖನ ಹೊಸ N250 ಅನ್ನು ಕೊಳ್ಳಬೇಕೋ ಅಥವಾ ಬೇಡವೋ ಎಂದುಕೊಳ್ಳುತ್ತಿರುವವರಿಗೆ ಉಪಯೋಗವಾಗಬಹುದು.

1. ಬೆಲೆ: ಮೊದಲಿಗೆ ಈ ಬೈಕ್‌ನ ಬೆಲೆಯನ್ನು ನೋಡುವುದಾದರೆ, ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್‌ ತನ್ನ ಹೊಸ ಅಪ್‌ಡೇಟೆಡ್‌ N250 (2024 Bajaj Pulsar N250) ಯನ್ನು ಸುಮಾರು 1.51 ಲಕ್ಷ ರೂ ಎಕ್ಸ್‌ ಶೋ ರೂಮ್‌ ಬೆಲೆಗೆ ಬಿಡುಗಡೆ ಮಾಡಿದೆ. ಹಲವಾರು ಫೀಚರ್‌ ಮತ್ತು ಉತ್ತಮ ಪರ್ಫಾಮೆನ್ಸ್‌ ಇರುವ ಈ ಬೈಕ್‌, ಭಾರತೀಯ ಮಾರುಕಟ್ಟೆಯಲ್ಲಿ ಈ ಬೆಲೆಗೆ ಸಾಕಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ.

2024 Bajaj Pulsar N250 Top 5 Things You Need To Know

2. ಎಂಜಿನ್‌: ಈ ಬೈಕ್‌ನ ಎಂಜಿನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. 249cc ಸಿಂಗಲ್‌ ಸಿಲಿಂಡರ್‌ ಏರ್‌ ಕೂಲ್ಡ್‌ ಎಂಜಿನ್‌ ಬರುತ್ತಿದ್ದು, ಇದರ ಸಹಾಯದಿಂದ ಈ ಬೈಕ್‌ ಸುಮಾರು 24.5 PS ಪವರ್‌ ಮತ್ತು 21.5 ಎನ್‌ಎಮ್ ಟಾರ್ಕ್‌ ಸಹ ಉತ್ಪಾದಿಸುತ್ತದೆ. 5-ಸ್ಪೀಡ್‌ ಗೇರ್‌ ಬಾಕ್ಸ್‌ ಅನ್ನು ಇದರಲ್ಲಿ ಅಳವಡಿಸಲಾಗಿದ್ದು. ಸ್ಲಿಪರ್‌ ಕ್ಲಚ್‌ ಸಹ ಲಭ್ಯವಿದೆ.

3. ಎಬಿಎಸ್‌ ಮೋಡ್ಸ್‌: ಈ ಬೈಕ್‌ನಲ್ಲಿ ಡ್ಯುಯಲ್‌ ಚಾನಲ್‌ ಎಬಿಎಸ್ ಸ್ಟಾಂಡರ್ಡ್‌ ಆಗಿ ಲಭ್ಯವಿದೆ. ಆದರೆ ಇದರಲ್ಲಿ ಹೊಸ ವಿಷಯವೇಬೆಂದರೆ, ಈ ಬೈಕ್‌ನಲ್ಲಿ ಇದೀಗ ಎಬಿಎಸ್‌ ಮೋಡ್‌ಗಳು ಸಿಗುತ್ತಿದೆ. ಈ ಬೈಕ್‌ನಲ್ಲಿ ರೈನ್‌, ರೋಡ್‌ ಮತ್ತು ಆಫ್‌ ರೋಡ್‌ ಎಂಬ ಮೂರು ಮೋಡ್‌ನಲ್ಲಿ ಎಬಿಎಸ್‌ ಲಭ್ಯವಿದೆ. ಸವಾರ, ABS ಮೋಡ್ ಬದಲಾಯಿಸಿದಂತೆ ಅದಕ್ಕೆ ತಕ್ಕದಾದ ರೀತಿಯಲ್ಲಿ ಎಬಿಎಸ್‌ ತನ್ನ ಲಕ್ಷಣಗಳನ್ನು ಬದಲಾಯಿಸುತ್ತದೆ.

2024 Bajaj Pulsar N250 Top 5 Things You Need To Know

4. ಯುಎಸ್‌ಡಿ ಫೋರ್ಕ್ಸ್‌: 2024 ಬಜಾಜ್‌ ಪಲ್ಸರ್‌ N250 ಬೈಕ್‌ಗೆ ಸಿಕ್ಕ ಅತೀ ದೊಡ್ಡ ಅಪ್‌ಡೇಟ್‌ನಲ್ಲಿ ಇದೂ ಸಹ ಒಂದು. 27mm ನ ಇನ್ವರ್ಟೆಡ್‌ ಫೋರ್ಕ್‌ಗಳನ್ನು ಈ ಬೈಕ್‌ ಇದೀಗ ಹೊಂದಿದೆ. ಕಳೆದ ಬಾರಿಯ ಬಜಾಜ್‌ ಪಲ್ಸರ್‌ N250 ಮಾದರಿಯಲ್ಲಿ ಟೆಲಿಸ್ಕೋಪಿಕ್‌ ಫೋರ್ಕ್‌ಗಳನ್ನು ನಾವು ಕಾಣಬಹುದಾಗಿತ್ತು. ಇದು ಬೈಕ್‌ ಸವಾರನಿಗೆ ಹೆಚ್ಚು ಆರಾಮದಾಯಕ ರೈಡಿಂಗ್‌ ಅನುಭವವನ್ನು ನಿಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

5.ಫೀಚರ್ಸ್‌: ಈ ಬೈಕ್ನಲ್ಲಿ, ಟ್ರಾಕ್ಷನ್‌ ಕಂಟ್ರೋಲ್‌, ಸಂಪೂರ್ಣ ಡಿಜಿಟಲ್‌ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ಬ್ಲೂಟೂತ್‌ ಕನೆಕ್ಟಿವಿಟಿ ಮತ್ತು ಎಬಿಎಸ್‌ ಮೋಡ್‌ಗಳು ಸಿಗುತ್ತಿದೆ. ಬಜಾಜ್ ತನ್ನ ಪಲ್ಸರ್‌ N250 ಗೆ ಈ ಎಲ್ಲಾ ಹೊಸ ಫೀಚರ್‌ಗಳು ಸೇರಿಸುವ ಮೂಲಕ, ತನ್ನ ಇತರ ಸ್ಪರ್ಧಿಗಳಿಗೆ ಪ್ರಭಲ ಸ್ಪರ್ಧೆಯೊಡ್ಡಲಿದೆ. ಟ್ರಾಕ್ಷನ್‌ ಕಂಟ್ರೋಲ್‌ ಇರುವ ಬಜಾಜ್‌ನ ಮೊದಲ ಬೈಕ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದರಿಂದ 250cc ಬೈಕ್‌ ಕೊಳ್ಳಬೇಕು ಎಂದುಕೊಂಡಿರುವವರಿಗೆ ಇದೊಂದು ಉತ್ತಮ ಆಯ್ಕೆಯಾಗಬಹುದು.

2024 Bajaj Pulsar N250 Top 5 Things You Need To Know

ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ ಬಜಾಜ್‌ ಪಲ್ಸರ್‌ N250 ಬೈಕ್‌ ಕೊನೆಗೂ ಅಪ್‌ಡೇಟ್‌ ಹೊಂದಿ ಲಾಂಚ್ ಆಗುವ ಮೂಲಕ ಬಹುಕಾಲದಿಂದ ಬಜಾಜ್‌ ಪ್ರೇಮಿಗಳ ಕಾಯುವಿಕೆಗೆ ಪೂರ್ಣ ವಿರಾಮ ನೀಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ N250 ಜೊತೆಗೆ ಬಜಾಜ್‌ ಪಲ್ಸರ್‌ ಎನ್‌160 ಸಹ ಇದೇ ಡಿಸೈನ್‌ ಮತ್ತು ನೋಟವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, April 11, 2024, 10:16 [IST]
English summary
2024 bajaj pulsar n250 top 5 things you need to know
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+