ಆಕರ್ಷಕ ಬೆಲೆಯಲ್ಲಿ ಜಾವಾ 42 ಬೈಕ್ ಬಿಡುಗಡೆ: ಎದುರಾಳಿ ರಾಯಲ್ ಎನ್‌ಫೀಲ್ಡ್‌ಗೆ ಆತಂಕ ಶುರು

ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ (Jawa Yezdi Motorcycles) ತನ್ನ 2024ರ ಜಾವಾ 42 (Jawa 42) ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಜಾವಾ 42 ಬೈಕಿಗೆ ಎಕ್ಸ್ ಶೋರೂಂ ಪ್ರಕಾರ ರೂ.1.73 ಲಕ್ಷದಿಂದ ಪ್ರಾರಂಭವಾಗಿ ರೂ 1.98 ಲಕ್ಷದವರೆಗೆ ಬೆಲೆಯಿದೆ. ಈ ಜಾವಾ 42 ಬೈಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ವಿರುದ್ಧ ತನ್ನ ಪೈಪೋಟಿ ಹೆಚ್ಚುಸಲು ಬಿಡುಗಡೆಗೊಳಿಸಲಾಗಿದೆ. ಈ ಹೊಸ ಜಾವಾ 42 ಬೈಕ್ ನಿಯೋ-ರೆಟ್ರೋ ಮೋಟಾರ್‌ಸೈಕಲ್ ವಿಭಾಗವನ್ನು ಗುರಿಯಾಗಿರಿಸಿಕೊಂಡಿದೆ

ಹೊಸ ಜಾವಾ 42 ಬೈಕ್ ಪರಿಷ್ಕೃತ ಬೆಲೆ ಮತ್ತು ಹಲವಾರು ಯಾಂತ್ರಿಕ ನವೀಕರಣಗಳೊಂದಿಗೆ ಬಂದಿದೆ. 2024ರ ಜಾವಾ 42 ಬೈಕ್ ವೆಗಾ ವೈಟ್, ವಾಯೇಜರ್ ರೆಡ್, ಅಸ್ಟೈಯೋಡ್ ಗ್ರೇ, ಒಡಿಸ್ಸಿ ಬ್ಲ್ಯಾಕ್, ನೆಬ್ಯುಲಾ ಬ್ಲೂ ಮತ್ತು ಸೆಲೆಸ್ಟಿಯಲ್ ಕಾಪರ್ ಮ್ಯಾಟ್ ಎಂಬ ಬಣ್ಣಗಳ ಆಯ್ಕೆಗಳಿವೆ. ಇದರಲ್ಲಿ ನೀವು ನಿಮ್ಮ ಮೆಚ್ಚಿನ ಆಯ್ಕೆಯ ಬಣ್ಣದ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

2024 Jawa 42

2024ರ ಜಾವಾ 42 ಬೈಕ್ ಪ್ರಿ-ಅಪ್‌ಡೇಟ್‌ನ ಅಸ್ತಿತ್ವದಲ್ಲಿರುವ ಬಣ್ಣದ ಪ್ಯಾಲೆಟ್‌ಗೆ ಸೇರುತ್ತವೆ. ಜಾವಾ ಕಂಪನಿಯು ಭಾರತದಲ್ಲಿ ಲಭ್ಯವಿರುವ 'ಅತ್ಯಂತ ಗೌರವಾನ್ವಿತ ನವ-ಕ್ಲಾಸಿಕ್ ಯಂತ್ರ' ಎಂದು ಅವರ ಇತ್ತೀಚಿನ ರೋಡ್‌ಸ್ಟರ್ ಅನ್ನು ವಿವರಿಸುತ್ತದೆ. ಕ್ಲಾಸಿಕ್ ಲೆಜೆಂಡ್ಸ್ ಒಟ್ಟಾರೆ ಕಾರ್ಯಕ್ಷಮತೆ ಮತ್ತು ಇತರ ಗುಣಲಕ್ಷಣಗಳನ್ನು ಹೆಚ್ಚಿಸಲು ಯಾಂತ್ರಿಕ ಅಂಶಗಳನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸಿದೆ.

2024ರ ಜಾವಾ 42 ಬೈಕಿನ ಪ್ರಾಥಮಿಕ ಪ್ರಮುಖ ಅಂಶವೆಂದರೆ ಅದರ ಬೆಲೆ-ಕಾರ್ಯಕ್ಷಮತೆಯ ಅನುಪಾತ, ಇದು ರಾಯಲ್ ಎನ್‌ಫೀಲ್ಡ್‌ನ 350cc ಕೊಡುಗೆಗಳಿಗಿಂತ ಹೆಚ್ಚಿನದನ್ನು ನೀಡುತ್ತದೆ. ಬೈಕ್ ಹೊಸ 294 ಸಿಸಿ ಜೆ-ಪ್ಯಾಂಥರ್ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ. NVH ಮಟ್ಟವನ್ನು ಸುಧಾರಿಸಲು ಮತ್ತು ಸುಗಮ ಗೇರ್ ಶಿಫ್ಟ್‌ಗಳನ್ನು ಖಚಿತಪಡಿಸಿಕೊಳ್ಳಲು ಈ ಎಂಜಿನ್ ಅನ್ನು ಹೊಸ ಇಂಟರ್ನಲ್‌ಗಳೊಂದಿಗೆ ರಿವರ್ಕ್ ಮಾಡಲಾಗಿದೆ.

2024 Jawa 42

ಈ ಎಂಜಿನ್ ಗೇರ್-ಆಧಾರಿತ ಥ್ರೊಟಲ್ ಮ್ಯಾಪಿಂಗ್ ಅನ್ನು ಗೇರ್‌ಗಳಾದ್ಯಂತ ಆಪ್ಟಿಮೈಸ್ಡ್ ಕಾರ್ಯಕ್ಷಮತೆಗಾಗಿ ಒಳಗೊಂಡಿದೆ. ಈ ಎಂಜಿನ್ 27.32 bhp ಪವರ್ ಮತ್ತು 26.84 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್ ಸ್ಲಿಪ್ಪರ್ ಕ್ಲಚ್ ಮತ್ತು ಆರು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಈ ಬೈಕಿನಲ್ಲಿ ಹೆಚ್ಚಿದ ಗ್ರೌಂಡ್ ಕ್ಲಿಯರೆನ್ಸ್, ಹೆಚ್ಚು ಆರಾಮ-ಆಧಾರಿತ ಸೀಟ್ ಮತ್ತು ರಿ-ಟ್ಯೂನ್ ಮಾಡಿದ ಸಸ್ಪೆಕ್ಷನ್ ಅನ್ನು ಹೊಂದಿದೆ.

ಈ ಹೊಸ ಜಾವಾ 42 ಬೈಕ್ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್‌ಗಳಿಂದ ಸಸ್ಪೆಕ್ಷನ್ ಗೊಳಿಸಲಾದ ಡಬಲ್ ಕ್ರೇಡಲ್ ಫ್ರೇಮ್ ಇದೆ. ಈ ಸಸ್ಪೆಕ್ಷನ್ ಯಂತ್ರಾಂಶವು ಒಂದೇ ಆಗಿರುವಾಗ, ಕಂಪ್ರೆಷನ್ ಮತ್ತು ರಿಬೌಂಡ್ ಡ್ಯಾಂಪಿಂಗ್ ಅನ್ನು ಪರಿಷ್ಕರಿಸಲಾಗಿದೆ. ಈ ಜಾವಾ 42 ಬೈಕ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಬೈಕ್ ಹೆಚ್ಚು ಬದಲಾಗಿಲ್ಲ.

2024 Jawa 42

ಬೈಕು ದುಂಡಗಿನ ಹೆಡ್‌ಲೈಟ್, ಟಿಯರ್‌ಡ್ರಾಪ್ ಆಕಾರದ ಫ್ಯೂಯಲ್ ಟ್ಯಾಂಕ್ ಮತ್ತು ಬಾಗಿದ ಹಿಂಭಾಗದ ಫೆಂಡರ್ ಅನ್ನು ಹೊಂದಿದೆ. ಮೊದಲಿಗಿಂತ ಉತ್ತಮ ಸೌಕರ್ಯಕ್ಕಾಗಿ ಸೀಟ್ ಅನ್ನು ಟ್ವೀಕ್ ಮಾಡಲಾಗಿದೆ. ಇನ್ನು ಈ ಬೈಕ್ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಕೆಲವು ರೂಪಾಂತರಗಲ್ಲಿ ವೈರ್-ಸ್ಪೋಕ್ ವೀಲ್‌ಗಳನ್ನು ಸಹ ಹೊಂದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, August 15, 2024, 10:15 [IST]
English summary
2024 jawa 42 launched in india price features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+