ಆಕರ್ಷಕ ವಿನ್ಯಾಸದ ಸುಜುಕಿ ಅವೆನಿಸ್ 125 ಸ್ಕೂಟರ್ ವಿಶೇಷತೆಗಳೇನು?

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ತನ್ನ ಹೊಸ 2024 ಸುಜುಕಿ ಅವೆನಿಸ್ 125 (Suzuki Avenis 125) ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಸುಜುಕಿ ಅವೆನಿಸ್ ಸ್ಕೂಟರ್ ಸ್ಟ್ಯಾಂಡರ್ಡ್ ಮಾಡೆಲ್‌ ಆರಂಭಿಕ ಬೆಲೆಯು ರೂ,92,000 ಆದರೆ ರೇಸ್ ಆವೃತ್ತಿ ಆರಂಭಿಕ ಬೆಲೆಯು ರೂ.92,800 ಆಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. 2024ರ ಸುಜುಕಿ ಅವೆನಿಸ್‌ಗಾಗಿ ನವೀಕರಿಸಿದ ಬಣ್ಣದ ಯೋಜನೆಗಳ ಪರಿಚಯವು ಯುವ ಸವಾರರನ್ನು ಅವರ ರೋಮಾಂಚಕಗೊಳಿಸಲು ಅಗ್ರೇಸಿವ್ ಡೆಕಾಲ್‌ಗಳೊಂದಿಗೆ ಆಕರ್ಷಿಸಲು ವಿನ್ಯಾಸಗೊಳಿಸಲಾಗಿದೆ.

ಎಂಜಿನ್: ಈ ಹೊಸ ಸುಜುಕಿ ಅವೆನಿಸ್ ಸ್ಕೂಟರ್ ನಲ್ಲಿ ಅದೇ 124 cc ಸಿಂಗಲ್-ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 6,750 rpm ನಲ್ಲಿ 8.5hp ಮತ್ತು 5,500 rpm ನಲ್ಲಿ 10Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಕೂಟರ್ ಸಸ್ಪೆಕ್ಷನ್, ವ್ಹೀಲ್ ಗಳು ಮತ್ತು ಬ್ರೇಕ್‌ಗಳಂತಹ ಅನೇಕ ಯಾಂತ್ರಿಕ ಭಾಗಗಳನ್ನು ಆಕ್ಸೆಸ್ 125 ಮಾದರಿಯೊಂದಿಗೆ ಹಂಚಿಕೊಳ್ಳಲಾಗಿದೆ.

Suzuki Avenis 125

ಬಣ್ಣಗಳ ಆಯ್ಕೆ: ನವೀಕರಣದೊಂದಿಗೆ, ಸುಜುಕಿ ಮೋಟಾರ್‌ಸೈಕಲ್ ಇಂಡಿಯಾವು ಅವೆನಿಸ್‌ಗೆ ಗ್ಲೋಸಿ ಸ್ಪಾರ್ಕಲ್ ಬ್ಲ್ಯಾಕ್ / ಪರ್ಲ್ ಮೀರಾ ರೆಡ್, ಚಾಂಪಿಯನ್ ಯೆಲ್ಲೋ ನಂ 2 / ಗ್ಲೋಸಿ ಸ್ಪಾರ್ಕಲ್ ಬ್ಲ್ಯಾಕ್, ಗ್ಲೋಸಿ ಸ್ಪಾರ್ಕಲ್ ಬ್ಲ್ಯಾಕ್ ಮತ್ತು ಗ್ಲೋಸಿ ಸ್ಪಾರ್ಕಲ್ ಬ್ಲ್ಯಾಕ್ / ಪರ್ಲ್ ಗ್ಲೇಸಿಯರ್ ವೈಟ್‌ನಂತಹ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

ವಿನ್ಯಾಸ: ಹಿಂದಿನ ಮಾದರಿಗೆ ಹೋಲಿಸಿದರೆ 2024ರ ಸುಜುಕಿ ಅವೆನಿಸ್ 125 ಸ್ವಲ್ಪ ಸ್ಪೋರ್ಟಿಯರ್ ವಿನ್ಯಾಸವನ್ನು ಹೊಂದಿದೆ. ಊ ಹೊಸ ಸುಜುಕಿ ಅವೆನಿಸ್‌ನ ಸಾಮರ್ಥ್ಯವು ಅದರ ಇಂಧನ ತುಂಬುವಿಕೆ, ವಿಶಾಲವಾದ 21.8 ಲೀಟರ್ ಸೀಟಿನ ಕೆಳಗೆ ಸ್ಟೋರೇಜ್ ಸ್ಪೇಸ್, ರೂಮಿ ಫ್ಲೋರ್‌ಬೋರ್ಡ್, ಎತ್ತರದ ಹ್ಯಾಂಡಲ್‌ಬಾರ್‌ಗಳು ಮತ್ತು ಸ್ಟೆಪ್ ಸೀಟ್‌ಗಳೊಂದಿಗೆ ಬದಲಾಗದೆ ಮುಂದುವರಿಯುತ್ತದೆ.

Suzuki Avenis 125

ಫೀಚರ್ಸ್: ಇದರಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಟೈಲ್ ಲ್ಯಾಂಪ್‌ಗಳು ಮತ್ತು ಮೋಟಾರ್‌ಸೈಕಲ್-ಪ್ರೇರಿತ ಹಿಂಬದಿ ಇಂಡಿಕೇಟರ್ಸ್ ಅದರ ಸ್ಪೋರ್ಟಿ ನೋಟವನ್ನು ಹೆಚ್ಚಿಸುತ್ತವೆ. 2024ರ ಸುಜುಕಿ ಅವೆನಿಸ್ ಬ್ಲೂಟೂತ್-ಆಕ್ಟಿವ್ ಗೊಳಿಸಿದ ಡಿಜಿಟಲ್ ಕನ್ಸೋಲ್, ಯುಎಸ್‌ಬಿ ಸಾಕೆಟ್ ಹೊಂದಿರುವ ಮುಂಭಾಗದ ಬಾಕ್ಸ್ ಮತ್ತು ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಸ್ವಿಚ್ ಅನ್ನು ಹೊಂದಿದೆ.

ಇದರೊಂದಿಗೆ ಎಂಜಿನ್ ಕಿಲ್ ಸ್ವಿಚ್ ಮತ್ತು ಅಲಾಯ್ ವೀಲ್‌ಗಳನ್ನು (12-ಇಂಚಿನ ಮುಂಭಾಗ ಮತ್ತು 10-ಇಂಚಿನ) ಪಡೆಯುತ್ತದೆ. ಸುಜುಕಿ ರೈಡ್ ಕನೆಕ್ಟ್ ಅಪ್ಲಿಕೇಶನ್‌ಗೆ, ಬಳಕೆದಾರರು ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಒಳಬರುವ ಕರೆ ಅಲರ್ಟ್, ಎಸ್‌ಎಂಎಸ್ ಅಲರ್ಟ್, ವಾಟ್ಸಾಪ್ ಮೆಸೇಜ್ ಅಲರ್ಟ್, ಮಿಸ್ಡ್ ಕಾಲ್ ಅಲರ್ಟ್, ಎಸ್‌ಎಂಎಸ್ ಅಲರ್ಟ್, ಫಾಸ್ಟ್ ಮಾಹಿತಿ, ಫೋನ್‌ನಂತಹ ವೈಶಿಷ್ಟ್ಯಗಳನ್ನು ಪ್ರವೇಶಿಸಲು ತಮ್ಮ ಮೊಬೈಲ್ ಫೋನ್‌ಗಳನ್ನು ಸಿಂಕ್ ಮಾಡಬಹುದು.

Suzuki Avenis 125

ಈ ಸುಜುಕಿ ಅವೆನಿಸ್ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಎಪ್ರಿಲಿಯಾ ಸ್ಟಾರ್ಮ್ 125, ಟಿವಿಎಸ್ ಎನ್‌ಟಾರ್ಕ್ 125, ಹೋಂಡಾ ಡಿಯೊ 125, ಯಮಹಾ ರೇಝಡ್‌ಆರ್ 125 ಮತ್ತು ಮುಂಬರುವ ಹೀರೋ ಕ್ಸೂಮ್ 125 ಸ್ಕೂಟರ್ ಗಳಿಗೆ ಪೈಪೋಟಿ ನೀಡುತ್ತದೆ. ಒಟ್ಟಾರೆಯಾಗಿ ಸುಜುಕಿ ಅವೆನಿಸ್ ಸ್ಕೂಟರ್ ಆಕರ್ಷಕ ವಿನ್ಯಾಸ ಮತ್ತು ಅದ್ಭುತ ಫೀಚರ್ಸ್ ಗಳನ್ನು ಹೊಂದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, July 20, 2024, 9:22 [IST]
English summary
2024 suzuki avenis 125 scooter top things details
Read more on suzuki motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+