ಕಡಿಮೆ ಬೆಲೆ.. 2025ರ ಹೊಸ ಹೋಂಡಾ ಎಸ್‌ಪಿ 160 ಬೈಕ್ ಕುರಿತ ಮುಖ್ಯಾಂಶಗಳಿವು.. ನೀವು ತಿಳಿದುಕೊಳ್ಳಲೇಬೇಕು!

ಭಾರತದ ಮಾರುಕಟ್ಟೆಯಲ್ಲಿ 'ಹೋಂಡಾ ಮೋಟಾರ್‌ಸೈಕಲ್‌ & ಸ್ಕೂಟರ್ ಇಂಡಿಯಾ' ಮಾರಾಟಗೊಳಿಸುವ ದ್ವಿಚಕ್ರ ವಾಹನಗಳು (Two Wheelers) ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಹೋಂಡಾ ಕಂಪನಿಯು ಮಂಗಳವಾರ 2025ರ ಹೊಚ್ಚ ಹೊಸ 'ಎಸ್‌ಪಿ 160' ಬೈಕ್‌ನ್ನು ಬಿಡುಗಡೆಗೊಳಿಸಿತ್ತು. ಇದು ಕೆಲವೊಂದು ನವೀಕರಣದೊಂದಿಗೆ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡು ಮಾರಾಟಕ್ಕೆ ಬಂದಿದೆ. ಬನ್ನಿ.. ಈ ಮೋಟಾರ್‌ಸೈಕಲ್‌ ಕುರಿತ ಪ್ರಮುಖಾಂಶಗಳನ್ನು ತಿಳಿಯೋಣ.

ಬೆಲೆ & ರೂಪಾಂತರಗಳು (Price & Variants): 2025ರ ಹೋಂಡಾ ಎಸ್‌ಪಿ 160 (Honda SP 160) ಬೈಕ್, ಬಜೆಟ್ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. ಸಿಂಗಲ್-ಡಿಸ್ಕ್ ಮತ್ತು ಡುಯಲ್-ಡಿಸ್ಕ್ ಎಂಬ ರೂಪಾಂತರಗಳನ್ನು (ವೇರಿಯೆಂಟ್) ಪಡೆದಿದೆ. ಇದು ರೂ.1.21 ಲಕ್ಷದಿಂದ ರೂ.1.27 ಲಕ್ಷ ಎಕ್ಸ್ ಶೋರೂಂ ದರವನ್ನು ಒಳಗೊಂಡಿದೆ.

2025 Honda SP 160 Bike Top Things You Should Must Know

ವಿನ್ಯಾಸ (Design): ಹೋಂಡಾ ಎಸ್‌ಪಿ 160 ಮೋಟಾರ್‌ಸೈಕಲ್‌ ಹೊರಭಾಗದ ವಿನ್ಯಾಸ ಹಳೆಯ ಮಾಡೆಲ್‌ನಂತೆ ಇದೆ. ಆದರೆ, ಹೊಸದಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್ ಕ್ಲಸ್ಟರ್, ಎಲ್ಇಡಿ ಟೈಲ್ ಲ್ಯಾಂಪ್ ಅನ್ನು ಹೊಂದಿದೆ. ರೇಡಿಯಂಟ್ ರೆಡ್ ಮೆಟಾಲಿಕ್, ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಪರ್ಲ್ ಡೀಪ್ ಗ್ರೌಂಡ್ ಗ್ರೇ ಮತ್ತು ಅಥ್ಲೆಟಿಕ್ ಬ್ಲೂ ಎಂಬ ಆಕರ್ಷಕ ಬಣ್ಣಗಳೊಂದಿಗೂ ಸಿಗುತ್ತದೆ.

ಕಾರ್ಯಕ್ಷಮತೆ (Performance): ಈ ಬೈಕ್ ಒಬಿಡಿ2ಬಿ 162.71 ಸಿಸಿ ಸಿಂಗಲ್ ಸಿಲಿಂಡರ್ ಫ್ಯುಯೆಲ್ ಇಂಜೆಕ್ಟ್ಡ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 13 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 14.58 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಹೊಂದಿದೆ. 50 ಕೆಎಂಪಿಎಲ್‌ವರೆಗೂ ಮೈಲೇಜ್ ಕೊಡುತ್ತದೆ ಎನ್ನಲಾಗಿದೆ.

2025 Honda SP 160 Bike Top Things You Should Must Know

ವೈಶಿಷ್ಟ್ಯಗಳು (Features): ನೂತನ ಹೋಂಡಾ ಎಸ್‌ಪಿ 160 ಮೋಟಾರ್‌ಸೈಕಲ್‌ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 4.2-ಇಂಚಿನ ಟಿಎಫ್‌ಟಿ ಸ್ಕ್ರೀನ್, ಟರ್ನ್-ಬೈ-ಟರ್ನ್ ನ್ಯಾವಿಗೇಶನ್‌, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಹೋಂಡಾ ರೋಡ್‌ಸಿಂಕ್ ಅಪ್ಲಿಕೇಶನ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮತ್ತು ಕಾಲ್/ಎಸ್ಎಂಎಸ್ ಅಲರ್ಟ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System): ಈ ಬೈಕ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಅನ್ನು ಹೊಂದಿದೆ. ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. 17-ಇಂಚಿನ ವೀಲ್‌ಗಳನ್ನು ಪಡೆದಿದ್ದು, 12-ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ.

ಇನ್ನು, ಹೊಸ ಹೋಂಡಾ ಎಸ್‌ಪಿ 160 ಬೈಕ್ ಬಗ್ಗೆ ಗ್ರಾಹಕರು ಕೂಡ ದೊಡ್ಡಮಟ್ಟದ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈ ಮೋಟಾರ್‌ಸೈಕಲ್‌ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗಬಹುದು ಎಂದು ಅಂದಾಜಿಸಲಾಗಿದೆ. ಮುಂಬರುವ ದಿನಗಳಲ್ಲಿ ದೇಶೀಯ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, December 25, 2024, 12:05 [IST]
English summary
2025 honda sp 160 bike top things you should must know
Read more on honda motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+